ಡೀಸೆಲ್ ಕಾರುಗಳ ಮೈಲೇಜ್ ಹೆಚ್ಚಿಸಲು ಸಿದ್ದಗೊಂಡಿದೆ ಹೊಸ ತಂತ್ರಜ್ಞಾನ..!

ವಿಶ್ವಾದ್ಯಂತ ಪರಿಸರ ಮಾಲಿನ್ಯವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದಕ್ಕೆ ನಾವು ದಿನನಿತ್ಯ ಬಳಸುವ ಇಂಧನ ಆಧಾರಿತ ವಾಹನಗಳೇ ಮೊದಲ ಕಾರಣ ಎಂದು ಹೇಳಬಹುದು. ಇದರಿಂದ ಪರಿಸರವು ಎಷ್ಟರ ಮಟ್ಟಿಗೆ ಹಾಳಾಗಿದೆ ಅಂದ್ರೆ ಉಸಿರಾಡಲು ಸಹ ಹರಸಾಹಸ ಪಡಬೇಕಾದ ಪರಿಸ್ಥಿತಿ ಬಂದೊಗಿದ್ದು, ಇದರ ನಿವಾರಣೆ ಭಾರತೀಯ ವಿಜ್ಞಾನಿಯೊಬ್ಬರು ಹೊಸ ತಂತ್ರಜ್ಞಾನವೊಂದನ್ನು ಅಭಿವೃದ್ದಿಪಡಿಸಿರುವುದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ಡೀಸೆಲ್ ಕಾರುಗಳ ಮೈಲೇಜ್ ಹೆಚ್ಚಿಸಲು ಸಿದ್ದಗೊಂಡಿದೆ ಹೊಸ ತಂತ್ರಜ್ಞಾನ..!

ಮಾರ್ಚ್ 3,1 2015ರ ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ 22 ಕೋಟಿಗೂ ಅಧಿಕ ಡೀಸೆಲ್ ಎಂಜಿನ್ ಆಧಾರಿತ ವಾಹನಗಳು ಚಲಿಸುತ್ತಿದ್ದು, ಇನ್ನು ಸುಮಾರು ಮೂರುವರೆ ವರ್ಷಗಳ ನಂತರ ಈ ಅಂಕಿಯು ಎರಡರಷ್ಟು ಅಧಿಕವಾಗಿರಬಹುದು. ಹೀಗಾಗಿ ಪರಿಸರಕ್ಕೆ ಆಗುತ್ತಿರುವ ಭಾರೀ ಹಾನಿ ತಪ್ಪಿಸಲು ವಿಜ್ಞಾನಿಯೊಬ್ಬರು ಹೊಸ ತಂತ್ರಜ್ಞಾನವೊಂದನ್ನು ಆವಿಷ್ಕಾರ ಮಾಡಿದ್ದಾರೆ.

ಡೀಸೆಲ್ ಕಾರುಗಳ ಮೈಲೇಜ್ ಹೆಚ್ಚಿಸಲು ಸಿದ್ದಗೊಂಡಿದೆ ಹೊಸ ತಂತ್ರಜ್ಞಾನ..!

ಡೀಸೆಲ್ ಎಂಜಿನ್ ವಾಹನಗಳಲ್ಲಿ ಬಳಸಲಾದ ಎಂಜಿನ್‍ಗಳಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯವನ್ನು ಕಡಿಮೆಗೊಳಿಸಲು 57 ವರ್ಷದ ವಿಜ್ಞಾನಿ ಒಬ್ಬರು ಹೊಸ ಟೆಕ್ನಾಲಜಿಯನ್ನು ಕಂಡಿಹಿಡಿದಿದ್ದು, ಇದನ್ನು ಬಳಸಿದ್ದಲ್ಲಿ ಕಾರಿನ ಹೊಗೆಯು ಕಡಿಮೆಗೊಳಿಸಿ ವಾಹನದ ಮೈಲೇಜ್ ಅನ್ನು ಹೆಚ್ಚಿಸಬಹುದಾಗಿದೆ.

ಡೀಸೆಲ್ ಕಾರುಗಳ ಮೈಲೇಜ್ ಹೆಚ್ಚಿಸಲು ಸಿದ್ದಗೊಂಡಿದೆ ಹೊಸ ತಂತ್ರಜ್ಞಾನ..!

ಹೌದು, ಸೂರತ್ ಮೂಲದವರಾದ ಪುರಷೊತ್ತಮ್ ಪಿಪಾಲಿಯಾ ಎಂಬ 57 ವರ್ಷದ ವಿಜ್ಞಾನಿಯೊಬ್ಬರು ಕಂಡು ಹಿಡಿದ ಈ ಟೆಕ್ನಾಲಜಿಯ ಸಹಾಯದಿಂದ ಡೀಸೆಲ್ ವಾಹನಗಳಲ್ಲಿನ ಎಮಿಷನ್ ಮುಖಾಂತರ ಬರುವ ಹೊಗೆಯು ಕಡಿಮೆಯಾಗಿ ವಾಹನದ ಮೈಲೇಜ್ ಅನ್ನು ಅಧಿಕಗೊಳಿಸುತ್ತದೆಯಂತೆ.

ಡೀಸೆಲ್ ಕಾರುಗಳ ಮೈಲೇಜ್ ಹೆಚ್ಚಿಸಲು ಸಿದ್ದಗೊಂಡಿದೆ ಹೊಸ ತಂತ್ರಜ್ಞಾನ..!

ಇದೀಗ ಅಲ್ಲಿನ ಸ್ಥಳಿಯ ಸರ್ಕಾರವು ಪುರಷೊತ್ತಮ್ ಪಿಪಾಲಿಯಾ ಅವರು ಕಂಡು ಹಿಡಿದ ತಾಂತ್ರಿಕ ಅಂಶದ ಮೇಲೆ ಪೇಟೆಂಟ್ ಅನ್ನು ಕೂಡ ದಾಖಲೆ ಮಾಡಲಾಗಿದ್ದು, ಇವರ ಆವಿಷ್ಕಾರವು ಡೀಸೆಲ್ ವಾಹನದ ಮಾಲಿನ್ಯ ವ್ಯವಸ್ಥೆಯನ್ನು ನಿಯಂತ್ರಣ ಮಾಡಬಹುದಾಗಿದೆ.

ಯಾಕೆಂದ್ರೆ ಪುರಷೊತ್ತಮ್ ಪಿಪಾಲಿಯಾ ಅವರ ಪ್ರಕಾರ, ಇದನ್ನು ನಿಮ್ಮ ಕಾರಿನಲ್ಲಿ ಅಳವಡಿಸಿಕೊಂಡಿದ್ದೇ ಆದಲ್ಲಿ ನಿಮ್ಮ ಕಾರಿನ ಎಮಿಷನ್‍‍ನಿಂದ ಬರುವ ಶೇಕಡಾ 50ರಷ್ಟು ಹೊಗೆಯು ಕಡಿಮೆಯಾಗುವುದಲ್ಲದೇ ಶೇಕಡಾ 35ರಷ್ಟು ಮೈಲೇಜ್ ಅನ್ನು ಅಧಿಕಗೊಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಡೀಸೆಲ್ ಕಾರುಗಳ ಮೈಲೇಜ್ ಹೆಚ್ಚಿಸಲು ಸಿದ್ದಗೊಂಡಿದೆ ಹೊಸ ತಂತ್ರಜ್ಞಾನ..!

ಅಂದ್ರೆ ಈ ಟೆಕ್ನಾಲಜಿಯನ್ನು ನಿಮ್ಮ ವಾಹನದಲ್ಲಿ ಬಳಸಿಕೊಂಡಿದ್ದೇ ಆದಲ್ಲಿ ಲೀಟರ್‍‍ಗೆ 20 ಕಿಲೋಮೀಟರ್ ಮೈಲೇಜ್ ನೀಡುವ ನಿಮ್ಮ ಕಾರು ಹೊಸ ತಂತ್ರಜ್ಞಾನ ಅಳವಡಿಕೆ ನಂತರ ಲೀಟರ್‍‍ಗೆ 29 ರಿಂದ 30 ಕಿಲೋಮೀಟರ್ ಮೈಲೇಜ್ ನೀಡಬಲ್ಲದು ಎಂಬುವುದು ಈಗಾಗಲೇ ಸಾಬೀತಾಗಿದೆ.

ಡೀಸೆಲ್ ಕಾರುಗಳ ಮೈಲೇಜ್ ಹೆಚ್ಚಿಸಲು ಸಿದ್ದಗೊಂಡಿದೆ ಹೊಸ ತಂತ್ರಜ್ಞಾನ..!

ಇದಲ್ಲದೇ ಮಾಮೂಲಾಗಿ ಇಂತಹ ಆವಿಷ್ಕಾರಗಳಿಗೆ ಪೇಟೆಂಟ್ ದೊರೆಯಲು ಸುಮಾರು 5 ರಿಂದ ಹತ್ತು ವರ್ಷಗಳ ಕಾಲಾವಕಾಶ ಬೇಕಾಗುತ್ತದೆ. ಆದ್ರೆ ಅದೃಷ್ಟವಶಾತ್ ನನಗೆ ಕೇವಲ ಒಂದೇ ವರ್ಷದಲ್ಲಿ ಪೇಟೆಂಟ ದೊರೆತಿದೆ ಎನ್ನುವ ಪುರಷೊತ್ತಮ್ ಪಿಪಾಲಿಯಾ ಅವರು ಹೊಸ ಆವಿಷ್ಕಾರದಿಂದ ಹೆಚ್ಚುತ್ತಿರುವ ಮಾಲಿನ್ಯವನ್ನು ತಗ್ಗಿಸುವುದೇ ನನ್ನ ಗುರಿ ಎಂದಿದ್ದಾರೆ.

ಡೀಸೆಲ್ ಕಾರುಗಳ ಮೈಲೇಜ್ ಹೆಚ್ಚಿಸಲು ಸಿದ್ದಗೊಂಡಿದೆ ಹೊಸ ತಂತ್ರಜ್ಞಾನ..!

ಪ್ರಸ್ತುತ ಡೀಸೆಲ್ ಉರಿಯಲು ಶುರುವಾದಾಗ ಅದರಿಂದ ಹೊರ ಬರುವ ಕಾರ್ಬನ್ ಡೈಆಕ್ಸೈಡ್, ಹೈಡ್ರೋಕಾರ್ಬನ್ಸ್ ಮತ್ತು ನೈಟೋಜೆನ್ ಆಕ್ಸೈಡ್‍ಗಳು ಪರಿಸರವನ್ನು ಹಾಳುಮಾಡುತ್ತಿವೆ. ಆದ್ರೆ ವಿಜ್ಞಾನಿ ಪುರಷೊತ್ತಮ್ ಪಿಪಾಲಿಯಾ ಪ್ರಕಾರ, ಹೊಸ ತಂತ್ರಗಾರಿಕೆಯೊಂದಿಗೆ ಬಳಸಿದ್ದಲ್ಲಿ ಆ ಮೂರು ಅನಿಲಗಳನ್ನು ಶೇಕಾಡ ಅರ್ಧದಷ್ಟು ಕಡಿಮೆ ಮಾಡಬಲ್ಲದಂತೆ.

ಡೀಸೆಲ್ ಕಾರುಗಳ ಮೈಲೇಜ್ ಹೆಚ್ಚಿಸಲು ಸಿದ್ದಗೊಂಡಿದೆ ಹೊಸ ತಂತ್ರಜ್ಞಾನ..!

ಪಿಪಾಲಿಯ ಅವರ ಈ ಆವಿಷ್ಕಾರವು 4 ಸ್ಟ್ರೋಕ್ ಡೀಸೆಲ್ ಎಂಜಿನ್ ಹೊಂದಿರುವ ಎಲ್ಲಾ ವಾಹನಗಳಲ್ಲಿ ಬಳಸಬಹುದಾಗಿದ್ದು, ಈ ಟೆಕ್ನಾಲಜಿಯು ಆಟೋರಿಕ್ಷಾ, ಕಾರು, ಟ್ರ್ಯಾಕ್ಟರ್, ಟ್ರಕ್ ಹಾಗು ಇನ್ನಿತರೆ ವಾಹನಗಳಲ್ಲಿ ಬಳಸಬಹುದಾಗಿದೆ.

ಡೀಸೆಲ್ ಕಾರುಗಳ ಮೈಲೇಜ್ ಹೆಚ್ಚಿಸಲು ಸಿದ್ದಗೊಂಡಿದೆ ಹೊಸ ತಂತ್ರಜ್ಞಾನ..!

ಇದರಿಂದ ಡೀಸೆಲ್ ಎಂಜಿನ್ ಸಹಾಯದಿಂದ ವಾಹನದಲ್ಲಿನ ಫ್ಯುಯಲ್ ಸಿಸ್ಟಂ ಮತ್ತು ಫ್ಯುಯಲ್ ಪಂಪ್ ಅನ್ನು ಮರು ವಿನ್ಯಾಸಗೊಳಿಸಿ, ಎಮಿಷನ್‍ನಿಂದ ಉಂಟಾಗುತ್ತಿರುವ ಮಾಲಿನ್ಯವನು ಕಡಿಮೆ ಮಾಡಬಹುದಾಗಿದೆ ಎಂದು ಹೇಳಲಾಗಿದೆ.

ಡೀಸೆಲ್ ಕಾರುಗಳ ಮೈಲೇಜ್ ಹೆಚ್ಚಿಸಲು ಸಿದ್ದಗೊಂಡಿದೆ ಹೊಸ ತಂತ್ರಜ್ಞಾನ..!

ಒಟ್ಟಿನಲ್ಲಿ ವಿಶ್ವಾದ್ಯಂತ ಹೆಚ್ಚುತ್ತಿರುವ ಮಾಲಿನ್ಯ ತಡೆಗೆ ಪುರಷೊತ್ತಮ್ ಪಿಪಾಲಿಯಾ ಅವರು ಆವಿಷ್ಕಾರ ಮಾಡಿರುವ ಹೊಸ ತಂತ್ರಜ್ಞಾನವು ಸದ್ಯ ಆಟೋ ಉದ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಮುಂಬರುವ ದಿನಗಳಲ್ಲಿ ಇದು ಎಲ್ಲಾ ಹೊಸ ವಾಹನಗಳನ್ನು ಅಳವಡಿಸಬಹುದೇ ಎನ್ನುವ ಕುರಿತು ಚರ್ಚಿಸಲಾಗುತ್ತಿದೆ.

Most Read Articles

Kannada
English summary
Surat engineers innovation to help cut pollution by diesel vehicles.
Story first published: Monday, October 29, 2018, 17:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X