ಕೊನೆಯಾಗದ ಲಾಕ್‌ಡೌನ್ ರಗಳೆ: ತಾಯಿಗಾಗಿ 480 ಕಿ.ಮೀ ಸೈಕಲ್ ತುಳಿದ ಮಗ

ಭಾರತದಲ್ಲಿ ಎರಡನೇ ಹಂತದ ಲಾಕ್‌ಡೌನ್ ಅನ್ನು ಮೇ 3ರವರೆಗೆ ಜಾರಿಗೆ ತರಲಾಗಿದೆ. ಈ ಲಾಕ್‌ಡೌನ್‌ನಿಂದಾಗಿ ಜನರು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಜನರನ್ನು ಪ್ರಯಾಣಿಸದಂತೆ ನಿರ್ಬಂಧ ಹೇರಲಾಗಿದೆ.

ಕೊನೆಯಾಗದ ಲಾಕ್‌ಡೌನ್ ರಗಳೆ: ತಾಯಿಗಾಗಿ 480 ಕಿ.ಮೀ ಸೈಕಲ್ ತುಳಿದ ಮಗ

ಅಗತ್ಯ ಕೆಲಸಕ್ಕಾಗಿ ಪ್ರಯಾಣಿಸಬೇಕಾಗುವವರು ಪಾಸ್ ಹೊಂದಿರಲೇ ಬೇಕಾಗುತ್ತದೆ. ಇತ್ತೀಚಿಗೆ ನಡೆದ ಹಲವು ಘಟನೆಗಳಲ್ಲಿ ಹಲವಾರು ಜನರು ಯಾವುದೇ ಸಾರಿಗೆ ಸೌಲಭ್ಯಗಳಿಲ್ಲದ ಕಾರಣಕ್ಕೆ ಸೈಕಲ್‌ನಲ್ಲಿಯೇ ನೂರಾರು ಕಿ.ಮೀ ಪ್ರಯಾಣಿಸುತ್ತಿದ್ದಾರೆ. ಈಗ ಇದೇ ರೀತಿಯ ಮತ್ತೊಂದು ಘಟನೆ ನಡೆದಿದೆ. ಈ ಘಟನೆಯಲ್ಲಿ ವ್ಯಕ್ತಿಯೊಬ್ಬ ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ತಾಯಿಯನ್ನು ನೋಡಲು 480 ಕಿ.ಮೀ ಸೈಕಲ್‌ನಲ್ಲಿ ಪ್ರಯಾಣಿಸಿದ್ದಾರೆ. ಅದೂ ಸಹ ತನ್ನ ಹೆಂಡತಿಯ ಜೊತೆಗೆ.

ಕೊನೆಯಾಗದ ಲಾಕ್‌ಡೌನ್ ರಗಳೆ: ತಾಯಿಗಾಗಿ 480 ಕಿ.ಮೀ ಸೈಕಲ್ ತುಳಿದ ಮಗ

ಪುದುಚೇರಿಯ ನಿವಾಸಿ ರಾವ್ ಶ್ರೀನಿರವರು ತಮ್ಮ ಪತ್ನಿಯೊಂದಿಗೆ ತೆಲಂಗಾಣದ ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಅವರ ತಾಯಿಯ ಆರೋಗ್ಯವು ಹದಗೆಟ್ಟಿದೆ. ಕ್ಯಾನ್ಸರ್‌ನಿಂದ ಬಳಲುತ್ತಿರುವ ಅವರ ತಾಯಿ ಪುದುಚೇರಿಯಲ್ಲಿದ್ದಾರೆ. ಶ್ರೀನಿಯ ಸಂಬಂಧಿಕರು ಅವರ ತಾಯಿಯ ಅನಾರೋಗ್ಯದ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದಾರೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಕೊನೆಯಾಗದ ಲಾಕ್‌ಡೌನ್ ರಗಳೆ: ತಾಯಿಗಾಗಿ 480 ಕಿ.ಮೀ ಸೈಕಲ್ ತುಳಿದ ಮಗ

ಶ್ರೀನಿ ಆದಷ್ಟು ಬೇಗ ತಮ್ಮ ತಾಯಿಯನ್ನು ನೋಡಲು ನಿರ್ಧರಿಸಿದ್ದಾರೆ. ಯಾವುದೇ ಸಾರ್ವಜನಿಕ ಸಾರಿಗೆ ಸೇವೆಗಳು ಇಲ್ಲದ ಕಾರಣಕ್ಕೆ ತಮ್ಮ ಪತ್ನಿಯೊಂದಿಗೆ ಹೈದರಾಬಾದ್‌ನಿಂದ ಪುದುಚೇರಿಗೆ ಸೈಕಲ್‌ನಲ್ಲಿಯೇ ಹೋಗಲು ನಿರ್ಧರಿಸಿದ್ದಾರೆ. ಇಬ್ಬರೂ ಎರಡು ಪ್ರತ್ಯೇಕ ಸೈಕಲ್ ಮೂಲಕ ಪ್ರಯಾಣ ಆರಂಭಿಸಿದ್ದಾರೆ.

ಕೊನೆಯಾಗದ ಲಾಕ್‌ಡೌನ್ ರಗಳೆ: ತಾಯಿಗಾಗಿ 480 ಕಿ.ಮೀ ಸೈಕಲ್ ತುಳಿದ ಮಗ

ಶ್ರೀನಿ ಹಾಗೂ ಅವರ ಪತ್ನಿ ಏಪ್ರಿಲ್ 14ರಂದು ತಮ್ಮ ಪ್ರಯಾಣವನ್ನು ಆರಂಭಿಸಿದ್ದಾರೆ. ಈ ಪ್ರಯಾಣದಲ್ಲಿ ಅವರನ್ನು ಅನೇಕ ಸ್ಥಳಗಳಲ್ಲಿ ಪೊಲೀಸರು ತಡೆದು ಪ್ರಶ್ನಿಸಿದ್ದಾರೆ. ತಮ್ಮ ತಾಯಿಯ ಅನಾರೋಗ್ಯದ ವಿಷಯವನ್ನು ತಿಳಿಸಿದ ನಂತರ ಪೊಲೀಸರು ಅವರಿಗೆ ಮುಂದುವರೆಯಲು ಅವಕಾಶ ನೀಡುವುದರ ಜೊತೆಗೆ ಸಹಕರಿಸಿದ್ದಾರೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕೊನೆಯಾಗದ ಲಾಕ್‌ಡೌನ್ ರಗಳೆ: ತಾಯಿಗಾಗಿ 480 ಕಿ.ಮೀ ಸೈಕಲ್ ತುಳಿದ ಮಗ

ದಾರಿಯಲ್ಲಿ ಅವರಿಗೆ ಗ್ರಾಮಸ್ಥರು ಆಹಾರ, ನೀರನ್ನು ನೀಡಿದ್ದಾರೆ. ಮೂರು ದಿನಗಳ ಕಾಲ 480 ಕಿ.ಮೀ ಪ್ರಯಾಣಿಸಿದ ನಂತರ 17ರ ರಾತ್ರಿ ಪುದುಚೇರಿ ತಲುಪಿದ್ದಾರೆ. ಪುದುಚೇರಿ ತಲುಪಿದ ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಕರೋನಾ ಸೋಂಕು ಪತ್ತೆಯಾಗದ ಹಿನ್ನೆಲೆಯಲ್ಲಿ ಏಪ್ರಿಲ್ 18ರಂದು ಅವರ ತಾಯಿಯನ್ನು ಭೇಟಿ ಮಾಡಲು ಅನುಮತಿ ನೀಡಲಾಯಿತು.

ಕೊನೆಯಾಗದ ಲಾಕ್‌ಡೌನ್ ರಗಳೆ: ತಾಯಿಗಾಗಿ 480 ಕಿ.ಮೀ ಸೈಕಲ್ ತುಳಿದ ಮಗ

ಆದರೆ ಅವರ ದುರಾದೃಷ್ಟಕ್ಕೆ ಅವರ ತಾಯಿ ತೀರಿಕೊಂಡರು. ಅವರ ತಾಯಿಯ ಅಂತ್ಯಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ಅವರ ಹೆಂಡತಿಯೊಂದಿಗೆ ಕ್ವಾರಂಟೈನ್‌ಗೆ ಒಳಗಾದರು. ಅನುಮತಿ ಪಡೆದ ನಂತರ ಹೈದರಾಬಾದ್‌ಗೆ ಕಾರಿನಲ್ಲಿ ತೆರಳಿದ್ದಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕೊನೆಯಾಗದ ಲಾಕ್‌ಡೌನ್ ರಗಳೆ: ತಾಯಿಗಾಗಿ 480 ಕಿ.ಮೀ ಸೈಕಲ್ ತುಳಿದ ಮಗ

ಕೇಂದ್ರ ಸರ್ಕಾರವು ಬೇರೆ ಊರುಗಳಲ್ಲಿ ಸಿಕ್ಕಿಬಿದ್ದಿರುವ ಕಾರ್ಮಿಕರು, ವಿದ್ಯಾರ್ಥಿಗಳನ್ನು ಮರಳಿ ಕರೆತರಲು ರಾಜ್ಯ ಸರ್ಕಾರಗಳಿಗೆ ಅನುಮತಿ ನೀಡಿದೆ. ಇದಕ್ಕಾಗಿ ಯೋಜನೆ ಸಿದ್ಧಪಡಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

ಮೂಲ: ಬಿಹೈಂಡ್ ವುಡ್ಸ್

ಬಸ್ ಸಿಗದೆ ಈ ಕೂಲಿ ಕಾರ್ಮಿಕರು ಕೊನೆಗೆ ಮಾಡಿದ್ದೇನು ಗೊತ್ತಾ?

ಬಸ್ ಸಿಗದೆ ಈ ಕೂಲಿ ಕಾರ್ಮಿಕರು ಕೊನೆಗೆ ಮಾಡಿದ್ದೇನು ಗೊತ್ತಾ?

ಕರೋನಾ ವೈರಸ್‌ ಪರಿಣಾಮ ಇಡೀ ದೇಶವೇ ಲಾಕ್ ಡೌನ್ ಆಗಿದ್ದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬಹುತೇಕ ವಾಣಿಜ್ಯ ಚಟುವಟಿಕೆಗಳು ಮತ್ತು ಸಾರಿಗೆ ಸೌಲಭ್ಯಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಇದರಿಂದ ದಿನಗೂಲಿ ಕಾರ್ಮಿಕರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದು, ಮರಳಿ ತಮ್ಮ ತಮ್ಮ ಹಳ್ಳಿಗಳತ್ತ ಸೇರಿಕೊಳ್ಳಲು ಹರಸಾಹಸಪಡುತ್ತಿದ್ದಾರೆ.

ಬಸ್ ಸಿಗದೆ ಈ ಕೂಲಿ ಕಾರ್ಮಿಕರು ಕೊನೆಗೆ ಮಾಡಿದ್ದೇನು ಗೊತ್ತಾ?

ವೈರಸ್ ಹರಡದಂತೆ ತಡೆಯಲು ತೆಗೆದುಕೊಳ್ಳಲಾಗಿರುವ 21 ದಿನಗಳ ಲಾಕ್ ಡೌನ್ ಹಿನ್ನಲೆಯಲ್ಲಿ ಎಲ್ಲಾ ಬಗೆಯ ಸಂಚಾರಿ ವ್ಯವಸ್ಥೆಯನ್ನು ಏಕಾಏಕಿ ಬಂದ್ ಮಾಡಲಾಗಿದ್ದು, ದಿನಗೂಲಿ ಕಾರ್ಮಿಕರು ಲಾಕ್ ಡೌನ್ ನಡುವೆಯೂ ತಮ್ಮ ಊರುಗಳತ್ತ ಧಾವಿಸಲು ಎಲ್ಲಿಲ್ಲದ ಹರಸಾಹಸ ಮಾಡುತ್ತಿದ್ದಾರೆ. ಕೆಲವರು ಯಾವುದೇ ಸಾರಿಗೆ ಸೌಲಭ್ಯ ಸಿಗದೆ ನಗರದಲ್ಲೇ ಪರದಾಟುತ್ತಿದ್ದರೆ ಇನ್ನು ಕೆಲವರು ನಡೆದುಕೊಂಡೆ ಊರು ತಲುಪುತ್ತಿದ್ದಾರೆ.

ಬಸ್ ಸಿಗದೆ ಈ ಕೂಲಿ ಕಾರ್ಮಿಕರು ಕೊನೆಗೆ ಮಾಡಿದ್ದೇನು ಗೊತ್ತಾ?

ಆದರೆ ಕೆಲಸ ಅರಿಸಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಬಂದಿದ್ದ ಕೂಲಿ ಕಾರ್ಮಿಕರ ತಂಡವೊಂದು ಲಾಕ್‌ಡೌನ್ ಮಧ್ಯದಲ್ಲೂ ಸಾವಿರಾರು ಕಿ.ಮೀ ದೂರದಲ್ಲಿರುವ ಮನೆಯನ್ನು ಸುರಕ್ಷಿತವಾಗಿ ತಲುಪಿದ್ದು, ಯಾವುದೇ ಸಾರಿಗೆ ಸಂಪರ್ಕವಿಲ್ಲ ಸಂದರ್ಭದಲ್ಲಿ ಹೊಸ ಸಾಹಸವೊಂದನ್ನು ಮಾಡಿ ಗಮನಸೆಳೆದಿದ್ದಾರೆ.

ಬಸ್ ಸಿಗದೆ ಈ ಕೂಲಿ ಕಾರ್ಮಿಕರು ಕೊನೆಗೆ ಮಾಡಿದ್ದೇನು ಗೊತ್ತಾ?

ಹೌದು, ದೆಹಲಿ ಹೊರವಲಯದಲ್ಲಿ ಕೂಲಿ ಕೆಲಸಕ್ಕೆಂದು ದೂರದ ಬಿಹಾರದಿಂದ ಬಂದಿದ್ದ ಮೂವರು ಕಾರ್ಮಿಕರು ಲಾಕ್‌ಡೌನ್ ಆದ ಹಿನ್ನಲೆ ಅಕ್ಷರಶಃ ನಲುಗಿ ಹೋಗಿದ್ದಾರೆ. ತಿನ್ನಲು ಉಟ ಮತ್ತು ವಸತಿ ಸಿಗದೆ ಎರಡು ದಿನ ಪರದಾಡಿದ ಕೂಲಿ ಕಾರ್ಮಿಕರು ಕೊನೆಗೆ ಸೈಕಲ್ ಮಾದರಿಯ ತಳ್ಳುವ ಗಾಡಿಯಲ್ಲೇ ಊರು ಸೇರಲು ಯತ್ನಿಸಿದ್ದಾರೆ.

ಬಸ್ ಸಿಗದೆ ಈ ಕೂಲಿ ಕಾರ್ಮಿಕರು ಕೊನೆಗೆ ಮಾಡಿದ್ದೇನು ಗೊತ್ತಾ?

ಆದರೆ ದೆಹಲಿಯಿಂದ 1,200 ಕಿ.ಮೀ ದೂರದಲ್ಲಿರುವ ತಮ್ಮ ಊರನ್ನು ಸೈಕಲ್‌ನಲ್ಲಿ ಪ್ರಯಾಣ ಮಾಡುವ ಕಷ್ಟವೆಂದು ಅರಿತ ಮೂವರು ಕೂಲಿ ಕಾರ್ಮಿಕರು, ಗುಜರಿ ಅಂಗಡಿ ಮುಂಭಾಗದಲ್ಲಿ ಬಿದ್ದಿದ್ದ ಹಳೆಯ ಸ್ಕೂಟರ್ ಒಂದರ ಎಂಜಿನ್ ಅನ್ನೇ ಬಿಚ್ಚಿಕೊಂಡು ಸೈಕಲ್ ಕೆಳಭಾಗದಲ್ಲಿ ಜೋಡಿಸಿಕೊಂಡಿದ್ದಾರೆ.

ಜಾಲಿ ರೈಡ್ ಮಾಡುತ್ತಿದ್ದವನಿಗೆ ಶಾಕ್ ನೀಡಿದ್ರು ಟ್ರಾಫಿಕ್ ಪೊಲೀಸರು..

ಅದೃಷ್ಟವಶಾತ್ ಹಳೆಯ ಸ್ಕೂಟರ್ ಎಂಜಿನ್ ಕಾರ್ಯನಿರ್ವಹಣೆ ಮಾಡುವುದನ್ನ ಅರಿತ ಕೂಲಿ ಕಾರ್ಮಿಕರು ಸೈಕಲ್‌ಗೆ ಜೋಡಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಜಾಲಿ ರೈಡ್ ಮಾಡುತ್ತಿದ್ದವನಿಗೆ ಶಾಕ್ ನೀಡಿದ್ರು ಟ್ರಾಫಿಕ್ ಪೊಲೀಸರು..

ಮೂವರು ಕಾರ್ಮಿಕರಲ್ಲಿ ಇಬ್ಬರಿಗೆ ಮೆಕ್ಯಾನಿಕಲ್ ಕೆಲಸ ಗೊತ್ತಿದ್ದ ಹಿನ್ನಲೆಯಲ್ಲಿ ಸ್ಕೂಟರ್ ಎಂಜಿನ್ ಕಾರ್ಯನಿರ್ವಹಣೆ ಬಗೆಗೆ ಅರಿತು ಸೈಕಲ್‌ಗೆ ಜೋಡಣೆ ಮಾಡುವಲ್ಲಿ ಯಶಸ್ವಿಯಾಗಿದ್ದು, ತಡಮಾಡದೆ ಅಲ್ಲಿಂದ ಹೊರಟುಬಂದಿದ್ದಾರೆ.

ಜಾಲಿ ರೈಡ್ ಮಾಡುತ್ತಿದ್ದವನಿಗೆ ಶಾಕ್ ನೀಡಿದ್ರು ಟ್ರಾಫಿಕ್ ಪೊಲೀಸರು..

ಈ ವೇಳೆ ಮಾರ್ಗಮಧ್ಯದಲ್ಲಿ ಬರುತ್ತಿರುವಾಗ ಎದುರಾದ ಉತ್ತರ ಪ್ರದೇಶದ ಪೊಲೀಸರು ಮೂವರು ಕಾರ್ಮಿಕರನ್ನು ತಡೆದು ಪ್ರಶ್ನಿಸಿದ್ದಾರೆ. ಎಲ್ಲಿಂದ ಬಂದಿರುವುದು? ಎಲ್ಲಿಗೆ ಹೋಗಬೇಕಿದೆ ಎನ್ನುವುದನ್ನು ಪ್ರಶ್ನಿಸಿದ್ದಾರೆ.

ಜಾಲಿ ರೈಡ್ ಮಾಡುತ್ತಿದ್ದವನಿಗೆ ಶಾಕ್ ನೀಡಿದ್ರು ಟ್ರಾಫಿಕ್ ಪೊಲೀಸರು..

ಪೊಲೀಸರ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ ಮೂವರು ಕಾರ್ಮಿಕರು ದೆಹಲಿ ಆದ ಪರಿಸ್ಥಿತಿ ಬಗೆಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಉತ್ತರ ಪ್ರದೇಶದ ಪೊಲೀಸರು ಕೂಲಿ ಕಾರ್ಮಿಕರಾದ ಹಿನ್ನಲೆಯಲ್ಲಿ ಯಾವುದೇ ರೀತಿ ತೊಂದರೆ ಆಗದಂತೆ ಬಿಟ್ಟು ಕಳುಹಿಸಿದ್ದಾರೆ.

ಜಾಲಿ ರೈಡ್ ಮಾಡುತ್ತಿದ್ದವನಿಗೆ ಶಾಕ್ ನೀಡಿದ್ರು ಟ್ರಾಫಿಕ್ ಪೊಲೀಸರು..

ಆದರೆ ಉತ್ತರ ಪ್ರದೇಶದ ಗಡಿಯಿಂದ ಬಿಟ್ಟುಹೊರಡುವ ಮುನ್ನ ಮೂವರು ಕಾರ್ಮಿಕರನ್ನು ಸ್ಕ್ರೀನಿಂಗ್ ಮಾಡಿದ ವೈದ್ಯಕೀಯ ತಂಡವು ಕಡ್ಡಾಯವಾಗಿ ಮಾಸ್ಕ್ ಬಳಕೆ ಮಾಡಬೇಕೆಂಬ ಎಚ್ಚರಿಕೆಯ ಸಂದೇಶ ನೀಡಿ ಕಳುಹಿಸಿದ್ದಾರೆ.

ಜಾಲಿ ರೈಡ್ ಮಾಡುತ್ತಿದ್ದವನಿಗೆ ಶಾಕ್ ನೀಡಿದ್ರು ಟ್ರಾಫಿಕ್ ಪೊಲೀಸರು..

1,200 ಕಿ.ಮಿ ಪ್ರಯಾಣವನ್ನು ಇಂದು ಕೂಡಾ ಮುಂದುವರಿಸಿರುವ ಮೂವರು ಕೂಲಿ ಕಾರ್ಮಿಕರು ಊರಿನತ್ತ ಪ್ರಯಣಿಸುತ್ತಿದ್ದಾರೆ. ಇನ್ನು ಸೈಕಲ್ ಪ್ಲಸ್ ಸ್ಕೂಟರ್ ಎಂಜಿನ್ ಹೊಂದಿರುವ ವಾಹನದಲ್ಲಿ ಪೆಟ್ರೋಲ್ ಟ್ಯಾಂಕ್ ಸಹ ಇದ್ದು, ಪೆಟ್ರೋಲ್ ಸಿಗದೆ ಇದ್ದಾಗ ಪೆಡಲ್ ತುಳಿದುಕೊಂಡು ಪ್ರಯಾಣ ಮಾಡುತ್ತಿದ್ದಾರೆ.

Most Read Articles

Kannada
English summary
Hyderabad man travels 480km on bicycle amidst lockdown to visit sick mother. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X