Bullet Train: ರಾಜ್ಯದ ಈ ನಗರಗಳು ಸಾಕ್ಷಿಯಾಗಲಿವೆ ಮಿಂಚಿನ ವೇಗದಲ್ಲಿ ಸಂಚರಿಸುವ ಬುಲೆಟ್ ರೈಳುಗಳಿಗೆ!

ಭಾರತದಲ್ಲೂ ಕೆಲವೇ ವರ್ಷಗಳಲ್ಲಿ ಬುಲೆಟ್ ರೈಲುಗಳು (Bullet Train) ಸಂಚರಿಸಲಿವೆ. ಅದಕ್ಕಾಗಿ ಕೇಂದ್ರ ಸರ್ಕಾರ ಎಲ್ಲ ರೀತಿಯ ಸಿದ್ಧತೆಯನ್ನು ನಡೆಸುತ್ತಿದೆ. ಈ ರೈಲುಗಳ ಓಡಾಟದಿಂದಾಗುವ ಅನುಕೂಲವೆಂದರೆ, ಪ್ರಯಾಣದ ಅವಧಿಯು ತುಂಬಾ ಕಡಿಮೆಯಾಗಲಿದೆ. ಎಲ್ಲವು ಅಂದುಕೊಂಡಂತೆ ನಡೆದರೆ 2027ರ ವೇಳೆಗೆ ದೇಶದಲ್ಲಿ ಮೊದಲ ಬುಲೆಟ್ ರೈಲು ಕಾರ್ಯಾಚರಣೆ ನಡೆಸಲಿದೆ.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ರೂಪದಲ್ಲಿ ಉತ್ತರ ನೀಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ಹೈದರಾಬಾದ್ ಬೆಂಗಳೂರು ಹಾಗೂ ಮುಂಬೈ ಸೇರಿದಂತೆ ಏಳು ಪ್ರಮುಖ ಮಾರ್ಗಗಳಲ್ಲಿ ಹೈಸ್ಪೀಡ್ ರೈಲು (High Speed Train) ಓಡಾಟಕ್ಕೆ ಯೋಜನೆಯನ್ನು ರೂಪಿಸಲಾಗಿದೆ ಎಂದಿದ್ದಾರೆ. ವರದಿ ಪ್ರಕಾರ, ಮುಂಬೈ - ಹೈದರಾಬಾದ್ ನಡುವಿನ 709 ಕಿಲೋಮೀಟರ್ ಉದ್ದದ ಬುಲೆಟ್ ರೈಲು ಜಾಲದ ಕಾಮಗಾರಿಯು 2051ರ ವೇಳೆಗೆ ಪೂರ್ಣಗೊಳ್ಳಬಹುದು.

Bullet Train: ಕರ್ನಾಟಕದ ಈ ನಗರಗಳಲ್ಲಿ ಬುಲೆಟ್ ರೈಲು ಓಡಲಿದೆ!

ಸದ್ಯ, ಯೋಜನಾ ವರದಿಯ (ಡಿಪಿಆರ್) ತಯಾರಿಕೆಯ ಕೆಲಸಗಳು ನಡೆಯುತ್ತಿವೆ ಎಂದು ಹೇಳಲಾಗಿದೆ. ಭವಿಷ್ಯದ ದೃಷ್ಟಿಯಿಂದ ಎರಡು ರಾಜ್ಯಗಳ (ತೆಲಂಗಾಣ - ಮಹಾರಾಷ್ಟ್ರ) ನಡುವೆ ತಡೆರಹಿತ ಬುಲೆಟ್ ರೈಲು ಜಾಲವನ್ನು ನಿರ್ಮಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಕಾಮಗಾರಿಯನ್ನು ಸುಸೂತ್ರವಾಗಿ ನಡೆಸಲು ಮಣ್ಣಿನ ಪರೀಕ್ಷೆ, ಆಸ್ತಿ ಮತ್ತು ಭೂ ಸ್ವಾಧೀನ ಸೇರಿದಂತೆ ವಿವಿಧ ಅಗತ್ಯತೆಯ ಅಂಶಗಳ ಕಾರ್ಯಸಾಧ್ಯತೆಯ ಅಧ್ಯಯನವನ್ನು ಡಿಪಿಆರ್ ಒಳಗೊಂಡಿರಲಿದೆ.

ನ್ಯಾಷನಲ್ ರೈಲ್ ಪ್ಲಾನ್ (ಎನ್‌ಆರ್‌ಪಿ) ಪ್ರಕಾರ, ಬೆಂಗಳೂರು ಹಾಗೂ ಹೈದರಾಬಾದ್ ನಡುವಿನ 618 ಕಿಲೋಮೀಟರ್ ಉದ್ದದ ಬುಲೆಟ್ ರೈಲು ಸಂಪರ್ಕ ಜಾಲ 2041ರ ವೇಳೆಗೆ ಲೋಕಾರ್ಪಣೆಗೊಳ್ಳಬಹುದು. ಆ ಬಳಿಕ, ಚೆನ್ನೈ - ಬೆಂಗಳೂರು - ಮೈಸೂರು ಮಧ್ಯೆ ಬುಲೆಟ್ ರೈಲು 2051ರಲ್ಲಿ ಕಾರ್ಯಾಚರಣೆಯನ್ನು ಶುರು ಮಾಡಲಿದೆ. ಈ ಮೂಲಕ ದಕ್ಷಿಣ ಭಾರತದ ಪ್ರಮುಖ ನಗರಗಳ ನಡುವಿನ ಅಂತರ ತುಂಬಾ ಕಡಿಮೆಯಾಗಲಿದೆ.

Bullet Train: ಕರ್ನಾಟಕದ ಈ ನಗರಗಳಲ್ಲಿ ಬುಲೆಟ್ ರೈಲು ಓಡಲಿದೆ!

ಇನ್ನುಳಿದಂತೆ ದೆಹಲಿ - ವಾರಣಾಸಿ, ದೆಹಲಿ - ಅಹಮದಾಬಾದ್, ದೆಹಲಿ - ಅಮೃತಸರ, ಮುಂಬೈ - ನಾಗ್ಪುರ, ವಾರಣಾಸಿ - ಹೌರಾ ನಗರಗಳ ಮಧ್ಯೆಯೂ ಹೈಸ್ಪೀಡ್ ರೈಲು ಸಂಚರಿಸಲಿದೆ. ಸದ್ಯ, ಮುಂಬೈ - ಅಹಮದಾಬಾದ್ ನಗರಗಳ ನಡುವೆ ಜಪಾನ್ ಸರ್ಕಾರದ ಸಹಕಾರದೊಂದಿಗೆ ಕೇಂದ್ರ ಸರ್ಕಾರ, ಬುಲೆಟ್ ರೈಲು ಯೋಜನೆಯನ್ನು ಕೈಗೊಳ್ಳುತ್ತಿದ್ದು, 2027ರ ವೇಳೆಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.

ಜಪಾನ್ ದೇಶದಲ್ಲಿರುವ ಬುಲೆಟ್ ರೈಲುಗಳು, 240 - 320 km/h ವೇಗದಲ್ಲಿ ಕಾರ್ಯಾಚರಣೆಯನ್ನು ನಡೆಸಲಿವೆ. ಕೆಲವೇ ತಿಂಗಳ ಹಿಂದೆ, ಆ ದೇಶದ ಒಸಾಕಾದಿಂದ ಟೊಕಿಯೊಗೆ ಬುಲೆಟ್ ರೈಲಿನಲ್ಲಿ ಸಂಚರಿಸಿದ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು, ಸುಮಾರು 500 ಕಿಲೋಮೀಟರ್ ದೂರವನ್ನು ಎರಡೂವರೆ ಗಂಟೆಗಿಂತ ಕಡಿಮೆ ಅವಧಿಯಲ್ಲಿ ಪ್ರಯಾಣಿಸಲಾಯಿತು. ಈ ರೈಲು ಭಾರತದಕ್ಕೆ ಬಂದರೆ, ಅಭಿವೃದ್ಧಿಯು ಮತ್ತಷ್ಟು ವೇಗವನ್ನು ಪಡೆಯಲಿದೆ ಎಂದು ಹೇಳಿದ್ದರು.

ಸದ್ಯ, ಕರ್ನಾಟಕವು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹೈಸ್ವೀಡ್ ರೈಲಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ಕಾರ್ಯಾಚರಣೆ ನಡೆಸುತ್ತಿದೆ. ಇದು, ಗಂಟೆಗೆ 180 ಕಿಮೀ ವೇಗದಲ್ಲಿ ಚಲಿಸಲಿದೆ. ಆದರೆ, ಸುರಕ್ಷತೆ ದೃಷ್ಟಿಯಿಂದ ಅದನ್ನು 160 ಕಿಮೀ.ಗೆ ಸೀಮಿತಗೊಳಿಸಲಾಗಿದೆ. ಈ ರೈಲಿಗೆ ಪ್ರತೇಕ ಎಂಜಿನ್ ಇಲ್ಲ. ಪ್ರಯಾಣಿಕರ ಅನುಕೂಲಕ್ಕಾಗಿ ವೈಫೈ ಸೇರಿದಂತೆ ಹಲವು ಸೌಕರ್ಯಗಳಿದ್ದು, ಎಸಿಯಿರುವ ವ್ಯವಸ್ಥೆಯೂ ಇದ್ದು, ಸೀಟುಗಳು ಆರಾಮದಾಯವಾಗಿವೆ. ಜೊತೆಗೆ ಜೈವಿಕ ಶೌಚಾಲಯವನ್ನು ಒಳಗೊಂಡಿದೆ.

ಇನ್ನು, ದೇಶದ ಬೆಳವಣಿಗೆಯಲ್ಲಿ ಬುಲೆಟ್ ರೈಲುಗಳು ಮಹತ್ವದ ಪಾತ್ರವಹಿಸುತ್ತವೆ. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. 2027ರ ವೇಳೆಗೆ ದೇಶದಲ್ಲಿ ಮೊದಲ ಬುಲೆಟ್ ರೈಲು ಕಾರ್ಯಾಚರಣೆ ನಡೆಸುವ ಸಾಧ್ಯತೆಯಿದೆ. ಇದರೊಟ್ಟಿಗೆ ಹೈದರಾಬಾದ್ ಬೆಂಗಳೂರು ಹಾಗೂ ಮುಂಬೈ ಸೇರಿದಂತೆ ಏಳು ಪ್ರಮುಖ ಮಾರ್ಗದಲ್ಲೂ ಕೆಲವೇ ವರ್ಷಗಳಲ್ಲಿ ಹೈಸ್ವೀಡ್ ರೈಲು ಸಂಚಾರ ನಡೆಸಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.

Article Published On: Saturday, July 29, 2023, 13:30 [IST]
English summary
Hyderabad mumbai bengaluru get bullet train connectivity details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+