ರೇರ್ ವೀವ್ ಮಿರರ್ ಹೊಂದಿರದ ದ್ವಿಚಕ್ರ ವಾಹನಗಳಿಗೆ ಬೀಳುತ್ತಿದೆ ಭಾರೀ ಪ್ರಮಾಣದ ದಂಡ

ದ್ವಿಚಕ್ರ ವಾಹನಗಳಿಂದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಸಂಚಾರ ನಿಯಮ ಉಲ್ಲಂಘನೆಗಳಿಂದಾಗಿ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅಪಘಾತಗಳ ಪ್ರಮಾಣವನ್ನು ಕಡಿಮೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.

ರೇರ್ ವೀವ್ ಮಿರರ್ ಹೊಂದಿರದ ದ್ವಿಚಕ್ರ ವಾಹನಗಳಿಗೆ ಬೀಳುತ್ತಿದೆ ಭಾರೀ ಪ್ರಮಾಣದ ದಂಡ

ಸಂಚಾರ ಅಪರಾಧಗಳನ್ನು ಕಡಿಮೆ ಮಾಡುವ ಸಲುವಾಗಿ ಕೇಂದ್ರ ಸರ್ಕಾರವು 2019ರಲ್ಲಿ ಹೊಸ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೊಳಿಸಿತು. ಈ ಹೊಸ ಕಾಯ್ದೆಯನ್ವಯ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತದೆ.

ರೇರ್ ವೀವ್ ಮಿರರ್ ಹೊಂದಿರದ ದ್ವಿಚಕ್ರ ವಾಹನಗಳಿಗೆ ಬೀಳುತ್ತಿದೆ ಭಾರೀ ಪ್ರಮಾಣದ ದಂಡ

ಕೆಲ ದಿನಗಳ ಹಿಂದಷ್ಟೇ ದೆಹಲಿಯ ಸಂಚಾರಿ ಪೊಲೀಸರು ರೇರ್ ವೀವ್ ಮಿರರ್'ಗಳಿಲ್ಲದ ದ್ವಿಚಕ್ರ ವಾಹನಗಳ ವಿರುದ್ಧ ಕ್ರಮ ಕೈಗೊಂಡಿದ್ದರು. ಸಂಚಾರಿ ಪೊಲೀಸರ ಈ ಕ್ರಮವನ್ನು ಸಾರ್ವಜನಿಕರು ಜನರಿಂದ ಹಣ ಸುಲಿಗೆ ಮಾಡುವ ಹೊಸ ಮಾರ್ಗವೆಂದು ಕರೆದಿದ್ದರು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ರೇರ್ ವೀವ್ ಮಿರರ್ ಹೊಂದಿರದ ದ್ವಿಚಕ್ರ ವಾಹನಗಳಿಗೆ ಬೀಳುತ್ತಿದೆ ಭಾರೀ ಪ್ರಮಾಣದ ದಂಡ

ಆದರೆ ರೇರ್ ವೀವ್ ಮಿರರ್'ಗಳಿಲ್ಲದ ದ್ವಿಚಕ್ರ ವಾಹನಗಳ ವಿರುದ್ಧ ಕ್ರಮ ಕೈಗೂಳ್ಳುತ್ತಿರುವುದು ಹೊಸ ನಿಯಮವಲ್ಲ. ಕೇಂದ್ರ ಮೋಟಾರು ವಾಹನ ಕಾಯ್ದೆ 1988ರ ಸೆಕ್ಷನ್ 5 ಹಾಗೂ ಸೆಕ್ಷನ್ 7ರ ಪ್ರಕಾರ ರೇರ್ ವೀವ್ ಮಿರರ್ ಹೊಂದಿರದ ದ್ವಿಚಕ್ರ ವಾಹನಗಳ ವಿರುದ್ಧ ಕ್ರಮಕೈಗೊಳ್ಳಬಹುದು.

ರೇರ್ ವೀವ್ ಮಿರರ್ ಹೊಂದಿರದ ದ್ವಿಚಕ್ರ ವಾಹನಗಳಿಗೆ ಬೀಳುತ್ತಿದೆ ಭಾರೀ ಪ್ರಮಾಣದ ದಂಡ

ಹೈದರಾಬಾದ್ ಪೊಲೀಸರು ಸಹ ಈಗ ಇದೇ ರೀತಿಯ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ರೇರ್ ವೀವ್ ಮಿರರ್'ಗಳನ್ನು ಹೊಂದದೇ ಇರುವ ದ್ವಿಚಕ್ರ ವಾಹನಗಳ ವಿರುದ್ಧ ಹೈದರಾಬಾದ್ ನಗರ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ರೇರ್ ವೀವ್ ಮಿರರ್ ಹೊಂದಿರದ ದ್ವಿಚಕ್ರ ವಾಹನಗಳಿಗೆ ಬೀಳುತ್ತಿದೆ ಭಾರೀ ಪ್ರಮಾಣದ ದಂಡ

ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ಗೊಂದಲಕ್ಕೊಳಗಾಗಿದ್ದಾರೆ. ಇತರ ವಾಹನಗಳಿಗೆ ಹೋಲಿಸಿದರೆ ದ್ವಿಚಕ್ರ ವಾಹನಗಳೇ ಹೆಚ್ಕಿನ ಸಂಖ್ಯೆಯಲ್ಲಿ ಅಪಘಾತಕ್ಕೀಡಾಗುತ್ತವೆ. ಈ ಕಾರಣಕ್ಕೆ ದ್ವಿಚಕ್ರ ವಾಹನಗಳಿಗಾಗಿ ಹಲವಾರು ನಿಯಮಗಳನ್ನು ಜಾರಿಗೆ ತರಲಾಗಿದೆ.

ರೇರ್ ವೀವ್ ಮಿರರ್ ಹೊಂದಿರದ ದ್ವಿಚಕ್ರ ವಾಹನಗಳಿಗೆ ಬೀಳುತ್ತಿದೆ ಭಾರೀ ಪ್ರಮಾಣದ ದಂಡ

ಮೋಟಾರು ವಾಹನ ಕಾಯ್ದೆಯನ್ವಯ ದ್ವಿಚಕ್ರ ವಾಹನ ಸವಾರರು ಮಾತ್ರವಲ್ಲದೇ ಹಿಂಬದಿಯ ಸವಾರರು ಸಹ ಹೆಲ್ಮೆಟ್ ಧರಿಸಬೇಕು. ರೇರ್ ವೀವ್ ಮಿರರ್ ಹೊಂದದೇ ಇರುವ ದ್ವಿಚಕ್ರ ವಾಹನಗಳು ಹೆಚ್ಕು ಅಪಘಾತಕ್ಕೀಡಾಗುತ್ತಿವೆ ಎಂಬ ಕಾರಣಕ್ಕೆ ದ್ವಿಚಕ್ರ ವಾಹನಗಳಲ್ಲಿ ರೇರ್ ವೀವ್ ಮಿರರ್ ಕಡ್ಡಾಯಗೊಳಿಸಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ರೇರ್ ವೀವ್ ಮಿರರ್ ಹೊಂದಿರದ ದ್ವಿಚಕ್ರ ವಾಹನಗಳಿಗೆ ಬೀಳುತ್ತಿದೆ ಭಾರೀ ಪ್ರಮಾಣದ ದಂಡ

ರೇರ್ ವೀವ್ ಮಿರರ್ ಹೊಂದದೇ ಇರುವ ದ್ವಿಚಕ್ರ ವಾಹನಗಳಿಗೆ ಭಾರೀ ದಂಡ ವಿಧಿಸಲಾಗುವುದು ಎಂದು ಹೈದರಾಬಾದ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಹೈದರಾಬಾದ್ ಪೊಲೀಸರು ಕೆಲವರಿಗೆ ಎಚ್ಚರಿಕೆ ನೀಡಿದ್ದರೆ ಇನ್ನೂ ಕೆಲವರಿಗೆ ರೂ.1,000ಗಳವರೆಗೆ ದಂಡ ವಿಧಿಸಿದ್ದಾರೆ ಎಂದು ವರದಿಯಾಗಿದೆ.

ರೇರ್ ವೀವ್ ಮಿರರ್ ಹೊಂದಿರದ ದ್ವಿಚಕ್ರ ವಾಹನಗಳಿಗೆ ಬೀಳುತ್ತಿದೆ ಭಾರೀ ಪ್ರಮಾಣದ ದಂಡ

ಯಾವುದೇ ಮುನ್ಸೂಚನೆ ನೀಡದೇ ರೇರ್ ವೀವ್ ಮಿರರ್ ಹೊಂದಿರದ ದ್ವಿಚಕ್ರ ವಾಹನಗಳಿಗೆ ಪೊಲೀಸರು ಇದ್ದಕ್ಕಿದ್ದಂತೆ ದಂಡ ವಿಧಿಸುತ್ತಿದ್ದಾರೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ರೇರ್ ವೀವ್ ಮಿರರ್ ಹೊಂದಿರದ ದ್ವಿಚಕ್ರ ವಾಹನಗಳಿಗೆ ಬೀಳುತ್ತಿದೆ ಭಾರೀ ಪ್ರಮಾಣದ ದಂಡ

ಪೊಲೀಸರ ಹಠಾತ್ ಕ್ರಮದಿಂದಾಗಿ ಹೈದರಾಬಾದ್ ನಗರದ ವಿವಿಧ ಭಾಗಗಗಳಲ್ಲಿ ದ್ವಿಚಕ್ರ ವಾಹನ ಸವಾರರು ಹಾಗೂ ದ್ವಿಚಕ್ರ ವಾಹನ ಸವಾರರ ನಡುವೆ ವಾಗ್ವಾದ ನಡೆಯುತ್ತಿದೆ.

ರೇರ್ ವೀವ್ ಮಿರರ್ ಹೊಂದಿರದ ದ್ವಿಚಕ್ರ ವಾಹನಗಳಿಗೆ ಬೀಳುತ್ತಿದೆ ಭಾರೀ ಪ್ರಮಾಣದ ದಂಡ

ಇತ್ತೀಚೆಗೆ ದ್ವಿಚಕ್ರ ವಾಹನಗಳ ಅಪಘಾತಗಳ ಪ್ರಮಾಣವು ಏರಿಕೆಯಾಗಿದೆ. ಹೀಗೆ ಅಪಘಾತಕ್ಕೀಡಾಗುತ್ತಿರುವ ಬಹುತೇಕ ದ್ವಿಚಕ್ರ ವಾಹನಗಳಲ್ಲಿ ರೇರ್ ವೀವ್ ಮಿರರ್'ಗಳು ಇಲ್ಲದೇ ಇರುವುದು ಕಂಡು ಬಂದಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ರೇರ್ ವೀವ್ ಮಿರರ್ ಹೊಂದಿರದ ದ್ವಿಚಕ್ರ ವಾಹನಗಳಿಗೆ ಬೀಳುತ್ತಿದೆ ಭಾರೀ ಪ್ರಮಾಣದ ದಂಡ

ಈ ಹಿನ್ನೆಲೆಯಲ್ಲಿ ರೇರ್ ವೀವ್ ಮಿರರ್ ಹೊಂದಿರದ ದ್ವಿಚಕ್ರ ವಾಹನಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವುದಾಗಿ ಹೈದರಾಬಾದ್ ಪೊಲೀಸರು ತಿಳಿಸಿದ್ದಾರೆ.

Most Read Articles

Kannada
English summary
Hyderabad Police imposing huge fine for two wheelers not having rear view mirror. Read in Kannada.
Story first published: Monday, March 22, 2021, 15:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X