ಪ್ರಯಾಣಿಕ ಕುಳಿತಿದ್ದಾನೆ.. ಸ್ಕೂಟರ್ ತಳ್ಳಿದ ರಾಪಿಡೊ ಚಾಲಕ: ವಿಡಿಯೋ ನೋಡಿ ಮರುಗಿದ ನೆಟ್ಟಿಗರು!
ಹೈದರಾಬಾದ್‌ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಪ್ರಯಾಣದ ಸಮಯದಲ್ಲಿ ಸ್ಕೂಟರ್‌ನ ಪೆಟ್ರೋಲ್ ಖಾಲಿಯಾಗಿದೆ. ಹಿಂಭಾಗದ ಆಸನದಲ್ಲಿ ಗ್ರಾಹಕನೊಬ್ಬ ಕುಳಿತುಕೊಂಡಿದ್ದು, ಆತನೊಟ್ಟಿಗೆಯೇ ರಾಪಿಡೊ ರೈಡರ್ (ಚಾಲಕ) ಸ್ಕೂಟರ್‌ನ್ನು ಪೆಟ್ರೋಲ್ ಪಂಪ್‌ವರೆಗೆ ತಳ್ಳಿದ್ದಾನೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.
ವಿವಿಧ ಮಾಧ್ಯಮಗಳ ವರದಿಗಳ ಪ್ರಕಾರ, ವ್ಯಕ್ತಿಯೋರ್ವ ರಾಪಿಡೊ (Rapido) ಸ್ಕೂಟರ್‌ನ್ನು ಬುಕ್ ಮಾಡಿದ್ದಾನೆ. ಅರ್ಧದಷ್ಟು ರೈಡ್ (ಪ್ರಯಾಣ) ಮುಗಿದ ಬಳಿಕ, ಸ್ಕೂಟರ್ ಸವಾರನು ಹಿಂಬದಿ ಪ್ರಯಾಣಿಕನಿಗೆ ಪೆಟ್ರೋಲ್ ಖಾಲಿಯಾಗಲಿದ್ದು, ಯಾವುದೇ ಕ್ಷಣದಲ್ಲಿ ಬೇಕಾದರೂ ಸ್ಕೂಟರ್ ನಿಲ್ಲುತ್ತದೆ ಎಂದು ತಿಳಿಸಿದ್ದಾನೆ. ಆದರೆ ಪ್ರಯಾಣಿಕ ಸ್ಕೂಟರ್‌ನಿಂದ ಕೆಳಗಿಳಿಯಲು ನಿರಾಕರಿಸಿದ್ದು, ಸವಾರನು ವಿಧಿಯಿಲ್ಲದೇ ಪೆಟ್ರೋಲ್ ಪಂಪ್‌ವರೆಗೆ ಸ್ಕೂಟರ್‌ನ್ನು ತಳ್ಳಿದ್ದಾನೆ.

ಈ ವಿಡಿಯೋವನ್ನು ಹಿಂದಿನ ವಾಹನದಲ್ಲಿ ಬರುತ್ತಿದ್ದವರೂ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆ ಬಳಿಕ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಹಿಂಬದಿ ಆನಸದಲ್ಲಿ ಕುಳಿತಿದ್ದ ಪ್ರಯಾಣಿಕನೊಟ್ಟಿಗೆ ಸ್ಕೂಟರ್ ತಳ್ಳಲು ಸವಾರನು ಬಹಳ ಕಷ್ಟಪಡುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಆದಾಗ್ಯೂ, ಪ್ರಯಾಣಿಕನು ವಿಕಲಚೇತನನೇ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ.
ಈ ಘಟನೆಯನ್ನು ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು ಖಂಡಿಸಿದ್ದು, ರಾಪಿಡೊ ಚಾಲಕನ ಬಗ್ಗೆ ಮರುಕ ವ್ಯಕ್ತಪಡಿಸಿದ್ದಾರೆ. ಕನಿಮೊಳಿ ಎಂಬ ನೆಟ್ಟಿಗರೊಬ್ಬರು 'ಪ್ರಯಾಣಿಕ, ಚಾಲಕ ಇಬ್ಬರು ಮೂರ್ಖರು, ಸವಾರ ಸಾಕಷ್ಟು ಪೆಟ್ರೋಲ್ ಇಲ್ಲದೆ ರೈಡ್‌ಗಾಗಿ ಬುಕ್ಕಿಂಗ್ ಸ್ವೀಕರಿಸಬಾರದು' ಎಂದಿದ್ದಾರೆ. ಅಭಿಷೇಕ್ ಎನ್ನುವವರು ' ಚಾಲಕನು ಹ್ಯಾಂಡಲ್ ಅನ್ನು ಬಿಡಬೇಕಿತ್ತು. ಸ್ಕೂಟರ್ ಬಿದ್ದರೆ ಏನು ಆಗುತ್ತಿರಲಿಲ್ಲ. ಆ ಮನುಷ್ಯನ ಕಾಲುಗಳೆರೆಡು ತುಂಡಾಗುತ್ತಿದ್ದವು' ಎಂದು ಕಾಮೆಂಟ್ ಮಾಡಿದ್ದಾರೆ.

ಪೇಗನ್ ಎಂಬ ಬಳಕೆದಾರರು, 'ಸಂಪೂರ್ಣವಾಗಿ ಅಸಹ್ಯಕರ ನಡವಳಿಕೆ. ಚಾಲಕ ನಿರಾಕರಿಸಬೇಕಿತ್ತು' ಎಂದು ಹೇಳಿದ್ದಾರೆ. ಪ್ರತಿಬಾ ಕರೆ ಎನ್ನುವವರು, 'ಪ್ರಯಾಣಿಕನು ಕೊಂಚ ದಯೆ ತೋರಬಹುದಿತ್ತು. ಚಾಲಕನಿಗೆ ಹಣದ ಕೊರತೆಯಿರಬಹುದು. ಗ್ರಾಹಕ ಇಳಿದಿದ್ದರೆ ಏನು ಆಗುತ್ತಿರಲಿಲ್ಲ. ಆದರೆ ಅವನನ್ನು ಕೂಲಿಯಂತೆ ತಳ್ಳಲು ಹೇಳಿರುವುದು ನಿಜಕ್ಕೂ ಕ್ರೂರವಾಗಿದೆ' ಎಂದು ಹೇಳಿದ್ದಾರೆ.
ಅಂಕಿತ್ ಎಂಬುವವರು 'ಜನರು ತಮ್ಮ ಹಣವನ್ನು ವ್ಯರ್ಥ ಮಾಡಬಾರದು ಎಂಬ ಉತ್ತರವಿದೆ, ಆದ್ದರಿಂದ ಉತ್ತರವಿಲ್ಲ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ನೆಟ್ಟಿಗ, 'ಚಾಲಕನು ಪ್ರಯಾಣದ ದರವನ್ನು ಹಿಂದಿರುಗಿಸಬಹುದಿತ್ತು. ಇಲ್ಲವೇ ಪರ್ಯಾಯ ಬೈಕ್ ವ್ಯವಸ್ಥೆ ಮಾಡಬಹುದಿತ್ತ..?, ರಾಪಿಡೊ ಸಂಸ್ಥೆ ಚಾಲಕ ಹಾಗೂ ಗ್ರಾಹಕನಿಗೆ ಸಹಾಯ ಮಾಡಲು ಮುಂದಾಗಬಹುದಿತ್ತು. ಮೇಲ್ನೋಟಕ್ಕೆ ಇದೆಲ್ಲವು ಅವರ ಮನಸ್ಸಿಗೆ ಬರಲಿಲ್ಲವೇ' ಎಂದು ಕೇಳಿದ್ದಾರೆ.
ಇನ್ನು, ರಾಪಿಡೊ ಚಾಲಕ ಸ್ಕೂಟರ್‌ನಲ್ಲಿ ಪ್ರಯಾಣಕ್ಕೆ ಬೇಕಿರುವಷ್ಟು ಪೆಟ್ರೋಲ್ ಇಲ್ಲವೆಂದು ಗೊತ್ತಿದ್ದಾಗ ಬುಕ್ಕಿಂಗ್ ತೆಗೆದುಕೊಳ್ಳದೆ ಇದ್ದಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ. ಈವರೆಗೆ ಎಷ್ಟು ವೆಚ್ಚವಾಗಿದೆಯೋ ಅಷ್ಟು ಹಣವನ್ನು ತೆಗೆದುಕೊಂಡು ಪ್ರಯಾಣಿಕನಿಗೆ ಬೇರೆ ವಾಹನದ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದು ಮತ್ತಷ್ಟು ಮನವೊಲಿಸಬಹುದಿತ್ತು. ಗ್ರಾಹಕನು ಕೂಡ ಸಹೃದಯದಿಂದ ಪರ್ಯಾಯ ವಾಹನವನ್ನು ಮಾಡಿಕೊಂಡು ಹೋಗಿದ್ದಾರೆ ಏನು ಆಗುತ್ತಿರಲಿಲ್ಲ. ಆತನು ವಿಪರೀತವಾಗಿ ವರ್ತಿಸಿರುವುದು ಬೇಸರದ ಸಂಗತಿಯಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications