ಫ್ಲೈಒವರ್‍‍ನಿಂದ ಕೆಳಗೆ ಹಾರಿದ ಕಾರು..!

ವಾಹನಗಳನ್ನು ಚಲಾಯಿಸುವಾಗ ತೆಗೆದುಕೊಳ್ಳಬೇಕಾದ ಮುಂಜಾಗರೂಕತೆಯ ಬಗ್ಗೆ ಎಷ್ಟೇ ಪ್ರಚಾರ ಮಾಡಿದರೂ, ಜನರು ಅವುಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಕೆಲವರು ಮಿತ ವೇಗದಲ್ಲಿ ವಾಹನಗಳನ್ನು ಚಲಾಯಿಸಿದರೆ, ಇನ್ನೂ ಕೆಲವರು ವೇಗದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ.

ಫ್ಲೈಒವರ್‍‍ನಿಂದ ಕೆಳಗೆ ಹಾರಿದ ಕಾರು..!

ಅತಿ ವೇಗವೂ ಸಹ ಭಾರತದಲ್ಲಿ ಉಂಟಾಗುವ ಅಪಘಾತದ ಕಾರಣಗಳಲ್ಲಿ ಒಂದಾಗಿದೆ. ಭಾರತದಲ್ಲಿ ನಡೆಯುವ ರಸ್ತೆ ಅಪಘಾತಗಳಲ್ಲಿ ಪ್ರತಿ ವರ್ಷ ಒಂದೂವರೆ ಲಕ್ಷಕ್ಕೂ ಅಧಿಕ ಜನರು ಸಾವನ್ನಪ್ಪುತ್ತಿದ್ದಾರೆ. ಇವುಗಳಲ್ಲಿ ಅತಿವೇಗವಾಗಿ ವಾಹನ ಚಲಾಯಿಸಿ ಸಾಯುತ್ತಿರುವವರ ಸಂಖ್ಯೆಯು ಅಧಿಕವಾಗಿದೆ.

ಫ್ಲೈಒವರ್‍‍ನಿಂದ ಕೆಳಗೆ ಹಾರಿದ ಕಾರು..!

ಈ ಕಾರಣಕ್ಕೆ ಸರ್ಕಾರ ಹಾಗೂ ಪೊಲೀಸ್ ಇಲಾಖೆಯು ವೇಗವಾಗಿ ವಾಹನ ಚಲಾಯಿಸುವ ಸವಾರರ ವಿರುದ್ಧ ದಂಡ ವಿಧಿಸುವಂತಹ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಭಾನುವಾರ ಹೈದರಾಬಾದ್‍‍ನಲ್ಲಿ ನಡೆದ ಅಪಘಾತವೊಂದು ವಾಹನ ಸವಾರರು ಹೇಗೆ ವಾಹನಗಳನ್ನು ಅತಿ ವೇಗವಾಗಿ ಚಲಾಯಿಸಿ ಅಪಘಾತಕ್ಕೆ ಕಾರಣರಾಗುತ್ತಾರೆ ಎಂಬುದನ್ನು ತೋರಿಸುತ್ತದೆ.

ಫ್ಲೈಒವರ್‍‍ನಿಂದ ಕೆಳಗೆ ಹಾರಿದ ಕಾರು..!

ಫ್ಲೈ ಒವರ್ ಮೇಲಿಂದ ಕಾರು ಕೆಳಗೆ ಬಿದ್ದ ಕಾರಣ, ಫ್ಲೈ ಒವರ್ ಕೆಳಗೆ ನಿಂತಿದ್ದ ಮಹಿಳೆ ಸಾವನ್ನಪ್ಪಿದ್ದಾರೆ. ಕಲ್ಕಾವಂದಲಾ ಕೃಷ್ಣ ಮಿಲನ್ ರಾವ್ ಎಂಬುವವರೇ ಈ ಅಪಘಾತಕ್ಕೆ ಕಾರಣರಾದ ವ್ಯಕ್ತಿ. ಇವರು ತಮ್ಮ ಕಾರ್ ಅನ್ನು ಫ್ಲೈ‍ಒವರ್ ಮೇಲೆ ಅತಿ ವೇಗವಾಗಿ ಚಲಾಯಿಸಿದ್ದಾರೆ.

ಫ್ಲೈಒವರ್‍‍ನಿಂದ ಕೆಳಗೆ ಹಾರಿದ ಕಾರು..!

ಭಾನುವಾರ ತಮ್ಮ ಕಾರಿನಲ್ಲಿ ಹೈದರಾಬಾದಿನಲ್ಲಿರುವ ಬಯೊ ಡೈವರ್ಸಿಟಿ ಫ್ಲೈ‍ಒವರ್ ಮೇಲೆ ಅತಿ ವೇಗವಾಗಿ ಬಂದಿದ್ದಾರೆ. ಈ ಫ್ಲೈ ಒವರ್ ಬಗ್ಗೆ ಅವರಿಗೆ ಅಷ್ಟಾಗಿ ಪರಿಚಯವಿರಲಿಲ್ಲವೆಂದು ಕಾಣುತ್ತದೆ. ವರದಿಗಳ ಪ್ರಕಾರ ತಮ್ಮ ಕಾರಿನಲ್ಲಿ ಮೊದಲ ಬಾರಿಗೆ ಈ ಫ್ಲೈ ಒವರ್ ಮೇಲೆ ಬಂದಿದ್ದಾರೆ.

ಫ್ಲೈಒವರ್‍‍ನಿಂದ ಕೆಳಗೆ ಹಾರಿದ ಕಾರು..!

ತಮ್ಮ ಕಾರ್ ಅನ್ನು ಪ್ರತಿ ಗಂಟೆಗೆ 104 ಕಿ.ಮೀ ವೇಗದಲ್ಲಿ ಚಲಾಯಿಸಿಕೊಂಡು ಬಂದಿದ್ದಾರೆ. ಕೃಷ್ಣ ಮಿಲನ್ ರಾವ್‍‍ರವರು ಜುಬಿಲಿ ಹಿಲ್ಸ್ ನಲ್ಲಿರುವ ತಮ್ಮ ಮನೆಯಿಂದ ಮೀನಾಕ್ಷಿ ಟವರ್‍‍ನಲ್ಲಿದ್ದ ಕಚೇರಿಯಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಭಾಗವಹಿಸಲು ತೆರಳುತ್ತಿದ್ದರು.

ಫ್ಲೈಒವರ್‍‍ನಿಂದ ಕೆಳಗೆ ಹಾರಿದ ಕಾರು..!

ಅವರು ಕೆಂಪು ಬಣ್ಣದ ಫೋಕ್ಸ್‌ವ್ಯಾಗನ್ ಕಾರ್ ಅನ್ನು ಚಲಾಯಿಸುತ್ತಿದ್ದರು. ಕಾರಿನ ವೇಗವು ಹೆಚ್ಚಾಗುತ್ತಿದ್ದಂತೆ ಕಾರಿನ ಮೇಲೆ ನಿಯಂತ್ರಣವನ್ನು ಕಳೆದು ಕೊಂಡಿದ್ದಾರೆ. ಇದರ ಪರಿಣಾಮ ಕಾರು ಫ್ಲೈ ಒವರ್ ಮೇಲಿಂದ ಕೆಳಕ್ಕೆ ಬಿದ್ದಿದೆ.

MOST READ: ಡಿಸೆಂಬರ್ 1ರಿಂದ ಜಾರಿಗೆ ಬರಲಿರುವ ಫಾಸ್ಟ್‌ಟ್ಯಾಗ್ ಬಗ್ಗೆ ನಿಮಗೆಷ್ಟು ಗೊತ್ತು?

ಫ್ಲೈಒವರ್‍‍ನಿಂದ ಕೆಳಗೆ ಹಾರಿದ ಕಾರು..!

ಕಾರು ಕೆಳಗೆ ಬಿದ್ದಿದ್ದರಿಂದ ಫ್ಲೈ ಒವರ್ ಕೆಳಗಿದ್ದ ಬಸ್ ಸ್ಟಾಂಡಿನಲ್ಲಿದ್ದ ಸತ್ಯವೇಣಿ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಇದರ ಜೊತೆಗೆ ಪ್ರಣೀತಾ, ಆಟೋ ಚಾಲಕ ಬಾಲು ನಾಯಕ್ ಹಾಗೂ ಸಾಫ್ಟ್ ವೇರ್ ಎಂಜಿನಿಯರ್ ಕುಬೇರ ಎಂಬುವವರು ಗಾಯಗೊಂಡಿದ್ದಾರೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಫ್ಲೈಒವರ್‍‍ನಿಂದ ಕೆಳಗೆ ಹಾರಿದ ಕಾರು..!

ಆದರೆ ಕಾರಿನಿಲ್ಲಿದ್ದ ಏರ್‍‍ಬ್ಯಾಗ್ ತೆರೆದುಕೊಂಡ ಕಾರಣ ಕಾರ್ ಅನ್ನು ಚಾಲನೆ ಮಾಡುತ್ತಿದ್ದ ಕೃಷ್ಣ ಮಿಲನ್ ರಾವ್‍‍ರವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಹತ್ತಿರದಲ್ಲಿದ್ದ ಆಸ್ಪತ್ರೆಗೆ ದಾಖಲಿಸಲಾಗಿದೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಫ್ಲೈಒವರ್‍‍ನಿಂದ ಕೆಳಗೆ ಹಾರಿದ ಕಾರು..!

ಕೃಷ್ಣ ಮಿಲನ್ ರಾವ್‍‍ರವರು ಜನಪ್ರಿಯ ಕಂಪನಿಯಾದ ಎಂಪವರ್ ಲ್ಯಾಬ್ಸ್ ನ ಸಿ‍ಇ‍‍ಒ ಹಾಗೂ ಸಹ ಸ್ಥಾಪಕರಾಗಿದ್ದಾರೆ. ಜೊತೆಗೆ ಅವರು ತೆಲಂಗಾಣದ ಸಚಿವರೊಬ್ಬರ ಸಂಬಂಧಿಯೆಂದು ತಿಳಿದು ಬಂದಿದೆ. ಸಚಿವರು ತಮ್ಮ ಸಂಬಂಧಿಯಾದ ಕೃಷ್ಣ ಮಿಲನ್ ರಾವ್‍‍ರವರನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

Most Read Articles

Kannada
English summary
Speeding Car Falls Off From Biodiversity Flyover - Women Killed, CEO Saved By Airbags - Read in Kannada
Story first published: Thursday, November 28, 2019, 18:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X