Just In
- 23 min ago
ಮಳೆಯಲ್ಲಿ ಬೈಕ್ ಚಾಲನೆ ಮಾಡುವ ಸವಾರರು ಸುರಕ್ಷಿತವಾಗಿರಲು ಈ ಟಿಪ್ಸ್ ಫಾಲೋ ಮಾಡಿ
- 45 min ago
ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ವೆನ್ಯೂ ಎನ್-ಲೈನ್
- 1 hr ago
ಹ್ಯುಂಡೈ ಕ್ರೆಟಾಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಹೊಸ ಟೊಯೊಟಾ ಹೈರೈಡರ್ ಎಸ್ಯುವಿ
- 3 hrs ago
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಿತಿ ಮೀರಿದ ನಕಲಿ ನಂಬರ್ ಪ್ಲೇಟ್ಗಳ ಹಾವಳಿ
Don't Miss!
- News
ಹರ್ಯಾಣ ಮೊದಲೋ ಕರ್ನಾಟಕ ಮೊದಲೋ..! ಇಲ್ಲಿದೆ ರೆಸಾರ್ಟ್ ರಾಜಕಾರಣದ ಇತಿಹಾಸ
- Finance
ಗಮನಿಸಿ: ಸದ್ಯಕ್ಕಿಲ್ಲ ಆನ್ಲೈನ್ ಗೇಮಿಂಗ್ ಜಿಎಸ್ಟಿ ಏರಿಕೆ
- Sports
ICC T20 Ranking: ಹೂಡಾ, ಸ್ಯಾಮ್ಸನ್ ಭಾರೀ ಜಿಗಿತ; ಟಾಪ್ 10ರಲ್ಲಿ ಏಕೈಕ ಭಾರತೀಯ!
- Technology
ನೂತನ ಲ್ಯಾಪ್ಟಾಪ್ ಸರಣಿ ಪರಿಚಯಿಸಿದ ಡೆಲ್: ಗಮನ ಸೆಳೆವ ಫೀಚರ್ಸ್!
- Movies
25 ದಿನದತ್ತ '777 ಚಾರ್ಲಿ' ರನ್ನಿಂಗ್: 19 ದಿನಗಳಲ್ಲಿ ರಕ್ಷಿತ್ ಶೆಟ್ಟಿ ಸಿನಿಮಾ ದೋಚಿದ್ದೆಷ್ಟು?
- Lifestyle
Beauty tips: ಪದೇ ಪದೇ ಬ್ಲೀಚ್ ಮಾಡುವ ಅಭ್ಯಾಸ ಇದ್ದರೆ ಇಂದೇ ಇದನ್ನು ತಪ್ಪಿಸಿ
- Education
Kolar District Court Recruitment 2022 : 32 ಜವಾನ ಮತ್ತು ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ದೇವಿ ಮೂಕಾಂಬಿಕೆಯ ದೈವಿಕ ಸನ್ನಿಧಿಯ ಸ್ಥಳ - ಕೊಲ್ಲೂರು
ಗೋವಾ ಬೀಚ್‌ನಲ್ಲಿ ಕಾರ್ ಡ್ರೈವ್ ಮಾಡಿ ಹುಚ್ಚಾಟ: ಚಾಲಕ ಬಂಧನ
ಗೋವಾದ ಕಡಲತೀರದಲ್ಲಿ ಅಂದರೆ ಪ್ರವಾಸಿಗರ ಮೆಚ್ಚಿನ ತಾಣ. ಇದೀಗ ಗೋವಾದಲ್ಲಿ ಉತ್ತಮ ಮಳೆಯಾಗುತ್ತಿದೆ. ಗೋವಾದ ಕಡಲತೀರಗಳಲ್ಲಿ ಯಾವುದೇ ಅವಘಡಗಳನ್ನು ತಪ್ಪಿಸಲು ವಾಹನ ಚಲಾಯಿಸುವುದನ್ನು ನಿಷೇಧಿಸಲಾಗಿದೆ.

ಆದರೆ ದೆಹಲಿ ನಿವಾಸಿಯೊಬ್ಬರು ಗೋವಾದ ವಗಟೋರ್ ಬೀಚ್‌ನಲ್ಲಿ ಕಾರು ಚಲಾಯಿಸಿ ಎಂಜಾಯ್ ಮಾಡುತ್ತಿದ್ದರು. ಆದರೆ, ಅವರ ಸಂತೋಷ ಬಹಳ ಹೊತ್ತು ಇರಲಿಲ್ಲ. ಅವರು ಕಾರು ಸಮುದ್ರದ ದಡದಲ್ಲಿ ಸಿಲುಕಿಕೊಂಡಿದ್ದರಿಂದ ಸಂಕಷ್ಟ ಎದುರಾಯಿತು. ಗೋವಾದಲ್ಲಿ ಬೀಚ್ ನಲ್ಲಿ ವಾಹನ ಚಲಾಯಿಸುತ್ತಿದ್ದ ಪ್ರವಾಸಿಗರನ್ನು ಪೊಲೀಸರು ಬಂಧಿಸಿ ಕಾರನ್ನು ವಶಪಡಿಸಿಕೊಂಡಿದ್ದಾರೆ. ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ. ಬಿರುಗಾಳಿಯ ರೀತಿಯ ವಾತಾವರಣದಲ್ಲಿ ಗೋವಾ ಕಡಲತೀರದಲ್ಲಿ ಹೊಸ ಹ್ಯುಂಡೈ ಕ್ರೆಟಾ ಎಸ್‍ಯುವಿಯನ್ನು ಚಾಲನೆ ಮಾಡುತ್ತಿರುವುದನ್ನು ವೀಡಿಯೊದಲ್ಲಿ ನೋಡಬಹುದು.

ಸ್ವಲ್ಪ ಸಮಯದ ನಂತರ, ವಾಹನವನ್ನು ನೀರಿನಲ್ಲಿ ಆಳವಾಗಿ ಓಡಿಸಲು ಪ್ರಯತ್ನಿಸಿದಾಗ ವಾಹನವು ಸಿಲುಕಿಕೊಳ್ಳುತ್ತದೆ. ಬಳಿಕ ಈ ವಿಷಯ ಅಧಿಕಾರಿಗಳು ತಿಳಿಸು ವಾಹನವನ್ನು ಸಮುದ್ರದಿಂದ ಹೊರಗೆ ತಂದರು. ಪ್ರವಾಸಿಗರನ್ನು ಪೊಲೀಸರು ಬಂಧಿಸಲಾಗಿದೆ.

ಆರೋಪಿಯನ್ನು ಲಲಿತ್ ಕುಮಾರ್ ದಯಾಳ್ ಎಂದು ಗುರುತಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಜಿವ್ಬಾ ದಳವಿ ಐಎಎನ್‌ಎಸ್‌ಗೆ ತಿಳಿಸಿದ್ದಾರೆ. ಅವರು ಗೋವಾ ನೋಂದಣಿಯ ಹ್ಯುಂಡೈ ಕ್ರೆಟಾವನ್ನು ಓಡಿಸುತ್ತಿದ್ದರು. ಅವರು ಸ್ಥಳೀಯ ಮಾರಾಟಗಾರರಿಂದ ಬಾಡಿಗೆಗೆ ವಾಹನವನ್ನು ತೆಗೆದುಕೊಂಡಿದ್ದಾರೆಂದು ತೋರುತ್ತದೆ.

ಕಾರು ಚಾಲಕ ಲಲಿತ್‌ನನ್ನು ಪೊಲೀಸರು ಬಂಧಿಸಿದ್ದು, ಹ್ಯುಂಡೈ ಕ್ರೆಟಾವನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 279 ಮತ್ತು 336 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಇದಲ್ಲದೇ ಕಾರು ಮಾಲೀಕ ಸಂಗೀತಾ ಗಾವಡಾಳ್ಕರ್ ವಿರುದ್ಧ ಮಾಪುಸಾದ ಪೊಲೀಸರು ಆರ್‌ಟಿಒಗೆ ವರದಿ ಸಲ್ಲಿಸಿದ್ದಾರೆ. ವಾಹನ ಮಾಲೀಕರ ವಿರುದ್ಧವೂ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಹೇಳಲಾಗುತ್ತಿದೆ.

ಈ ಹಿಂದೆಯೂ ಇದೇ ರೀತಿಯ ಅಪರಾಧಗಳಿಗಾಗಿ ಹಲವು ಪ್ರವಾಸಿಗರನ್ನು ಗೋವಾ ಪೊಲೀಸರು ಬಂಧಿಸಿದ್ದರು. ಮೋರ್ಜಿಮ್ ಬೀಚ್‌ನಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಅನ್ನು ಬಾಡಿಗೆಗೆ ಪಡೆದಿದ್ದಕ್ಕಾಗಿ ಚೆನ್ನೈನ ಪ್ರವಾಸಿಗರನ್ನು ಗೋವಾದ ಪೆರ್ನೆಮ್ ಪೊಲೀಸರು ಬಂಧಿಸಿದ್ದಾರೆ. ಕಡಲತೀರವು ಹೆಚ್ಚು ಜನಸಂದಣಿಯಿಲ್ಲದಿದ್ದರೂ, ಅಂತಹ ಚಟುವಟಿಕೆಯು ಪ್ರವಾಸಿಗರಿಗೆ ಅಪಾಯವನ್ನುಂಟುಮಾಡುತ್ತದೆ.

ತನ್ನ ಹುಂಡೈ ಐ20 ಬೀಚ್‌ನಲ್ಲಿ ಸಿಕ್ಕಿಹಾಕಿಕೊಂಡ ನಂತರ ಪ್ರವಾಸಿಗರನ್ನು ಪೊಲೀಸರು ಬಂಧಿಸಿದ್ದಾರೆ. ಬಾಡಿಗೆ ವಾಹನವನ್ನು ಸಮುದ್ರ ಕೊಚ್ಚಿಕೊಂಡು ಹೋದ ನಂತರ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ. ಇದು ಅಲ್ಲದೇ ಬೀಚ್‌ಗಳಲ್ಲಿ ಸಚಿವರ ವಾಹನಗಳು ಸಿಕ್ಕಿಹಾಕಿಕೊಂಡ ಉದಾಹರಣೆಗಳಿವೆ. ಪಾರುಗಾಣಿಕಾ ವಾಹನವು ಮರಳಿನಲ್ಲಿ ಸವಾಲುಗಳನ್ನು ಎದುರಿಸುವುದರಿಂದ ಕಡಲತೀರಗಳಿಂದ ಅಂತಹ ವಾಹನಗಳನ್ನು ಮರುಪಡೆಯಲು ಭಾರಿ ಪ್ರಯತ್ನ ಬೇಕಾಗುತ್ತದೆ.

ಆದರೆ ನೀವು ನಿಜವಾಗಿಯೂ ನಿಮ್ಮ ವಾಹನವನ್ನು ಕಡಲತೀರಗಳಿಗೆ ತೆಗೆದುಕೊಳ್ಳಲು ಬಯಸಿದರೆ, ಖಾಸಗಿ ವಾಹನಗಳನ್ನು ಕಾನೂನುಬದ್ಧವಾಗಿ ಪ್ರವೇಶಿಸಲು ಅನುಮತಿಸುವ ಕೆಲವು ಕಡಲತೀರಗಳು ಭಾರತದಲ್ಲಿವೆ. ಕೇರಳದಲ್ಲಿ ಬೀಚ್ ಇದೆ, ಇದು ಪ್ರವೇಶ ಶುಲ್ಕದ ನಂತರ ವಾಹನಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಹೆಚ್ಚಿನ ಕಡಲತೀರಗಳು ಮೃದುವಾದ ಮರಳನ್ನು ಹೊಂದಿದ್ದು, ವಾಹನಗಳು ಸಿಲುಕಿಕೊಳ್ಳುತ್ತವೆ. ಆದರೆ, ಕೇರಳದ ಮುಜಪಿಲ್ಲಂಗಡ್ ಬೀಚ್ ಗಡಸು ಮರಳನ್ನು ಹೊಂದಿದ್ದು, ಕಾರುಗಳು ಸಿಲುಕಿಕೊಳ್ಳದಂತೆ ನೋಡಿಕೊಳ್ಳುತ್ತದೆ.
ದೆಹಲಿ ನಿವಾಸಿ ಚಾಲನೆ ಮಾಡಿದ ಹ್ಯುಂಡೈ ಕ್ರೆಟಾ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಆಕರ್ಷಕ ಬೆಲೆ, ಬಲಿಷ್ಠ ಎಂಜಿನ್ ಆಯ್ಕೆ ಮತ್ತು ವಿನೂತನ ವಿನ್ಯಾಸದೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಹೊಂದಿರುವ ಕ್ರೆಟಾ ಕಾರು ಕಾಲ ಕಾಲಕ್ಕೆ ಹಲವಾರು ಬದಲಾವಣೆಗಳನ್ನು ಪಡೆದುಕೊಳ್ಳುತ್ತಾ ಬೇಡಿಕೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಈ ಎಸ್‍ಯುವಿಯಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, ಕಾರ್ ಟೆಕ್ ಕನೆಕ್ಟಿವಿಟಿ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, ಡೋರ್ ಹ್ಯಾಂಡಲ್ ಕ್ರೋಮ್, ಥೆಫ್ಟ್ ಅಲಾರಾಂ, ಅರ್ಕಾಮಿಸ್ ಸೌಂಡ್ ಸಿಸ್ಟಂ ಮತ್ತು ಧ್ವನಿ ಗ್ರಹಿಸುವಿಕೆಯಂತಹ ವೈಶಿಷ್ಟ್ಯಗಳನ್ನು ಹೊಂದಿದೆ,

ಈ ಕ್ರೆಟಾ ಎಸ್‍ಯುವಿಯಲ್ಲಿ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಒಳಗೊಂಡಿದೆ. 1.5-ಲೀಟರ್ ಪೆಟ್ರೋಲ್ ಮಾದರಿಯೊಂದಿಗೆ 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 115 ಬಿಎಚ್‌ಪಿ ಪವರ್ ಮತ್ತು 144 ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 1.5-ಲೀಟರ್ ಡೀಸೆಲ್ ಮಾದರಿಯು ಸಹ 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 115-ಬಿಎಚ್‌ಪಿ ಪವರ್ ಮತ್ತು 250-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಗೋವಾದ ಕಡಲತೀರದಲ್ಲಿ ಪ್ರವಾಸಿಗರು ಹಲವು ಬಾರಿ ನಿಯಮಗಳನ್ನು ಮೀರುತಿದ್ದಾರೆ. ತೆರಳಿದ ಪ್ರವಾಸಿ ತಾಣಗಳಲ್ಲಿ ಅಲ್ಲಿಯ ನಿಮಮಗಳನ್ನು ಪಾಲಿಸಬೇಕಾಗಿರುವುದು ಪ್ರತಿಯೊಬ್ಬ ಪ್ರವಾಸಿಗನ ಕರ್ತವ್ಯವಾಗಿದೆ. ಪ್ರವಾಸಿಗಳ ಹುಚ್ಚಾಟದಿಂದಾಗಿ ಹಲವು ಪ್ರವಾಸಿ ತಾಣಗಳಲ್ಲಿ ಹೆಚ್ಚು ಬಿಗಿಯಾದ ನಿಯಮಗಳನ್ನು ರೂಪಿಸುವ ಅಗತ್ಯತೆ ಎದುರಾಗುತ್ತಿದೆ.