ಇ-ಇಂಧನ ಅಭಿವೃದ್ಧಿಗಾಗಿ ತೈಲ ಕಂಪನಿ ಅರಾಮ್ಕೊದೊಂದಿಗೆ ಕೈಜೋಡಿಸಿದ ಹ್ಯುಂಡೈ
ಹ್ಯುಂಡೈ ಮೋಟಾರ್ ಕಂಪನಿಯು ಸೌದಿ ಅರೇಬಿಯನ್ ತೈಲ ಕಂಪನಿ ಅರಾಮ್ಕೊ ಜೊತೆಗೂಡಿ ಕಿಂಗ್ ಅಬ್ದುಲ್ಲಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಸುಧಾರಿತ ಇ-ಇಂಧನದ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಕೆಲಸ ಮಾಡುತ್ತಿದೆ. ಕಡಿಮೆ ಇಂಗಾಲ ಹೊರಸೂಸುವ ಇಂಧನಗಳನ್ನು ಅಭಿವೃದ್ಧಿಪಡಿಸುವುದು ಈ ಸಂಶೋಧನೆಯ ಮುಖ್ಯ ಗುರಿಯಾಗಿದೆ.

ಈ ಯೋಜನೆಯ ಸಂಶೋಧನೆಗಾಗಿ ಹ್ಯುಂಡೈ ಮೋಟಾರ್ ತನ್ನ ಅತ್ಯಾಧುನಿಕ ಸೌಲಭ್ಯದೊಂದಿಗೆ ಕಿಂಗ್ ಅಬ್ದುಲ್ಲಾ ವಿಶ್ವವಿದ್ಯಾಲಯ ಇಂಧನ ಸಂಶೋಧನಾ ಪವರ್ ಹೌಸ್ ಅನ್ನು ಆಯ್ಕೆ ಮಾಡಿಕೊಂಡಿದೆ. ಈ ಮೂಲಕ ವಾಹನದ ಒಟ್ಟಾರೆ ಇಂಗಾಲದ ಡೈಆಕ್ಸೈಡ್ ಹೊರ ಸೂಸುವಿಕೆಯನ್ನು ಕಡಿಮೆ ಮಾಡಲು ಅಲ್ಟ್ರಾ-ಲೀನ್ ಬರ್ನ್, ಸ್ಪಾರ್ಕ್-ಇಗ್ನಿಷನ್ ಎಂಜಿನ್‌ಗಳಿಗೆ ಸುಧಾರಿತ ಇಂಧನವನ್ನು ಅಭಿವೃದ್ಧಿಪಡಿಸುವುದಾಗಿ ಹೇಳಿಕೆಯಲ್ಲಿ ತಿಳಿಸಿದೆ.

ಎರಡು ವರ್ಷಗಳ ಈ ಜಂಟಿ ಯೋಜನೆಯು ಸಾಂಪ್ರದಾಯಿಕ ಇಂಧನದ ಬದಲಿಗೆ ಹೈಬ್ರಿಡ್ ವಾಹನಗಳಲ್ಲಿ ಇ-ಇಂಧನವನ್ನು ಬಳಸಿದಾಗ ಎಷ್ಟು ಗ್ರೀನ್‌ಹೌಸ್ ಗ್ಯಾಸ್ ಹೊರಸೂಸುವಿಕೆಯನ್ನು ಕಡಿಮೆ ಮಾಡಬಹುದು ಎಂಬುದನ್ನು ಪರಿಶೀಲಿಸುವ ಗುರಿಯನ್ನು ಹೊಂದಿರುವುದಾಗಿ ಕಂಪನಿ ತಿಳಿಸಿದೆ.

ಇ-ಇಂಧನದಿಂದ ಮಾಲಿನ್ಯ ಕಡಿಮೆ
ಇ-ಇಂಧನದ ಮೇಲಿನ ಈ ಯೋಜನೆ ಯಶಸ್ವಿಯಾದರೆ ಪರಿಸರದಲ್ಲಿ ವಾಹನಗಳಿಂದ ಉಂಟಾಗುತ್ತಿರುವ ಮಾಲಿನ್ಯವನ್ನು ಕಡಿಮೆ ಮಾಡುವಲ್ಲಿ ದೊಡ್ಡ ಯಶಸ್ಸಿಗೆ ಕಾರಣವಾಗಬಹುದು ಎಂದು ಕಂಪನಿ ಹೇಳಿಕೊಂಡಿದೆ. ಇನ್ನು ವಿಶ್ವದಾದ್ಯಂತ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಾಗಿ ಅಳವಡಿಸಿಕೊಳ್ಳಲಾಗುತ್ತಿದೆ. ಆದರೆ ಎಲೆಕ್ಟ್ರಿಕ್ ವಾಹನಗಳ ಹೆಚ್ಚಿನ ಬೆಲೆ ಮತ್ತು ಚಾರ್ಜಿಂಗ್ ನೆಟ್ವರ್ಕ್‌ಗಳ ಕೊರತೆಯಿಂದಾಗಿ, ಅನೇಕ ದೇಶಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವೇಗವು ನಿಧಾನವಾಗಿದೆ.

ಇ-ಇಂಧನದ ಈಗಾಗಲೇ ಅಸ್ತಿತ್ವದಲ್ಲಿರುವ ವಾಹನಗಳ ಬಳಕೆಯನ್ನು ನಿರ್ವಹಿಸುವುದರ ಜೊತೆಗೆ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ. ಹ್ಯುಂಡೈ ಮೋಟಾರ್ ಕಂಪನಿಯು ಈಗಾಗಲೇ ತನ್ನ ಕಾರ್ಬನ್ ನ್ಯೂಟ್ರಾಲಿಟಿ 2045 ಯೋಜನೆಯನ್ನು ಅನಾವರಣಗೊಳಿಸಿದೆ. 2045ರ ವೇಳೆಗೆ ಇದು ವಿಶ್ವದಾದ್ಯಂತ ಸಂಪೂರ್ಣ ಕಾರ್ಬನ್ ತಟಸ್ಥ ಕಂಪನಿಯಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಮೂಲಕ ಕಂಪನಿಯು ಶುದ್ಧ ಸಾರಿಗೆ ಮತ್ತು ಶುದ್ಧ ಇಂಧನದ ಮೂಲಗಳನ್ನು ಅಭಿವೃದ್ಧಿಪಡಿಸಲು ಬದ್ಧವಾಗಿದೆ.

ಇ-ಇಂಧನ ಹೈಬ್ರಿಡ್ ವಾಹನಗಳಿಗೆ ಉತ್ತಮ
ಹೈಬ್ರಿಡ್ ಕಾರುಗಳಲ್ಲಿ ಸಾಂಪ್ರದಾಯಿಕ ಇಂಧನದ ಬದಲಿಗೆ ಇ-ಇಂಧನವನ್ನು ಬಳಸಬಹುದು ಎಂದು ಕಂಪನಿ ಹೇಳಿದೆ. ಇದು ಗ್ರೀನ್‌ಹೌಸ್ ಅನಿಲಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ. ಹ್ಯುಂಡೈ ಪ್ರಕಾರ, ಇ-ಇಂಧನವನ್ನು ಭವಿಷ್ಯದ ಇಂಧನ ಎಂದು ಬಿಂಬಿಸಲಾಗುತ್ತಿದೆ. ಸಾರಿಗೆ ವ್ಯವಸ್ಥೆಗಳಲ್ಲಿ ಈ ಇಂಧನದ ಬಳಕೆಯು ಅನೇಕ ದೇಶಗಳಲ್ಲಿ ಗಂಭೀರವಾದ ವಾಯು ಮಾಲಿನ್ಯ ಸಮಸ್ಯೆಯನ್ನು ಕಡಿಮೆ ಮಾಡಲಿದೆ.

ಮುಂದಿನ ಎರಡು ವರ್ಷಗಳಲ್ಲಿ ಹ್ಯುಂಡೈ ಮೋಟಾರ್ ಗ್ರೂಪ್, ಅರಾಮ್ಕೋ ಮತ್ತು ಕಿಂಗ್ ಅಬ್ದುಲ್ಲಾ ವಿಶ್ವವಿದ್ಯಾಲಯವು ಹೊಸ ರೀತಿಯ ಸುಧಾರಿತ ಇಂಧನವನ್ನು ಸಂಶೋಧಿಸಲು ಮತ್ತು ಅಭಿವೃದ್ಧಿಪಡಿಸಲು ಸಹಕರಿಸುತ್ತದೆ. ಹ್ಯುಂಡೈ ಮೋಟಾರ್ ಗ್ರೂಪ್, ಅದರ ಆಟೋಮೋಟಿವ್ ಮತ್ತು ತಂತ್ರಜ್ಞಾನದ ನಾಯಕತ್ವದ ಜೊತೆಗೆ ಸಂಶೋಧನಾ ತಂಡದ ಬಳಕೆಗಾಗಿ ಅತ್ಯಾಧುನಿಕ, ಅಲ್ಟ್ರಾ-ಲೀನ್-ಬರ್ನ್ ಗ್ಯಾಸೋಲಿನ್ ಎಂಜಿನ್ ಅನ್ನು ಒದಗಿಸುತ್ತದೆ.

ಶುದ್ಧ ಇಂಧನದ ಮೇಲಿನ ಈ ಪರೀಕ್ಷೆಯನ್ನು ಕಿಂಗ್ ಅಬ್ದುಲ್ಲಾ ವಿಶ್ವವಿದ್ಯಾಲಯದ ಕ್ಲೀನ್ ಬರ್ನ್ ಸಂಶೋಧನಾ ಕೇಂದ್ರದಲ್ಲಿ (CCRC) ಮಾಡಲಾಗುತ್ತದೆ. ಪ್ರಯೋಗ ಯಶಸ್ವಿಯಾದರೆ ಇ-ಇಂಧನ ಉತ್ಪಾದನೆಯತ್ತ ಗಮನ ಹರಿಸಲಾಗುವುದು. ಉತ್ತಮ ಮತ್ತು ಹೆಚ್ಚು ಸಮರ್ಥನೀಯ ಭವಿಷ್ಯವನ್ನು ಸಾಧಿಸಲು ಕಂಪನಿಗಳು ಶುದ್ಧ ಸಾರಿಗೆ ಮತ್ತು ಗ್ರೀನ್ ಪವರ್ ಪರಿಹಾರಗಳಲ್ಲಿ ಹೂಡಿಕೆ ಮಾಡುತ್ತವೆ.


Click it and Unblock the Notifications








