ಟ್ರಾನ್ಸ್‌ಫಾರ್ಮರ್‌ಗೆ ಗುದ್ದಿ ಕಾರಿನ ಮೇಲೆ ಬಿದ್ದರೂ ಪ್ರಯಾಣಿಕರು ಸೇಫ್‌: ಸೇಫ್ಟಿ ಮುಖ್ಯ ಕಣಣ್ಣೋಯ್‌

ಬಹಳಷ್ಟು ಬಾರಿ ಚಾಲಕರ ಅಜಾಗರೂಕತೆಯಿಂದ ಆಗುವ ಅಪಾಯಗಳೇ ಜಾಸ್ತಿ. ಇಂತಹ ಸಂಧರ್ಭದಲ್ಲಿ ಚಾಲಕರ ಜೊತೆ, ಅವರ ಜೊತೆಯಿರುವ ಇತರರೂ ಸಹ ಚಾಲಕರು ಮಾಡುವ ತಪ್ಪಿಗೆ ಬಲಿಯಾಗಬೇಕಾಗುತ್ತದೆ ಎಂಬುದೇ ಸೋಜಿಗದ ಸಂಗತಿ. ಅದಕ್ಕಾಗಿಯೇ ಈಗಿನ ಹಲವು ಕಾರುಗಳಲ್ಲಿ ಉತ್ತಮ ಗುಣಮಟ್ಟದ ಸೇಫ್ಟೀ ಫೀಚರ್‌ಗಳಿರುವುದು.

ಇಲ್ಲೊಂದು ಕಡೆ ವೇಗವಾಗಿ ಬಂದ ಕಾರೊಂದು ಕರೆಂಟ್‌ ಕಂಬಕ್ಕೆ ಗುದ್ದಿ ಆ ಕರೆಂಟ್‌ ಕಂಬಗಳು ಕಾರಿನ ಮೇಲೆ ಬಿದ್ದು ಅಪಘಾತಕ್ಕೀಡಾದರೂ ಕಾರಿನಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿ ಅಪಘಾತದಿಂದ ಪಾರಾದ ಘಟನೆಯೊಂದು ವರದಿಯಾಗಿದೆ. ಇನ್ನು ಅಪಘಾತಕ್ಕೀಡಾದ ಕಾರನ್ನು ಹ್ಯುಂಡೈ ವೆನ್ಯೂ ಫೇಸ್‌ಲಿಫ್ಟ್‌ ಎಂದು ಗುರುತಿಸಲಾಗಿದೆ.

Hyundai Venue Facelift

ಹೌದು, ಇಷ್ಟು ಅಪಾಯಕಾರಿಯಾದ ಅಪಘಾತ ಸಂಭವಿಸಿದರೂ ಕಾರಿನಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗುವ ಸನ್ನಿವೇಶವನ್ನು ಹ್ಯುಂಡೈ ವೆನ್ಯೂ ಫೇಸ್‌ಲಿಫ್ಟ್‌ (Hyundai Venue Facelift) ಒದಗಿಸಿದೆ. ಘಟನೆಯು ಉತ್ತರ ಪ್ರದೇಶದ ರೇ ಬಾರೇಲಿ ಎಂಬ ಸ್ಥಳದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಕಳೆದ ವರ್ಷವಷ್ಟೇ ಹ್ಯುಂಡೈ ಈ ಫೇಸ್‌ಲಿಫ್ಟ್‌ ವೆನ್ಯೂವನ್ನು ಬಿಡುಗಡೆಗೊಳಿಸಿತ್ತು.

ವರದಿಗಳ ಪ್ರಕಾರ ವೇಗವಾಗಿ ಓಡುತ್ತಿದ್ದ ವೆನ್ಯೂ ಫೇಸ್‌ಲಿಫ್ಟ್ ನ ಮುಂದೆ ಅಡ್ಡಲಾಗಿ ಬೈಕ್‌ ಸವಾರನೊಬ್ಬ ಬಂದಿದ್ದಾನೆ. ಆತನಿಗೆ ಗುದ್ದುವುದನ್ನು ತಪ್ಪಿಸಲು ಹೋದ ಕಾರಿನ ಡ್ರೈವರ್‌ ಅಲ್ಲೇ ಬದಿಯಲ್ಲಿದ್ದ ಟ್ರಾನ್ಸ್‌ಪಾರ್ಮರ್‌ ಗೆ ಗುದ್ದಿದ್ದಾನೆ. ಇದೇ ಅಲ್ಲಿ ನಡೆದ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ.

Hyundai Venue Facelift

ಇನ್ನು ರಸ್ತೆಯ ಬದಿಯಲ್ಲಿರುವ ಟ್ರಾನ್ಸ್‌ಫಾರ್ಮರ್‌ಗಳು ಒಳ್ಳೆಯ ಗುಣಮಟ್ಟದ್ದಾಗಿದ್ದು ತುಂಬಾ ಬಲಿಷ್ಟವಾಗಿರುತ್ತದೆ ಮತ್ತು ಅಷ್ಟೇ ಬಲಿಷ್ಟವಾಗಿ ಅವುಗಳನ್ನು ಅಲ್ಲಿ ಸ್ಥಾಪಿಸಿರಲಾಗಿರುತ್ತದೆ. ಅಂತಹ ಟ್ರಾನ್ಸ್‌ಪಾರ್ಮರ್‌ಗಳು ಬೀಳಬೇಕಾದರೆ ಸಾಧಾರಣ ವೇಗ ಮತ್ತು ಫೋರ್ಸ್‌ ಸಾಕಾಗುವುದಿಲ್ಲ. ಇದರಲ್ಲಿಯೇ ನಾವು ಊಹಿಸಬಹುದು ಆ ಕಾರು ಎಷ್ಟು ವೇಗವಾಗಿತ್ತು ಎಂದು.

ಇನ್ನು ಅಷ್ಟು ಬಲಿಷ್ಟವಾದ ಎರಡು ಕಂಬಗಳು ವೆನ್ಯೂ ಕಾರಿನ ಮೇಲೆ ಬಿದ್ದರೂ ಕಾರು ಮಾತ್ರ ತನ್ನ ಶಕ್ತಿ ಪ್ರದರ್ಶನವನ್ನು ನಡೆಸಿದೆ. ಇದು ಹ್ಯುಂಡೈ ವೆನ್ಯೂ ಫೇಸ್‌ಲಿಫ್ಟ್‌ ಕಾರಿನ ಗುಣಮಟ್ಟವನ್ನು ಹೇಳುತ್ತದೆ. ವಿಡಿಯೋದಲ್ಲಿ ಇಷ್ಟು ದೊಡ್ಡ ಕಂಬಗಳು ಕಾರಿನ ಮೆಲಿರುವುದನ್ನು ನಾವು ಗಮನಿಸಬಹುದಾಗಿದೆ. ವರದಿಗಳ ಪ್ರಕಾರ ಕಾರಿನಲ್ಲಿ ಇಬ್ಬರು ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ.

ಭಾರತೀಯ ರಸ್ತೆಗಳಲ್ಲಿ ವಾಹನಗಳನ್ನು ಆದಷ್ಟು ಜಾಗರೂಕತೆಯಿಂದ ಓಡಿಸುವುದು ಒಳ್ಳೆಯದು. ಭಾರತದಲ್ಲಿ ಇನ್ನೂ ಸಹ ಎಸ್ಟಾಬ್ಲಿಷ್‌ ಆಗಿರುವಂತಹ ಹೆದ್ದಾರಿಗಳ ಕಲ್ಪನೆಗಳು ಕಮ್ಮಿಯೇ ಇವೆ. ಇತ್ತೀಚೆಗೆ ಭಾರತದಲ್ಲಿ ಎಕ್ಸ್‌ಪ್ರೆಸ್‌ ವೇ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ದಿ ಪಡಿಸಲಾಗುತ್ತಿದ್ದು, ಅವುಗಳು ಇನ್ನು ಮುಖ್ಯ ಭೂಮಿಕೆಗೆ ಬರಬೇಕಷ್ಟೇ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, June 27, 2023, 16:37 [IST]
English summary
Hyundai venue facelift protects passengers after crashing into transformer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+