ನಂಬುವ ಮಾತೇ!... ನನ್ನ ಬಳಿ ಐಷಾರಾಮಿ ಕಾರುಗಳೇ ಇಲ್ಲವೆಂದ ನಟ ಶಾರುಖ್ ಖಾನ್

ಅಭಿಮಾನಿಗಳಿಂದ ಬಾಲಿವುಡ್‌ ಬಾದ್ ಷಾ, ಕಿಂಗ್ ಖಾನ್ ಎಂದು ಕರೆಸಿಕೊಳ್ಳುವ ನಟ ಶಾರುಖ್ ಖಾನ್ ಇತ್ತೀಚೆಗೆ ಮತ್ತೊಮ್ಮೆ ವೈರಲ್ ಆಗಿದ್ದಾರೆ. ನನ್ನ ಬಳಿ ಐಷಾರಾಮಿ ಕಾರುಗಳೇ ಇಲ್ಲ, ಸೋಷಿಯಲ್ ಮೀಡಿಯಾದಲ್ಲಿ ನನ್ನ ಬಳಿ ದುಬಾರಿ ಐಷಾರಾಮಿ ಕಾರುಗಳಿವೆ ಎಂದೆಲ್ಲಾ ಹರಿದಾಡುತ್ತಿರುವ ಸುದ್ದಿಗಳು ಬೋಗಸ್ ಎಂದಿದ್ದಾರೆ.

ಬಾಲಿವುಡ್‌ನಲ್ಲಿ ಸದ್ಯ ಶಾರುಖ್ ಖಾನ್ ಹವಾ ನಡೆಯುತ್ತಿದೆ. ಇತ್ತೀಚೆಗೆ ಬಿಡುಗಡೆಯಾಗಿ ಪಠಾನ್ ಚಿತ್ರ ಭಾರೀ ಯಶಸ್ಸನ್ನು ಕಂಡಿದೆ. ಸಾವಿರ ಕೋಟಿ ಕಲೆಕ್ಷನ್ ಮಾಡುವ ಮೂಲಕ ದಕ್ಷಿಣ ಭಾರತದ ಚಿತ್ರಗಳ ಅಬ್ಬರದ ಮುಂದೆ ಬಾಲಿವುಡ್‌ ಅನ್ನು ಕಾಪಾಡಿದ ಚಿತ್ರವಾಗಿ ಪಠಾನ್ ಸಿನಿಮಾ ಬಾಲಿವುಡ್‌ಗೆ ತುಸು ನಿಟ್ಟುಸಿರು ಬಿಡುವಂತೆ ಮಾಡಿದೆ. ಈ ಯಶಸ್ಸಿನ ಭಾಗವಾಗಿ ನಡೆದ ಪ್ರಶ್ನೋತ್ತರ ಸೆಷನ್‌ನಲ್ಲಿ ವ್ಯಕ್ತಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಶಾರುಖ್ ಖಾನ್ ಟ್ವೀಟ್ ವೈರಲ್ ಆಗಿದೆ.

ನಂಬುವ ಮಾತೇ!... ನನ್ನ ಬಳಿ ಐಷಾರಾಮಿ ಕಾರುಗಳೇ ಇಲ್ಲವೆಂದ ಶಾರುಖ್ ಖಾನ್

ವಿಷಯಕ್ಕೆ ಬಂದರೆ ಟ್ವಿಟ್ಟರ್‌ನಲ್ಲಿ ವ್ಯಕ್ತಿಯೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿ, ನನ್ನ ಬಳಿ ಐಷಾರಾಮಿ ಕಾರುಗಳೇ ಇಲ್ಲ ಎಂದಿದ್ದಾರೆ. ಟ್ವಿಟರ್‌ನಲ್ಲಿ #AskSRK ಸೆಷನ್ ನಡೆಯುವಾಗ ಅಭಿಮಾನಿಗಳ ಪ್ರಶ್ನೆಗೆ ತಮ್ಮ ಕುರಿತ ವಿವಿಧ ಉತ್ತರಗಳನ್ನು ನೀಡುತ್ತಿದ್ದರು. ಅಭಿಮಾನಿಗಳ ಪ್ರಶ್ನೆಗಳಿಗೆ ತಾಮಾಷೆಯಾಗಿ ಉತ್ತರ ನೀಡುತ್ತಿದ್ದ ಅವರು, ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿ ನನ್ನ ಐಷಾರಾಮಿ ಕಾರುಗಳ ಕುರಿತು ಸುದ್ದಿ ಸಂಸ್ಥೆಗಳು ಬರೆಯುತ್ತಿರುವ ಮಾಹಿತಿಯೆಲ್ಲ ಬೋಗಸ್ ಎಂದು ಉತ್ತರಿಸಿದ್ದಾರೆ.

ಟ್ವಿಟರ್ ಬಳಕೆದಾರ, ನಿಮ್ಮ ಕಾರ್ ಕಲೆಕಕ್ಷನ್‌ನಲ್ಲಿ ಯಾವುದು ನಿಮ್ಮ ಫೇವರೆಟ್ ಹಾಗೂ ಎಂದಿಗೂ ಮಾರಾಟ ಮಾಡದೇ ಉಳಿಸಿಕೊಳ್ಳುವ ಕಾರು ಯಾವುದು ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಷಾರುಕ್ ಖಾನ್, ಹೇಳಬೇಕೆಂದರೆ ನನ್ನ ಬಳಿ ಯಾವುದೇ ಐಷಾರಾಮಿ ಕಾರುಗಳು ಇಲ್ಲ. ಹ್ಯುಂಡೈ ಕಾರುಗಳು ಮಾತ್ರ ಇವೆ, ಎಲ್ಲಾ ಸೋಷಿಯಲ್ ಮೀಡಿಯಾ ಸುದ್ದಿಗಳು ಬೋಗಸ್ ಎಂದು ಟ್ವೀಟ್‌ಗೆ ಉತ್ತರಿಸಿದ್ದಾರೆ. ಇದಕ್ಕೆ ತಮ್ಮ ಅಭಿಮಾನಿಗಳು ಸೇರಿದಂತೆ ಹಲವರು ಹುಬ್ಬೇರಿಸುವಂತಾಗಿದೆ.

ನಂಬುವ ಮಾತೇ!... ನನ್ನ ಬಳಿ ಐಷಾರಾಮಿ ಕಾರುಗಳೇ ಇಲ್ಲವೆಂದ ಶಾರುಖ್ ಖಾನ್

ಈ ಎಲ್ಲಾ ಮಾಹಿತಿಗಳು ಈ ಕಾರುಗಳು ಶಾರುಖ್ ಅವರದ್ದೇ ಎಂದು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ. ಈ ಪಟ್ಟಿಯಲ್ಲಿರುವ ಎಲ್ಲಾ ಕಾರುಗಳು ಭಾರತದಲ್ಲಿ ಲಭ್ಯವಿದ್ದರೂ, ಶಾರುಖ್ ಖಾನ್ ಅಧಿಕೃತವಾಗಿ ಯಾವುದನ್ನೂ ಖರೀದಿಸಿಲ್ಲ ಎಂದು ಅವರು ಹೇಳಿದರು. ಈ ಮಾಹಿತಿಯು ಹೆಚ್ಚಾಗಿ ಬೋಗಸ್ ಆಗಿದೆ. ಇದೀಗ ಶಾರುಖ್ ಖಾನ್ ಬಳಿ ಯಾವುದೇ ಐಷಾರಾಮಿ ಕಾರು ಸಂಗ್ರಹವಿಲ್ಲ ಎಂಬ ಅಂಶ ಬಹಿರಂಗವಾಗಿದೆ.

ಶಾರುಖ್ ಭಾರತೀಯ ಚಿತ್ರರಂಗದ ಪ್ರಮುಖ ನಟ ಹೌದು. ಅವರು ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು ಕೂಡ ಹೌದು. ಆದರೆ ಅವರು ಯಾವುದೇ ಐಷಾರಾಮಿ ಕಾರುಗಳನ್ನು ಹೊಂದಿಲ್ಲ ಎಂಬುದು ಅನೇಕರನ್ನು ಆಶ್ಚರ್ಯಗೊಳಿಸಿದೆ. ಅವರು ಬುಗಾಟಿ ವೆರಾನ್, ಬಿಎಂಡಬ್ಲ್ಯು ಐ8, ರೋಲ್ಸ್ ರಾಯ್ಸ್ ಫ್ಯಾಂಟಮ್ ಡ್ರಾಪ್‌ಹೆಡ್ ಕೂಪೆ ಹೊಂದಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವರದಿಗಳಿವೆ.

ನಂಬುವ ಮಾತೇ!... ನನ್ನ ಬಳಿ ಐಷಾರಾಮಿ ಕಾರುಗಳೇ ಇಲ್ಲವೆಂದ ಶಾರುಖ್ ಖಾನ್

ದುಬಾರಿ ಐಷಾರಾಮಿ ಕಾರುಗಳನ್ನು ಶಾರುಖ್ ಖಾನ್ ಬಳಸದಿರಬಹುದು ಆದರೆ ಅವರ ಕುಟುಂಬ ಹಲವು ಐಷಾರಾಮಿ ಕಾರುಗಳನ್ನು ಹೊಂದಿದೆ. BMW 7 ಸಿರೀಸ್, Mercedes-Benz S-ಕ್ಲಾಸ್ ಮತ್ತು ಹಳೆಯ ತಲೆಮಾರಿನ ರೇಂಜ್ ರೋವರ್ ಸ್ಪೋರ್ಟ್ ಅನ್ನು ಬಳಸುತ್ತಿದ್ದಾರೆ. ಶಾರುಖ್‌ಗೆ ಹ್ಯುಂಡೈ ಸ್ಯಾಂಟ್ರೋ ಮತ್ತು ಹ್ಯುಂಡೈ ಕ್ರೆಟಾ ಮಾದರಿಗಳನ್ನು ಹೊಂದಿದ್ದಾರೆ. ಹ್ಯುಂಡೈ ಕಂಪನಿಯು ಇತ್ತೀಚೆಗೆ ಶಾರುಖ್ ಖಾನ್ ಅವರಿಗೆ ಕ್ರೆಟಾ ಕಾರನ್ನು ಉಡುಗೊರೆಯಾಗಿ ನೀಡಿತ್ತು.

ಶಾರುಖ್ ಖಾನ್ ಈ ಹಿಂದೆ ಮಾರುತಿ ಓಮ್ನಿ, ಮಿತ್ಸುಬಿಷಿ ಪಜೆರೊ, ಆಡಿ A6 ಮತ್ತು BMW 6 ಸರಣಿಯ ಕಾರುಗಳನ್ನು ಹೊಂದಿದ್ದರು. ಆದರೆ ಈಗ ಇವೆಲ್ಲವೂ ಅವರ ಬಳಿ ಇಲ್ಲ. ಶಾರುಖ್ ಖಾನ್ ತಮ್ಮ ಹೆಸರಿನಲ್ಲಿ ಹುಂಡೈ ಕಾರುಗಳನ್ನು ಹೊಂದಲು ಕಾರಣ ಅವರು ಹ್ಯುಂಡೈನ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಅವರು ಕಂಪನಿಯ ಪ್ರಾರಂಭದಿಂದಲೂ ರಾಯಭಾರಿಯಾಗಿದ್ದಾರೆ. ಅವರು ಕಳೆದ 25 ವರ್ಷಗಳಿಂದ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಅವರು ಹ್ಯುಂಡೈ ಕಾರುಗಳನ್ನು ಹೊಂದುವ ಹಿಂದಿನ ರಹಸ್ಯವಿದು.

More from DriveSpark

Article Published On: Wednesday, February 22, 2023, 11:50 [IST]
English summary
I dont have any luxury cars says shahrukh khan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+