ರಫೇಲ್ ಬೇಡ, ತೇಜಸ್ ಸಾಕು; 120 ಯುದ್ಧ ವಿಮಾನಕ್ಕೆ ಆದೇಶ
ಮಹತ್ವದ ಬೆಳವಣಿಗೆಯೊಂದರಲ್ಲಿ ಫ್ರಾನ್ಸ್ ಮೂಲದ ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಅಸಮಾಧಾನ ಹೊಂದಿರುವ ಕೇಂದ್ರ ಸರಕಾರವು ಸ್ವದೇಶಿ ನಿರ್ಮಿತ ತೇಜಸ್ ಹಗುರ ಯುದ್ಧ ವಿಮಾನಗಳನ್ನು ಖರೀದಿಸುವಂತೆಯೇ ಭಾರತೀಯ ವಾಯುಸೇನೆಗೆ (ಐಎಎಫ್) ಆದೇಶ ನೀಡಿದೆ.
ಇದರಂತೆ ಭಾರತೀಯ ವಾಯುಪಡೆಯು 120ರಷ್ಟು ಪರಿಷ್ಕೃತ ತೇಜಸ್ ಯುದ್ಧ ವಿಮಾನಗಳನ್ನು ನಿರ್ಮಿಸುವಂತೆ ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್‌ಗೆ (ಎಚ್‌ಎಎಲ್) ಸೂಚನೆ ನೀಡಿದೆ. ಅಷ್ಟಕ್ಕೂ ಏನಿದು ರಫೇಲ್ ವಿವಾದ ಮುಂದಕ್ಕೆ ಓದಲು ಇಲ್ಲಿ ಕ್ಲಿಕ್ಕಿಸಿರಿ

ಪ್ರಾರಂಭದಲ್ಲಿ ಮಿಗ್ 21 ವಿಮಾನಗಳ ಬದಲು 40ರಷ್ಟು ತೇಜಸ್ ಯುದ್ಧ ವಿಮಾನಗಳ ಖರೀದಿಗೆ ಯೋಜನೆ ಹಾಕಲಾಗಿತ್ತು. ಆದರೆ ಹೊಸ ನಿರ್ದೇಶದಂತೆ 120ರಷ್ಟು ತೇಜಸ್ ಹಗುರ ಯುದ್ಧ ವಿಮಾನಗಳು ಭಾರತೀಯ ವಾಯುಸೇನೆಯನ್ನು ಬಂದು ಸೇರಲಿದೆ.

ಕಾಲ ಮೀರಿ ಹೋಗಿರುವ ತೇಜಸ್ ವಿಮಾನದಲ್ಲಿ ಆಕ್ಟಿವ್ ಎಲೆಕ್ಟ್ರಾನಿಕಲಿ ಸ್ಕ್ಯಾನ್ಡ್ ಅರೇ (AESA) ರಾಡಾರ್, ದೃಶ್ಯ ಶ್ರೇಣಿಯ ಕ್ಷಿಪಣಿ ಹಾಗೂ ನೂತನ ಎಲೆಕ್ಟ್ರಾನಿಕ್ ವಾರ್‌ಫೇರ್ ಸ್ಯೂಟ್ ಮುಂತಾದ ತಂತ್ರಜ್ಞಾನಗಳ ಕೊರತೆಯನ್ನು ಅನುಭವಿಸುತ್ತಿದೆ.

ತೇಜಸ್ ಎಂಕೆ II ನಲ್ಲಿ ಈ ತಂತ್ರಜ್ಞಾನಗಳು ಲಭ್ಯವಾಗುವ ಸಾಧ್ಯತೆಯಿದೆ. ಕಳೆದ ಸೆಪ್ಟೆಂಬರ್ 23ರಂದು ಈ ನೂತನ ಒಪ್ಪಂದಕ್ಕೆ ಭಾರತೀಯ ವಾಯುಪಡೆ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಏರೋನಾಟಿಕಲ್ ಅಭಿವೃದ್ಧಿ ಪ್ರಾಧಿಕಾರ (ಎಡಿಎ) ಹಾಗೂ ಸೆಂಟರ್ ಆಫ್ ಮಿಲಿಟರಿ ಏರ್ ವರ್ತಿನೆಸ್ ಸರ್ಟಿಫಿಕೇಷನ್ ಒಟ್ಟು ಸೇರಿ ಸಹಿ ಹಾಕಿದೆ.

ನೂತನ ತೇಜಸ್ ಎಂಕೆ II ಯುದ್ಧ ವಿಮಾನದಲ್ಲಿ ಶಕ್ತಿಶಾಲಿ ಜಿಇ ಎಫ್-414 ಎಂಜಿನ್ ಆಳವಡಿಸಲಾಗುವುದು. ಜೊತೆಗೆ ವಿಮಾನದ ಒಟ್ಟಾರೆ ಉದ್ದಳತೆಯಲ್ಲೂ ವೃದ್ಧಿ ಕಾಣಿಸಲಿದೆ.

ಆದರೆ ಮಂದಗತಿಯ ಬೆಳವಣಿಗೆಯಿಂದಾಗಿ ಎಂಕೆ II ಸೇನೆಯನ್ನು ತಲುಪುವುದು ವಿಳಂಬವಾಗಲಿದೆ.

ಬಲ್ಲ ಮೂಲಗಳ ಈಗಿರುವ ವಿಮಾನಗಳಲ್ಲಿ ನಿರ್ವಹಣಾ ಸಮಸ್ಯೆ ಎದುರಾಗುತ್ತಿದೆ. 2018ರ ವೇಳೆಯಾಗುವಾಗ ಇದಕ್ಕೆ ಪರಿಹಾರ ಕಂಡುಕೊಳ್ಳಲಾಗುವುದು.

ಈಗಿನ ಪರಿಸ್ಥಿತಿಯಲ್ಲಿ ಎಚ್‌ಎಎಲ್ ವರ್ಷಂಪ್ರತಿ ಎಂಟು ಯುದ್ಧ ವಿಮಾನವನ್ನಷ್ಟೇ ತಯಾರಿಸುವ ಸಾಮರ್ಥ್ಯ ಹೊಂದಿರುತ್ತದೆ. ಅಂದರೆ ಭಾರತೀಯ ವಾಯುಪಡೆಯ ಆದೇಶವನ್ನು ಸರಿದೂಗಿಸಲು ತನ್ನ ನಿರ್ಮಾಣ ಸಾಮರ್ಥ್ಯವನ್ನು ಇಮ್ಮಡಿಗೊಳಿಸಬೇಕಾಗಿದೆ.


Click it and Unblock the Notifications








