ಪ್ಯಾರಾಮೋಟಾರ್‌ನಲ್ಲಿ ಭಾರತ ಪ್ರದಕ್ಷಿಣೆ; ವಾಯುಸೇನೆಯ ನೂತನ ದಾಖಲೆ

By Nagaraja

ಭಾರತೀಯ ವಾಯುಸೇನೆ ಮಗದೊಂದು ದಾಖಲೆಯನ್ನು ಬರೆದಿದ್ದು, ಪ್ಯಾರಾಮೋಟಾರ್ ನಲ್ಲಿ 10,000 ಕೀ.ಮೀ. ವರೆಗೆ ಪ್ರದಕ್ಷಿಣೆ ಮಾಡುವ ಮೂಲಕ ಏರ್ ವಾರಿಯರ್ಸ್ ಪೈಲಟ್ ಗಳು ದೇಶಕ್ಕೆ ಹೆಮ್ಮೆ ತಂದಿತ್ತಿದ್ದಾರೆ.

Also Read: ಭಾರತದ ವಾಯು ಪ್ರದೇಶದ ಸುರಕ್ಷತೆ ಕಾಯುವ ಯುದ್ಧ ವಿಮಾನಗಳು

ತೆರೆದ ಪ್ಯಾರಾಮೋಟಾರ್ ನಲ್ಲಿ ಬಾನೆತ್ತರದಲ್ಲಿ ಸಾಹಸ ಯಾತ್ರೆ ಹಮ್ಮಿಕೊಳ್ಳಲು ಅವಿರತ ತರಬೇತಿ ಮತ್ತು ಮನೋಬಲದ ಅಗತ್ಯವಿರುತ್ತದೆ. ಈಗ ಇಂತಹದೊಂದು ಮಹತ್ತರ ಸಾಧನೆ ಮಾಡುವಲ್ಲಿ ವಾಯುಸೇನೆಯ ಪೈಲಟ್ ಗಳು ಯಶಸ್ವಿಯಾಗಿದ್ದಾರೆ.

ಪ್ಯಾರಾಮೋಟಾರ್‌ನಲ್ಲಿ ಭಾರತ ಪ್ರದಕ್ಷಿಣೆ; ವಾಯುಸೇನೆಯ ನೂತನ ದಾಖಲೆ

ಭಾರತೀಯ ವಾಯುಸೇನೆಗೆ ಸೇರಿದ 'ಸ್ಕೈರೈಡರ್ಸ್' ತಂಡದ 'ಏರ್ ವಾರಿಯರ್ಸ್' ಎಂದು ಕರೆಯಲ್ಪಡುವ 14 ಪೈಲಟ್ ಗಳು ಪ್ಯಾರಾಮೋಟಾರ್ ನಲ್ಲಿ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ಈ ತಂಡವನ್ನು ವಿಂಗ್ ಕಮಾಂಡರ್ ಎಂ.ಪಿ.ಎಸ್. ಸೋಲಂಕಿ ಮುನ್ನಡೆಸಿದ್ದರು.

ಪ್ಯಾರಾಮೋಟಾರ್‌ನಲ್ಲಿ ಭಾರತ ಪ್ರದಕ್ಷಿಣೆ; ವಾಯುಸೇನೆಯ ನೂತನ ದಾಖಲೆ

ಫೆಬ್ರವರಿ 01ರಂದು ಪಶ್ಚಿಮ ಬಂಗಾಳದ ಕಾಲೈಕುಂಡಾದಲ್ಲಿ ಸ್ಥಿತಗೊಂಡಿರುವ ವಾಯು ನೆಲೆಯಿಂದ ಆರಂಭಿಸಿದ ಸಾಹಸ ಯಾತ್ರೆಯು 10,000 ಕೀ.ಮೀ. ದೂರದ ವರೆಗಿನ ಪ್ರದಕ್ಷಿಣೆಯ ಬಳಿಕ ಮತ್ತದೇ ಸ್ಥಳಕ್ಕೆ ಹಿಂತಿರುಗಿತ್ತು.

ಪ್ಯಾರಾಮೋಟಾರ್‌ನಲ್ಲಿ ಭಾರತ ಪ್ರದಕ್ಷಿಣೆ; ವಾಯುಸೇನೆಯ ನೂತನ ದಾಖಲೆ

ಹವಮಾನ ವೈಪರೀತ್ಯವನ್ನು ಲೆಕ್ಕಿಸದ ಏರ್ ವಾರಿಯರ್ಸ್ ತಂಡವು ಪರ್ವತ, ಸಮುದ್ರ ಕಿನಾರೆ, ಅರಣ್ಯ, ಮರುಭೂಮಿ ಮತ್ತಿತ್ತರ ನೈಸರ್ಗಿಕ ಪ್ರದೇಶಗಳನ್ನು ಹಾದು ಹೋಗಿತ್ತು.

ಪ್ಯಾರಾಮೋಟಾರ್‌ನಲ್ಲಿ ಭಾರತ ಪ್ರದಕ್ಷಿಣೆ; ವಾಯುಸೇನೆಯ ನೂತನ ದಾಖಲೆ

ಪೂರ್ವ ಕರಾವಳಿಯಿಂದ ಆರಂಭಿಸಿದ ಸಾಹಸ ಯಾತ್ರೆಯು ದಕ್ಷಿಣದಲ್ಲಿ ಕನ್ಯಾಕುಮಾರಿಯನ್ನು ತಲುಪಿ ಪಶ್ಚಿಮ ತೀರದ ಮೂಲಕ ಗುಜರಾತ್ ವರೆಗೂ ಸಂಚರಿಸಿತ್ತು. ಬಳಿಕ ಅಲ್ಲಿಂದ ರಾಜಸ್ತಾನ ಮರುಭೂಮಿಯಾಗಿ ಪಂಜಾಬ್ ಬಯಲು ಪ್ರದೇಶದ ಮುಖಾಂತರದ ಜಮ್ಮುವಿನಲ್ಲಿರುವ ದೇಶದ ಅತಿ ಎತ್ತರದ ಹಿಮಾಲಯನ್ ಶಿಖರವನ್ನು ಹಾದು ಹೋಗಿತ್ತು.

ಪ್ಯಾರಾಮೋಟಾರ್‌ನಲ್ಲಿ ಭಾರತ ಪ್ರದಕ್ಷಿಣೆ; ವಾಯುಸೇನೆಯ ನೂತನ ದಾಖಲೆ

ಅಲ್ಲಿಂದ ಬಳಿಕ ದಕ್ಷಿಣಕ್ಕೆ ಇಳಿದ ಏರ್ ವಾರಿಯರ್ಸ್ ತಂಡವು ನವದೆಹಲಿ ಮುಖಾಂತರ ಉತ್ತರ ಪ್ರದೇಶ, ಬಿಹಾರ ಮಾರ್ಗವಾಗಿ ಉಗಮ ಸ್ಥಾನವಾದ ಕಾಲೈಕುಂಡವನ್ನು ತಲುಪಿತ್ತು.

ಪ್ಯಾರಾಮೋಟಾರ್‌ನಲ್ಲಿ ಭಾರತ ಪ್ರದಕ್ಷಿಣೆ; ವಾಯುಸೇನೆಯ ನೂತನ ದಾಖಲೆ

ಪ್ಯಾರಾಮೋಟಾರ್ ನಲ್ಲಿ 9,132 ಕೀ.ಮೀ. ದೂರದ ವರೆಗೆ ಸಂಚರಿಸಿರುವುದು ಇದುವರೆಗಿನ ದಾಖಲೆಯಾಗಿತ್ತು. ಈಗ ತನ್ನದೇ ದಾಖಲೆಯನ್ನು ಉತ್ತಮಪಡಿಸಿಕೊಂಡಿದೆ.

ಪ್ಯಾರಾಮೋಟಾರ್‌ನಲ್ಲಿ ಭಾರತ ಪ್ರದಕ್ಷಿಣೆ; ವಾಯುಸೇನೆಯ ನೂತನ ದಾಖಲೆ

ಪ್ಯಾರಾಗ್ಲಿಡರ್ ನಿಂದ ನಿಯಂತ್ರಿತ ಪ್ಯಾರಾಮೋಟಾರ್ ಗಳಲ್ಲಿ ಪೈಲಟ್ ಬೆನ್ನಿನಲ್ಲಿ ಮೋಟಾರುಗಳನ್ನು ಜೋಡಣೆ ಮಾಡಲಾಗುತ್ತದೆ. ಇದನ್ನು ಹೊಂದಿಕೊಂಡಿರುವ ಹಗ್ಗದ ಮೇಲ್ಗಡೆಯಲ್ಲಿ ದೊಡ್ಡದಾದ ರೆಕ್ಕೆಯನ್ನು ಜೋಡಣೆ ಮಾಡಲಾಗಿರುತ್ತದೆ.

ಪ್ಯಾರಾಮೋಟಾರ್‌ನಲ್ಲಿ ಭಾರತ ಪ್ರದಕ್ಷಿಣೆ; ವಾಯುಸೇನೆಯ ನೂತನ ದಾಖಲೆ

ಪ್ಯಾರಾಮೋಟಾರ್ ಗಳನ್ನು ಚಾಲನೆ ಮಾಡಲು ಯಾರ ನೆರವಿನ ಅಗತ್ಯವಿರುವುದಿಲ್ಲ. ಅಲ್ಲದೆ ಯಾವುದೇ ಭೂ ಪ್ರದೇಶದಿಂದಲೂ ನಿರ್ವಹಿಸಬಹುದಾಗಿದೆ.

ಪ್ಯಾರಾಮೋಟಾರ್‌ನಲ್ಲಿ ಭಾರತ ಪ್ರದಕ್ಷಿಣೆ; ವಾಯುಸೇನೆಯ ನೂತನ ದಾಖಲೆ

ಈ ಪದವನ್ನು ಮೊದಲ ಬಾರಿಗೆ 1980ರ ದಶಕದಲ್ಲಿ ಆಂಗ್ಲ ವ್ಯಕ್ತಿ ಮೈಕ್ ಬೈರ್ನೆ ಬಳಕೆ ಮಾಡಿದ್ದರು. ಇದು ಬಳಿಕ ಜನಪ್ರಿಯತೆ ಗಿಟ್ಟಿಸಿಕೊಂಡಿತ್ತು.

ಪ್ಯಾರಾಮೋಟಾರ್‌ನಲ್ಲಿ ಭಾರತ ಪ್ರದಕ್ಷಿಣೆ; ವಾಯುಸೇನೆಯ ನೂತನ ದಾಖಲೆ

ಪ್ಯಾರಾಗ್ಲಿಡರ್ ಗಳು ಗಂಟೆಗೆ 25ರಿಂದ 72 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ. ಅಲ್ಲದೆ 20ರಿಂದ 40 ಕೆ.ಜಿಗಳಷ್ಟು ಭಾರವನ್ನು ಹೊಂದಿರುತ್ತದೆ.

ಇವನ್ನೂ ಓದಿ

ಭಾರತೀಯ ವಾಯುಸೇನೆ; ನಿಮಗೆ ಗೊತ್ತಿರದ 15 ಸತ್ಯಗಳು!

ಮತ್ತೆ ಗುಡುಗಿದ ಪೋಖ್ರಾನ್; ಮೋದಿ ಸಾರಥ್ಯದಲ್ಲಿ ಭಾರತದ ಶಕ್ತಿ ಪ್ರದರ್ಶನ

More from DriveSpark

Article Published On: Wednesday, March 30, 2016, 10:01 [IST]
English summary
IAF pilots creates national record by completing a 10,000-km paramotor adventure expedition
Read more on ಭಾರತ india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+