IND VS PAK: ವಿಮಾನ ದುಬಾರಿ? ವಿಶ್ವಕಪ್ ಅಭಿಮಾನಿಗಳ ರಕ್ಷಣೆಗೆ ವಿಶೇಷ ವಂದೇ ಭಾರತ್ ರೈಲುಗಳು
ಕ್ರಿಕೆಟ್‌ಗೆ ವಿಶ್ವದ ಯಾವುದೇ ದೇಶದಲ್ಲಿ ಇಲ್ಲದ ಅಭಿಮಾನಿಗಳು ಭಾರತದಲ್ಲಿದ್ದಾರೆ. ಅದರಲ್ಲೂ ಭಾರತ-ಪಾಕ್ ಮ್ಯಾಚ್ ಅಂದ್ರೆ ಜೀವ ಬಿಡುವ ಅಭಿಮಾನಿಗಳಿದ್ದಾರೆ. 2023 ರ ODI ವಿಶ್ವಕಪ್ ಆರಂಭವಾಗಲು ಇನ್ನೇನು ಬೆರಳೆಣಿಕೆಯ ದಿನಗಳಷ್ಟೇ ಬಾಕಿಯಿದೆ. ದೇಶಾದ್ಯಂತ ಅಭಿಮಾನಿಗಳು ನೇರವಾಗಿ ವೀಕ್ಷಿಸಲು ರೈಲ್ವೆ ಇಲಾಖೆ ಕಡಿಮೆ ಕರ್ಚಿನಲ್ಲಿ ಅಹ್ಮದಾಬಾದ್ ತಲುಪಲು ವ್ಯವಸ್ಥೆ ಮಾಡಿದೆ.
ವಿಶ್ವಕಪ್ ಭಾರತದ ಹನ್ನೆರಡು ಸ್ಥಳಗಳಲ್ಲಿ ನಡೆಯಲಿದೆ. ಅಹಮದಾಬಾದ್, ಹೈದರಾಬಾದ್, ಚೆನ್ನೈ, ಬೆಂಗಳೂರು, ಕೋಲ್ಕತ್ತಾ, ದೆಹಲಿ, ಇಂದೋರ್, ಧರ್ಮಶಾಲಾ, ಗುವಾಹಟಿ, ರಾಜ್‌ಕೋಟ್, ರಾಯ್‌ಪುರ ಮತ್ತು ಮುಂಬೈನಲ್ಲಿ ವಿಶ್ವಕಪ್ ಪಂದ್ಯವನ್ನು ನಡೆಸುವ ತಾತ್ಕಾಲಿಕ ಸ್ಥಳಗಳಾಗಿವೆ. ಆದರೆ ಇಷ್ಟು ಸ್ಥಳಗಳ ಪೈಕಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವುದು ಮಾತ್ರ ಅಹಮದಾಬಾದ್ ಮಾಚ್‌ಗಾಗಿ.

ಏಕೆಂದರೆ ಅಕ್ಟೋಬರ್ 14 ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಏಕೈಕ ಪಂದ್ಯ ಇದಾಗಿದೆ. ವರದಿಗಳ ಪ್ರಕಾರ, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂಗೆ ಪ್ರಯಾಣಿಸುವ ಅಭಿಮಾನಿಗಳಿಗೆ ಅನುಕೂಲವಾಗುವಂತೆ ನೆರೆಯ ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರದಿಂದ ಭಾರತೀಯ ರೈಲ್ವೆ ವಿಶೇಷ ರೈಲುಗಳನ್ನು ನಡೆಸಲಿದೆ ಎಂದು ವರದಿಯಾಗಿದೆ.
ಪಂದ್ಯದ ಆರಂಭಕ್ಕೆ ಕೆಲವು ಗಂಟೆಗಳ ಮೊದಲು ಅಭಿಮಾನಿಗಳು ಅಹಮದಾಬಾದ್‌ಗೆ ತಲುಪಬಹುದು ಮತ್ತು ಆಟದ ನಂತರ ಸುಲಭವಾಗಿ ಮನೆಗೆ ಮರಳು ರೀತಿ ಇಲಾಖೆ ರೈಲುಗಳನ್ನು ನಡೆಸಲಿದೆ. ವಸತಿ ಮತ್ತು ದುಬಾರಿ ವಿಮಾನ ಟಿಕೆಟ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಅಭಿಮಾನಿಗಳು ತಮ್ಮ ಗಮ್ಯಸ್ಥಾನವನ್ನು ತಲುಪಲು ಕಷ್ಟರವಾಗಿದೆ. ಹಾಗಾಗಿ ಭಾರತೀಯ ರೈಲ್ವೇಯು ಹೆಚ್ಚು ನಿರೀಕ್ಷಿತ ಪಂದ್ಯಕ್ಕಾಗಿ ವಿಶೇಷ ವಂದೇ ಭಾರತ್ ರೈಲನ್ನು ಓಡಿಸುವ ಯೋಜನೆಯನ್ನು ಪ್ರಕಟಿಸಿದೆ.

ವಿಪರೀತ ವಿಮಾನ ದರ, ವಸತಿ ಕೊರತೆ, ಹೆಚ್ಚಿನ ಹೋಟೆಲ್ ಸುಂಕಗಳನ್ನು ತಪ್ಪಿಸಲು ಈ ವ್ಯವಸ್ಥೆ ಮಾಡಲಾಗಿದೆ. ಪಂದ್ಯ ಮುಗಿದ ನಂತರ ಸುಲಭವಾಗಿ ಜನರು ಮನೆಗಳಿಗೆ ಮರಳಬಹುದು ಎಂಬುದು ಈ ರೈಲುಗಳನ್ನು ಓಡಿಸುವ ಹಿಂದಿನ ಆಲೋಚನೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ವಿಶೇಷ ಸ್ಥಳಗಳಿಂದ ಸಂಚರಿಸುವ ರೈಲುಗಳು ಸಬರಮತಿ ಮತ್ತು ಅಹಮದಾಬಾದ್ ನಿಲ್ದಾಣಗಳಲ್ಲಿ ನಿಲುಗಡೆಯಾಗುತ್ತವೆ, ಇವೆರಡೂ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಸಮೀಪದಲ್ಲಿವೆ.
ಇದರ ಜೊತೆಗೆ ದೇಶಭಕ್ತಿ ಗೀತೆಗಳನ್ನು ನುಡಿಸುವ ಮೂಲಕ ಮತ್ತು ಹಿಂದಿನ ಭಾರತ - ಪಾಕಿಸ್ತಾನದ ಘರ್ಷಣೆಯ ಐತಿಹಾಸಿಕ ಕ್ರಿಕೆಟ್ ಕ್ಷಣಗಳನ್ನು ಪ್ರದರ್ಶಿಸುವ ಮೂಲಕ ಪ್ರಯಾಣದ ಅನುಭವವನ್ನು ಹೆಚ್ಚಿಸಲು ಇಲಾಖೆ ಯೋಜಿಸಿದೆಯಂತೆ. ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯದ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಲಭ್ಯವಾದ ನಂತರ ತ್ವರಿತವಾಗಿ ಸೋಲ್ಡ್ ಔಟ್ ಆಗಿದ್ದು, ಈ ಪಂದ್ಯದ ಅಪಾರ ನಿರೀಕ್ಷೆಯನ್ನು ಸೂಚಿಸುತ್ತಿದೆ.

ಪಾಕಿಸ್ತಾನವು ತಾತ್ಕಾಲಿಕವಾಗಿ ಅಹಮದಾಬಾದ್, ಹೈದರಾಬಾದ್, ಚೆನ್ನೈ ಮತ್ತು ಬೆಂಗಳೂರಿನಲ್ಲಿ ಆಡಲಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಟೂರ್ನಮೆಂಟ್ ಆರಂಭಿಕ ಸೇರಿದಂತೆ ODI ವಿಶ್ವಕಪ್‌ನಲ್ಲಿ ಅಹಮದಾಬಾದ್ ಐದು ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಶೋಪೀಸ್ ಈವೆಂಟ್‌ನ ಫೈನಲ್ ಕೂಡ ನವೆಂಬರ್ 19 ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications