ಹಡಗುಗಳ ಬಗೆ ಹಿಂದೆಂದೂ ತಿಳಿಯದ ರೋಚಕ ಸಂಗತಿಗಳಿವು

ಬಹುತೇಕ ಎಲ್ಲರೂ ಬಸ್, ರೈಲು ಹಾಗೂ ವಿಮಾನಗಳಲ್ಲಿ ಸಂಚರಿಸಿರುತ್ತಾರೆ. ಈ ಕಾರಣಕ್ಕೆ ಇವುಗಳ ಬಗೆಗಿನ ಸಂಗತಿಗಳನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಆದರೆ ಕೆಲವೇ ಕೆಲವು ಜನರು ಮಾತ್ರ ಹಡಗುಗಳಲ್ಲಿ ಸಂಚರಿಸಿರುತ್ತಾರೆ.

ಹಡಗುಗಳ ಬಗೆ ಹಿಂದೆಂದೂ ತಿಳಿಯದ ರೋಚಕ ಸಂಗತಿಗಳಿವು

ಹಡಗುಗಳ ಬಗೆಗಿನ ಸಂಗತಿಗಳು ಸ್ವತಃ ಹಡಗುಗಳಲ್ಲಿ ಸಂಚರಿಸುವವರಿಗೆ ತಿಳಿದಿರುವುದಿಲ್ಲ. ಹಡಗುಗಳ ಬಗೆಗಿನ ಕೆಲವು ಆಸಕ್ತಿದಾಯಕ ವಿಷಯಗಳನ್ನು ಈ ಲೇಖನದಲ್ಲಿ ನೋಡೋಣ.

ಹಡಗುಗಳ ಬಗೆ ಹಿಂದೆಂದೂ ತಿಳಿಯದ ರೋಚಕ ಸಂಗತಿಗಳಿವು

ನೋಂದಣಿ ಸಂಖ್ಯೆ

ಹಡಗುಗಳು ವಾಹನಗಳಂತೆ ಶಾಶ್ವತ ನೋಂದಣಿ ಸಂಖ್ಯೆಯನ್ನು ಹೊಂದಿರುತ್ತವೆ. ಐಎಂಒನಿಂದ ನೀಡಲಾಗುವ ಈ ನೋಂದಣಿ ಸಂಖ್ಯೆಯನ್ನು ಮಾಲೀಕರ ನೋಂದಣಿ ದೇಶವನ್ನು ಲೆಕ್ಕಿಸದೆ ಎಲ್ಲಾ ಹಡಗುಗಳಲ್ಲಿ ಬರೆಯಲಾಗುತ್ತದೆ. ಮಾಲೀಕರು, ಬಂದರು ನೋಂದಣಿ ಇತ್ಯಾದಿಗಳು ಬದಲಾದರೂ ಈ ಐಎಂಒ ನೋಂದಣಿ ಸಂಖ್ಯೆ ಮಾತ್ರ ಬದಲಾಗುವುದಿಲ್ಲ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಹಡಗುಗಳ ಬಗೆ ಹಿಂದೆಂದೂ ತಿಳಿಯದ ರೋಚಕ ಸಂಗತಿಗಳಿವು

ವಿಶ್ವದ ವ್ಯಾಪಾರಿ ಹಡಗುಗಳ ಪೈಕಿ ಸುಮಾರು 70% ಹಡಗುಗಳು ಕೆಲವು ದೇಶಗಳ ಬಂದರುಗಳಲ್ಲಿ ನೋಂದಾಯಿಸಲ್ಪಟ್ಟಿದ್ದು, ಅಲ್ಲಿಂದಲೇ ಕಾರ್ಯನಿರ್ವಹಿಸುತ್ತಿವೆ.ಉದಾಹರಣೆಗೆ ದಕ್ಷಿಣ ಕೊರಿಯಾದ ಕಂಪನಿ ಹಂಜಿನ್ ಒಡೆತನದ ಹಡಗು ಪನಾಮದಲ್ಲಿ ನೋಂದಾಯಿಸಲ್ಪಟ್ಟು ಕಾರ್ಯನಿರ್ವಹಿಸುತ್ತಿದೆ.

ಹಡಗುಗಳ ಬಗೆ ಹಿಂದೆಂದೂ ತಿಳಿಯದ ರೋಚಕ ಸಂಗತಿಗಳಿವು

ಈ ಹಡಗು ಲೈಬೀರಿಯಾ ಹಾಗೂ ಮಾರ್ಷಲ್ ದ್ವೀಪಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಮಾಲೀಕರ ಸ್ವಂತ ರಾಷ್ಟ್ರೀಯ ಧ್ವಜವನ್ನು ಹೊರತುಪಡಿಸಿ, ಈ ಹಡಗುಗಳು ದೇಶದ ರಾಷ್ಟ್ರೀಯ ಧ್ವಜವನ್ನು ಹೊತ್ತೊಯ್ಯುತ್ತವೆ. ಅಲ್ಲಿ ಅವುಗಳನ್ನು ನೋಂದಾಯಿಸಲಾಗುತ್ತದೆ ಅಥವಾ ಆ ಬಂದರುಗಳನ್ನು ಮೂಲ ಬಂದರಾಗಿ ಬಳಸಲಾಗುತ್ತದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಹಡಗುಗಳ ಬಗೆ ಹಿಂದೆಂದೂ ತಿಳಿಯದ ರೋಚಕ ಸಂಗತಿಗಳಿವು

ಹೆಚ್ಚು ತೆರಿಗೆ

ಕೆಲವು ದೇಶಗಳಲ್ಲಿ ಹಡಗುಗಳನ್ನು ನೋಂದಾಯಿಸಲು ಮತ್ತು ಬಂದರನ್ನು ಬಳಸುವ ಶುಲ್ಕ ದುಬಾರಿಯಾಗಿದೆ. ಈ ಕಾರಣಕ್ಕೆ ಕಡಿಮೆ ತೆರಿಗೆ ಹಾಗೂ ಶುಲ್ಕಗಳನ್ನು ಹೊಂದಿರುವ ದೇಶಗಳನ್ನು ಕೇಂದ್ರೀಕರಿಸಿ ಹಡಗುಗಳನ್ನು ನಡೆಸಲಾಗುತ್ತದೆ.

ಹಡಗುಗಳ ಬಗೆ ಹಿಂದೆಂದೂ ತಿಳಿಯದ ರೋಚಕ ಸಂಗತಿಗಳಿವು

ಈ ಬಂದರುಗಳು ಅಥವಾ ದೇಶಗಳಲ್ಲಿನ ಹಡಗುಗಳ ಆದಾಯಕ್ಕೆ ಅನುಗುಣವಾಗಿ ಮಾತ್ರ ತೆರಿಗೆ ಹಾಗೂ ಸುಂಕವನ್ನು ವಿಧಿಸಲಾಗುತ್ತದೆ. ಬರ್ಡನ್ ಲೋಡಿಂಗ್ ಪ್ರೋಟೋಕಾಲ್ ಹಡಗುಗಳ ಬದಿಗಳಲ್ಲಿ ಸಾಮಗ್ರಿಗಳನ್ನು ಲೋಡ್ ಮಾಡಲು ಕೆಲವು ಸಂಕೇತಗಳನ್ನು ನೀಡಲಾಗುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಹಡಗುಗಳ ಬಗೆ ಹಿಂದೆಂದೂ ತಿಳಿಯದ ರೋಚಕ ಸಂಗತಿಗಳಿವು

ಎ ಮತ್ತು ಬಿ ಅಕ್ಷರಗಳನ್ನು ಹೊಂದಿರುವ ಈ ಕೋಡ್ ಅನ್ನು ಅಮೆರಿಕಾದ ಯುಎಸ್ ಬ್ಯೂರೋ ಆಫ್ ಶಿಪ್ಪಿಂಗ್ ಒದಗಿಸುತ್ತದೆ. ಸುಮಾರು 90%ನಷ್ಟು ಸರಕು ಹಡಗುಗಳು ವ್ಯವಸ್ಥೆ ಒದಗಿಸುವಷ್ಟು ಸಾಮಗ್ರಿಗಳನ್ನು ಲೋಡ್ ಮಾಡುತ್ತವೆ.

ಹಡಗುಗಳ ಬಗೆ ಹಿಂದೆಂದೂ ತಿಳಿಯದ ರೋಚಕ ಸಂಗತಿಗಳಿವು

ಸಿಹಿ ನೀರಿಗಿಂತ ಉಪ್ಪು ಹೊಂದಿರುವ ಸಮುದ್ರದ ನೀರು ಹೆಚ್ಚು ದಟ್ಟವಾಗಿರುತ್ತದೆ. ಜೊತೆಗೆ ತಣ್ಣೀರಿನ ಸಾಂದ್ರತೆಯು ಹೆಚ್ಚು. ಈ ಕಾರಣಕ್ಕೆ ಹಡಗು ಮಾರ್ಗದ ನೀರಿನ ಸ್ವರೂಪ ಹಾಗೂ ಹವಾಮಾನವನ್ನು ಗಣನೆಗೆ ತೆಗೆದುಕೊಂಡು ಲೋಡ್ ಮಾಡಬೇಕಾಗುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಹಡಗುಗಳ ಬಗೆ ಹಿಂದೆಂದೂ ತಿಳಿಯದ ರೋಚಕ ಸಂಗತಿಗಳಿವು

ಇದಕ್ಕಾಗಿ ಹಡಗುಗಳಿಗೆ ಲೋಡ್ ಮಾಡುವ ಸಂಕೇತಗಳನ್ನು ನೀಡಲಾಗುತ್ತದೆ. ತಂಪಾದ ಸಮುದ್ರದ ನೀರಿನಲ್ಲಿ ನೌಕಾಯಾನ ಮಾಡುವಾಗ ಡಬ್ಲ್ಯು ಸಂಕೇತಕ್ಕೆ ಲೋಡ್‌ಗಳನ್ನು ಸಾಗಿಸಬಹುದು. ಎಸ್ ಎಂದರೆ ಸಮ್ಮರ್ ಆದರೆ ಬೇಸಿಗೆಯ ಸಮುದ್ರದ ನೀರು ಹಾಗೂ ಎಫ್ ಎಂದರೆ ಫ್ರೆಶ್ ವಾಟರ್ ಅಂದರೆ ಸಿಹಿನೀರು.

ಹಡಗುಗಳ ಬಗೆ ಹಿಂದೆಂದೂ ತಿಳಿಯದ ರೋಚಕ ಸಂಗತಿಗಳಿವು

ವಿಶೇಷ ಬಣ್ಣ

ಜನರನ್ನು ಆಕರ್ಷಿಸಲು ವಾಹನಗಳನ್ನು ವಿಭಿನ್ನವಾಗಿ ಚಿತ್ರಿಸಲಾಗುತ್ತದೆ. ಜೊತೆಗೆ ವಾಹನಗಳ ಹೊಳಪಿಗೆ ಗುಣಮಟ್ಟದ ಬಣ್ಣವನ್ನು ನೀಡಲಾಗುತ್ತದೆ. ಇದೇ ರೀತಿ ಹಡಗುಗಳಿಗೂ ವಿಶೇಷ ಬಣ್ಣ ನೀಡಲಾಗುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಹಡಗುಗಳ ಬಗೆ ಹಿಂದೆಂದೂ ತಿಳಿಯದ ರೋಚಕ ಸಂಗತಿಗಳಿವು

ಸಾಮಾನ್ಯವಾಗಿ ಹಡಗುಗಳು ಎರಡು ಬಣ್ಣಗಳ ಫಿನಿಷಿಂಗ್ ಹೊಂದಿರುತ್ತವೆ. ನೀರಿನಿಂದ ಉಂಟಾಗುವ ತುಕ್ಕು ತಡೆಯಲು ಹಡಗುಗಳ ಮುಳುಗಿದ ಪ್ರದೇಶದ ಮೇಲೆ ವಿಶೇಷ ಬಣ್ಣವನ್ನು ನೀಡಲಾಗುತ್ತದೆ.

ಹಡಗುಗಳ ಬಗೆ ಹಿಂದೆಂದೂ ತಿಳಿಯದ ರೋಚಕ ಸಂಗತಿಗಳಿವು

ಇಂಧನ ತ್ಯಾಜ್ಯ ತಪ್ಪಿಸುವ ತಂತ್ರ

ಸಸ್ಯಗಳು ಹಾಗೂ ಬ್ಯಾಕ್ಟೀರಿಯಾಗಳು ಸೇರಿದಂತೆ ಕೆಲವು ಸಣ್ಣ ಸಮುದ್ರ ಜೀವಿಗಳು ಹಡಗಿನ ಕೆಳಭಾಗದಲ್ಲಿ ವಾಸಿಸಲು ಆರಂಭಿಸುತ್ತವೆ. ಇದು ಹಡಗಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹಡಗಿನ ಕೆಳಭಾಗಕ್ಕೆ ವಿಶೇಷ ಬಣ್ಣದ ಲೇಪನವನ್ನು ನೀಡಲಾಗುತ್ತದೆ. ಇದರಿಂದ ಇಂಧನದ ಮೇಲೆ ಮಾಡುವ 40%ನಷ್ಟು ವೆಚ್ಚವನ್ನು ಉಳಿಸಬಹುದು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಹಡಗುಗಳ ಬಗೆ ಹಿಂದೆಂದೂ ತಿಳಿಯದ ರೋಚಕ ಸಂಗತಿಗಳಿವು

ಮುಳುಗುವ ಪ್ರಮಾಣ

ಹಡಗುಗಳ ಕೆಳಭಾಗದಲ್ಲಿ ಸಂಖ್ಯೆಗಳನ್ನು ನೀಡಲಾಗಿರುತ್ತದೆ. ಇದರಿಂದ ಹಡಗಿನ ಕೆಳಭಾಗ ಎಷ್ಟು ಮುಳುಗಿದೆ ಎಂಬುದನ್ನು ನಿರ್ಧರಿಸಲು ಹಾಗೂ ಎಷ್ಟು ತೂಕವನ್ನು ಹಾಕಬಹುದು ಎಂಬುದನ್ನು ನಿರ್ಧರಿಸಲು ಸಾಧ್ಯವಾಗಲಿದೆ. ಲೋಡ್-ಬೇರಿಂಗ್ ಪ್ರಮಾಣವನ್ನು ನೀರಿನ ಸ್ವರೂಪವನ್ನು ಆಧರಿಸಿ ಲೆಕ್ಕಹಾಕಲಾಗುತ್ತದೆ.

ಹಡಗುಗಳ ಬಗೆ ಹಿಂದೆಂದೂ ತಿಳಿಯದ ರೋಚಕ ಸಂಗತಿಗಳಿವು

ಇಲಿಗಳ ಕಾಟದಿಂದ ರಕ್ಷಣೆ

ಹಡಗುಗಳನ್ನು ಬಂದರಿನಲ್ಲಿ ನಿಲ್ಲಿಸಿರುವಾಗ ಅವುಗಳನ್ನು ಬಂದರು ತಳದಲ್ಲಿರುವ ಪಿಯರ್‌ಗಳಿಗೆ ಹಗ್ಗಗಳಿಂದ ಕಟ್ಟಲಾಗುತ್ತದೆ. ಆ ಹಗ್ಗಗಳಿಗೆ ಡಿಸ್ಕ್ ಅಥವಾ ಸ್ಕ್ವೇರ್ ಶೇಪ್ ಪ್ಲೇಟ್'ಗಳನ್ನು ಅಳವಡಿಸಲಾಗಿರುತ್ತದೆ. ಹಗ್ಗದ ಮೂಲಕ ಇಲಿಗಳು ಹಡಗಿನೊಳಗೆ ಪ್ರವೇಶಿಸದಂತೆ ತಡೆಯಲು ಹಗ್ಗದ ಮೇಲೆ ಡಿಸ್ಕ್ ಅಳವಡಿಸಲಾಗಿರುತ್ತದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಹಡಗುಗಳ ಬಗೆ ಹಿಂದೆಂದೂ ತಿಳಿಯದ ರೋಚಕ ಸಂಗತಿಗಳಿವು

ಆಟಿಕೆಗಳ ಬಳಕೆ

ಹಡಗುಗಳು ಸದಾ ಕಾಲ ಕಡಲ್ಗಳ್ಳರಿಂದ ಬೆದರಿಕೆಯನ್ನು ಎದುರಿಸುತ್ತಿರುತ್ತವೆ. ಈ ಕಾರಣಕ್ಕೆ ಹಡಗುಗಳಲ್ಲಿ ಮನುಷ್ಯರ ಗೊಂಬೆಗಳನ್ನು ಬಳಸಲಾಗುತ್ತದೆ.ಹಡಗುಗಳಲ್ಲಿ ಸಿಬ್ಬಂದಿ ನಿಂತು ನೋಡುತ್ತಿರುವಂತಹ ಮಾನವ ಬೊಂಬೆಗಳನ್ನು ಬಳಸಲಾಗುತ್ತದೆ. ಇದರಿಂದ ಹಡಗು ಸಿಬ್ಬಂದಿಯೇ ನಿಂತಿರುವಂತೆ ಭಾಸವಾಗುತ್ತದೆ.

ಚಿತ್ರ ಕೃಪೆ: ಹಕೈ ಮ್ಯಾಗಜೈನ್

Most Read Articles
 

Kannada
English summary
Important and interesting things about ships. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X