ಏರ್‌ಬ್ಯಾಗ್‌ ವಾರ್ನಿಂಗ್ ಲೈಟ್'ಗಳು ಆನ್ ಆಗಲು ಪ್ರಮುಖ ಕಾರಣಗಳಿವು

ಏರ್‌ಬ್ಯಾಗ್‌ಗಳು ಕಾರಿನ ಪ್ರಮುಖ ಸುರಕ್ಷತಾ ಫೀಚರ್ ಗಳಲ್ಲಿ ಒಂದಾಗಿವೆ. ಕಾರುಗಳ ಬೆಲೆಯ ಆಧಾರದ ಮೇಲೆ ಏರ್‌ಬ್ಯಾಗ್‌ಗಳನ್ನು ವಿವಿಧ ಸಂಖ್ಯೆಯಲ್ಲಿ ನೀಡಲಾಗುತ್ತದೆ. ಕಾರು ಅಪಘಾತದ ಸಂದರ್ಭಗಳಲ್ಲಿ ಏರ್‌ಬ್ಯಾಗ್‌ಗಳು ಕಾರು ಚಾಲಕರನ್ನು ಹಾಗೂ ಅವರೊಂದಿಗೆ ಪ್ರಯಾಣಿಸುವ ಇತರ ಪ್ರಯಾಣಿಕರ ಜೀವವನ್ನು ರಕ್ಷಿಸುತ್ತವೆ.

ಏರ್‌ಬ್ಯಾಗ್‌ ವಾರ್ನಿಂಗ್ ಲೈಟ್'ಗಳು ಆನ್ ಆಗಲು ಪ್ರಮುಖ ಕಾರಣಗಳಿವು

ಅಪಘಾತದ ಸಮಯದಲ್ಲಿ ಕಾರಿನ ಏರ್ ಬ್ಯಾಗ್ ವಿಸ್ತರಿಸಿದರೆ ಅವುಗಳನ್ನು ಬದಲಾಯಿಸಬೇಕಾಗುತ್ತದೆ. ಹಾಗೆಯೇ ಸೆನ್ಸಾರ್ ಗಳನ್ನು ಸಹ ಮರು ಹೊಂದಿಸಬೇಕು. ಆದರೆ ಯಾವುದೇ ಅಪಘಾತವಾಗದ ಸಂದರ್ಭಗಳಲ್ಲಿ ಏರ್ ಬ್ಯಾಗ್‌ಗಳಲ್ಲಿ ಯಾವುದಾದರೂ ಸಮಸ್ಯೆಗಳಿವೆಯೇ ಎಂಬುದನ್ನು ಕಂಡುಹಿಡಿಯುವುದು ಹೇಗೆ ಎಂಬ ಬಗ್ಗೆ ಹಲವು ಜನರಿಗೆ ತಿಳಿದಿಲ್ಲ.

ಏರ್‌ಬ್ಯಾಗ್‌ ವಾರ್ನಿಂಗ್ ಲೈಟ್'ಗಳು ಆನ್ ಆಗಲು ಪ್ರಮುಖ ಕಾರಣಗಳಿವು

ಏರ್ ಬ್ಯಾಗ್‌ಗಳಲ್ಲಿ ಯಾವುದಾದರೂ ಸಮಸ್ಯೆ ಇದ್ದರೆ, ಕಾರು ಅದರ ಬಗ್ಗೆ ನಿಮಗೆ ತಿಳಿಸುತ್ತದೆ. ಏರ್‌ಬ್ಯಾಗ್‌ಗಳಲ್ಲಿ ಯಾವುದೇ ಸಮಸ್ಯೆಗಳಿದ್ದರೆ, ಡ್ಯಾಶ್‌ಬೋರ್ಡ್‌ನಲ್ಲಿರುವ ಏರ್‌ಬ್ಯಾಗ್ ವಾರ್ನಿಂಗ್ ಲೈಟ್ ಆನ್ ಆಗುತ್ತದೆ. ಈ ಲೈಟ್ ಆನ್ ಆದರೆ ಏರ್‌ಬ್ಯಾಗ್‌ಗಳಲ್ಲಿ ಏನೋ ದೋಷವಿದೆ ಎಂದು ಅರ್ಥ.

ಏರ್‌ಬ್ಯಾಗ್‌ ವಾರ್ನಿಂಗ್ ಲೈಟ್'ಗಳು ಆನ್ ಆಗಲು ಪ್ರಮುಖ ಕಾರಣಗಳಿವು

ಈ ಲೈಟ್ ಆನ್ ಆಗಿದ್ದರೆ, ಕಾರಿನ ಏರ್‌ಬ್ಯಾಗ್‌ಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂದರ್ಥ. ಈ ಸಂದರ್ಭದಲ್ಲಿ ಕಾರು ಅಪಘಾತಕ್ಕೀಡಾದರೆ ಏರ್‌ಬ್ಯಾಗ್‌ಗಳು ಸರಿಯಾಗಿ ವಿಸ್ತರಿಸುವುದಿಲ್ಲ. ಇದರಿಂದ ಕಾರಿನಲ್ಲಿರುವವರ ಜೀವಕ್ಕೆ ಅಪಾಯವಾಗಬಹುದು. ಈ ಕಾರಣಕ್ಕೆ ಈ ಲೈಟ್ ಆನ್ ಆಗಿದ್ದರೆ ತಕ್ಷಣವೇ ಸಮಸ್ಯೆಯನ್ನು ಸರಿ ಪಡಿಸುವುದು ಒಳ್ಳೆಯದು.

ಏರ್‌ಬ್ಯಾಗ್‌ ವಾರ್ನಿಂಗ್ ಲೈಟ್'ಗಳು ಆನ್ ಆಗಲು ಪ್ರಮುಖ ಕಾರಣಗಳಿವು

ಇದು ಪ್ರಮುಖ ಸುರಕ್ಷತಾ ಸಮಸ್ಯೆಯಾಗಿರುವುದರಿಂದ ವಿಳಂಬ ಮಾಡದೇ ಸಾಧ್ಯವಾದಷ್ಟು ಬೇಗ ಸಮಸ್ಯೆಯನ್ನು ಸರಿಪಡಿಸುವುದು ಸೂಕ್ತ. ಕೆಲವೊಮ್ಮೆ ಏರ್ ಬ್ಯಾಗ್ ವಾರ್ನಿಂಗ್ ಲೈಟ್ ಆಕಸ್ಮಿಕವಾಗಿ ಆನ್ ಆಗುತ್ತದೆ. ಆ ಸಂದರ್ಭಗಳಲ್ಲಿ ಅವುಗಳನ್ನು ಅಡ್ಜಸ್ಟ್ ಮಾಡಿದರೆ ಸಾಕು. ಆದರೆ ಕೆಲವೊಮ್ಮೆ ಸಮಸ್ಯೆಗಳಿದ್ದರೆ ಏರ್‌ಬ್ಯಾಗ್ ವಾರ್ನಿಂಗ್ ಲೈಟ್ ಆನ್ ಆಗುತ್ತದೆ.

ಏರ್‌ಬ್ಯಾಗ್‌ ವಾರ್ನಿಂಗ್ ಲೈಟ್'ಗಳು ಆನ್ ಆಗಲು ಪ್ರಮುಖ ಕಾರಣಗಳಿವು

ಆ ಸಮಯದಲ್ಲಿ ಸಮಸ್ಯೆ ಏನು ಎಂಬುದನ್ನು ಕಂಡು ಹಿಡಿದು ತಕ್ಷಣ ಸರಿಪಡಿಸಿ. ಹಾಗಾದರೆ ಯಾವ ಕಾರಣಗಳಿಗಾಗಿ ಏರ್ ಬ್ಯಾಗ್ ವಾರ್ನಿಂಗ್ ಲೈಟ್ ಆನ್ ಆಗುತ್ತದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಇದರಿಂದ ಏರ್ ಬ್ಯಾಗ್‌ ವಾರ್ನಿಂಗ್ ಲೈಟ್ ಆನ್ ಆದಾಗ ಏನು ಮಾಡಬೇಕು ಎಂಬುದನ್ನು ತಿಳಿಯಲು ಸಾಧ್ಯವಾಗಲಿದೆ.

ಏರ್‌ಬ್ಯಾಗ್‌ ವಾರ್ನಿಂಗ್ ಲೈಟ್'ಗಳು ಆನ್ ಆಗಲು ಪ್ರಮುಖ ಕಾರಣಗಳಿವು

ಸೆನ್ಸಾರ್ ಸಮಸ್ಯೆ

ಏರ್‌ಬ್ಯಾಗ್‌ಗಳು ಚಾಲನೆಯಲ್ಲಿರುವುದನ್ನು ಸೆನ್ಸಾರ್ ಗಳು ಖಚಿತಪಡಿಸುತ್ತವೆ. ಏರ್‌ಬ್ಯಾಗ್‌ ಹಾಗೂ ಸೆನ್ಸಾರ್‌ಗಳು ಒಟ್ಟಿಗೆ ಕೆಲಸ ಮಾಡುವುದರಿಂದ ಅಪಘಾತ ಸಂಭವಿಸಿದಾಗ ಏರ್‌ಬ್ಯಾಗ್‌ಗಳು ವಿಸ್ತರಿಸಿ ಕೊಳ್ಳುತ್ತವೆ. ಈ ಸಂದರ್ಭದಲ್ಲಿ ಯಾವುದೇ ಸೆನ್ಸಾರ್ ಗಳಲ್ಲಿ ಸಮಸ್ಯೆಗಳಿದ್ದರೂ ಸಹ, ಏರ್‌ಬ್ಯಾಗ್ ವಾರ್ನಿಂಗ್ ಲೈಟ್ ಆನ್ ಆಗುತ್ತದೆ. ಡ್ಯಾಶ್‌ಬೋರ್ಡ್‌ನಲ್ಲಿರುವ ಏರ್‌ಬ್ಯಾಗ್ ವಾರ್ನಿಂಗ್ ಲೈಟ್ ಆನ್ ಆಗಲು ಇದು ಸಹ ಒಂದು ಕಾರಣವಾಗಿದೆ.

ಏರ್‌ಬ್ಯಾಗ್‌ ವಾರ್ನಿಂಗ್ ಲೈಟ್'ಗಳು ಆನ್ ಆಗಲು ಪ್ರಮುಖ ಕಾರಣಗಳಿವು

ಸೀಟ್ ಬೆಲ್ಟ್

ಚಾಲಕರು ಸೀಟ್ ಬೆಲ್ಟ್ ಅನ್ನು ಸರಿಯಾಗಿ ಧರಿಸದೇ ಇದ್ದರೂ, ಡ್ಯಾಶ್‌ಬೋರ್ಡ್‌ನಲ್ಲಿರುವ ಏರ್‌ಬ್ಯಾಗ್ ವಾರ್ನಿಂಗ್ ಲೈಟ್ ಆನ್ ಆಗುತ್ತದೆ. ಸೀಟ್ ಬೆಲ್ಟ್ ಧರಿಸಿದ ನಂತರವೂ ಏರ್‌ಬ್ಯಾಗ್ ವಾರ್ನಿಂಗ್ ಲೈಟ್ ಉರಿಯುತ್ತಿದ್ದರೆ ಬಕಲ್‌ನಲ್ಲಿ ಸಮಸ್ಯೆಗಳಿರುವ ಸಾಧ್ಯತೆಗಳಿವೆ. ಸೀಟ್ ಬೆಲ್ಟ್ ನಲ್ಲಿರುವ ಸೆನ್ಸಾರ್ ಗಳಲ್ಲೂ ಸಮಸ್ಯೆ ಇರಬಹುದು. ಈ ಸೆನ್ಸಾರ್ ಅನ್ನು ಏರ್‌ಬ್ಯಾಗ್‌ಗೆ ಕನೆಕ್ಟ್ ಮಾಡಲಾಗಿರುತ್ತದೆ.

ಏರ್‌ಬ್ಯಾಗ್‌ ವಾರ್ನಿಂಗ್ ಲೈಟ್'ಗಳು ಆನ್ ಆಗಲು ಪ್ರಮುಖ ಕಾರಣಗಳಿವು

ಸಣ್ಣ ಸಂಘರ್ಷ

ಪಾರ್ಕಿಂಗ್ ಮಾಡುವಾಗ ಅಥವಾ ಜನನಿಬಿಡ ರಸ್ತೆಯಲ್ಲಿ ಕಾರು ಯಾವ ವಸ್ತುವಿಗಾದರೂ ಲಘುವಾಗಿ ಅಪ್ಪಳಿಸುತ್ತದೆ. ಎಷ್ಟೇ ಜಾಗರೂಕತೆಯಿಂದ ಕಾರನ್ನು ಚಲಾಯಿಸಿದರೂ, ಇಂತಹ ಸಣ್ಣ ಪುಟ್ಟ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚು. ಈ ಸಮಯದಲ್ಲಿ ಏರ್ ಬ್ಯಾಗ್ ಗಳು ವಿಸ್ತರಿಸುವುದಿಲ್ಲ.

ಏರ್‌ಬ್ಯಾಗ್‌ ವಾರ್ನಿಂಗ್ ಲೈಟ್'ಗಳು ಆನ್ ಆಗಲು ಪ್ರಮುಖ ಕಾರಣಗಳಿವು

ಆದರೆ ಕಾರಿನಲ್ಲಿರುವ ಸೆನ್ಸಾರ್‌ಗಳಿಗೆ ಡಿಕ್ಕಿ ಸಂಭವಿಸಿದಲ್ಲಿ ಏರ್ ಬ್ಯಾಗ್ ಗಳು ವಿಸ್ತರಿಸಿಕೊಳ್ಳುತ್ತವೆ. ಸೆನ್ಸಾರ್ ಗಳು ಅಷ್ಟು ಸೂಕ್ಷ್ಮವಾಗಿರುತ್ತವೆ. ಅಂತಹ ಸನ್ನಿವೇಶಗಳಲ್ಲಿಯೂ ಏರ್‌ಬ್ಯಾಗ್ ವಾರ್ನಿಂಗ್ ಲೈಟ್ ಆನ್ ಆಗುತ್ತದೆ. ಆ ಸಂದರ್ಭದಲ್ಲಿ ಸೆನ್ಸಾರ್ ಗಳನ್ನು ಮರು ಹೊಂದಿಸಬಹುದು.

ಏರ್‌ಬ್ಯಾಗ್‌ ವಾರ್ನಿಂಗ್ ಲೈಟ್'ಗಳು ಆನ್ ಆಗಲು ಪ್ರಮುಖ ಕಾರಣಗಳಿವು

ವೈರ್'ಗೆ ಹಾನಿ

ಸೀಟುಗಳ ಕೆಳಗಿರುವ ವೈರ್'ಗಳು ಹಾಳಾಗಿದ್ದರೂ ಸಹ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿರುವ ಏರ್‌ಬ್ಯಾಗ್ ವಾರ್ನಿಂಗ್ ಲೈಟ್ ಆನ್ ಆಗುತ್ತದೆ. ಕೆಲವೊಮ್ಮೆ ಚಾಲಕ ಅಥವಾ ಪ್ರಯಾಣಿಕರು ಯಾವುದಾದರೂ ವಸ್ತುಗಳನ್ನು ಸೀಟುಗಳ ಕೆಳಗೆ ಇರಿಸುತ್ತಾರೆ. ಇದರಿಂದ ಸೀಟುಗಳ ಕೆಳಗಿರುವ ವೈರ್ ಗಳು ಹಾನಿಗೊಳಗಾಗುತ್ತವೆ. ಇದರಿಂದಲೂ ಏರ್ ಬ್ಯಾಗ್ ವಾರ್ನಿಂಗ್ ಲೈಟ್ ಆನ್ ಆಗುತ್ತದೆ.

ಏರ್‌ಬ್ಯಾಗ್‌ ವಾರ್ನಿಂಗ್ ಲೈಟ್'ಗಳು ಆನ್ ಆಗಲು ಪ್ರಮುಖ ಕಾರಣಗಳಿವು

ಬ್ಯಾಕ್ ಅಪ್ ಬ್ಯಾಟರಿ ಸಮಸ್ಯೆ

ಹೆಚ್ಚಿನ ಕಾರುಗಳು ಬ್ಯಾಕ್ ಅಪ್ ಬ್ಯಾಟರಿಯನ್ನು ಹೊಂದಿರುತ್ತವೆ. ಏರ್‌ಬ್ಯಾಗ್‌ಗಳಂತಹ ಎಲೆಕ್ಟ್ರಾನಿಕ್ ಕಾರ್ಯಗಳಿಗಾಗಿ ಅವುಗಳನ್ನು ನೀಡಲಾಗಿರುತ್ತದೆ. ಈ ಬ್ಯಾಕ್ ಅಪ್ ಬ್ಯಾಟರಿ ಒಣಗಿದರೂ ಡ್ಯಾಶ್‌ಬೋರ್ಡ್‌ನಲ್ಲಿರುವ ಏರ್‌ಬ್ಯಾಗ್ ವಾರ್ನಿಂಗ್ ಲೈಟ್ ಆನ್ ಆಗುತ್ತದೆ. ಬ್ಯಾಟರಿಯನ್ನು ರೀಚಾರ್ಜ್ ಮಾಡಿದ ನಂತರ ಈ ಏರ್‌ಬ್ಯಾಗ್ ವಾರ್ನಿಂಗ್ ಲೈಟ್ ಆಫ್ ಆಗುತ್ತದೆ.

ಏರ್‌ಬ್ಯಾಗ್‌ ವಾರ್ನಿಂಗ್ ಲೈಟ್'ಗಳು ಆನ್ ಆಗಲು ಪ್ರಮುಖ ಕಾರಣಗಳಿವು

ಬ್ಯಾಟರಿಯನ್ನು ಕೆಲವು ಬಾರಿ ರೀಚಾರ್ಜ್ ಮಾಡಿದ ನಂತರವೂ ಏರ್‌ಬ್ಯಾಗ್ ವಾರ್ನಿಂಗ್ ಲೈಟ್ ಉರಿಯುತ್ತಲೇ ಇರುತ್ತದೆ. ಈ ರೀತಿಯಾದರೆ ತಕ್ಷಣವೇ ಬ್ಯಾಕ್ ಅಪ್ ಬ್ಯಾಟರಿಯನ್ನು ಬದಲಿಸುವುದು ಒಳ್ಳೆಯದು. ಜೊತೆಗೆ ಸೆನ್ಸಾರ್ ಗಳನ್ನು ಮರು ಹೊಂದಿಸಬೇಕಾಗುತ್ತದೆ.

ಏರ್‌ಬ್ಯಾಗ್‌ ವಾರ್ನಿಂಗ್ ಲೈಟ್'ಗಳು ಆನ್ ಆಗಲು ಪ್ರಮುಖ ಕಾರಣಗಳಿವು

ಸಾಮಾನ್ಯವಾಗಿ ಕಾರನ್ನು ಆನ್ ಮಾಡಿದಾಗಲೆಲ್ಲಾ, ಡ್ಯಾಶ್‌ಬೋರ್ಡ್‌ನಲ್ಲಿರುವ ಎಲ್ಲಾ ವಾರ್ನಿಂಗ್ ಲೈಟ್ ಗಳು ತಾತ್ಕಾಲಿಕವಾಗಿ ಆನ್ ಆಗುತ್ತವೆ. ಅಂದರೆ ಅಲ್ಪಾವಧಿಗೆ ಆನ್ ಆಗುತ್ತವೆ. ಈ ಮೂಲಕ ಕಾರಿನ ಸಿಸ್ಟಂ ಆಟೋಮ್ಯಾಟಿಕ್ ಆಗಿ ಪರೀಕ್ಷಿಸಲ್ಪಡುತ್ತದೆ.

ಏರ್‌ಬ್ಯಾಗ್‌ ವಾರ್ನಿಂಗ್ ಲೈಟ್'ಗಳು ಆನ್ ಆಗಲು ಪ್ರಮುಖ ಕಾರಣಗಳಿವು

ಆದರೆ ಏರ್ ಬ್ಯಾಗ್ ವಾರ್ನಿಂಗ್ ಲೈಟ್ ನಂತಹ ಯಾವುದೇ ಲೈಟ್ ಗಳು ಉರಿಯುತ್ತಲೇ ಇದ್ದರೆ, ಕಾರಿನಲ್ಲಿ ಸಮಸ್ಯೆ ಇದೆ ಎಂದರ್ಥ. ಈ ರೀತಿಯಾದರೆ ತಕ್ಷಣವೇ ಕಾರ್ ಅನ್ನು ಪರೀಕ್ಷಿಸಿ ಕೊಳ್ಳುವುದು ಒಳ್ಳೆಯದು.

Most Read Articles

Kannada
English summary
Important reasons for car s airbag warning light switching on details
Story first published: Monday, August 23, 2021, 20:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X