ವಾಹನಗಳಲ್ಲಿರುವ ವಿಶಿಷ್ಟ ಗುರುತಿನ ಸಂಖ್ಯೆಗಳ ಬಗೆಗಿನ ವಿವರಗಳಿವು

By Manoj Bk

ಭಾರತದ ಪ್ರತಿಯೊಬ್ಬ ನಿವಾಸಿಗಳಿಗೂ ವಿಶಿಷ್ಟ ಸಂಖ್ಯೆಯನ್ನು ಹೊಂದಿರುವ ಆಧಾರ್ ಕಾರ್ಡ್ ನೀಡಲಾಗಿದೆ. ಒಬ್ಬ ವ್ಯಕ್ತಿಯ ಆಧಾರ್ ಸಂಖ್ಯೆ ಮತ್ತೊಬ್ಬ ವ್ಯಕ್ತಿಯ ಆಧಾರ್ ಸಂಖ್ಯೆಗಿಂತ ಭಿನ್ನವಾಗಿರುತ್ತದೆ.

ವಾಹನಗಳಲ್ಲಿರುವ ವಿಶಿಷ್ಟ ಗುರುತಿನ ಸಂಖ್ಯೆಗಳ ಬಗೆಗಿನ ವಿವರಗಳಿವು

ಅದೇ ರೀತಿ ವಾಹನಗಳಿಗೂ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನೀಡಲಾಗುತ್ತದೆ. ಅವುಗಳನ್ನು ವಿಐಎನ್ ಅಂದರೆ ವೆಹಿಕಲ್ ಐಡೆಂಟಿಫಿಕೇಶನ್ ನಂಬರ್ ಎಂದು ಕರೆಯಲಾಗುತ್ತದೆ. ಜಗತ್ತಿನಲ್ಲಿ ಮಾರಾಟವಾಗುವ ಸ್ಕೂಟರ್, ಬೈಕ್, ಕಾರು, ಟ್ರಕ್‌ ಸೇರಿದಂತೆ ಎಲ್ಲಾ ವಾಹನಗಳು ವಿಐಎನ್ ಸಂಖ್ಯೆಯನ್ನು ಹೊಂದಿರುತ್ತವೆ.

ವಾಹನಗಳಲ್ಲಿರುವ ವಿಶಿಷ್ಟ ಗುರುತಿನ ಸಂಖ್ಯೆಗಳ ಬಗೆಗಿನ ವಿವರಗಳಿವು

ಒಂದು ವಾಹನದ ವಿಐಎನ್ ಸಂಖ್ಯೆ ಮತ್ತೊಂದು ವಾಹನದ ವಿಐಎನ್ ಸಂಖ್ಯೆಗಿಂತ ವಿಭಿನ್ನವಾಗಿರುತ್ತದೆ. ವಿಐಎನ್ 17 ಅಂಕಿಗಳನ್ನು ಹೊಂದಿರುತ್ತದೆ. ವಾಹನದ ಯಾವುದೇ ಭಾಗದಲ್ಲಿ ಈ 17 ಅಂಕಿಯ ಸಂಖ್ಯೆಯನ್ನು ನೀಡಲಾಗುತ್ತದೆ.

ವಾಹನಗಳಲ್ಲಿರುವ ವಿಶಿಷ್ಟ ಗುರುತಿನ ಸಂಖ್ಯೆಗಳ ಬಗೆಗಿನ ವಿವರಗಳಿವು

ವಾಹನಗಳನ್ನು ಅವಲಂಬಿಸಿ ವಿಐಎನ್ ಸಂಖ್ಯೆಯನ್ನು ನೀಡುವ ಸ್ಥಳವು ಬದಲಾಗುತ್ತದೆ. ಈ ಸಂಖ್ಯೆ ವಾಹನವನ್ನು ಕಾನೂನುಬದ್ಧವಾಗಿ ಗುರುತಿಸುತ್ತದೆ. 1981ರ ನಂತರ ತಯಾರಿಸಿದ ವಾಹನಗಳಿಗೆ ಮಾತ್ರ 17 ಅಂಕಿಗಳ ವಿಐಎನ್ ಸಂಖ್ಯೆಯನ್ನು ನೀಡಲಾಗುತ್ತದೆ.

ವಾಹನಗಳಲ್ಲಿರುವ ವಿಶಿಷ್ಟ ಗುರುತಿನ ಸಂಖ್ಯೆಗಳ ಬಗೆಗಿನ ವಿವರಗಳಿವು

1981ಕ್ಕಿಂತ ಮೊದಲು ತಯಾರಾದ ವಾಹನಗಳು 11ರಿಂದ 17 ಅಂಕಿಗಳವರೆಗಿನ ವಿವಿಧ ಅಂಕಿಗಳಲ್ಲಿ ವಿಐಎನ್ ಸಂಖ್ಯೆಯನ್ನು ಹೊಂದಿರುತ್ತವೆ. ಈ 17 ಅಂಕಿಯ ವಿಐಎನ್ ಸಂಖ್ಯೆಯ ಮೂಲಕ ವಾಹನವನ್ನು ಯಾವ ದೇಶದಲ್ಲಿ ತಯಾರಿಸಲಾಯಿತು, ತಯಾರಿಸಿದ ವರ್ಷ, ವಾಹನದ ಪ್ರಕಾರ ಹಾಗೂ ಎಂಜಿನ್ ಪ್ರಕಾರವನ್ನು ತಿಳಿಯಬಹುದು.

ವಾಹನಗಳಲ್ಲಿರುವ ವಿಶಿಷ್ಟ ಗುರುತಿನ ಸಂಖ್ಯೆಗಳ ಬಗೆಗಿನ ವಿವರಗಳಿವು

ಕಾರುಗಳು ಹಾಗೂ ಕಮರ್ಷಿಯಲ್ ವಾಹನಗಳಲ್ಲಿ ವಿಐಎನ್ ಸಂಖ್ಯೆ ಶೀಟ್ ವಿಂಡ್ ಶೀಲ್ಡ್, ಡ್ರೈವರ್ ಬದಿಯ ಡ್ಯಾಶ್ ಬೋರ್ಡ್, ಡ್ರೈವರ್ ಬದಿಯಲ್ಲಿ ಡೋರ್ ಪಿಲ್ಲರ್ ಹಾಗೂ ಎಂಜಿನ್ ಬೇ ಬದಿಯಲ್ಲಿ ನೀಡಲಾಗುತ್ತದೆ.

ವಾಹನಗಳಲ್ಲಿರುವ ವಿಶಿಷ್ಟ ಗುರುತಿನ ಸಂಖ್ಯೆಗಳ ಬಗೆಗಿನ ವಿವರಗಳಿವು

ಬೈಕ್‌ಗಳಲ್ಲಿ ವಿಐಎನ್ ಸಂಖ್ಯೆಯನ್ನು ಹ್ಯಾಂಡಲ್‌ಬಾರ್‌ಗಳ ನೆಕ್ ಬಳಿ ಅಥವಾ ಮೋಟರ್ ಬಳಿ ನೀಡಲಾಗಿರುತ್ತದೆ. ಸ್ಕೂಟರ್‌ಗಳಲ್ಲಿ ವಿಐಎನ್ ಸಂಖ್ಯೆಯನ್ನು ಸೆಂಟರ್ ಸ್ಟ್ಯಾಂಡ್ ಬಳಿ ಅಥವಾ ಡ್ಯಾಶ್‌ಬೋರ್ಡ್ ಅಡಿಯಲ್ಲಿ ನೀಡಲಾಗಿರುತ್ತದೆ.

ವಾಹನಗಳಲ್ಲಿರುವ ವಿಶಿಷ್ಟ ಗುರುತಿನ ಸಂಖ್ಯೆಗಳ ಬಗೆಗಿನ ವಿವರಗಳಿವು

ವಾಹನದ ನೋಂದಣಿ ಪ್ರಮಾಣಪತ್ರ ಹಾಗೂ ವಿಮಾ ದಾಖಲೆಗಳಲ್ಲಿ ಸಹ ವಿಐಎನ್ ಸಂಖ್ಯೆಯನ್ನು ಕಾಣಬಹುದು. ವಿಐಎನ್ ಸಂಖ್ಯೆಯಲ್ಲಿನ ಸಂಖ್ಯೆಗಳು ಹಾಗೂ ಅಕ್ಷರಗಳು ವಿವಿಧ ಮಾಹಿತಿಯನ್ನು ನೀಡುತ್ತವೆ.

ವಾಹನಗಳಲ್ಲಿರುವ ವಿಶಿಷ್ಟ ಗುರುತಿನ ಸಂಖ್ಯೆಗಳ ಬಗೆಗಿನ ವಿವರಗಳಿವು

ವಿಐಎನ್ ಸಂಖ್ಯೆಯಲ್ಲಿನ ಮೊದಲ ಅಕ್ಷರ ವಾಹನವನ್ನು ಯಾವ ದೇಶದಲ್ಲಿ ತಯಾರಿಸಲಾಯಿತು ಎಂಬುದನ್ನು ತಿಳಿಸುತ್ತದೆ. ಈ ಮೊದಲ ಅಕ್ಷರ ಶೂನ್ಯದಿಂದ ಒಂಬತ್ತರವರೆಗೆ ಒಂದು ಪೂರ್ಣಾಂಕವಾಗಿರಬಹುದು ಅಥವಾ ಇಂಗ್ಲಿಷ್ ಅಕ್ಷರಗಳಾಗಿರಬಹುದು ಅಥವಾ ಎರಡರ ಮಿಶ್ರಣವಾಗಿರಬಹುದು.

ವಾಹನಗಳಲ್ಲಿರುವ ವಿಶಿಷ್ಟ ಗುರುತಿನ ಸಂಖ್ಯೆಗಳ ಬಗೆಗಿನ ವಿವರಗಳಿವು

ವಾಹನವು ಭಾರತದಲ್ಲಿ ತಯಾರಾಗಿದ್ದರೆ ವಿಐಎನ್ ಸಂಖ್ಯೆ ಎಂಎ, ಎಂಇ, ಎಂಝಡ್ ಆರಂಭವಾಗುತ್ತದೆ. ಬ್ರೆಜಿಲ್'ನಂತಹ ಕೆಲವು ದೇಶಗಳಲ್ಲಿ ವಿಐಎನ್ ಸಂಖ್ಯೆ 9 ಎ, 9 ಇ ಯೊಂದಿಗೆ ಆರಂಭವಾಗುತ್ತದೆ.

ವಾಹನಗಳಲ್ಲಿರುವ ವಿಶಿಷ್ಟ ಗುರುತಿನ ಸಂಖ್ಯೆಗಳ ಬಗೆಗಿನ ವಿವರಗಳಿವು

ವಿಐಎನ್ ಸಂಖ್ಯೆಯ ಮೊದಲ ಮೂರು ಅಕ್ಷರಗಳನ್ನು ಡಬ್ಲುಎಂಐ (ವಿಶ್ವ ತಯಾರಕ ಗುರುತಿಸುವಿಕೆ) ಎಂದು ಕರೆಯಲಾಗುತ್ತದೆ. ಇದು ವಾಹನದ ತಯಾರಕರನ್ನು ಹುಡುಕಲು ನೆರವಾಗುತ್ತದೆ. ಕೆಲವೊಮ್ಮೆ 3ನೇ ಅಕ್ಷರವು ವಾಹನ ತಯಾರಕರನ್ನು ಮಾತ್ರ ಸೂಚಿಸುತ್ತದೆ. ಕೆಲವೊಮ್ಮೆ 3ನೇ ಅಕ್ಷರವು ವಾಹನದ ವಿಧವನ್ನು ಸೂಚಿಸುತ್ತದೆ. (ಕಾರು, ಬಸ್, ಟ್ರಕ್)

ವಾಹನಗಳಲ್ಲಿರುವ ವಿಶಿಷ್ಟ ಗುರುತಿನ ಸಂಖ್ಯೆಗಳ ಬಗೆಗಿನ ವಿವರಗಳಿವು

ಮೊದಲ ಮೂರು ಅಕ್ಷರಗಳು ವಾಹನ ತಯಾರಕರ ವಿಭಾಗವನ್ನು ಸೂಚಿಸುತ್ತವೆ. ನಾಲ್ಕರಿಂದ ಒಂಬತ್ತನೇ ಅಕ್ಷರಗಳುನ್ನು ವಿಡಿಎಸ್ (ವಾಹನ ವಿವರಣಾ ವಿಭಾಗ) ಎಂದು ಕರೆಯಲಾಗುತ್ತದೆ. ಈ ವಿಭಾಗದಲ್ಲಿನ ಅಕ್ಷರಗಳು ವಿವಿಧ ಮಾಹಿತಿಯನ್ನು ಒದಗಿಸುತ್ತವೆ. ಇವುಗಳಲ್ಲಿ ವಾಹನ ತಯಾರಾದ ವೇದಿಕೆ, ಮಾದರಿ, ಎಂಜಿನ್ ಪ್ರಕಾರಗಳು ಸೇರಿರುತ್ತವೆ. ಈ ವಿಭಾಗದಲ್ಲಿ ಪ್ರತಿಯೊಂದು ಆಟೋ ಕಂಪನಿಯು ಪ್ರತಿಯೊಂದು ಸ್ಥಳದಲ್ಲೂ ಮಾಹಿತಿಯನ್ನು ಒದಗಿಸುತ್ತದೆ.

ವಾಹನಗಳಲ್ಲಿರುವ ವಿಶಿಷ್ಟ ಗುರುತಿನ ಸಂಖ್ಯೆಗಳ ಬಗೆಗಿನ ವಿವರಗಳಿವು

ಉದಾಹರಣೆಗೆ ಒಂದು ಕಂಪನಿಯು ಆರನೇ ಅಕ್ಷರದಲ್ಲಿ ವೇದಿಕೆಯನ್ನು ಪ್ರತಿನಿಧಿಸಿದರೆ, ಇನ್ನೊಂದು ಕಂಪನಿ ಏಳನೇ ಅಕ್ಷರದಲ್ಲಿ ವೇದಿಕೆಯನ್ನು ಪ್ರತಿನಿಧಿಸುತ್ತದೆ. ಆದರೆ ಹೆಚ್ಚಾಗಿ ಎಂಟನೇ ಅಕ್ಷರವು ಎಂಜಿನ್ ಪ್ರಕಾರವನ್ನು ಸೂಚಿಸುತ್ತದೆ. ಒಂಬತ್ತನೇ ಅಕ್ಷರ ಸುರಕ್ಷತಾ ಸಂಕೇತ ಅಥವಾ ವಾಹನವನ್ನು ತಯಾರಿಸಿದ ತಿಂಗಳು ಆಗಿರುತ್ತದೆ.

ವಾಹನಗಳಲ್ಲಿರುವ ವಿಶಿಷ್ಟ ಗುರುತಿನ ಸಂಖ್ಯೆಗಳ ಬಗೆಗಿನ ವಿವರಗಳಿವು

ಇನ್ನು ಹತ್ತನೇ ಅಕ್ಷರ ಯಾವ ವರ್ಷದಲ್ಲಿ ವಾಹನವನ್ನು ಉತ್ಪಾದಿಸಲಾಯಿತು ಎಂಬುದನ್ನು ಸೂಚಿಸುತ್ತದೆ. 11ನೇ ಅಕ್ಷರವು ವಾಹನವನ್ನು ಯಾವ ಘಟಕದಲ್ಲಿತಯಾರಿಸಲಾಯಿತು ಎಂಬುದನ್ನು ಹಾಗೂ 12-17ನೇ ಅಕ್ಷರ (ಕೊನೆಯ 6 ಅಕ್ಷರಗಳು) ವಾಹನದ ಸರಣಿ ಸಂಖ್ಯೆಯನ್ನು ಸೂಚಿಸುತ್ತವೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Important things about Identification Number in vehicles. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X