ಕಾರು ಸುರಕ್ಷತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಬಗೆಗಿನ ಸಂಗತಿಗಳಿವು

ಕಳೆದ 10 ವರ್ಷಗಳಿಂದ ಬಿಡುಗಡೆಯಾಗುತ್ತಿರುವ ಕಾರುಗಳು ಅತ್ಯಾಧುನಿಕವಾಗಿವೆ. ಹೊಸ ಕಾರುಗಳನ್ನು ವಿವಿಧ ಫೀಚರ್ ಗಳೊಂದಿಗೆ ಬಿಡುಗಡೆಗೊಳಿಸಲಾಗುತ್ತಿದೆ. ಕಾರು ತಯಾರಕ ಕಂಪನಿಗಳು ತಮ್ಮ ಕಾರುಗಳಲ್ಲಿ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುತ್ತಿವೆ. ಕಾರುಗಳ ಸುರಕ್ಷತೆಯ ಬಗ್ಗೆ ಗ್ರಾಹಕರು ಒಲವು ತೋರುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ.

ಕಾರು ಸುರಕ್ಷತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಬಗೆಗಿನ ಸಂಗತಿಗಳಿವು

ಕಾರಿನ ಸುರಕ್ಷತೆಯಲ್ಲಿ ಟಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ (ಟಿಪಿಎಂಎಸ್) ಪ್ರಮುಖ ಪಾತ್ರವನ್ನು ವಹಿಸುತ್ತದೆ. ಟಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಎಂದರೇನು, ಈ ಸಿಸ್ಟಂ ಹೇಗೆ ಕಾರ್ಯ ನಿರ್ವಹಿಸುತ್ತದೆ, ಈ ಸಿಸ್ಟಂನಲ್ಲಿ ಎಷ್ಟು ವಿಧಗಳಿವೆ, ಟಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಕಾರಿನಲ್ಲಿರುವವರನ್ನು ಹೇಗೆ ರಕ್ಷಿಸುತ್ತದೆ ಎಂಬ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಈ ಲೇಖನದಲ್ಲಿ ನೋಡೋಣ.

ಕಾರು ಸುರಕ್ಷತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಬಗೆಗಿನ ಸಂಗತಿಗಳಿವು

ಟಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಎಲೆಕ್ಟ್ರಾನಿಕ್ ಸಿಸ್ಟಂ ಆಗಿದೆ. ಈ ಸಿಸ್ಟಂ ಕಾರಿನ ಟಯರ್ ಗಳಲ್ಲಿರುವ ಏರ್ ಪ್ರೆಷರ್ ಅನ್ನು ಮೇಲ್ವಿಚಾರಣೆ ಮಾಡುತ್ತದೆ. ಏರ್ ಪ್ರೆಷರ್ ಅಪಾಯಕಾರಿ ಮಟ್ಟದಲ್ಲಿ ಕುಸಿದರೆ, ಈ ಸಿಸ್ಟಂ ಕಾರು ಚಾಲಕರನ್ನು ಎಚ್ಚರಿಸುತ್ತದೆ. ಈ ಕಾರಣಕ್ಕಾಗಿಯೇ ಟಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಅನ್ನು ಒಂದು ಪ್ರಮುಖ ಸುರಕ್ಷತಾ ಫೀಚರ್ ಆಗಿ ಪರಿಗಣಿಸಲಾಗುತ್ತದೆ.

ಕಾರು ಸುರಕ್ಷತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಬಗೆಗಿನ ಸಂಗತಿಗಳಿವು

ಮಾರುಕಟ್ಟೆಯಲ್ಲಿ ಎರಡು ಪ್ರಮುಖ ವಿಧದ ಟಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂಗಳು ಲಭ್ಯವಿರುತ್ತವೆ. ಒಂದು ಡೈರೆಕ್ಟ್ ಟಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಇನ್ನೊಂದು ಇನ್ ಡೈರೆಕ್ಟ್ ಟಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ.

ಕಾರು ಸುರಕ್ಷತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಬಗೆಗಿನ ಸಂಗತಿಗಳಿವು

ಡೈರೆಕ್ಟ್ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಅನ್ನು ಸೆನ್ಸಾರ್‌ಗಳು ನಿರ್ವಹಿಸುತ್ತವೆ. ಗಾಳಿಯ ಪ್ರೆಷರ್ ಅನ್ನು ಲೆಕ್ಕಹಾಕಲು ಕಾರಿನ ಪ್ರತಿ ಟಯರ್ ನಲ್ಲಿ ಸೆನ್ಸಾರ್ ಗಳನ್ನು ನೀಡಲಾಗಿರುತ್ತದೆ. ಏರ್ ಪ್ರೆಷರ್, ಕಾರು ತಯಾರಕ ಕಂಪನಿಗಳು ಶಿಫಾರಸು ಮಾಡಿರುವ ಮಟ್ಟಕ್ಕಿಂತ 25% ನಷ್ಟು ಕಡಿಮೆಯಾದರೆ, ಈ ಸೆನ್ಸಾರ್ ಗಳು ಕಾರಿನ ಕಂಪ್ಯೂಟರ್ ಸಿಸ್ಟಂಗೆ ಮಾಹಿತಿ ಕಳುಹಿಸುತ್ತವೆ.

ಕಾರು ಸುರಕ್ಷತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಬಗೆಗಿನ ಸಂಗತಿಗಳಿವು

ಆಗ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿರುವ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಫ್ಲ್ಯಾಷ್ ಆಗುವ ಮೂಲಕ ಅಲರ್ಟ್ ಲೈಟ್ ಉಂಟು ಮಾಡುತ್ತದೆ. ಕಾರಿನ ಒಂದು ಟಯರಿನಲ್ಲಿ ಏರ್ ಪ್ರೆಷರ್ ಕಡಿಮೆಯಾಗಿದ್ದರೂ ಈ ಸಿಸ್ಟಂ ನಿಮ್ಮನ್ನು ಎಚ್ಚರಿಸುತ್ತದೆ. ಈ ಸಿಸ್ಟಂ ಕಾರಿನ ಟೈರುಗಳಲ್ಲಿರುವ ಏರ್ ಪ್ರೆಷರ್ ಅನ್ನು ಪರೀಕ್ಷಿಸಲು ಹಾಗೂ ಸುರಕ್ಷಿತವಾಗಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ.

ಕಾರು ಸುರಕ್ಷತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಬಗೆಗಿನ ಸಂಗತಿಗಳಿವು

ಇನ್ನು ಇನ್ ಡೈರೆಕ್ಟ್ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಕಾರಿನ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂನ (ಎಬಿಎಸ್) ವ್ಹೀಲ್ ಸ್ಪೀಡ್ ಸೆನ್ಸಾರ್ ಗಳ ಜೊತೆಯಲ್ಲಿಕಾರ್ಯನಿರ್ವಹಿಸುತ್ತದೆ. ಯಾವ ಟಯರ್ ಕಡಿಮೆ ಏರ್ ಪ್ರೆಷರ್ ಹೊಂದಿದೆ, ಆ ಟಯರ್ ಇತರ ಟಯರ್‌ಗಳಿಗಿಂತ ವಿಭಿನ್ನ ವೇಗದಲ್ಲಿ ಚಲಿಸುತ್ತದೆ.

ಕಾರು ಸುರಕ್ಷತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಬಗೆಗಿನ ಸಂಗತಿಗಳಿವು

ಕಾರಿನ ಕಂಪ್ಯೂಟರ್ ಸಿಸ್ಟಂ ಇದನ್ನು ತಕ್ಷಣವೇ ಪತ್ತೆ ಮಾಡುತ್ತದೆ. ಆಗ ಕಾರಿನ ಡ್ಯಾಶ್ ಬೋರ್ಡ್ ನಲ್ಲಿರುವ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂನ ಅಲರ್ಟ್ ಲೈಟ್ ಆನ್ ಆಗುತ್ತದೆ. ಕಾರಿನಲ್ಲಿ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಇದ್ದರೆ, ಅದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ಇವುಗಳಲ್ಲಿ ಸುರಕ್ಷತೆಯು ಪ್ರಮುಖವಾಗಿದೆ.

ಕಾರು ಸುರಕ್ಷತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಬಗೆಗಿನ ಸಂಗತಿಗಳಿವು

ಕಾರಿನ ಟಯರ್ ಗಳು ಕಡಿಮೆ ಏರ್ ಪ್ರೆಷರ್ ಹೊಂದಿದ್ದರೆ, ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಆ ಬಗ್ಗೆ ಮಾಹಿತಿ ನೀಡುತ್ತದೆ. ಈ ಮೂಲಕ ಕಾರಿನ ಟಯರ್ ಗಳಲ್ಲಿ ಸರಿಯಾದ ಏರ್ ಪ್ರೆಷರ್ ಅನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.

ಕಾರು ಸುರಕ್ಷತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಬಗೆಗಿನ ಸಂಗತಿಗಳಿವು

ಜೊತೆಗೆ ಕಾರಿನ ಸುರಕ್ಷತೆಯು ಸುಧಾರಿಸುತ್ತದೆ. ಕಾರಿನ ನಿರ್ವಹಣೆಯನ್ನು ಸುಧಾರಿಸಲು ಟಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ನೆರವಾಗುತ್ತದೆ.

ಕಾರು ಸುರಕ್ಷತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಬಗೆಗಿನ ಸಂಗತಿಗಳಿವು

ಹೆಚ್ಚುವರಿ ವಿಶೇಷತೆ ಎಂದರೆ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಮೂಲಕ ಟಯರ್‌ಗಳ ಏರ್ ಪ್ರೆಷರ್ ಅನ್ನು ಸರಿಯಾಗಿ ನಿರ್ವಹಿಸ ಬಹುದು. ಇದರಿಂದ ಟಯರ್‌ಗಳ ಜೀವಿತಾವಧಿ ಹೆಚ್ಚುವುದರ ಜೊತೆಗೆ ಕಾರಿನ ಮೈಲೇಜ್ ಸಹ ಹೆಚ್ಚುತ್ತದೆ.

ಕಾರು ಸುರಕ್ಷತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಬಗೆಗಿನ ಸಂಗತಿಗಳಿವು

ಟಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಅನ್ನು ಈಗ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಬಹುತೇಕ ಕಾರುಗಳಲ್ಲಿ ನೀಡಲಾಗುತ್ತದೆ.

ಕಾರು ಸುರಕ್ಷತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಬಗೆಗಿನ ಸಂಗತಿಗಳಿವು

ಎಲ್ಲಾ ಕಾರುಗಳಲ್ಲಿ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಿದರೆ, ಕಾರು ಮಾಲೀಕರು ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ.

ಕಾರು ಸುರಕ್ಷತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಬಗೆಗಿನ ಸಂಗತಿಗಳಿವು

ಆದರೆ ಎಲ್ಲಾ ಕಾರುಗಳಲ್ಲಿ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ನೀಡಿದರೆ, ಕಾರುಗಳ ಬೆಲೆ ಏರಿಕೆಯಾಗುತ್ತದೆ. ಈ ಕಾರಣಕ್ಕೆ ಕೆಲವೇ ಕೆಲವು ಕಾರುಗಳಲ್ಲಿ ಮಾತ್ರ ಈ ಫೀಚರ್ ನೀಡಲಾಗುತ್ತದೆ.

ಕಾರು ಸುರಕ್ಷತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಬಗೆಗಿನ ಸಂಗತಿಗಳಿವು

ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಜೊತೆಗೆ ಕೆಲವೇ ಕೆಲವು ಕಾರುಗಳಲ್ಲಿ ಮಾತ್ರ ಏರ್ ಬ್ಯಾಗ್ ಗಳನ್ನು ನೀಡಲಾಗುತ್ತಿದೆ. ಆದರೆ ಸುರಕ್ಷತೆಯ ಕಾರಣಕ್ಕೆ ಕೇಂದ್ರ ಸರ್ಕಾರವು ಇನ್ನು ಮುಂದೆ ಬಿಡುಗಡೆಯಾಗುವ ಎಲ್ಲಾ ಕಾರುಗಳಲ್ಲಿ ಕಡ್ಡಾಯವಾಗಿ ಏರ್ ಬ್ಯಾಗ್ ಗಳನ್ನು ಒದಗಿಸಬೇಕೆಂದು ಕಾರು ತಯಾರಕ ಕಂಪನಿಗಳಿಗೆ ಸೂಚನೆ ನೀಡಿದೆ.

ಕಾರು ಸುರಕ್ಷತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಬಗೆಗಿನ ಸಂಗತಿಗಳಿವು

ಕೇಂದ್ರ ಸರ್ಕಾರದ ಸೂಚನೆಯ ನಂತರ ಎಲ್ಲಾ ಕಾರು ತಯಾರಕ ಕಂಪನಿಗಳು ತಮ್ಮ ಹೊಸ ಕಾರುಗಳಲ್ಲಿ ಏರ್ ಬ್ಯಾಗ್ ಗಳನ್ನು ನೀಡುತ್ತಿವೆ.

Most Read Articles

Kannada
English summary
Important things about tyre pressure monitoring system details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X