ಮೂಕ ವಿಸ್ಮಯ; 2,000 ವರ್ಷದಷ್ಟು ಹಳೆಯದಾದ ಮರದಡಿಯಲ್ಲಿ ಕಾರು ಚಾಲನೆ!
ಬಹಳ ಹಿಂದಿನಿಂದಲೇ ಮನುಷ್ಯನಿಗೂ ಪ್ರಕೃತಿಗೂ ಆಗಾಧವಾದ ನಂಟಿದೆ ಎಂಬುದಕ್ಕೆ ಇದು ಒಂದು ಉದಾಹರಣೆ ಮಾತ್ರ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನೆಲೆಗೊಂಡಿರುವ 2,000ದಷ್ಟು ಹಳೆಯದಾದ ಮರಗಳ ಅಡಿಯಲ್ಲಿ ಕೊರೆಯಲಾಗಿರುವ ಸುರಂಗ ಮಾರ್ಗದಲ್ಲಿ ಈಗಲೂ ವಾಹನ ಸಂಚರಿಸುತ್ತಿರುವುದು ಎಂತವರನ್ನು ಮೂಕ ವಿಸ್ಮಿತಗೊಳಿಸುತ್ತಿದೆ.
ನಿತ್ಯಹರಿದ್ವರ್ಣದ ಶಂಕುಪರ್ಣಿ ಮರ ಹಾಗೂ ದೈತ್ಯ ವಿಭಾಗಕ್ಕೆ ಸೇರಿದ ಇಂತಹ ಮರಗಳು 3,000ಕ್ಕೂ ವರ್ಷಗಳಷ್ಟು ಹೆಚ್ಚು ಕಾಲ ಆಯಸ್ಸನ್ನು ಹೊಂದಿದ್ದು, ಸರಾಸರಿ 300 ಅಡಿ ಎತ್ತರಕ್ಕೂ ಬೆಳೆಯುತ್ತಿದೆ. ಕಾಲ ಕ್ರಮೇಣ ಬೃಹತ್ ಗಾತ್ರದ ಮರದಡಿಯಲ್ಲಿ ಸುರಂಗ ಮಾರ್ಗ ಕೊರೆಯುವ ಮೂಲಕ ಸಂಚಾರ ಯೋಗ್ಯವಾಗಿಸಿದ್ದಾರೆ.

ಮರದಡಿಯಲ್ಲಿ ಸಂಚಾರ ಯೋಗ್ಯ ಸುರಂಗ ಮಾರ್ಗವನ್ನು ಕೊರೆದರೂ ಮರದ ಜೀವಕ್ಕೆ ಯಾವುದೇ ಅಪಾಯವುಂಟಾಗಲಿಲ್ಲ. ಇದು ಎಂದಿನಂತೆ ದಷ್ಟಪುಷ್ಠವಾಗಿ ಬೆಳೆಯ ತೊಡಗಿತ್ತು ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ.

ಕ್ಯಾಲಿಫೋನಿರ್ಯಾದ ಯೊಸೆಮೈಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಸ್ಥಿತಗೊಂಡಿರುವ ಇಲ್ಲಿನ ದೈತ್ಯ ಮರಗಳನ್ನು 1875ನೇ ಇಸವಿಯಲ್ಲಿ ಮೊದಲ ಬಾರಿಗೆ ಸುರಂಗವನ್ನು ಕೊರೆಯಲಾಗಿತ್ತು.

ಈಗಲೂ ಇಲ್ಲಿಗೆ ಭೇಟಿ ಕೊಡುವ ವಿನೋದ ಸಂಚಾರಿಗಳು ಮರದಡಿಯಲ್ಲಿ ಸಂಚರಿಸುವುದನ್ನು ರೂಢಿ ಮಾಡಿಕೊಂಡಿರುತ್ತಾರೆ.

ವರ್ಷಗಳು ಉರುಳಿದಂತೆ ಕೆಲವು ಮರಗಳು ಶಿಥಿಲಾವಸ್ಥೆಯನ್ನು ಬಂದು ತಲುಪಿದೆ. ಆದರೆ ಗಟ್ಟಿ ಮುಟ್ಟಾದ ಬೇರುಗಳು ಇನ್ನು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳದಂತೆ ನೋಡಿಕೊಂಡಿದೆ.

ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಈಗ ಇಂತಹ ಹವ್ಯಾಸಗಳಿಗೆ ಆಸ್ಪದ ಕೊಡಲಾಗುವುದಿಲ್ಲ. ಆದರೆ ಈ ವಿಂಟೇಜ್ ಮರಗಳನ್ನು ಮಾತ್ರ ಈಗಲೂ ರಾಷ್ಟ್ರೀಯ ಉದ್ಯಾನವನದಲ್ಲಿ ಸಂರಕ್ಷಿಸುತ್ತಾ ಬರಲಾಗಿದೆ.

ಬಹಳ ಹಿಂದೆ ವಿನೋದ ಸಂಚಾರಿಗಳಿಗಾಗಿ ತೆರೆದ ಇಲ್ಲಿನ ಮಾರ್ಗಗಳಲ್ಲಿ ಸಂಚರಿಸಲು ಶುಲ್ಕ ಪಾವತಿಸಬೇಕಾಗಿತ್ತು. ಇದರಂತೆ ಸಮಾಜದ ಗಣ್ಯ ವ್ಯಕ್ತಿಗಳು ಶುಲ್ಕ ಪಾವತಿಸಿ ತಮ್ಮ ವಿಂಟೇಜ್ ಕಾರುಗಳಲ್ಲಿ ಜಾಲಿ ರೈಡ್ ಹೊಡೆಯುತ್ತಿದ್ದರು.

1930ರ ದಶಕದಲ್ಲಿ ತೆಗೆಯಲಾಗಿರುವ ಚಿತ್ರವಿದು.

1880ರ ದಶಕದಲ್ಲೇ ಮರದಡಿಯಲ್ಲಿ ಸುರಂಗ ಕೊರೆದಿರುವುದಕ್ಕೆ ಸಾಕ್ಷಿಯಿದು.

1920ರ ದಶಕದ ಕ್ಲಾಸಿಕ್ ದೃಶ್ಯ.

1890ರಲ್ಲಿ ದೈತ್ಯ ಗಾತ್ರದ ವಾವೋನಾ ಮರದಡಿಯಲ್ಲಿ ಸಂಚರಿಸುವಾಗ ಅಂದಿನ ಅಧ್ಯಕ್ಷ ರೂಸ್ ವೆಲ್ಟ್ ತೆಗೆದ ಅಪೂರ್ವ ಚಿತ್ರವಿದು.

1969ರಲ್ಲಿ ಭೀಕರ ಚಂಡ ಮಾರುತದ ಬಳಿಕ ತೆಗೆದ ಚಿತ್ರವಿದು.

ಚಂಡ ಮಾರುತ ಅಪ್ಪಳಿಸಿದರೂ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳದ ಮರ.

ಮಗದೊಂದು ಕ್ಲಾಸಿಕ್ ದೃಶ್ಯ ವಿಸ್ಮಯ.


Click it and Unblock the Notifications








