ಭಾರತಕ್ಕಿನ್ನು ಅಮೆರಿಕದ ಜಿಪಿಎಸ್ ಅವಲಂಬಿಸುವ ಅಗತ್ಯವಿಲ್ಲ

By Nagaraja

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ), ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆಯ (ಐಆರ್ಎನ್‌ಎಸ್ಎಸ್‌) ಕೊನೆಯ ಉಪಗ್ರಹ ಐಆರ್‌ಎನ್‌ಎಸ್‌ಎಸ್-1ಜಿ ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ದೇಶದ ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಅಧ್ಯಾಯ ತೆರೆದುಕೊಂಡಿದೆ.

ಇದುವರೆಗೆ ದಿಕ್ಸೂಚಿ ವ್ಯವಸ್ಥೆಗಾಗಿ ಅಮೆರಿಕ ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ (ಜಿಪಿಎಸ್) ಆಶ್ರಯಿಸಿಕೊಂಡಿರುವ ಭಾರತಕ್ಕಿನ್ನು ಜಿಪಿಎಸ್ ಅವಲಂಬಿಸುವ ಅಗತ್ಯವಿಲ್ಲ. ಆಂಧ್ರ ಪ್ರದೇಶದಲ್ಲಿರುವ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ನೆಲೆಯಿಂದ ಐಆರ್‌ಎನ್‌ಎಸ್‌ಎಸ್ ಸರಣಿಯ ಏಳನೇ ಹಾಗೂ ಅಂತಿಮ ಉಪಗ್ರಹವನ್ನು ಪಿಎಸ್‌ಎಲ್‌ವಿ ರಾಕೆಟ್ ಉಡಾವಣಾ ವಾಹಕ ಯಶಸ್ವಿಯಾಗಿ ಬಾಹ್ಯಾಕಾಶ ಕಕ್ಷಗೆ ಸೇರ್ಪಡೆಗೊಳಿಸಿದೆ.

ಭಾರತಕ್ಕಿನ್ನು ಅಮೆರಿಕದ ಜಿಪಿಎಸ್ ಅವಲಂಬಿಸುವ ಅಗತ್ಯವಿಲ್ಲ

ಇನ್ನು ಕೆಲವೇ ತಿಂಗಳೊಳಗೆ ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆಯು ಯಶಸ್ವಿಯಾಗಲಿದ್ದು, ಅಮೆರಿಕವನ್ನು ಆಶ್ರಯಿಸದೆಯೇ ಭಾರತ ಸ್ವಂತ ಬಲದಲ್ಲಿ ನೆಲ, ಸಮುದ್ರ, ಮತ್ತು ವಾಯು ಸಂಚಾರ ಮಾರ್ಗಕ್ಕೆ ನೆರವು ಮಾಡುವ ದಿಕ್ಸೂಚಿ ವ್ಯವಸ್ಥೆಯನ್ನು ಹೊಂದಲಿದೆ.

ಭಾರತಕ್ಕಿನ್ನು ಅಮೆರಿಕದ ಜಿಪಿಎಸ್ ಅವಲಂಬಿಸುವ ಅಗತ್ಯವಿಲ್ಲ

ಅಮೆರಿಕ ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ ನಿರ್ವಹಣೆಯು ಅಮೆರಿಕ ದೇಶದ ವಾಯು ಸೇನೆಯ ಅಧೀನತೆಯಲ್ಲಿದ್ದು, ಪಾರದರ್ಶಕತೆ ಬಗ್ಗೆ ಶಂಕೆ ಮೂಡುವಲ್ಲಿ ಕಾರಣವಾಗಿದೆ. ಇದರಿಂದಾಗಿ ದೇಶೀಯ ಸ್ಥಾನ ನಿರ್ಣಯ ಹಾಗೂ ದಿಕ್ಸೂಚಿ ವ್ಯವಸ್ಥೆ ಅಭಿವೃದ್ಧಿಪಡಿಸಲು ಭಾರತಕ್ಕೆ ಪ್ರೇರಣೆಯಾಗಿದೆ.

ಭಾರತಕ್ಕಿನ್ನು ಅಮೆರಿಕದ ಜಿಪಿಎಸ್ ಅವಲಂಬಿಸುವ ಅಗತ್ಯವಿಲ್ಲ

ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆಯ ಭಾಗವಾಗಿರುವ ಐಆರ್ ಎನ್ ಎಸ್ ಎಸ್ - 1ಜಿ 12 ವರ್ಷಗಳ ಜೀವಿತಾವಧಿಯನ್ನು ಹೊಂದಿರಲಿದೆ. ಮೊದಲ ಐಆರ್‌ಎನ್‌ಎಸ್‌ಎಸ್-1ಎ 2013 ಜುಲೈನಲ್ಲಿ, ಎರಡನೇಯ ಐಆರ್‌ಎನ್‌ಎಸ್‌ಎಸ್-1ಬಿ 2014 ಎಪ್ರಿಲ್ ನಲ್ಲಿ, ಮೂರನೇಯ ಐಆರ್‌ಎನ್‌ಎಸ್‌ಎಸ್-1ಸಿ 2014 ಅಕ್ಟೋಬರ್ ನಲ್ಲಿ, ನಾಲ್ಕನೇಯ ಐಆರ್‌ಎನ್‌ಎಸ್‌ಎಸ್-1ಡಿ 2015 ಮಾರ್ಚ್ ನಲ್ಲಿ, ಐದನೇಯ ಐಆರ್‌ಎನ್‌ಎಸ್‌ಎಸ್-1ಇ 2016 ಜನವರಿ 20ರಂದು, ಆರನೇಯ ಐಆರ್‌ಎನ್‌ಎಸ್‌ಎಸ್-1ಎಫ್ ಉಪಗ್ರಹವನ್ನು ಮಾರ್ಚ್ 10ರಂದು ಮತ್ತು ಏಳನೇಯ ಹಾಗೂ ಕೊನೆಯ ಐಆರ್‌ಎನ್‌ಎಸ್‌ಎಸ್-1ಜಿ ಉಪಗ್ರಹವನ್ನು 2016 ಎಪ್ರಿಲ್ 28ರಂದು ಉಡ್ಡಯನಗೊಳಿಸಲಾಗಿತ್ತು.

ಭಾರತಕ್ಕಿನ್ನು ಅಮೆರಿಕದ ಜಿಪಿಎಸ್ ಅವಲಂಬಿಸುವ ಅಗತ್ಯವಿಲ್ಲ

ಭಾರತದ ಮಹತ್ವಕಾಂಕ್ಷೆಯ ದಿಕ್ಸೂಚಿ ವ್ಯವಸ್ಥೆಗೆ 'ನಾವಿಕ್' (Navigation with Indian Constellation) ಎಂಬ ಹೆಸರಿಡಲಾಗಿದೆ. ಇದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ್ದರು.

ಭಾರತಕ್ಕಿನ್ನು ಅಮೆರಿಕದ ಜಿಪಿಎಸ್ ಅವಲಂಬಿಸುವ ಅಗತ್ಯವಿಲ್ಲ

ಭಾರತ ಈಗ ಸ್ವಂತ ದಿಕ್ಸೂಚಿ ವ್ಯವಸ್ಥೆಯನ್ನು ಹೊಂದಿರುವ ಅಮೆರಿಕ, ಯುರೋಪ್ ಒಕ್ಕೂಟ, ಚೀನಾ ಮತ್ತು ರಷ್ಯಾ ದೇಶಗಳ ಸಾಲಿಗೆ ಸೇರಿದೆ.

ಭಾರತಕ್ಕಿನ್ನು ಅಮೆರಿಕದ ಜಿಪಿಎಸ್ ಅವಲಂಬಿಸುವ ಅಗತ್ಯವಿಲ್ಲ

ಇತರೆ ದೇಶಗಳ ದಿಕ್ಸೂಚಿ ವ್ಯವಸ್ಥೆಗೆ 20ರಷ್ಟು ಉಪಗ್ರಹಗಳು ಬೆಂಗಾವಲಾಗಿ ನಿಂತಿದೆ. ಹಾಗಿರುವಾಗ ಭಾರತ ಏಳು ಉಪಗ್ರಹಗಳನ್ನು ಮಾತ್ರ ಹೊಂದಿರುವುದು ವಿಶೇಷ. ಹಾಗೆಯೇ ಇತರೆ ದೇಶಗಳ ದಿಕ್ಸೂಚಿ ವ್ಯವಸ್ಥೆಯು ಜಾಗತಿಕವಾದರೆ ಐಆರ್‌ಎನ್‌ಎಸ್‌ಎಸ್ ಭಾರತದ ಪ್ರಾದೇಶಿಕ ಪ್ರದೇಶಕ್ಕಷ್ಟೇ ಸೀಮಿತವಾಗಿರಲಿದೆ.

ಭಾರತಕ್ಕಿನ್ನು ಅಮೆರಿಕದ ಜಿಪಿಎಸ್ ಅವಲಂಬಿಸುವ ಅಗತ್ಯವಿಲ್ಲ

ದಿಕ್ಸೂಚಿ ವ್ಯವಸ್ಥೆಗಾಗಿ ಭಾರತ ಇದುವರೆಗೆ ಅಮೆರಿಕವನ್ನು ಅವಲಂಬಿಸುತ್ತಿತ್ತು. ಇದರ ಸೇವೆಯು ಸಂಪೂರ್ಣ ಉಚಿತವಾದರೂ ಯುದ್ಧದಂತಹ ತುರ್ತು ಪರಿಸ್ಥಿತಿಯಲ್ಲಿ ಅಮೆರಿಕಗೆ ಬೇಕಾದ್ದಲ್ಲಿ ತನಗಿಷ್ಟದಂತೆ ಕಾರ್ಯಾಚರಣೆಯನ್ನು ಸ್ಧಗಿತಗೊಳಿಸುತ್ತಿತ್ತು. ಇದು ದೇಶದ ಮೇಲಿನ ದಾಳಿಗಾಗಿ ದುರುಪಯೋಗ ಮಾಡುವ ಸಾಧ್ಯತೆಯೂ ಇದೆ.

ಭಾರತಕ್ಕಿನ್ನು ಅಮೆರಿಕದ ಜಿಪಿಎಸ್ ಅವಲಂಬಿಸುವ ಅಗತ್ಯವಿಲ್ಲ

1999ರಲ್ಲಿ ಪಾಕಿಸ್ತಾನ ವಿರುದ್ಧದ ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ಭಾರತಕ್ಕೆ ಜಿಪಿಎಸ್ ಮಾಹಿತಿಯನ್ನು ಒದಗಿಸಲು ಅಮೆರಿಕ ನಿರಾಕರಿಸಿತ್ತು. ಈ ಎಲ್ಲ ಸನ್ನವೇಶಗಳು ಭಾರತಕ್ಕೆ ಸ್ವಂತ ದಿಕ್ಸೂಚಿ ವ್ಯವಸ್ಥೆ ನಿರ್ಮಿಸಲು ಪ್ರೇರಣೆಯಾಗಿದೆ.

ಭಾರತಕ್ಕಿನ್ನು ಅಮೆರಿಕದ ಜಿಪಿಎಸ್ ಅವಲಂಬಿಸುವ ಅಗತ್ಯವಿಲ್ಲ

ಅಮೆರಿಕದ ಜಿಪಿಎಸ್ ವ್ಯವಸ್ಥೆಗಿಂತಲೂ ನಿಖರವಾಗಲಿರುವ ಐಆರ್‌ಎನ್‌ಎಸ್‌ಎಸ್ ಪ್ರಮುಖವಾಗಿಯೂ ಭಾರತವನ್ನು ಕೇಂದ್ರಿಕರಿಸಲಿದೆ. ಇದು ದೇಶದ ಗಡಿಯಾಚೆಗೆ 1,500 ಕೀ.ಮೀ. ವರೆಗಿನ ಪ್ರದೇಶದ ವರೆಗೂ ತನ್ನ ಪ್ರಭಾವವನ್ನು ಹೊಂದಿರಲಿದೆ.

ಭಾರತಕ್ಕಿನ್ನು ಅಮೆರಿಕದ ಜಿಪಿಎಸ್ ಅವಲಂಬಿಸುವ ಅಗತ್ಯವಿಲ್ಲ

ದೇಸಿ ದಿಕ್ಸೂಚಿ ವ್ಯವಸ್ಥೆಯು ಭೂಮಿಯ ವೈಮಾನಿಕ ಮತ್ತು ಸಮುದ್ರ ಸಂಚರಣೆ, ವಾಹನ ಟ್ರ್ಯಾಕಿಂಗ್, ಮರೈನ್, ವಿಪತ್ತು ನಿರ್ವಹಣಾ, ಮ್ಯಾಪಿಂಗ್, ಭೂಮಿತಿಯ ಮಾಹಿತಿ ಗ್ರಹಣ, ಚಾಲಕರಿಗೆ ದೃಶ್ಯ ಮತ್ತು ಧ್ವನಿ ಸಂಚರಣೆಗಳಿಗೆ ಸಹಾಯ ಮಾಡುತ್ತವೆ.

ಭಾರತಕ್ಕಿನ್ನು ಅಮೆರಿಕದ ಜಿಪಿಎಸ್ ಅವಲಂಬಿಸುವ ಅಗತ್ಯವಿಲ್ಲ

ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ಸೇವೆಯು ಮೊಬೈಲ್ ಫೋನ್ ಗಳಲ್ಲೂ ಲಭ್ಯವಾಗಲಿದ್ದು, ಚಾರಣಕ್ಕೆ ಹೋಗುವವರಿಗೆ ಮತ್ತು ಪ್ರವಾಸಿಗರಿಗೂ ನೆರವಾಗಲಿದೆ.

More from DriveSpark

Article Published On: Saturday, April 30, 2016, 12:12 [IST]
English summary
India Launches Its 7th Navigation Satellite For Very Own GPS
Read more on ಇಸ್ರೊ isro
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+