ಏಕಕಾಲಕ್ಕೆ 2 ಕಕ್ಷೆಗೆ ಎಂಟು ಉಪಗ್ರಹಗಳನ್ನು ಸೇರಿಸಿದ ಇಸ್ರೋ

Written By:

ಏಕಕಾಲಕ್ಕೆ 2 ಕಕ್ಷೆಗೆ ಎಂಟು ಉಪಗ್ರಹಗಳನ್ನು ಸೇರಿಸುವ ಮೂಲಕ ಭಾರತೀಯ ಬಾಹ್ಯಾಕಾಶ ಅಧ್ಯಯನ ಸಂಸ್ಥೆ (ಇಸ್ರೋ) ಮಗದೊಂದು ಮೈಲುಗಲ್ಲನ್ನು ಸ್ಥಾಪಿಸಿದೆ. ಇದರಲ್ಲಿ ಭಾರತದ ಮೂರು, ಅಲ್ಗೇರಿಯಾದಿಂದ ಮೂರು ಮತ್ತು ಅಮೆರಿಕ ಮತ್ತು ಕೆನಡಾದಿಂದ ತಲಾ ಒಂದೊಂದು ಉಪಗ್ರಹಗಳು ಸೇರಿದ್ದವು.

ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ಭಾರತೀಯ ಉಪಗ್ರಹ ಉಡವಣಾ ವಾಹಕ ಪಿಎಸ್ ಎಲ್ ವಿ ಸಿ-35 ಪೊಲರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಬೆಳಗ್ಗಿನ ಜಾವ 9.12ಕ್ಕೆ ಸರಿಯಾಗಿ ಎಲ್ಲ ಎಂಟು ಉಪಗ್ರಹಗಳನ್ನು ಉಡಾವಣೆ ಮಾಡಿದೆ.

ಏಕಕಾಲಕ್ಕೆ 2 ಕಕ್ಷೆಗೆ ಎಂಟು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಇಸ್ರೋ

ಸಾಧನೆಯ ಮೇಲೆ ಸಾಧನೆ ಬರೆಯುತ್ತಲೇ ಇರುವ ಇಸ್ರೋ ಏಕಕಾಲಕ್ಕೆ ಎರಡು ಕಕ್ಷೆಗಳಿಗೆ ಉಪಗ್ರಹಗಳನ್ನು ಬಿಡುಗಡೆ ಮಾಡಿರುವುದು ಇಡೀ ವಿಶ್ವವೇ ನಿಬ್ಬೇರಗಾಗಿ ನೋಡುವಂತಾಗಿದೆ.

ಏಕಕಾಲಕ್ಕೆ 2 ಕಕ್ಷೆಗೆ ಎಂಟು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಇಸ್ರೋ

ಈ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೋ ಮುಖ್ಯಸ್ಥ ಎಎಸ್ ಕಿರಣ್ ಕುಮಾರ್, ಒಂದೇ ಯೋಜನೆಯಲ್ಲಿ ಎಕಕಾಲಕ್ಕೆ ಎರಡು ಕಕ್ಷೆಗಳಿಗೆ ಉಪಗ್ರಹ ಬಿಡುವುದು ಸವಾಲಿನಿಂದ ಕೂಡಿದ ಕೆಲಸವಾಗಿದ್ದು, ಇದನ್ನು ಸಾಧಿಸುವ ಮೂಲಕ ಭಾರತವೀಗ ವಿಶಿಷ್ಟ ದೇಶಗಳ ಸಾಲಿಗೆ ಸೇರ್ಪಡೆಗೊಂಡಿದೆ ಎಂದಿದ್ದಾರೆ.

ಏಕಕಾಲಕ್ಕೆ 2 ಕಕ್ಷೆಗೆ ಎಂಟು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಇಸ್ರೋ

ಭಾರತವು 379 ಕೆ.ಜಿ ಭಾರದ ಸ್ಕಾಟ್ ಸ್ಯಾಟ್-1 ಎಂಬ ಸಾಗರ ಹಾಗೂ ಹವಾಮಾನ ಮುನ್ಸೂಚನೆ, ಚಂಡಮಾರುತ ಪತ್ತೆ ಹಾಗೂ ಟ್ರ್ಯಾಕಿಂಗ್ ಉಪಗ್ರಹವನ್ನು ಉಡಾಯಿಸಿದೆ. ಇದು ಅಮೆರಿಕ ಜೊತೆ ಮಾಹಿತಿಯನ್ನು ಹಂಚಿಕೊಳ್ಳಲಿದೆ.

ಏಕಕಾಲಕ್ಕೆ 2 ಕಕ್ಷೆಗೆ ಎಂಟು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಇಸ್ರೋ

ಇದರಲ್ಲಿ ಬಾಂಬೆಯಲ್ಲಿರುವ ಭಾರತ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ ಪ್ರಥಮ್ ಉಪಗ್ರಹವು ಸೇರಿದ್ದು, ಬಾಹ್ಯಾಕಾಶದಲ್ಲಿರುವ ಎಲೆಕ್ಟ್ರಾನ್ ಗಣನೆಯನ್ನು ಅಧ್ಯಯನ ಮಾಡಲಿದೆ.

ಏಕಕಾಲಕ್ಕೆ 2 ಕಕ್ಷೆಗೆ ಎಂಟು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಇಸ್ರೋ

ನಮ್ಮ ಬೆಂಗಳೂರಿನ ಪಿಇಎಸ್ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ ಮಗದೊಂದು 5.25 ಕೆ.ಜಿ. ತೂಕದ ಪಿಐಎಸ್ ಎಟಿ ಉಪಗ್ರಹವು ಸೇರಿವೆ.

ಏಕಕಾಲಕ್ಕೆ 2 ಕಕ್ಷೆಗೆ ಎಂಟು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಇಸ್ರೋ

ಇದೊಂದು ದೀರ್ಘ ಕಾಲದ ಉಡಾವಣಾ ಪ್ರಕ್ರಿಯೆಯಾಗಿದ್ದು, ಈ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳಲು 2 ತಾಸು ಹಾಗೂ 15 ನಿಮಿಷಗಳಷ್ಟು ಸಮಯ ತಗುಲಿದೆ.

ಏಕಕಾಲಕ್ಕೆ 2 ಕಕ್ಷೆಗೆ ಎಂಟು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಇಸ್ರೋ

ಇನ್ನುಳಿದಂತೆ ಹೈ ರೆಸೊಲ್ಯೂಷನ್ ನಲ್ಲಿ ಚಿತ್ರಗಳನ್ನು ಸೆರೆ ಹಿಡಿಯಲಿರುವ ಅಮೆರಿಕದ ಪಾಥ್ ಫೈಂಡರ್-1 ಮೈಕ್ರೊ ಕಮರ್ಷಿಯಲ್ ಉಪಗ್ರಹ, ವಾಣಿಜ್ಯ ವಿಮಾನಗಳನ್ನು ಟ್ರ್ಯಾಕ್ ಮಾಡಬಲ್ಲ ಕೆನೆಡಾದ ಎನ್ ಎಲ್ ಎಸ್-19 ತಂತ್ರಜ್ಞಾನ ಪ್ರದರ್ಶಕ ನ್ಯಾನೋ ಉಪಗ್ರಹ ಮತ್ತು ಅಲ್ಗೇರಿಯಾದ ಭೂ ವೀಕ್ಷಣೆಯ ಉಪಗ್ರಹಗಳು (ALSAT-1B, 2B and 1N) ಸೇರಿವೆ.

Read more on ಇಸ್ರೊ isro
English summary
ISRO's PSLV C-35 Rocket Launched With 8 Satellites

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark