ಭಾರತದ ಮೊದಲ ರಾಕೆಟ್‌ ಸಾಗಿಸಲು ಸೈಕಲ್ ಬಳಸಿದ್ರು !!

Written By:

ಕಳೆದ ಮೂರು ವರ್ಷಗಳ ಹಿಂದೆ ಬಲಿಷ್ಠ ಭಾರತವು ತನ್ನ ಪ್ರಪ್ರಥಮ ರಾಕೆಟ್ ಉಡಾವಣೆಯ ಸುವರ್ಣ ಮಹೋತ್ಸವವನ್ನು ಆಚರಿಸಿದ್ದನ್ನು ನಮಗೆಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಆದ್ರೆ, ಮೊಟ್ಟ ಮೊದಲ ರಾಕೆಟ್ ಉಡಾವಣೆ ಹೇಗೆ ಕೈಗೊಳ್ಳಲಾಯಿತು ಎಂಬ ಮಾಹಿತಿ ಎಷ್ಟೋ ಜನಕ್ಕೆ ತಿಳಿಯದೆ ಇರುವ ಸಂಗತಿಯಾಗಿದೆ. ಇದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಭಾರತದ ಮೊದಲ ರಾಕೆಟ್‌ ಸಾಗಿಸಲು ಸೈಕಲ್ ಬಳಸಿದ್ರು !!

ಹೌದು, ಇತ್ತೀಚಿಗೆ ಭಾರತವು ಪ್ರತಿಯೊಂದು ವಿಭಾಗದಲ್ಲಿ ಅಚ್ಚರಿ ಮೂಡಿಸುವ ರೀತಿಯಲ್ಲಿ ಸಾಧನೆ ಮಾಡುತ್ತಿರುವುದು ಪ್ರತಿಯೊಬ್ಬ ಭಾರತೀಯನಿಗೂ ಖುಷಿಯ ವಿಚಾರವೇ ಆಗಿದೆ. ಅದರಲ್ಲಿಯೂ ತಂತ್ರಜ್ಞಾನ, ಬಾಹ್ಯಾಕಾಶ, ನೌಕೆ ಹಾಗು ಮತ್ತಿತರ ವಿಭಾಗಗಳಲ್ಲಿ ತನ್ನ ಅಧಿಪತ್ಯ ಸಾಧಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.

ಭಾರತದ ಮೊದಲ ರಾಕೆಟ್‌ ಸಾಗಿಸಲು ಸೈಕಲ್ ಬಳಸಿದ್ರು !!

ತಿರುವನಂತಪುರದ ಎಂಬ ಹೆಸರಿನ ಪುಟ್ಟ ಗ್ರಾಮವೊಂದರಲ್ಲಿ ಆರಂಭವಾದ ಭಾರತ ದೇಶದ ಬಾಹ್ಯಾಕಾಶ ಪಯಣ ಇಂದು ಮಂಗಳಯಾನ, ಚಂದ್ರಯಾನದಂತಹ ಐತಿಹಾಸಿಕ ಸಾಧನೆ ಮಾಡುವವರೆಗೆ ತಲುಪಿರುವುದು ಹೆಚ್ಚು ಸಂತೋಷವುಂಟು ಮಾಡುತ್ತದೆ.

Recommended Video - Watch Now!
Tata Tiago XTA AMT Launched In India | In Kannada - DriveSpark ಕನ್ನಡ
ಭಾರತದ ಮೊದಲ ರಾಕೆಟ್‌ ಸಾಗಿಸಲು ಸೈಕಲ್ ಬಳಸಿದ್ರು !!

ಆದರೆ ನಮ್ಮ ದೇಶದ ಪ್ರಪ್ರಥಮ ರಾಕೆಟ್ ಹೇಗಿತ್ತು..? ಅದನ್ನ ಹೇಗೆ ಸಾಗಿಸಲಾಗಿತ್ತು..? ಅದನ್ನ ಹೇಗೆ ಉಡಾಯಿಸಲಾಗಿತ್ತು..? ಎಂಬುದರ ಕುರಿತು ಚರ್ಚಿಸುತ್ತ ಹೋದಷ್ಟು ನಮಗೆ ಸ್ವಾರಸ್ಯಕರ ವಿಚಾರಗಳು ಕಣ್ಣು ಮುಂದೆ ಹಾದು ಹೋಗುತ್ತವೆ.

ಭಾರತದ ಮೊದಲ ರಾಕೆಟ್‌ ಸಾಗಿಸಲು ಸೈಕಲ್ ಬಳಸಿದ್ರು !!

1960ರಲ್ಲಿ ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ರಾಷ್ಟ್ರೀಯ ಸಮಿತಿಯೊಂದನ್ನು ರಚಿಸಲಾಗಿತ್ತು. ಅದರ ನೇತೃತ್ವವನ್ನು ವಿಕ್ರಂ ಸಾರಾಭಾಯ್ ಅವರೇ ವಹಿಸಿಕೊಂಡರು. ಆದ್ರೆ, ಉಡಾವಣೆ ಮಾಡಲು ಸೂಕ್ತ ಸ್ಥಳಕ್ಕಾಗಿ ಹುಡುಕಾಟ ನೆಡೆಸಲಾಯಿತು.

ಭಾರತದ ಮೊದಲ ರಾಕೆಟ್‌ ಸಾಗಿಸಲು ಸೈಕಲ್ ಬಳಸಿದ್ರು !!

1962ರ ದಶಕದಲ್ಲಿ ಕೇರಳದ ತಿರುವನಂತಪುರದ ಬಳಿ ಇರುವಂತಹ ಮೀನುಗಾರಿಕಾ ಗ್ರಾಮವಾದ 'ತುಂಬಾ'ವನ್ನು ರಾಕೆಟ್ ಉಡಾವಣೆಗೆ ಸೂಕ್ತ ಸ್ಥಳ ಎಂದು ವಿಕ್ರಂ ಸಾರಾಭಾಯಿ ಆಯ್ಕೆ ಮಾಡಿಕೊಂಡರು. ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ಇಂದು ಭಾರತದ ಖ್ಯಾತ ಉಡಾವಣಾ ಕೇಂದ್ರ ಎಂಬ ಖ್ಯಾತಿ ಪಡೆದಿರುವ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ಸ್ಥಳದಲ್ಲಿ ಕ್ಯಾಥೋಲಿಕ್ ಚರ್ಚ್ ನಿರ್ಮಾಣವಾಗಿತ್ತು.

ಭಾರತದ ಮೊದಲ ರಾಕೆಟ್‌ ಸಾಗಿಸಲು ಸೈಕಲ್ ಬಳಸಿದ್ರು !!

ಅಂದಿನ ಬಿಷಪ್ ರೆವರಂಡ್ ಫಾದರ್ ಡಾ.ಪೀಟರ್ ಬರ್ನಾರ್ಡ್ ಪೆರೇರಾ ಅವರ ಜತೆ ಚರ್ಚ್ ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಸಿ ಅಗತ್ಯ ಅನುಮತಿ ಪಡೆದ ಬಳಿಕ ಚರ್ಚ್ ಅನ್ನು ಸ್ಥಳಾಂತರಿಸಲಾಯಿತು.

ಭಾರತದ ಮೊದಲ ರಾಕೆಟ್‌ ಸಾಗಿಸಲು ಸೈಕಲ್ ಬಳಸಿದ್ರು !!

ಭೂಮಿಯ ಅಯಸ್ಕಾಂತೀಯ ಸಮಭಾಜಕ ವೃತ್ತ ಪ್ರದೇಶದಲ್ಲಿ ಇರುವಂತಹ 'ಸೆಂಟ್ ಮೇರಿ ಮ್ಯಾಗ್ದಲೀನ್ ಚರ್ಚ್' ಸೂಕ್ತ ಜಾಗ ಎಂಬ ತೀರ್ಮಾನಕ್ಕೆ ವಿಜ್ಞಾನಿಗಳ ಗುಂಪು ಬಂದ ನಂತರವಷ್ಟೇ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು ಎಂಬುದು ನಿಮಗೆ ತಿಳಿದಿರಲಿ ಓದುಗರೇ.

ಭಾರತದ ಮೊದಲ ರಾಕೆಟ್‌ ಸಾಗಿಸಲು ಸೈಕಲ್ ಬಳಸಿದ್ರು !!

ಅಗತ್ಯ ವ್ಯವಸ್ಥೆಗಳನ್ನು ಕೈಗೊಂಡ ನಂತರ, ಚರ್ಚ್ ಮುಂದಿನ ಉದ್ಯಾನವನವನ್ನು ಮೊಟ್ಟಮೊದಲ ಉಡಾವಣಾ ಸ್ಥಳವಾಗಿ ಮಾರ್ಪಾಡು ಮಾಡಲಾಯಿತು. ಈ ವಿಜ್ಞಾನಿಗಳ ಗುಂಪಿನಲ್ಲಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರೂ ಇದ್ದರು.

ಭಾರತದ ಮೊದಲ ರಾಕೆಟ್‌ ಸಾಗಿಸಲು ಸೈಕಲ್ ಬಳಸಿದ್ರು !!

ಮೊಟ್ಟಮೊದಲ ರಾಕೆಟ್ ವಿಜ್ಞಾನದ ಮೊದಲ ಹೆಜ್ಜೆ ಸೈಕಲ್‍ನಲ್ಲಿ ಆರಂಭವಾಯಿತು ಎಂದರೆ ನೀವು ನಂಬಲೇ ಬೇಕು. ಹೌದು, ಭಾರತದ ಮೊಟ್ಟ ಮೊದಲ ರಾಕೆಟ್ ಹೊತ್ತೊಯ್ಯಲು ಸೈಕಲ್ ರಿಕ್ಷ ಬಳಕೆ ಮಾಡಲಾಯಿತು.

ಭಾರತದ ಮೊದಲ ರಾಕೆಟ್‌ ಸಾಗಿಸಲು ಸೈಕಲ್ ಬಳಸಿದ್ರು !!

1963ರ ನವೆಂಬರ್ 21ರಂದು ಅಮೆರಿಕದಲ್ಲಿ ಅಭಿವೃದ್ಧಿಪಡಿಸಿದ ರಾಕೆಟ್ ಅನ್ನು ಉಡಾಯಿಸಲಾಗಿತ್ತು. ಅಂದಿನಿಂದ ಪ್ರಾರಂಭವಾದ ಭಾರತದ ವೈಜ್ಞಾನಿಕ ಸಂಶೋಧನೆಯ ದಾಹ ಇಂದಿಗೂ ನಿಂತಿಲ್ಲ.

ಭಾರತದ ಮೊದಲ ರಾಕೆಟ್‌ ಸಾಗಿಸಲು ಸೈಕಲ್ ಬಳಸಿದ್ರು !!

ಅಂದು ರಾಕೆಟ್ ಉಡಾಯಿಸಲಾಗಿದ್ದ ಪ್ರದೇಶವನ್ನು ಥುಂಬಾ ಈಕ್ವೆಟೋರಿಯಲ್ ರಾಕೆಟ್ ಲಾಂಚ್ ಸ್ಟೇಷನ್(ಟಿಇಆರ್‌ಎಲ್‌ಎಸ್) ಎಂದು ಕರೆಯಲಾಗಿತ್ತು. ಬಳಿಕ ಅದರ ಹೆಸರು ವಿಕ್ರಂ ಸಾರಾಭಾಯ್ ಸ್ಪೇಸ್ ಸೆಂಟರ್(ವಿಎಸ್‌ಎಸ್‌ಸಿ) ಎಂದು ಬದಲಾಯಿತು.

English summary
Its 21th November 1963. A beautiful day with clear skies. History is about to be created at the small coastal village of Thumba in Thiruvananthapuram. A bicycle carrying a cone-shaped device trundles onto the sandy beach.
Story first published: Monday, August 21, 2017, 11:34 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more