ಇಸ್ರೋದಿಂದ ಸ್ಕ್ರಾಮ್ ಜೆಟ್ ರಾಕೆಟ್ ಎಂಜಿನ್ ಯಶಸ್ವಿ ಉಡಾವಣೆ

Written By:

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ), ಆಂಧ್ರ ಪ್ರದೇಶದ ಶ್ರೀಹರಿಕೋಟಾ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಎರಡು ಸ್ಕ್ರಾಮ್ ಜೆಟ್ ಎಂಜಿನ್ ನ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಿದೆ. ಸ್ವದೇಶಿ ನಿರ್ಮಿತ ಸ್ಕ್ರಾಮ್ ಜೆಟ್ ಎಂಜಿನ್‌ನ ವಿಶೇಷತೆಯೆಂದರೆ ಇಂಧನವನ್ನು ಉರಿಸಲು ವಾತಾವರಣದ ಆಮ್ಲಜನಕವನ್ನು ಬಳಕೆ ಮಾಡುತ್ತದೆ.

ಈ ಮೂಲಕ ಸ್ಕ್ರಾಮ್ ಜೆಟ್ ಎಂಜಿನ್ ಬಳಕೆ ಮಾಡಿದ ವಿಶ್ವದ ನಾಲ್ಕನೇ ದೇಶವೆಂಬ ಹಿರಿಮೆಗೆ ಇಸ್ರೋ ಪಾತ್ರವಾಗಿದೆ. ಇದು ವಾತಾವರಣದಲ್ಲಿರುವ ಆಮ್ಲಜನಕವನ್ನು ಹೀರಿಕೊಳ್ಳುವ ಮೂಲಕ ಇಂಧನದ ಜೊತೆಗೆ ಹೊತ್ತೊಯ್ಯುವ ಆಕ್ಸಿಡೈಸರ್ ಕಡಿಮೆ ಮಾಡುತ್ತದೆ. ಅಲ್ಲದೆ ಹಾರಾಟದ ವೇಳೆ ವಾಹಕ ತೂಕವನ್ನು ಕಡಿಮೆ ಮಾಡಲು ನೆರವಾಗುತ್ತದೆ.

To Follow DriveSpark On Facebook, Click The Like Button
ಇಸ್ರೋದಿಂದ ಸ್ಕ್ರಾಮ್ ಜೆಟ್ ರಾಕೆಟ್ ಎಂಜಿನ್ ಯಶಸ್ವಿ ಉಡಾವಣೆ

ಎರಡು ಸ್ಕ್ರಾಮ್ ಜೆಟ್ ಎಂಜಿನ್ ಗಳನ್ನು ಆಳವಡಿಸಲಾಗಿದ್ದ 3277 ಕೆ.ಜಿ. ತೂಕದ ರಾಕೆಟ್ ಬೂಸ್ಟರ್ ಅಡ್ವಾನ್ಸ್ಡ್ ಟೆಕ್ನಾಲಜಿ ವೆಹಿಕಲ್ (ಎಟಿವಿ) ಪರೀಕ್ಷೆ ನಡೆಸಲಾಗಿದೆ.

ಇಸ್ರೋದಿಂದ ಸ್ಕ್ರಾಮ್ ಜೆಟ್ ರಾಕೆಟ್ ಎಂಜಿನ್ ಯಶಸ್ವಿ ಉಡಾವಣೆ

ಗಾಳಿ ಉಸಿರಾಟ ತಳ್ಳುವಿಕೆ ಸಿದ್ಧಾಂತದ ಮುಖಾಂತರ ಜಲಜನಕವನ್ನು ಇಂಧನವನ್ನಾಗಿ ಹಾಗೂ ಉತ್ಕರ್ಷಣೆಗಾಗಿ ವಾತಾವರಣದಲ್ಲಿರುವ ಆಮ್ಲಜನಕವನ್ನು ಬಳಕೆ ಮಾಡಲಿದೆ.

ಇಸ್ರೋದಿಂದ ಸ್ಕ್ರಾಮ್ ಜೆಟ್ ರಾಕೆಟ್ ಎಂಜಿನ್ ಯಶಸ್ವಿ ಉಡಾವಣೆ

ಎರಡು ಸ್ಕ್ರಾಮ್ ಜೆಟ್ ಎಂಜಿನ್ ಹೊತ್ತೊಯ್ದಿರುವ ಎಟಿವಿ ವಾಹನವು 300 ಸೆಕೆಂಡುಗಳ ಹಾರಾಟದ ಬಳಿಕ ಶ್ರೀಹರಿಕೋಟಾದಿಂದ ಸರಿ ಸುಮಾರು 320 ಕೀ.ಮೀ. ದೂರದಲ್ಲಿರುವ ಬಂಗಾಳ ಕೊಲ್ಲಿಯಲ್ಲಿ ಮುಳುಗಡೆಗೊಂಡಿತ್ತು.

ಇಸ್ರೋದಿಂದ ಸ್ಕ್ರಾಮ್ ಜೆಟ್ ರಾಕೆಟ್ ಎಂಜಿನ್ ಯಶಸ್ವಿ ಉಡಾವಣೆ

ಸೂಪರ್ ಸಾನಿಕ್ ಕಂಬಸ್ಟಿಂಗ್ ರಾಮ್ ಜೆಟ್ ಇಂಧನವನ್ನು ಸಂಕ್ಷಿಪ್ತ ರೂಪದಲ್ಲಿ ಸ್ಕ್ರಾಮ್ ಜೆಟ್ ಎನ್ನಲಾಗುತ್ತಿದ್ದು, ಇಸ್ರೋ ಮರು ಬಳಕೆ ವಾಹನ ತಂತ್ರಜ್ಞಾನದಲ್ಲೂ ನಿರ್ಣಾಯಕ ಪಾತ್ರ ವಹಿಸಲಿದೆ.

ಇಸ್ರೋದಿಂದ ಸ್ಕ್ರಾಮ್ ಜೆಟ್ ರಾಕೆಟ್ ಎಂಜಿನ್ ಯಶಸ್ವಿ ಉಡಾವಣೆ

ರಾಕೆಟ್ ಉಡಾವಣಾ ವೆಚ್ಚವನ್ನು ಕಡಿಮೆ ಮಾಡುವುದು ಸ್ಕ್ರಾಮ್ ಜೆಟ್ ಎಂಜಿನ್ ನ ಪ್ರಮುಖ ವೈಶಿಷ್ಟ್ಯವಾಗಿದೆ. ಅಲ್ಲದೆ ಎಲ್ಲ ತಾಂತ್ರಿಕ ಅಡೆ ತಡೆಗಳನ್ನು ಸಮರ್ಥವಾಗಿ ಎದುರಿಸಿದೆ.

ಇಸ್ರೋದಿಂದ ಸ್ಕ್ರಾಮ್ ಜೆಟ್ ರಾಕೆಟ್ ಎಂಜಿನ್ ಯಶಸ್ವಿ ಉಡಾವಣೆ

ಸ್ಕ್ರಾಮ್ ಜೆಟ್ ಎಂಜಿನನ್ನು ಭವಿಷ್ಯದ ಉಡಾವಣಾ ತಂತ್ರಜ್ಞಾನವೆಂದು ಬಿಂಬಿಸಲಾಗುತ್ತದೆ. ಇದನ್ನು ರಾಕೆಟ್ ಉಡಾವಣೆಯ ವಾತಾವರಣದ ಹಂತದಲ್ಲಿ ಬಳಕೆ ಮಾಡಲಾಗುತ್ತದೆ.

ಇಸ್ರೋದಿಂದ ಸ್ಕ್ರಾಮ್ ಜೆಟ್ ರಾಕೆಟ್ ಎಂಜಿನ್ ಯಶಸ್ವಿ ಉಡಾವಣೆ

ಇಸ್ರೋ ಸ್ಕ್ರಾಮ್ ಜೆಟ್ ಎಂಜಿನ್ ಅಲ್ಪ ದೂರದ ವರೆಗೆ ಮಾತ್ರ ಪರೀಕ್ಷೆ ನಡೆಸಿದ್ದರೂ ಶಬ್ದ ವೇಗಕ್ಕಿಂತಲೂ ಆರು ಪಟ್ಟು (ಮ್ಯಾಕ್ 6) ಹೆಚ್ಚು ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಇಸ್ರೋದಿಂದ ಸ್ಕ್ರಾಮ್ ಜೆಟ್ ರಾಕೆಟ್ ಎಂಜಿನ್ ಯಶಸ್ವಿ ಉಡಾವಣೆ

ಇಸ್ರೋ ಸದ್ಯಕ್ಕೆ ಉಪಗ್ರಹಗಳ ಉಡಾವಣೆಗೆ ಪಿಎಸ್ ಎಲ್ ವಿ ಬಳಕೆ ಮಾಡುತ್ತಿದೆ. ಭವಿಷ್ಯದ ಮರುಬಳಕೆ ಉಡ್ಡಯನ ವಾಹನ 'ಅವತಾರ್' ಉಪಗ್ರಹವನ್ನು ಆಕಾಶಕ್ಕೆ ಸೇರಿಸಿ ಮರಳಿ ಲ್ಯಾಂಡ್ ಆಗಲಿದೆ.

English summary
ISRO successfully testfires Scramjet Rocket engine
Story first published: Monday, August 29, 2016, 12:50 [IST]
Please Wait while comments are loading...

Latest Photos