ಚೀನಾವನ್ನು ಹಿಂದಿಕ್ಕಿದ ಭಾರತ, ಅಮೆರಿಕದ ಹತ್ತಿರಕ್ಕೆ ಇನ್ನೊಂದು ಹೆಜ್ಜೆ.. ಮೋದಿ ಸರ್ಕಾರದ ದೊಡ್ಡ ಸಾಧನೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ರಸ್ತೆ ನಿರ್ಮಾಣದಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ವಿಶ್ವದಲ್ಲಿಯೇ ಭಾರತವು ರಸ್ತೆ ಜಾಲದ ವಿಸ್ತರಣೆಯಲ್ಲಿ ಚೀನಾವನ್ನು ಹಿಂದಿಕ್ಕಿ, ಎರಡನೇ ಸ್ಥಾನಕ್ಕೆ ಏರಿದೆ. ಮೊದಲ ಸ್ಥಾನದಲ್ಲಿ ಅಮೆರಿಕ ಮುಂದುವರಿದಿದೆ. ಸದ್ಯ, ದೇಶವು 1.45 ಲಕ್ಷ ಕಿಲೋಮೀಟರ್ ಉದ್ದದ ರೋಡ್‌ನ್ನು ಒಳಗೊಂಡಿದೆ.

ಈ ಬಗ್ಗೆ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, ಕಳೆದ 9 ವರ್ಷಗಳಲ್ಲಿ ತಮ್ಮ ಸರ್ಕಾರ ಮಾಡಿರುವ ಸಾಧನೆಯನ್ನು ವಿವರಿಸಿದ್ದಾರೆ. ಈ ಅವಧಿಯಲ್ಲಿ ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರ (NHAI) ದೇಶಾದ್ಯಂತ ಎಕ್ಸ್‌ಪ್ರೆಸ್‌ವೇ ಸೇರಿದಂತೆ ವಿವಿಧ ಹೆದ್ದಾರಿಗಳನ್ನು ನಿರ್ಮಾಣ ಮಾಡಿದೆ ಎಂದು ಹೇಳಿದ್ದಾರೆ.

ಚೀನಾವನ್ನು ಹಿಂದಿಕ್ಕಿದ ಭಾರತ, ಅಮೆರಿಕದ ಹತ್ತಿರಕ್ಕೆ ಇನ್ನೊಂದು ಹೆಜ್ಜೆ.. ಮೋದಿ ಸರ್ಕಾರದ ದೊಡ್ಡ ಸಾಧನೆ

ದೇಶದಲ್ಲಿ 9 ವರ್ಷಗಳ ಹಿಂದೆ, 91,287 ಕಿಲೋಮೀಟರ್ ರಸ್ತೆ ಇತ್ತು. ಕೇಂದ್ರ ಸರ್ಕಾರ (ಗಡ್ಕರಿ ಅವಧಿ) ದೇಶಾದ್ಯಂತ ಹೆದ್ದಾರಿ ನಿರ್ಮಿಸಲು ಉತ್ಸುಕತೆ ತೋರಿಸಿದ ಹಿನ್ನೆಲೆ, 2019ರ ಏಪ್ರಿಲ್ ತಿಂಗಳಿಂದ ಈವರೆಗೆ 30,000 ಕಿಲೋಮೀಟರ್ ಹೆದ್ದಾರಿಯನ್ನು ನಿರ್ಮಾಣ ಮಾಡಲಾಗಿದೆ. ಅದರಲ್ಲಿ ಬೆಂಗಳೂರು - ಮೈಸೂರು, ಮೀರತ್‌ - ದೆಹಲಿ, ಘಾಜಿಪುರ - ಲಕ್ನೋ (ಉತ್ತರ ಪ್ರದೇಶ) ಎಕ್ಸ್‌ಪ್ರೆಸ್‌ವೇಗಳು ಪ್ರಮುಖವಾಗಿವೆ.

ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (NHAI) ದೆಹಲಿ - ಮುಂಬೈ ಎಕ್ಸ್‌ಪ್ರೆಸ್‌ವೇ ನಿರ್ಮಾಣವನ್ನು ಬಹುತೇಕ ಪೂರ್ಣಗೊಳಿಸಿದೆ. ಇದು ದೇಶದ ಅತ್ಯಂತ ಉದ್ದದ ಹೆದ್ದಾರಿಯಾಗಿದೆ. ಈ ರಸ್ತೆ ನಿರ್ಮಾಣಕ್ಕೆ ಬರೋಬ್ಬರಿ ರೂ.12,150 ಕೋಟಿಯನ್ನು ವ್ಯಯಿಸಲಾಗುತ್ತಿದೆ. ದೆಹಲಿ - ಮುಂಬೈ ಎಕ್ಸ್‌ಪ್ರೆಸ್‌ವೇ ನಿರ್ಮಾಣದಿಂದ ಆಗುತ್ತಿರುವ ದೊಡ್ಡ ಅನುಕೂಲವೆಂದರೆ, ಪ್ರಯಾಣದ ಅವಧಿ 12 ಗಂಟೆಗಳವರೆಗೆ ಕಡಿಮೆಯಾಗಲಿದೆ.

ಚೀನಾವನ್ನು ಹಿಂದಿಕ್ಕಿದ ಭಾರತ, ಅಮೆರಿಕದ ಹತ್ತಿರಕ್ಕೆ ಇನ್ನೊಂದು ಹೆಜ್ಜೆ.. ಮೋದಿ ಸರ್ಕಾರದ ದೊಡ್ಡ ಸಾಧನೆ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರಸ್ತೆ ನಿರ್ಮಾಣದಲ್ಲಿ ಏಳು ವಿಶ್ವ ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ. ಈ ವರ್ಷದ ಮೇ ತಿಂಗಳಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್ - ಅಲಿಗಢ ಎಕ್ಸ್‌ಪ್ರೆಸ್‌ವೇ ನಿರ್ಮಾಣದ ವೇಳೆ, 100 ಕಿಲೋಮೀಟರ್ ಉದ್ದದ ರಸ್ತೆಯನ್ನು ಕೇವಲ 100 ಗಂಟೆಯಲ್ಲಿ ಮಾಡಿ, ಹೆದ್ದಾರಿಗಳ ಪ್ರಾಧಿಕಾರ (NHAI) ಬಹುದೊಡ್ಡ ಸಾಧನೆಯನ್ನು ಮಾಡಿದೆ.

ಇದಿಷ್ಟೇ ಅಲ್ಲದೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಅನ್ನು ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದೆ. ರಾಷ್ಟ್ರಿಯ ಹೆದ್ದಾರಿ 53 (NH-53) ರಲ್ಲಿ ಅಮರಾವತಿ ಮತ್ತು ಅಕೋಲಾ ನಡುವೆ ಕೇವಲ 105 ಗಂಟೆ 33 ನಿಮಿಷಗಳಲ್ಲಿ 75 ಕಿಲೋಮೀಟರ್ ಉದ್ದದ ರಸ್ತೆಗೆ ಕಾಂಕ್ರೀಟ್ ಹಾಕಲಾಗಿದೆ. ಇಂತಹ ಹಲವು ದಾಖಲೆಗಳು ಹೆದ್ದಾರಿ ಪ್ರಾಧಿಕಾರದ ಬಳಿಯಿದೆ.

ಚೀನಾವನ್ನು ಹಿಂದಿಕ್ಕಿದ ಭಾರತ, ಅಮೆರಿಕದ ಹತ್ತಿರಕ್ಕೆ ಇನ್ನೊಂದು ಹೆಜ್ಜೆ.. ಮೋದಿ ಸರ್ಕಾರದ ದೊಡ್ಡ ಸಾಧನೆ

ಕಳೆದ 9 ವರ್ಷಗಳಲ್ಲಿ ಟೋಲ್ ಮೂಲಕ ಸಂಗ್ರಹವಾಗುವಾಗುವ ಮೊತ್ತವು ಹಲವು ಪಟ್ಟು ಏರಿಕೆಯಾಗಿದೆ. ರೂ.4,770 ಕೋಟಿಯಿಂದ ರೂ. 41,342 ಕೋಟಿಗೆ ಹೆಚ್ಚಳವಾಗಿದೆ. ಅದನ್ನು ರೂ.1.30 ಕೋಟಿಗೆ ಏರಿಸುವ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್‌ ವ್ಯವಸ್ಥೆಯಿಂದ ವಾಹನಗಳು ಸರತಿ ಸಾಲಿನಲ್ಲಿ ನಿಲುವ ಸಮಯ ಕಡಿಮೆಯಾಗಿದ್ದು, ಸದ್ಯ, 47 ಸೆಕೆಂಡುಗಳಿಂದ 30 ಸೆಕೆಂಡುಗಳಿಗೆ ಇಳಿಸಲು ಯೋಜನೆ ರೂಪಿಸಲಾಗಿದೆ.

ಇನ್ನು, ಪ್ರತಿಯೊಂದು ದೇಶದ ಅಭಿವೃದ್ದಿಗೆ ಮೂಲ ಸೌಕರ್ಯ ಪ್ರಮುಖ ಪಾತ್ರವಹಿಸುತ್ತದೆ. ಅದರಲ್ಲೂ ಹೆದ್ದಾರಿಗಳು ಬಹುಮುಖ್ಯ. ಕೈಗಾರಿಕೆ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರದ ಅಭಿವೃದ್ಧಿಗೆ ನಿರ್ಣಯವಾಗಿದ್ದು, ಈ ನಿಟ್ಟಿನಲ್ಲಿ 91,287 ಕಿಲೋಮೀಟರ್ ಇದ್ದ ಹೆದ್ದಾರಿಯನ್ನು 1.45 ಲಕ್ಷ ಕಿಲೋಮೀಟರ್ ಗಳಿಗೆ ಹೆಚ್ಚಳ ಮಾಡಲಾಗುರುವುದು ಉತ್ತಮ ಬೆಳವಣಿಗೆಯಾಗಿದೆ. ಮುಂಬರುವ ದಿನಗಳಲ್ಲಿ ಭಾರತ ರಸ್ತೆ ಜಾಲದಲ್ಲಿ ಅಮೆರಿಕವನ್ನು ಹಿಂದಿಕ್ಕಿದರು ಆಶ್ಚರ್ಯವಿಲ್ಲ.

Article Published On: Thursday, June 29, 2023, 9:30 [IST]
English summary
India beat china road network full details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+