ದೇಶದ ಮೊದಲ ಅಂಡರ್ ವಾಟರ್ ಮೆಟ್ರೋ ಲೈನ್ ಉದ್ಘಾಟಿಸಿದ ಪ್ರಧಾನಿ ಮೋದಿ: ವಿಶೇಷತೆಗಳೇನು?

ಭಾರತ ಮೂಲಸೌಕರ್ಯ ವಿಚಾರದಲ್ಲಿ ದೊಡ್ಡಮಟ್ಟದಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, ಎಕ್ಸ್‌ಪ್ರೆಸ್‌ವೇ ಹಾಗೂ ಬೃಹತ್ ಸೇತುವೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಕೋಲ್ಕತ್ತಾದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಮೊದಲ ಜಲ ಸುರಂಗ ಮೆಟ್ರೋ (Underwater Metro) ಮಾರ್ಗವನ್ನು ಉದ್ಘಾಟಿಸಿದ್ದಾರೆ.

ಹೂಗ್ಲಿ ನದಿಯಡಿ ಈ ಜಲ ಸುರಂಗ ಮಾರ್ಗ ನಿರ್ಮಾಣಗೊಂಡಿದ್ದು, ಹೌರಾದಿಂದ ಎಸ್‌ಪ್ಲೇನೇಡ್ ನಿಲ್ದಾಣದವರೆಗೆ ಮೆಟ್ರೋ ರೈಲು ಸುರಂಗದೊಳಗೆ ಸಂಚಾರ ಮಾಡುತ್ತದೆ. ಒಟ್ಟು 4.8 ಕಿಲೋಮೀಟರ್ ದೂರವನ್ನು ಕ್ರಮಿಸಲಿದ್ದು, ಈ ಯೋಜನೆಗೆ ರೂ.4965 ಖರ್ಚು ಮಾಡಲಾಗಿದೆ ಎಂಬ ಮಾಹಿತಿ ದೊರೆತಿದೆ. ಇಲ್ಲಿ ಮೆಟ್ರೋ ರೈಲು ಗಂಟೆಗೆ 80 ಕಿಲೋಮೀಟರ್ ಗರಿಷ್ಠ ವೇಗದಲ್ಲಿ ಓಡಾಟ ನಡೆಸುತ್ತದೆ.

India s First Underwater Metro Inaugurated By Pm Modi What pecialitys

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಹಲವಾರು ಶಾಲಾ ವಿದ್ಯಾರ್ಥಿಗಳೊಂದಿಗೆ ಈ ಜಲ ಸುರಂಗ ಮಾರ್ಗದಲ್ಲಿ ಚಲಿಸುವ ಮೆಟ್ರೋ ರೈಲಿನಲ್ಲಿ ಪ್ರಯಾಣಿದರು. ಜೊತೆಗೆ ಸಂವಾದವನ್ನು ನಡೆಸಿದರು. ಇನ್ನೊಂದು ಮೆಟ್ರೋ ರೈಲು ಪ್ರಧಾನಿ ಮೋದಿ ಅವರು ತೆರಳುತ್ತಿದ್ದ ರೈಲಿನ ಪಕ್ಕದಲ್ಲಿ ಹಾದು ಹೋದಾಗ ಅದರ ಪ್ರಯಾಣಿಕರತ್ತ ಕೂಡ ಕೈಬೀಸಿದರು.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ ಅವರು, 'ಕೋಲ್ಕತ್ತಾದ ಜನರಿಗೆ ವಿಶೇಷವಾದ ದಿನವಾಗಿದೆ. ನಗರದ ಮೆಟ್ರೋ ಸಂಪರ್ಕ ಜಾಲ ವಿಸ್ತರಣೆಗೊಂಡಿದ್ದು, ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಹೌರಾ-ಎಸ್‌ಪ್ಲೇನೇಡ್ ಮೆಟ್ರೋ ವಿಭಾಗಗಳು, ದೇಶದಲ್ಲಿಯೇ ಮೊದಲ ಜಲ ಸುರಂಗ ಮಾರ್ಗವನ್ನು ಹೊಂದಿರುವುದು ಹೆಮ್ಮೆಯ ವಿಚಾರವಾಗಿದೆ' ಎಂದಿದ್ದಾರೆ.

India s First Underwater Metro Inaugurated By Pm Modi What pecialitys

2023ರ ಏಪ್ರಿಲ್ ತಿಂಗಳಲ್ಲಿ ಜಲ ಸುರಂಗದಲ್ಲಿ ಮೆಟ್ರೋ ರೈಲನ್ನು ಪ್ರಾಯೋಗಿಕವಾಗಿ ಓಡಿಸುವ ಮೂಲಕ ಕೋಲ್ಕತ್ತಾ ಮೆಟ್ರೋ ಹೊಸದೊಂದು ಮೈಲಿಗಲ್ಲನ್ನು ನಿರ್ಮಿಸಿತ್ತು. ಈಗ ಜಲ ಸುರಂಗ ಮಾರ್ಗ ಅಧಿಕೃತವಾಗಿ ಲೋಕಾರ್ಪಣೆಗೊಂಡಿದೆ. ಪೀಕ್​ ಅವರ್​ನಲ್ಲಿ ಸುಮಾರು 30,000 ಮಂದಿ ಪ್ರಯಾಣಿಸಬಹುದು ಎಂದು ಅಂದಾಜಿಸಲಾಗಿದೆ. ನೀರಿನೊಳಗೆ 45 ಸೆಕೆಂಡು ಪ್ರಯಾಣದ ಸಮಯವಿರಲಿದೆ.

ಜನವರಿ 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅತಿ ಉದ್ದದ ಸಮುದ್ರ ಸೇತುವೆ 'ಅಟಲ್ ಸೇತು'ವನ್ನು ಲೋಕಾರ್ಪಣೆಗೊಳಿಸಿದ್ದರು. ಈ ಸೇತುವೆ ಮುಂಬೈನ ಸೆವ್ರಿಯಿಂದ ರಾಯಗಡ ಜಿಲ್ಲೆಯ ನ್ಹವಾ ಶೇವಾ ಪ್ರದೇಶಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಇದರಿಂದ 2 ಗಂಟೆಯಿದ್ದ ಪ್ರಯಾಣದ ಅವಧಿಯು 30 ನಿಮಿಷಗಳಿಗೆ ಇಳಿಕೆಯಾಗಿದ್ದು, ಮಹಾರಾಷ್ಟ್ರದ 2 ಪ್ರಮುಖ ನಗರಗಳನ್ನು ಬೆಸೆಯುವ ಮುಂಬೈ - ಪುಣೆ ಎಕ್ಸ್‌ಪ್ರೆಸ್‌ವೇಗೂ ಕೊಂಡಿಯಾಗಿದೆ.

ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (Mumbai Trans Harbour Link) ಎಂದು ಕರೆಸಿಕೊಳ್ಳುವ ಈ 'ಅಟಲ್ ಸೇತು' 21.8 ಕಿಲೋಮೀಟರ್ ಉದ್ದವಿದೆ. 6 ಪಥದ ರಸ್ತೆಯನ್ನು ಹೊಂದಿದ್ದು, ಸಮುದ್ರದ ಮೇಲೆ 16.50 ಕಿ.ಮೀ ನೆಲದ ಮೇಲೆ 5.50 ಕಿ.ಮೀ ರಸ್ತೆಯಿದೆ. ಅಟಲ್ ಸೇತು ಪ್ರತಿದಿನ ಸುಮಾರು 70,000 ವಾಹನಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಸೇತುವೆ ನಿರ್ಮಾಣಕ್ಕೆ 177,903 ಮೆಟ್ರಿಕ್ ಟನ್ ಉಕ್ಕನ್ನು ಬಳಕೆ ಮಾಡಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, March 6, 2024, 15:03 [IST]
English summary
India first underwater metro inaugurated by pm narendra modi what specialitys
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+