ನೇಪಾಳಕ್ಕೆ 15 ಎಲೆಕ್ಟ್ರಿಕ್ ಕಾರುಗಳನ್ನು ಗಿಫ್ಟ್ ಕೊಟ್ಟ ಭಾರತ: ಈ ಕಾರಿಗೆ ಫುಲ್ ಡಿಮ್ಯಾಂಡ್!

'ಸಾಗರಮಾತಾ ಸಂಬಾದ್' (ಪರ್ವತ ಸಂವಾದ) ಸಂಘಟನೆಗೆ ಅನುಕೂಲವಾಗುವಂತೆ ಭಾರತವು ಕಳೆದ ಭಾನುವಾರ ನೇಪಾಳಕ್ಕೆ 15 ಎಲೆಕ್ಟ್ರಿಕ್ ವಾಹನಗಳನ್ನು ಉಡುಗೊರೆಯಾಗಿ ನೀಡಿದೆ. ಹೌದು, ನೇಪಾಳ ಸರ್ಕಾರವು ಮೇ 16 ರಿಂದ 18 ರವರೆಗೆ ಕಠ್ಮಂಡುವಿನಲ್ಲಿ ಸಾಗರಮಾತಾ ಸಂಬಾದ್ ಅನ್ನು 'ಹವಾಮಾನ ಬದಲಾವಣೆ, ಪರ್ವತಗಳು ಮತ್ತು ಮಾನವೀಯತೆಯ ಭವಿಷ್ಯ' ಎಂಬ ವಿಷಯದ ಮೇಲೆ ಆಯೋಜಿಸುತ್ತಿದೆ. ಪರ್ವತ ಪ್ರದೇಶಗಳ ಮೇಲೆ ಹವಾಮಾನ ಬದಲಾವಣೆಯ ಪರಿಣಾಮವನ್ನು ಎತ್ತಿ ತೋರಿಸುವ ಗುರಿಯನ್ನು ಹೊಂದಿರುವ ಈ ಕಾರ್ಯಕ್ರಮಕ್ಕೆ ಹಾಜರಾಗುವ ಅತಿಥಿಗಳು ಮತ್ತು ಅಧಿಕಾರಿಗಳ ಸಂಚಾರಕ್ಕೆ ಅನುಕೂಲವಾಗುವಂತೆ ಈ ವಾಹನಗಳನ್ನು ಬಳಸಲಾಗುವುದು.

ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ನಡೆದ ಸಮಾರಂಭದಲ್ಲಿ ನೇಪಾಳದ ಭಾರತೀಯ ರಾಯಭಾರಿ ನವೀನ್ ಶ್ರೀವಾಸ್ತವ ಅವರು ನೇಪಾಳದ ವಿದೇಶಾಂಗ ಸಚಿವ ಅರ್ಜು ರಾಣಾ ದೇವುಬಾ ಅವರಿಗೆ 15 ಎಲೆಕ್ಟ್ರಿಕ್ ವಾಹನಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಕಾರ್ಯಕ್ರಮಕ್ಕೆ ಭಾರತದ ಕೊಡುಗೆಗೆ ವಿದೇಶಾಂಗ ಸಚಿವ ದೇವುಬಾ ಕೃತಜ್ಞತೆ ಸಲ್ಲಿಸಿದರು.

india-gifts-15-tata-curvv-electric-cars-to-nepal

ಅಂತರರಾಷ್ಟ್ರೀಯ ಶೃಂಗಸಭೆಯಲ್ಲಿ ಹವಾಮಾನ ತಜ್ಞರು, ಪರಿಸರವಾದಿಗಳು, ಸರ್ಕಾರಿ ಅಧಿಕಾರಿಗಳು, ರಾಜತಾಂತ್ರಿಕರು, ಮಾಧ್ಯಮ ಸಿಬ್ಬಂದಿ, ನೇಪಾಳ ಮತ್ತು ವಿದೇಶಗಳ ಮಧ್ಯಸ್ಥಗಾರರು ಸೇರಿದಂತೆ ಸುಮಾರು 300 ಜನ ಭಾಗವಹಿಸುವ ನಿರೀಕ್ಷೆಯಿದೆ. ಅಷ್ಟಕ್ಕೂ ನೇಪಾಳಕ್ಕೆ ನೀಡಿದ ಈ ಎಲೆಕ್ಟ್ರಿಕ್ ಕಾರುಗಳು ಯಾವುವು ಹಾಗೂ ಅವುಗಳ ವಿಶೇಷತೆಗಳೇನು?

ಯಾವುದೀ ಕಾರು, ವಿಶೇಷತೆಗಳೇನು? ಜನಪ್ರಿಯ ಟಾಟಾ ಕರ್ವ್ ಎಲೆಕ್ಟ್ರಿಕ್ ಕಾರುಗಳನ್ನು ಭಾರತವು ಭಾನುವಾರ ನೇಪಾಳಕ್ಕೆ ಉಡುಗೊರೆಯಾಗಿ ನೀಡಿದೆ. ದೇಶೀಯವಾಗಿ ಖರೀದಿಗೆ ದೊರೆಯುವ ಟಾಟಾ ಕರ್ವ್ ಇವಿ ರೂ. 17.49 ಲಕ್ಷದಿಂದ ರೂ. 21.99 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುವ ಈ ಕಾರು ನಿರ್ಮಾಣ ಗುಣಮಟ್ಟದಲ್ಲಿ 5 - ಸ್ಟಾರ್ ಸುರಕ್ಷತಾ ರೇಂಟಿಂಗ್ ಪಡೆದುಕೊಂಡಿದೆ.

Take a Poll

ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಲೆವೆಲ್ - 2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್), ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಹಾಗೂ 360-ಡಿಗ್ರಿ ಕ್ಯಾಮೆರಾದಂತಹಾ ಅತ್ಯಾಧುನಿಕ ಸುರಕ್ಷತಾ ಫೀಚರ್‌ಗಳನ್ನು ಒಳಗೊಂಡಿದೆ.

ಈ ಟಾಟಾ ಕರ್ವ್ ಇವಿ (Tata Curvv EV) ಕಾರು 45 ಕೆಡಬ್ಲ್ಯೂಹೆಚ್ ಮತ್ತು 55 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಲಭ್ಯವಿದೆ. ಈ ಬ್ಯಾಟರಿಗಳು ಫುಲ್ ಚಾರ್ಜ್‌ನಲ್ಲಿ ಕ್ರಮವಾಗಿ 502 ರಿಂದ 585 ಕಿಲೋಮಿಟರ್ ರೇಂಜ್ ನೀಡುತ್ತವೆ. ಈ ಕಾರು ಭಾರತದ ಮೊದಲ ಎಸ್‌ಯುವಿ ಕೂಪೆ ಡಿಸೈನ್ ಹೊಂದಿರುವ ಕಾರಾಗಿಯೂ ಜನಪ್ರಿಯತೆ ಪಡೆದಿದೆ.

india-gifts-15-tata-curvv-electric-cars-to-nepal

12.3 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25 - ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಪನೊರೊಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್, ಏರ್ ಪ್ಯೂರಿಫೈಯರ್‌, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, 9 - ಸ್ಪೀಕರ್ ಜೆಬಿಎಲ್-ಸೌಂಡ್ ಸಿಸ್ಟಮ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ನಂತಹ ಹಲವು ವೈಶಿಷ್ಟ್ಯಗಳಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, May 13, 2025, 15:39 [IST]
English summary
India gifts 15 tata curvv electric cars to nepal
Read more on offbeat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+