ನಮ್ಮ ಮುಂದೆ ಮಕ್ಕಳು ನೀವು... ಟ್ರಾಕ್ಟರ್ ಓಡಿಸಿದ್ದವರು ನಾವು: ಅಜ್ಜನ ಡ್ರಿಫ್ಟ್‌ಗೆ ನಡುಗಿದ ಯುವಕರು!
ಸೋಷಿಯಲ್ ಮೀಡಿಯಾದಲ್ಲಿ 'ಭಾರತ ಆರಂಭಿಕರಿಗಲ್ಲ' (india is not for beginners) ಎನ್ನುವ ಪದಗಳು ಒಂದಷ್ಟು ವಿಡಿಯೋಗಳಿಗೆ ತುಂಬಾ ಅರ್ಥ ಕೊಡುತ್ತವೆ. ಇತ್ತೀಚೆಗೆ ಭಾರತೀಯ ಅಜ್ಜನೊಬ್ಬ ಮಾಡಿದ ಕೆಲಸಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಇದೇ ರೀತಿಯ ಪ್ರಶಂಸೆ ವ್ಯಕ್ತವಾಗಿದೆ. ಅಜ್ಜನೊಬ್ಬ ತನ್ನ ಮೊಮ್ಮಗನ ಫೋರ್ಡ್ ಮಸ್ಟಾಂಗ್ ಕಾರಿನಲ್ಲಿ ಸ್ಟಂಟ್‌ಗಳನ್ನು ಮಾಡಿ ಯುವಕರನ್ನು ಅಚ್ಚರಿಗೊಳಿಸಿದ್ದಾನೆ. ಈ ವೀಡಿಯೊ ಅಂತರ್ಜಾಲವನ್ನು ಷೇಕ್ ಮಾಡಿದೆ, ನೆಟ್ಟಿಗರು ಪ್ರಶಂಸಿಸುತ್ತಾ ಮೆಚ್ಚುಗೆಯ ಕಾಮೆಂಟ್‌ಗಳನ್ನು ಸುರಿಸುತ್ತಿದ್ದಾರೆ. ಹೆಚ್ಚಿನವರು ಅಜ್ಜನ ಕೌಶಲ್ಯಗಳನ್ನು ಶ್ಲಾಘಿಸಿದ್ದಾರೆ.
ಮೊಮ್ಮಗ ಕಾರಿನ ಕೀಲಿಯನ್ನು ತನ್ನ ಅಜ್ಜನಿಗೆ ಕೊಡುವ ಮೂಲಕ ವಿಡಿಯೋ ಪ್ರಾರಂಭವಾಗುತ್ತದೆ. "ಮೊಮ್ಮಗ ಇರುವಾಗ ಅಜ್ಜನಿಗೆ ಮೋಜು ಮಾಡಲು ಸಾಧ್ಯವಾಗದಿದ್ದರೆ ಹೇಗೆ? ಈ ಕೀಲಿಯನ್ನು ತೆಗೆದುಕೊಂಡು ಆನಂದಿಸಿ" "ನಿಧಾನವಾಗಿ ಮತ್ತು ಎಚ್ಚರಿಕೆಯಿಂದ ಚಾಲನೆ ಮಾಡಿ" ಎಂದು ಮೊಮ್ಮಗ ಹೇಳುತ್ತಿದ್ದಂತೆ ಅಜ್ಜನ ಮುಖದಲ್ಲಿ ಏನೋ ಸಂತೋಷ, ಕೈ ಚಾಚಿ ಕೀಲಿಯನ್ನು ಪಡೆದು ಸ್ಟಂಟ್ ಮಾಡಲು ಸಜ್ಜಾಗುತ್ತಾರೆ.

ಬಳಿಕ ಆಗಿದ್ದೆಲ್ಲಾ ಸಿನಿಮಾ ಸ್ಟೈಲ್‌ನಲ್ಲಿ ನಡೆಯುವ ಸ್ಟಂಟ್‌ಗಳು ಅಜ್ಜನ ಕೌಶಲ್ಯವನ್ನು ಸಂಪೂರ್ಣವಾಗಿ ವಿಡಿಯೋದಲ್ಲಿ ಚಿತ್ರಿಸಲಾಗಿದೆ. ಅವರು ಮಾಡುವ ಡ್ರಿಫ್ಟ್‌ಗಳು ಎಂಥವರನ್ನು ಹುಬ್ಬೇರಿಸುವಂತೆ ಮಾಡುತ್ತವೆ. ಅಜ್ಜನ ಸ್ಟಂಟ್‌ಗಳೇನೋ ಸರಿ, ಕುತೂಹಲಕಾರಿ ಸಂಗತಿಯೆಂದರೆ ಅವರು ಸೀಟ್ ಬೆಲ್ಟ್ ಧರಿಸಿಲ್ಲ. ಅವರ ಮೋಜಿಗೆ ಇದೆಲ್ಲಾ ಮಾಡಿದ್ದಾರೆ, ಆದರೆ ಸೀಟ್ ಬೆಲ್ಟ್ ಧರಿಸುವುದು ಕೂಡ ಅಷ್ಟೇ ಮುಖ್ಯ.
ಸ್ಟಂಟ್ ಮಾಡಿ ಸುರಕ್ಷಿತವಾಗಿ ಕಾರನ್ನು ನಿಲ್ಲಿಸಿದ ಬಳಿಕ ಮೊಮ್ಮಗನಿಗೆ ಏನೋ ಖುಷಿ, ಅಜ್ಜ ನೀನು ಏನು ಮಾಡಿದೆ? ಎಂದು ಕೇಳಿದಾಗ ನಾವು ಟ್ರಾಕ್ಟರುಗಳನ್ನು ಓಡಿಸುತ್ತಿದ್ದಾಗ, ಮುಂಭಾಗದ ಚಕ್ರವನ್ನು ಗಾಳಿಯಲ್ಲಿ ಎತ್ತಿಕೊಂಡು ಅದೆಷ್ಟೋ ಕಿಲೋಮೀಟರ್ ಗಟ್ಟಲೆ ಓಡಿಸುತ್ತಿದ್ದೆವು ಎಂದು ಉತ್ತರಿಸುತ್ತಾರೆ. ಈ ಉತ್ತರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಅಜ್ಜನಿಗೆ ಯುವಕರು ಅಭಿಮಾನಿಗಳಾಗಿಬಿಟ್ಟಿದ್ದಾರೆ.

ಫೋರ್ಡ್ ಮಸ್ಟಾಂಗ್ ವಿಶೇಷತೆಗಳು: ಫೋರ್ಡ್ ಜುಲೈ 2016 ರಲ್ಲಿ ಭಾರತದಲ್ಲಿ ಮಸ್ಟಾಂಗ್ ಕಾರನ್ನು ಬಿಡುಗಡೆ ಮಾಡಿತು. ಇದರ ಎಕ್ಸ್ ಶೋರೂಂ ಬೆಲೆ ಸುಮಾರು 65 ಲಕ್ಷ ರೂಪಾಯಿಗಳಾಗಿತ್ತು. ಮಸ್ಟಾಂಗ್ ಅನ್ನು ಕಂಪ್ಲೀಟ್ ಬಿಲ್ಟ್ ಯೂನಿಟ್ (ಸಿಬಿಯು) ಗಳಾಗಿ ಭಾರತಕ್ಕೆ ತರಲಾಯಿತು. ಸದ್ಯ ಭಾರತದಲ್ಲಿ ಮಸ್ಟಾಂಗ್ ಖರೀದಿಸುವುದು ತುಂಬಾ ಕಷ್ಟ. ಏಕೆಂದರೆ ಫೋರ್ಡ್ ಸೆಪ್ಟೆಂಬರ್ 2021 ರಲ್ಲಿ ಭಾರತವನ್ನು ನಿರ್ಗಮಿಸುವುದಾಗಿ ಘೋಷಿಸಿತು.
ಪ್ರಸ್ತುತ ನೀವು 75-80 ಲಕ್ಷ ರೂಪಾಯಿಗಳಿಗೆ ಮಾರಾಟವಾಗುವ ಸೆಕೆಂಡ್ ಹ್ಯಾಂಡ್ ಮಸ್ಟಾಂಗ್‌ಗಳನ್ನು ಕಾಣಬಹುದು. ಈ ಕಾರು ನಾರ್ಮಲ್, ಸ್ಪೋರ್ಟ್ +, ಟ್ರ್ಯಾಕ್ ಮತ್ತು ವೆಟ್/ಸ್ನೋ ಎಂಬ ನಾಲ್ಕು ಡ್ರೈವಿಂಗ್ ಮೋಡ್ ಗಳನ್ನು ಹೊಂದಿದೆ. ಸುರಕ್ಷತೆಗಾಗಿ ಕಾರಿನಲ್ಲಿ ಎಂಟು ಏರ್ ಬ್ಯಾಗ್‌ಗಳು, ರೋಲ್-ರೇಟ್ ಸೆನ್ಸಾರ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಸೇರಿದಂತೆ ಹೆಚ್ಚಿನ ಸೇಫ್ಟಿ ಫೀಚರ್ಸ್ ಒಳಗೊಂಡಿದೆ.
ಎಂಜಿನ್ ವಿಷಯಕ್ಕೆ ಬಂದರೆ 5.0 ಲೀಟರ್ ವಿ8 ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 395 ಬಿಹೆಚ್ ಪವರ್ ಮತ್ತು 515 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಜಾಗತಿಕವಾಗಿ ಮಾರಾಟವಾಗುವ ಕಾರು ಸ್ವಲ್ಪ ಹೆಚ್ಚಿನ ಪವರ್ ಹೊಂದಿದ್ದು 435 ಬಿಹೆಚ್ ಪವರ್ ಉತ್ಪಾದಿಸುತ್ತದೆ. ಒಟ್ಟಾರೆ ಈ ಕಾರು ಪರ್ಫಾಮೆನ್ಸ್ ಪ್ರಿಯರಿಗೆ ಹೇಳಿಮಾಡಿಸಿದ ಕಾರಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








