ವಿಶ್ವದ ಗಮನ ಸೆಳೆದ ಭಾರತದ ಅತಿ ದೊಡ್ಡ ರಕ್ಷಣಾ ಪ್ರದರ್ಶನ ಮೇಳ
ಪ್ರವಾಸಿಗರ ಸ್ವರ್ಗ ಗೋವಾದಲ್ಲಿ ಭಾರತದ ಅತಿ ದೊಡ್ಡ ರಕ್ಷಣಾ ಪ್ರದರ್ಶನ ಮೇಳಕ್ಕೆ (DefExpo 2016) ಚಾಲನೆ ದೊರಕಿದೆ. ಇದು ಭಾರತದ ಮೂರು ರಕ್ಷಣಾ ವಿಭಾಗಗಳಾದ ನೆಲ, ವಾಯು ಮತ್ತು ಸಮುದ್ರ ಇಲಾಖೆಯ ಸಂಯೋಜಿತ ಪ್ರದರ್ಶನ ಮೇಳವಾಗಿದೆ.
Also Read: ಭಾರತದ ವಾಯು ವಲಯದ ಭದ್ರತೆ ಕಾಯುವ ಯುದ್ಧ ವಿಮಾನಗಳು
2016ನೇ ಸಾಲಿನ ಡಿಫೆನ್ಸ್ ಎಕ್ಸ್ ಪೋವನ್ನು ಗೌರವಾನ್ವಿತ ರಕ್ಷಣಾ ಮಂತ್ರಿ ಮನೋಹರ್ ಪರಿಕ್ಕರ್ ಉದ್ಘಾಟಿಸಿದರು. ಈ ಮೂಲಕ 'ಮೇಕ್ ಇನ್ ಇಂಡಿಯಾ'ಗೆ ಮತ್ತಷ್ಟು ಉತ್ತೇಜನ ನೀಡಲಾಗುತ್ತಿದೆ.

ಗೋವಾದಲ್ಲಿ 2016 ಮಾರ್ಚ್ 31ರ ವರೆಗೆ ಆಯೋಜನೆಯಾಗುತ್ತಿರುವ ರಕ್ಷಣಾ ಪ್ರದರ್ಶನ ಮೇಳದಲ್ಲಿ ಭಾರತೀಯ ರಕ್ಷಣಾ ವಿಭಾಗವು ತನ್ನ ಶಕ್ತಿ ಪ್ರದರ್ಶನ ನಡೆಸಲಿದೆ.

ಇದು ಒಂಬತ್ತನೇ ಬಾರಿಗೆ ರಕ್ಷಣಾ ಪ್ರದರ್ಶನ ಮೇಳ ಆಯೋಜನೆಯಾಗುತ್ತಿದ್ದು, ಜಂಟಿ ರಕ್ಷಣಾ ಕಾರ್ಯಾಚರಣೆಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ.

2016 ಡಿಫೆನ್ಸ್ ಎಕ್ಸ್ ಪೋದಲ್ಲಿ ವಿವಿಧ ಖಂಡಗಳಿಂದ 47 ದೇಶದ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಕಳೆದ ಬಾರಿ 30 ರಾಷ್ಟ್ರಗಳು ಭಾಗವಹಿಸಿತ್ತು.

ಈ ಸಂದರ್ಭದಲ್ಲಿ ರಕ್ಷಣಾ ವಲಯದ ಬೆಳವಣಿಗೆಗಳು, ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ವಿಶೇಷ ವಿಚಾರಗೋಷ್ಠಿಗಳನ್ನು ಪ್ರದರ್ಶಿಸಲಾಯಿತು.

ಇವುಗಳಲ್ಲಿ ಹಡಗು ನಿರ್ಮಾಣ ತಂತ್ರಜ್ಞಾನ, ರಕ್ಷಣಾ ವಿಭಾಗದಲ್ಲಿ ಮೇಕ್ ಇನ್ ಇಂಡಿಯಾದ ಅವಕಾಶ, ಇಂಡಿಯಾ-ಕೊರಿಯಾ ರಕ್ಷಣಾ ಸಹಕಾರ, ಭಾರತೀಯ ಭೂ ಸೇನೆಯ ಆಧುನೀಕರಣದ ಬಗ್ಗೆ ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗುತ್ತಿದೆ.

ರಕ್ಷಣಾ ಇಲಾಖೆಯ ಪ್ರಕಾರ 2016 ಡಿಫೆನ್ಸ್ ಎಕ್ಸ್ ಪೋದಲ್ಲಿ 1000ಕ್ಕಿಂತಲೂ ಹೆಚ್ಚು ದೇಶೀಯ ಹಾಗೂ ವಿದೇಶಿ ಸಂಸ್ಥೆಗಳು ಭಾಗವಹಿಸುತ್ತಿದೆ.

ಮೇಕ್ ಇನ್ ಇಂಡಿಯಾದ ಯೋಜನೆಯ ಭಾಗವಾಗಿ ರಕ್ಷಣಾ ಇಲಾಖೆಯಲ್ಲೂ ಸಂಪೂರ್ಣವಾಗಿ ದೇಶೀಯವಾಗಿ ನಿರ್ಮಾಣ, ಅಭಿವೃದ್ಧಿಯನ್ನು ಗುರಿಯಿಡಲಾಗಿದೆ. ಈ ನಿಟ್ಟಿನಲ್ಲಿ ನಾವೀನ್ಯ ನೀತಿಗಳನ್ನು ಅನುಸರಿಸಲಾಗುತ್ತಿದೆ.

ರಕ್ಷಣಾ ಉಪಕರಣಗಳನ್ನು ದೇಶದಲ್ಲೇ ತಯಾರಿಸಿ ವಿದೇಶಗಳಿಗೆ ರಫ್ತು ಮಾಡುವ ಗುರಿಯನ್ನು ಹೊಂದಲಾಗಿದೆ. ಇವೆಲ್ಲದಕ್ಕೂ ಡಿಫೆನ್ಸ್ ಎಕ್ಸ್ ಪೋ 2016 ಸೂಕ್ತ ವೇದಿಕೆಯೊದಗಿಸಲಿದೆ.

ಈ ಸಂದರ್ಭದಲ್ಲಿ ಮೈನ್ ಬ್ಯಾಟಲ್ ಟ್ಯಾಂಕ್ ಅರ್ಜುನ್ ಎಂಕೆ1, ಎಂಕೆ 2, ಆರ್ಮರ್ಡ್ ವಾಹನ, ಸರಂಗ್, ಏರೋಬ್ಯಾಟಿಕ್ ಟೀಮ್, ನೆವಲ್ ಎಲ್‌ಸಿಎ, ಎಂಬಿಟಿ ಅರ್ಜುನ್ ಎಂಟಿ 2, ವೀಲ್ಡ್ ಆರ್ಮರ್ಡ್ ವಾಹನಗಳ ನೇರ ಪ್ರದರ್ಶನವೂ ಜರಗಿತ್ತು.

ಭವಿಷ್ಯ ಭಾರತದ ಬೆನ್ನೆಲುಬು; 10 ಶಸ್ತ್ರಾಸ್ತ್ರಗಳು
ಅಗ್ನಿ ಕ್ಷಿಪಣಿ: ಪ್ರತಿಯೊಬ್ಬ ಭಾರತೀಯನೂ ತಿಳಿದಿರಬೇಕಾದ ಅಂಶಗಳು


Click it and Unblock the Notifications








