ಲಿಥಿಯಂ ಉತ್ಪಾದನೆಯಲ್ಲಿ ಅಮೆರಿಕಾವನ್ನು ಹಿಂದಿಕ್ಕಿದ ಭಾರತ

ಎಲೆಕ್ಟ್ರಿಕ್ ವಾಹನ ಉದ್ಯಮವು ಹೆಚ್ಚಾಗಿ ಲಿಥಿಯಂ ಮೇಲೆ ಅವಲಂಬಿತವಾಗಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಬ್ಯಾಟರಿಗಳನ್ನು ಒದಗಿಸಲು ಲಿಥಿಯಂ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪ್ರಪಂಚದಾದ್ಯಂತದ ಹಲವು ದೇಶಗಳು ಲಿಥಿಯಂ ಬ್ಯಾಟರಿಗಳ ತಯಾರಿಕೆ ಹಾಗೂ ರಫ್ತಿಗಾಗಿ ಲಿಥಿಯಂನ ಹೊಸ ಮೂಲಗಳನ್ನು ಸಂಶೋಧಿಸುತ್ತಿವೆ. ಲಿಥಿಯಂ ಗಣಿಗಾರಿಕೆ ಹಾಗೂ ಬ್ಯಾಟರಿ ಉತ್ಪಾದನೆಯಲ್ಲಿ ಭಾರತವೂ ಸಹ ಪ್ರಮುಖ ಪಾತ್ರ ವಹಿಸಲಿದೆ.

ಲಿಥಿಯಂ ಉತ್ಪಾದನೆಯಲ್ಲಿ ಅಮೆರಿಕಾವನ್ನು ಹಿಂದಿಕ್ಕಿದ ಭಾರತ

ಇತ್ತೀಚೆಗೆ ಭಾರತವು ಲಿಥಿಯಂನ ಗಣಿಗಾರಿಕೆ ಹಾಗೂ ಬ್ಯಾಟರಿ ರಫ್ತು ಸಾಮರ್ಥ್ಯವನ್ನು ಹೊಂದಿರುವ ಹತ್ತು ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಲಿಥಿಯಂನ ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸಲಿದೆ ಎಂದು ವರದಿಯೊಂದು ಹೇಳಿದೆ. ವಿಸಿ ಎಲಿಮೆಂಟ್ಸ್ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಲಿಥಿಯಂ ಉತ್ಪಾದಿಸುವ ಟಾಪ್ 10 ದೇಶಗಳಲ್ಲಿ ಭಾರತವು ಒಂಬತ್ತನೇ ಸ್ಥಾನದಲ್ಲಿದೆ.

ಲಿಥಿಯಂ ಉತ್ಪಾದನೆಯಲ್ಲಿ ಅಮೆರಿಕಾವನ್ನು ಹಿಂದಿಕ್ಕಿದ ಭಾರತ

ಲಿಥಿಯಂ ಉತ್ಪಾದನೆಯಲ್ಲಿ ಭಾರತವು, ಅಮೆರಿಕಾ ಹಾಗೂ ಮೆಕ್ಸಿಕೊ ದೇಶಗಳನ್ನು ಹಿಂದಿಕ್ಕಿದೆ. ಬ್ಯಾಟರಿಗಳಿಗೆ ಅಗತ್ಯವಿರುವ ಕಚ್ಚಾ ವಸ್ತುಗಳ ಜಾಗತಿಕ ಪೂರೈಕೆಯಲ್ಲಿ 80% ನೊಂದಿಗೆ ಚೀನಾ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇದರ ನಂತರದ ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ದಕ್ಷಿಣ ಆಫ್ರಿಕಾ, ಚಿಲಿ, ಅರ್ಜೆಂಟೀನಾ ಹಾಗೂ ಬೊಲಿವಿಯಾ ದೇಶಗಳು ಸ್ಥಾನ ಪಡೆದಿವೆ.

ಲಿಥಿಯಂ ಉತ್ಪಾದನೆಯಲ್ಲಿ ಅಮೆರಿಕಾವನ್ನು ಹಿಂದಿಕ್ಕಿದ ಭಾರತ

ಸುಜುಕಿ ಹಾಗೂ ಟೊಯೊಟಾದಂತಹ ಜಾಗತಿಕ ಕಂಪನಿಗಳು ಈಗಾಗಲೇ ಗುಜರಾತ್‌ನಲ್ಲಿ ಬ್ಯಾಟರಿ ಸ್ಥಾವರದಲ್ಲಿ ಹೂಡಿಕೆ ಮಾಡಿದ್ದರೆ, ಟೆಸ್ಲಾದಂತಹ ಕಂಪನಿಗಳು ಸಾಧ್ಯತೆಗಳನ್ನು ಪರಿಶೀಲಿಸುತ್ತಿವೆ. ಇನ್ನು ಜನಪ್ರಿಯ ಕಾರು ತಯಾರಕ ಕಂಪನಿಗಳಾದ ಟಾಟಾ ಮೋಟಾರ್ಸ್ ಹಾಗೂ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಗಳು ಸಹ ಲಿಥಿಯಂ ಉದ್ಯಮಕ್ಕೆ ಪ್ರವೇಶಿಸುವುದಾಗಿ ತಿಳಿಸಿವೆ. ಆದರೆ ಇನ್ನೂ ಯಾವುದೇ ಪ್ರಮುಖ ಹೂಡಿಕೆಯನ್ನು ಘೋಷಿಸಿಲ್ಲ.

ಲಿಥಿಯಂ ಉತ್ಪಾದನೆಯಲ್ಲಿ ಅಮೆರಿಕಾವನ್ನು ಹಿಂದಿಕ್ಕಿದ ಭಾರತ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಸುವ ಬ್ಯಾಟರಿಗಳಿಗಾಗಿ ಚೀನಾದಿಂದ ಹೆಚ್ಚಿನ ಪ್ರಮಾಣದ ಲಿಥಿಯಂ ಅನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಲಿಥಿಯಂಗಾಗಿ ಚೀನಾದ ಮೇಲಿನ ಅವಲಂಬನೆಯನ್ನು ತಪ್ಪಿಸಲು ಕೇಂದ್ರ ಸರ್ಕಾರವು ಈ ವರ್ಷದ ಆರಂಭದಲ್ಲಿ ಅರ್ಜೆಂಟೀನಾದ ಕಂಪನಿಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಅರ್ಜೆಂಟೀನಾ ಜೊತೆಗಿನ ಭಾರತ ಒಪ್ಪಂದವು ಚೀನಾದ ಪ್ರಾಬಲ್ಯವನ್ನು ಕೊನೆಗೊಳಿಸುವ ನಿರೀಕ್ಷೆಗಳಿವೆ.

ಲಿಥಿಯಂ ಉತ್ಪಾದನೆಯಲ್ಲಿ ಅಮೆರಿಕಾವನ್ನು ಹಿಂದಿಕ್ಕಿದ ಭಾರತ

ಲಿಥಿಯಂ ಎಂದರೇನು?

ಆಧುನಿಕ ಬ್ಯಾಟರಿ ಉದ್ಯಮಕ್ಕೆ ಲಿಥಿಯಂ ಪ್ರಮುಖ ಅಂಶವಾಗಿದೆ. ಇದು ರಾಸಾಯನಿಕ ಅಂಶವಾಗಿದ್ದು, ಹಗುರವಾದ ಲೋಹಗಳ ವರ್ಗದಲ್ಲಿ ಇರಿಸಲಾಗುತ್ತದೆ. ಲೋಹವಾಗಿದ್ದರೂ ಇದನ್ನು ಚಾಕು ಅಥವಾ ಯಾವುದೇ ಚೂಪಾದ ವಸ್ತುವಿನಿಂದ ಸುಲಭವಾಗಿ ಕತ್ತರಿಸಬಹುದು. ಈ ವಸ್ತುವಿನಿಂದ ಮಾಡಲ್ಪಟ್ಟ ಬ್ಯಾಟರಿಯು ತುಂಬಾ ಹಗುರವಾಗಿರುತ್ತದೆ. ಜೊತೆಗೆ ಸುಲಭವಾಗಿ ರೀಚಾರ್ಜ್ ಆಗುತ್ತದೆ.

ಲಿಥಿಯಂ ಉತ್ಪಾದನೆಯಲ್ಲಿ ಅಮೆರಿಕಾವನ್ನು ಹಿಂದಿಕ್ಕಿದ ಭಾರತ

ಇತ್ತೀಚಿನ ದಿನಗಳಲ್ಲಿ, ಆಸಿಡ್ ಬ್ಯಾಟರಿಗಳಲ್ಲಿ ಕಾರ್ಯನಿರ್ವಹಿಸುವ ವಸ್ತುಗಳನ್ನು ಲಿಥಿಯಂ ಬ್ಯಾಟರಿಗಳಿಂದ ಬದಲಾಯಿಸಲಾಗಿದೆ. ಲಿಥಿಯಂ ಬ್ಯಾಟರಿಗಳು ಆಸಿಡ್ಬ್ಯಾಟರಿಗಳಿಗಿಂತ ಸುರಕ್ಷಿತವಾಗಿರುತ್ತವೆ. ಜೊತೆಗೆ ಹೆಚ್ಚು ಕಾಲ ಬಾಳಿಕೆ ಬರುತ್ತವೆ. ಈ ಬ್ಯಾಟರಿಗಳನ್ನು ಎಲೆಕ್ಟ್ರಿಕ್ ಸ್ಕೂಟರ್‌, ಎಲೆಕ್ಟ್ರಿಕ್ ಕಾರು ಹಾಗೂ ಎಲೆಕ್ಟ್ರಿಕ್ ರಿಕ್ಷಾಗಳಲ್ಲಿ ಬಳಸಲಾಗುತ್ತದೆ.

ಲಿಥಿಯಂ ಉತ್ಪಾದನೆಯಲ್ಲಿ ಅಮೆರಿಕಾವನ್ನು ಹಿಂದಿಕ್ಕಿದ ಭಾರತ

ಮೊಬೈಲ್ ಫೋನ್‌ಗಳು ಸಹ ಲಿಥಿಯಂ ಐಯಾನ್ ಬ್ಯಾಟರಿಗಳಿಂದ ಕಾರ್ಯನಿರ್ವಹಿಸುತ್ತವೆ. ಈ ಬ್ಯಾಟರಿಗಳಿಂದ ಲಕ್ಷಾಂತರ ವರ್ಷಗಳಿಂದ ಉತ್ಪಾದನೆಯಾಗುತ್ತಿರುವ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆ ಕಡಿಮೆಯಾಗಿದೆ. ಸದ್ಯಕ್ಕೆ ಭಾರತಕ್ಕೆ ಅಗತ್ಯವಿರುವ ಲಿಥಿಯಂನ ಬಹು ಭಾಗವನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಭಾರತದಲ್ಲಿ ಲಿಥಿಯಂ ಕಡಿಮೆ ಪ್ರಮಾಣದಲ್ಲಿ ಲಭ್ಯವಿರುವ ಕಾರಣ ಚೀನಾದೊಂದಿಗೆ ವ್ಯವಹರಿಸಬೇಕಾಗಿದೆ.

ಲಿಥಿಯಂ ಉತ್ಪಾದನೆಯಲ್ಲಿ ಅಮೆರಿಕಾವನ್ನು ಹಿಂದಿಕ್ಕಿದ ಭಾರತ

ವರದಿಗಳ ಪ್ರಕಾರ ಭಾರತವು 2019ರಲ್ಲಿ ಮೂರು ಪಟ್ಟು ಹೆಚ್ಚು ಅಂದರೆ 1.2 ಬಿಲಿಯನ್ ಡಾಲರ್ ಮೌಲ್ಯದ ಲಿಥಿಯಂ ಬ್ಯಾಟರಿಗಳನ್ನು ಆಮದು ಮಾಡಿಕೊಂಡಿತ್ತು. 2020ರ ಆರಂಭದಲ್ಲಿ ಮಂಡ್ಯದಲ್ಲಿ ಲಿಥಿಯಂ ಪತ್ತೆಯಾಗಿತ್ತು. ಆದರೆ ಈ ಪ್ರಮಾಣವು ತೀರಾ ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ಭಾರತವು ಚೀನಾದ ಮೇಲಿನ ಅವಲಂಬನೆಯನ್ನು ಕೊನೆಗೊಳಿಸಲು ಇತರ ಹಲವು ದೇಶಗಳಲ್ಲಿ ಲಿಥಿಯಂ ಗಣಿಗಳನ್ನು ಖರೀದಿಸುವ ಯೋಜನೆಯನ್ನು ಸಿದ್ಧಪಡಿಸುತ್ತಿದೆ.

ಲಿಥಿಯಂ ಉತ್ಪಾದನೆಯಲ್ಲಿ ಅಮೆರಿಕಾವನ್ನು ಹಿಂದಿಕ್ಕಿದ ಭಾರತ

ಖ್ಯಾತ ಬ್ಯಾಟರಿ ತಯಾರಕ ಕಂಪನಿಯಾದ ಎಕ್ಸೈಡ್ (Exide) ಇಂಡಸ್ಟ್ರೀಸ್ ಶೀಘ್ರದಲ್ಲೇ ಲಿಥಿಯಂ ಐಯಾನ್ ಬ್ಯಾಟರಿ ಉತ್ಪಾದಿಸಲಿದೆ. ಕಂಪನಿಯು ಇತ್ತೀಚೆಗೆ ಲಿಥಿಯಂ ಐಯಾನ್ (ಲಿ-ಐಯಾನ್) ಸೆಲ್ ಉದ್ಯಮಕ್ಕೆ ಪ್ರವೇಶಿಸುವುದಾಗಿ ತಿಳಿಸಿತ್ತು. ಜೊತೆಗೆ ಭಾರತದಲ್ಲಿ ಗಿಗಾವ್ಯಾಟ್ ಸ್ಥಾವರವನ್ನು ಸ್ಥಾಪಿಸುವುದಾಗಿ ಹೇಳಿದೆ. ಎಕ್ಸೈಡ್ ಇಂಡಸ್ಟ್ರೀಸ್ ಲಿಥಿಯಂ ಐಯಾನ್ ಬ್ಯಾಟರಿಗಳ ಉತ್ಪಾದನೆಗೆ ಕೇಂದ್ರ ಸರ್ಕಾರದ ಉತ್ಪಾದನೆ-ಸಂಯೋಜಿತ ಪ್ರೋತ್ಸಾಹ ಯೋಜನೆಗೆ ಸೇರುವ ಸಾಧ್ಯತೆಗಳಿವೆ.

ಲಿಥಿಯಂ ಉತ್ಪಾದನೆಯಲ್ಲಿ ಅಮೆರಿಕಾವನ್ನು ಹಿಂದಿಕ್ಕಿದ ಭಾರತ

ಎಕ್ಸೈಡ್ ಕಂಪನಿಯು ತನ್ನ ಅಂಗಸಂಸ್ಥೆಯಾದ Exide Leclanche Energy Pvt Ltd ಮೂಲಕ (NexCharge ಬ್ರ್ಯಾಂಡ್ ಅಡಿಯಲ್ಲಿ) ಸ್ವಿಟ್ಜರ್ಲೆಂಡ್‌ನ ಲೆಕ್ಲಾಂಚೆ ಎಸ್‌ಎ ಜತೆಗೂಡಿ ಲಿಥಿಯಂ ಐಯಾನ್ ಬ್ಯಾಟರಿ ಸಿಸ್ಟಂ ಹಾಗೂ ಎನರ್ಜಿ ಸೊಲ್ಯುಷನ್'ಗೂ ಸಹ ಕಾಲಿಟ್ಟಿದೆ. ತನ್ನ ಅತ್ಯಾಧುನಿಕ ಆರ್ ಅಂಡ್ ಡಿ ಕೇಂದ್ರದೊಂದಿಗೆ ಅಂಗಸಂಸ್ಥೆಯು ಲಿಥಿಯಂ ಐಯಾನ್ ಬ್ಯಾಟರಿಗಳನ್ನು ತಯಾರಿಸಲು ಹಾಗೂ ಎಲೆಕ್ಟ್ರಿಕ್ ವೆಹಿಕಲ್ ಮಾರುಕಟ್ಟೆ ಹಾಗೂ ಗ್ರಿಡ್ ಆಧಾರಿತ ಅಪ್ಲಿಕೇಶನ್‌ಗಳಿಗೆ ಶಕ್ತಿ ಸಂಗ್ರಹ ವ್ಯವಸ್ಥೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಲಿಥಿಯಂ ಉತ್ಪಾದನೆಯಲ್ಲಿ ಅಮೆರಿಕಾವನ್ನು ಹಿಂದಿಕ್ಕಿದ ಭಾರತ

ಎಕ್ಸೈಡ್ ವಿಶ್ವದ ಅತಿದೊಡ್ಡ ಲೆಡ್ ಆಸಿಡ್ ಶೇಖರಣಾ ಬ್ಯಾಟರಿ ತಯಾರಕರಲ್ಲಿ ಒಂದಾಗಿದೆ. ಕಂಪನಿಯು ವ್ಯಾಪಕ ಸರಣಿಯ ಲೀಡ್ ಆಸಿಡ್ ಬ್ಯಾಟರಿಗಳನ್ನುವಿನ್ಯಾಸಗೊಳಿಸುತ್ತದೆ, ಉತ್ಪಾದಿಸುತ್ತದೆ, ಮಾರುಕಟ್ಟೆ ಮಾಡುತ್ತದೆ ಹಾಗೂ ಮಾರಾಟ ಮಾಡುತ್ತದೆ. ಕಂಪನಿಯು ಆಟೋಮೋಟಿವ್, ವಿದ್ಯುತ್, ದೂರಸಂಪರ್ಕ, ಮೂಲಸೌಕರ್ಯ ಯೋಜನೆಗಳು, ಕಂಪ್ಯೂಟರ್ ಉದ್ಯಮ, ರೈಲ್ವೆ, ಗಣಿಗಾರಿಕೆ ಹಾಗೂ ರಕ್ಷಣಾ ಕ್ಷೇತ್ರಗಳಿಗೆ ಬ್ಯಾಟರಿಗಳನ್ನು ತಯಾರಿಸುತ್ತದೆ.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
India listed in top 10 countries producing lithium mining details
Story first published: Saturday, December 25, 2021, 11:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X