ಸೇವೆಗೆ ಸಿದ್ಧವಾಯ್ತು ಭಾರತದ ಅತಿ ಉದ್ದದ ಸುರಂಗ ಮಾರ್ಗ- ಏನೀದರ ವಿಶೇಷತೆ ಗೊತ್ತಾ?

Written By:

ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಪ್ರಮುಖ ನಗರಗಳ ನಡುವಿನ ಸಂಚಾರ ವ್ಯವಸ್ಥೆ ಇನ್ಮುಂದೆ ಸುಲಭವಾಲಿದೆ. ಇದಕ್ಕೆ ಕಾರಣ ಚೆನಾನಿ ಮತ್ತು ನಶ್ರೀ ಮಾರ್ಗದ ನಡುವೆ 9.2-ಕಿಲೋ ಮೀಟರ್ ಉದ್ದದ ಸುರಂಗ ಮಾರ್ಗ ಸದ್ಯದಲ್ಲೇ ಸೇವೆಗೆ ತೆರೆದುಕೊಳ್ಳಲಿದೆ.

ಸೇವೆಗೆ ಸಿದ್ಧವಾಯ್ತು ಭಾರತದ ಅತಿ ಉದ್ದದ ಸುರಂಗ ಮಾರ್ಗ- ಏನೀದರ ವಿಶೇಷತೆ ಗೊತ್ತಾ?

ಇದೇ ಮಾರ್ಚ್ ಅಂತ್ಯಕ್ಕೆ ಹೊಸ ಸುರಂಗ ಮಾರ್ಗ ಲೋಕಾರ್ಪಣೆಗೊಳ್ಳಲಿದ್ದು, ಪ್ರಮುಖ ನಗರಗಳ ನಡುವಿನ ಸಂಚಾರ ವ್ಯವಸ್ಥೆ ಇನ್ನಷ್ಟು ಸುಲಭವಾಗಲಿದೆ. ಅತ್ಯಾಧುನಿಕ ಎಲ್ಲ ಸೌಲಭ್ಯಗಳನ್ನು ಹೊಂದಿರುವ ಈ ಹೊಸ ಸುರಂಗ ಮಾರ್ಗವು ನೈಸರ್ಗಿಕ ವಿಕೋಪಗಳನ್ನು ತಡೆದುಕೊಳ್ಳುವ ಶಕ್ತಿ ಹೊಂದಿದೆ.

ಸೇವೆಗೆ ಸಿದ್ಧವಾಯ್ತು ಭಾರತದ ಅತಿ ಉದ್ದದ ಸುರಂಗ ಮಾರ್ಗ- ಏನೀದರ ವಿಶೇಷತೆ ಗೊತ್ತಾ?

ಜಮ್ಮು-ಕಾಶ್ಮೀರದಲ್ಲಿ ಸಿದ್ಧಗೊಂಡಿರುವ 9.2-ಕಿಮಿ ಉದ್ದದ ಸುರಂಗ ಮಾರ್ಗ ಭಾರತದಲ್ಲೇ ಅತಿ ಉದ್ದದ ಸುರಂಗ ಮಾರ್ಗ ಎಂದೇ ಖ್ಯಾತಿ ಪಡೆದಿದೆ. ಇದರಲ್ಲದೇ ಹೊಸ ಸುರಂಗ ಮಾರ್ಗ ನಿರ್ಮಾಣದಿಂದಾಗಿ ಸುಮಾರು 50 ಕಿಮಿ ಹೆಚ್ಚುವರಿ ಪ್ರಯಾಣ ತಗ್ಗುವ ನೀರಿಕ್ಷೆಯಿದೆ.

ಸೇವೆಗೆ ಸಿದ್ಧವಾಯ್ತು ಭಾರತದ ಅತಿ ಉದ್ದದ ಸುರಂಗ ಮಾರ್ಗ- ಏನೀದರ ವಿಶೇಷತೆ ಗೊತ್ತಾ?

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದಿಂದ ಸಿದ್ಧಗೊಂಡಿರುವ ಈ ನೂತನ ಸುರಂಗ ಮಾರ್ಗವು ಸ್ಥಳೀಯವಾಗಿ ಹಾಗೂ ಪ್ರವಾಸಿಗರಿಗೆ ಹೆಚ್ಚು ಅನುಕೂಲರವಾಗಲಿದೆ. ಈ ಮೂಲಕ ಭಾರೀ ಆದಾಯ ನೀರಿಕ್ಷಿಸಲಾಗಿದ್ದು, ಕ್ವಾಜಿಗುಂಡ್ ಅಂಡ್ ಬನಿಹಾಳ್ ಕೈಗಾರಿಕಾ ಕಾರಿಡಾರ್‌ಗೂ ಹೆಚ್ಚಿನ ಅನುಕೂಲಕತೆ ಕಲ್ಪಿಸದಂತಾಗಿದೆ.

ಸೇವೆಗೆ ಸಿದ್ಧವಾಯ್ತು ಭಾರತದ ಅತಿ ಉದ್ದದ ಸುರಂಗ ಮಾರ್ಗ- ಏನೀದರ ವಿಶೇಷತೆ ಗೊತ್ತಾ?

ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸಿದ್ಧಗೊಂಡಿರುವ ವಿನೂತನ ಸುರಂಗ ಮಾರ್ಗದಲ್ಲಿ ಸುರಕ್ಷೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಅಲ್ಲಲ್ಲಿ ಸುರಕ್ಷಾ ವಿಧಾನಗಳನ್ನು ಅಳವಡಿಸಲಾಗಿದ್ದು, ಯಾವುದೇ ರೀತಿಯ ಅನಾಹುತಗಳು ನಡೆಯದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ.

ಸೇವೆಗೆ ಸಿದ್ಧವಾಯ್ತು ಭಾರತದ ಅತಿ ಉದ್ದದ ಸುರಂಗ ಮಾರ್ಗ- ಏನೀದರ ವಿಶೇಷತೆ ಗೊತ್ತಾ?

ಇನ್ನೊಂದು ವಿಶೇಷ ಅಂದ್ರೆ ಸೇವೆಗೆ ಸಿದ್ಧಗೊಂಡಿರುವ ನೂತನ ಸುರಂಗ ಮಾರ್ಗವು ಎಲ್ಲ ಋತುಮಾನಗಳಲ್ಲೂ ಸಂಚಾರಕ್ಕೆ ಲಭ್ಯವಾಗಲಿದೆ. ಹೀಗಾಗಿ ಸ್ಥಳೀಯವಾಗಿ ಲಭ್ಯವಾಗುವ ಸೇಬು ಹಣ್ಣಿನ ಖರೀದಿ ಮತ್ತು ಸಾಗಾಟಕ್ಕೆ ಸಹಕಾರಿಯಾಗಲಿದೆ .

ಸೇವೆಗೆ ಸಿದ್ಧವಾಯ್ತು ಭಾರತದ ಅತಿ ಉದ್ದದ ಸುರಂಗ ಮಾರ್ಗ- ಏನೀದರ ವಿಶೇಷತೆ ಗೊತ್ತಾ?

ಹೊಸ ಸುರಂಗ ಮಾರ್ಗವು ಸೇವೆ ಲಭ್ಯವಾದ ನಂತರ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗವಕಾಶ ನೀಡುವ ಭರವಸೆ ನೀಡಲಾಗಿದ್ದು, ಈ ಭಾಗದಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ಹೆಚ್ಚಿನ ಒತ್ತು ನೀಡುವ ಕುರಿತಂತೆ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು ಜಮ್ಮು-ಕಾಶ್ಮೀರ ಸರ್ಕಾರದ ಜೊತೆ ಮಹತ್ವದ ಯೋಜನೆ ರೂಪಿಸಿದೆ.

ಸೇವೆಗೆ ಸಿದ್ಧವಾಯ್ತು ಭಾರತದ ಅತಿ ಉದ್ದದ ಸುರಂಗ ಮಾರ್ಗ- ಏನೀದರ ವಿಶೇಷತೆ ಗೊತ್ತಾ?

ವಾಣಿಜ್ಯ ಉದ್ದೇಶದ ಜೊತೆ ಟ್ರಾಫಿಕ್ ಸಮಸ್ಯೆ ತಗ್ಗಿಸಲು ಇದೊಂದು ಮಹತ್ಪದ ಯೋಜನೆಯಾಗಿದ್ದು, ಇದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ನೂರಾರು ಕೋಟಿ ವೆಚ್ಚಮಾಡಿ ಅತ್ಯಾಧುನಿಕ ಸೌಲಭ್ಯವುಳ್ಳ ಸುರಂಗ ಮಾರ್ಗ ನಿರ್ಮಾಣಮಾಡಿದೆ.

ಸೇವೆಗೆ ಸಿದ್ಧವಾಯ್ತು ಭಾರತದ ಅತಿ ಉದ್ದದ ಸುರಂಗ ಮಾರ್ಗ- ಏನೀದರ ವಿಶೇಷತೆ ಗೊತ್ತಾ?

ವರದಿಗಳ ಪ್ರಕಾರ ಹೊಸದಾಗಿ ನಿರ್ಮಾಣಗೊಂಡಿರುವ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಮಾರ್ಚ್ ಅಂತ್ಯಕ್ಕೆ ಸೇವೆ ಸಿದ್ಧವಾಗಲಿರುವ ಸುಂರಗ ಮಾರ್ಗದ ಎಲ್ಲಾ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗಿವೆ.

ಸೇವೆಗೆ ಸಿದ್ಧವಾಯ್ತು ಭಾರತದ ಅತಿ ಉದ್ದದ ಸುರಂಗ ಮಾರ್ಗ- ಏನೀದರ ವಿಶೇಷತೆ ಗೊತ್ತಾ?

ಸುರಂಗ ಮಾರ್ಗದಲ್ಲಿ ಸಂಚಾರಕ್ಕೆ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಶುಲ್ಕ ನಿಗದಿ ಕೂಡಾ ಮಾಡಿದೆ. ಇದರಿಂದಾಗಿ ನಿಗದಿತ ಪ್ರಮಾಣದ ಶುಲ್ಕು ಪಾವತಿಸಿ ನೀವು ಪ್ರಯಾಣ ಮಾಡಬೇಕಿದ್ದು, ಪ್ರಯಾಣಕ್ಕೆ ಅನುಕೂಲಕರವಾಗುವಂತೆ ಹತ್ತಾರು ಸುರಕ್ಷಾ ಕ್ರಮಗಳನ್ನು ಅಳವಡಿಸಲಾಗಿದೆ.

ಸೇವೆಗೆ ಸಿದ್ಧವಾಯ್ತು ಭಾರತದ ಅತಿ ಉದ್ದದ ಸುರಂಗ ಮಾರ್ಗ- ಏನೀದರ ವಿಶೇಷತೆ ಗೊತ್ತಾ?

ಒಟ್ಟಿನಲ್ಲಿ ಪ್ರಯಾಣದ ಅವಧಿಯನ್ನು ತಗ್ಗಿಸಲು ನಿರ್ಮಾಣಗೊಂಡಿರುವ ಅತಿ ಉದ್ದದ ಸುರಂಗ ಮಾರ್ಗ ಸದ್ಯದಲ್ಲೇ ಸೇವೆಗೆ ಲಭ್ಯವಾಗಲಿದ್ದು, ಸ್ಥಳೀಯವಾಗಿ ಹಾಗೂ ವಾಣಿಜ್ಯ ಉದ್ದೇಶಿತ ಸಾರಿಗೆ ಸೇವೆಗಳಿಗೂ ಸಾಕಷ್ಟು ಅನೂಕಲಕರವಾಗಲಿದೆ.

ಎಲ್ಲ ಋತುಮಾನಗಳಲ್ಲೂ ನಿಮಗೆ ಬೇಕಾದ ರೀತಿಯಲ್ಲಿ ಪ್ರಯಾಣ ಮಾಡಲು ಅನುಕೂಲಕರವಾಗಬಹುದಾದ ಲ್ಯಾಂಡ್ ರೋವರ್ ರೇಂಜ್ ರೋವರ್ ಕಾರಿನ ಚಿತ್ರಗಳ ವೀಕ್ಷಣೆಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

English summary
India's longest tunnel with 9.2km will connect Chenani and Nashri in Jammu & Kashmir.
Please Wait while comments are loading...

Latest Photos