ಸಿದ್ಧಗೊಳ್ಳಲಿದೆ ಜಗತ್ತಿನ ಮೊದಲ ನೌಕಾ ಸುರಂಗ ಮಾರ್ಗ- ಏನೀದರ ವಿಶೇಷತೆ ಗೊತ್ತಾ?

Written By:

ಇಷ್ಟು ದಿನಗಳ ಕಾಲ ನಾವು ಕಡಿದಾದ ರಸ್ತೆ ಮಾರ್ಗಗಳಲ್ಲಿ ಮಾತ್ರ ಸುರಂಗ ಮಾರ್ಗಗಳು ನೋಡುತ್ತಿದ್ದೇವು. ಆದ್ರೆ ನಾರ್ವೆ ಸರ್ಕಾರ ನೌಕಾಯಾನ ಮಾರ್ಗಗಳಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ನೌಕಾ ಸುರಂಗ ಮಾರ್ಗ ನಿರ್ಮಾಣ ಮಾಡಲು ಬೃಹತ್ ಯೋಜನೆ ರೂಪಿಸಿದೆ.

To Follow DriveSpark On Facebook, Click The Like Button
ಸಿದ್ಧಗೊಳ್ಳಲಿದೆ ಜಗತ್ತಿನ ಮೊದಲ ನೌಕಾ ಸುರಂಗ ಮಾರ್ಗ- ಏನೀದರ ವಿಶೇಷತೆ ಗೊತ್ತಾ?

ಸಾವಿರಾರು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ನೌಕಾ ಸುರಂಗ ಮಾರ್ಗವು ಒಟ್ಟು 1.7-ಕಿ.ಮಿ ಉದ್ದವಿರಲಿದೆ. ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ಸಿದ್ಧಗೊಳ್ಳಲಿದ್ದು, ವಾಣಿಜ್ಯ ಉದ್ದೇಶಕ್ಕಾಗಿ ಬಳಕೆಯಾಗಲಿದೆ.

ಸಿದ್ಧಗೊಳ್ಳಲಿದೆ ಜಗತ್ತಿನ ಮೊದಲ ನೌಕಾ ಸುರಂಗ ಮಾರ್ಗ- ಏನೀದರ ವಿಶೇಷತೆ ಗೊತ್ತಾ?

2018ಕ್ಕೆ ನಿರ್ಮಾಣ ಕಾರ್ಯ ಶುರುವಾಗಲಿದ್ದು, 1.7-ಕಿಮಿ ಉದ್ದದೊಂದಿಗೆ 37 ಮೀಟರ್ ಎತ್ತರ ಹೊಂದಿರಲಿದೆ. ಜೊತೆಗೆ 26.5 ಮೀಟರ್ ಅಗಲವಿರಲಿದ್ದು, ಪ್ರಮುಖ ಜಲ ಮಾರ್ಗಗಳಿಗೆ ಸಂಪರ್ಕ ಕಲ್ಪಿಸಲಿದೆ.

ಸಿದ್ಧಗೊಳ್ಳಲಿದೆ ಜಗತ್ತಿನ ಮೊದಲ ನೌಕಾ ಸುರಂಗ ಮಾರ್ಗ- ಏನೀದರ ವಿಶೇಷತೆ ಗೊತ್ತಾ?

ಈ ಹೊಸ ನೌಕಾ ಸುರಂಗ ಮಾರ್ಗ ನಿರ್ಮಾಣಕ್ಕಾಗಿ ಭಾರೀ ಪ್ರಮಾಣದ ಕಲ್ಲಿನ ಬಂಡೆಗಳನ್ನು ತೆಗೆದುಹಾಕಬೇಕಿದ್ದು, 7.5 ಬಿಲಿಯನ್ ಟನ್‌ನಷ್ಟು ಕಲ್ಲನ್ನು ಪುಡಿ ಮಾಡಬೇಕಿದೆ. ಇದಕ್ಕಾಗಿ 4 ವರ್ಷಗಳ ಕಾಲ ಸಮಯಾವಕಾಶ ಹಿಡಿಯಲಿದೆ.

ಸಿದ್ಧಗೊಳ್ಳಲಿದೆ ಜಗತ್ತಿನ ಮೊದಲ ನೌಕಾ ಸುರಂಗ ಮಾರ್ಗ- ಏನೀದರ ವಿಶೇಷತೆ ಗೊತ್ತಾ?

ಈ ಬೃಹತ್ ಯೋಜನೆಗೆ ಒಟ್ಟು 12 ವರ್ಷ ಸಮಯಬೇಕಿದ್ದು, 2029ಕ್ಕೆ ಪೂರ್ಣ ಪ್ರಮಾಣದ ಸೇವೆ ನಿಡಲಿದೆ. ಇದಕ್ಕಾಗಿ ನಾರ್ವೆ ಸರ್ಕಾರ ಭಾರೀ ಪ್ರಮಾಣದ ಹಣ ವಿನಿಯೋಗ ಮಾಡುತ್ತಿದ್ದು, ನೌಕಾಯಾನದ ಹೆಚ್ಚುವರಿ ಅವಧಿಯನ್ನು ತಗ್ಗಿಸಲು ಇದು ಸಹಕಾರಿಯಾಗಲಿದೆ.

ಸಿದ್ಧಗೊಳ್ಳಲಿದೆ ಜಗತ್ತಿನ ಮೊದಲ ನೌಕಾ ಸುರಂಗ ಮಾರ್ಗ- ಏನೀದರ ವಿಶೇಷತೆ ಗೊತ್ತಾ?

ನಾರ್ವೇಜಿಯನ್ ಪಟ್ಟಣದಿಂದ ಹಾಯ್ದು ಹೊಗಲಿರುವ ಈ ನೌಕಾ ಸುರಂಗವು ಬರ್ಗೆನ್ ಮತ್ತು ಅಲೆಸುಂದ್ ನಗರಗಳಿಗೆ ಸಂಪರ್ಕ ಕಲ್ವಿಸಲಿದೆ. ಇದರಿಂದ ಸಮಯ ಉಳಿತಾಯವಾಗುವುದಲ್ಲದೇ ಭಾರೀ ಪ್ರಮಾಣದ ಆದಾಯ ಕೂಡಾ ಹರಿದು ಬರಲಿದೆ.

ಸಿದ್ಧಗೊಳ್ಳಲಿದೆ ಜಗತ್ತಿನ ಮೊದಲ ನೌಕಾ ಸುರಂಗ ಮಾರ್ಗ- ಏನೀದರ ವಿಶೇಷತೆ ಗೊತ್ತಾ?

ಈ ಹಿಂದೆ 25 ಕಿಮಿ ಉದ್ದದ ರಸ್ತೆ ಸುರಂಗ ನಿರ್ಮಾಣ ಮಾಡಿದ್ದ ನಾರ್ವೆ ಸರ್ಕಾರ ಇದೀಗ ನೌಕಾ ಸುರಂಗ ಮಾರ್ಗ ನಿರ್ಮಾಣ ಮಾಡಿ ಮತ್ತೊಂದು ಅದ್ಭುತಕ್ಕೆ ಸಾಕ್ಷಿಯಾಗಲಿದೆ. ಜೊತೆಗೆ ಇಂತಹ ಹತ್ತಾರು ನೌಕಾ ಸುರಂಗ ಮಾರ್ಗಗಳ ನಿರ್ಮಾಣಕ್ಕೂ ಇದು ಪ್ರೇರಣೆಯಾಗಲಿದೆ.

ಡ್ರೈವ್‌ಸ್ಪಾರ್ಕ್‌ನಲ್ಲಿ ಇನ್ನಷ್ಟು ಸ್ವಾರಸ್ಯಕರ ಸುದ್ಧಿಗಳು ನಿಮಗಾಗಿ

ಸಿದ್ಧಗೊಳ್ಳಲಿದೆ ಎಕ್ಸ್‌ಪ್ರೆಸ್ ವೇ- ಜೈಪುರ್ ಟು ಗುರುಗ್ರಾಮ್ ನಡುವಿನ ಪ್ರಯಾಣ ಇನ್ನು 90 ನಿಮಿಷ..!!

ಬಿಡುಗಡೆಗೊಂಡಿರುವ ಹೊಚ್ಚ ಹೊಸ ಟಾಟಾ ಟಿಗೋರ್ ಕಾರಿನ ಚಿತ್ರಗಳನ್ನು ವೀಕ್ಷಿಸಿ.

ಮಾರುಕಟ್ಟೆಗೆ ಲಗ್ಗೆಯಿಟ್ಟ 2017ರ ಟಿವಿಎಸ್ ಅಪಾಚಿ ಆರ್‌ಟಿಆರ್ 200 4ವಿ ಬೈಕ್..!!

English summary
Norway's construction of the world’s first ship tunnel could begin in 2018. Stad Ship Tunnel will measure 1.7km in length, 37 metres in height and 26.5 metres in height and 26.5 metres in width.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark