ಎರಡನೇ ಬಾರಿ ರೋಲ್ಸ್ ರಾಯ್ಸ್ ಕುಲಿನನ್ ಕಾರು ಖರೀದಿಸಿದ ಮುಖೇಶ್ ಅಂಬಾನಿ

ಮುಖೇಶ್ ಅಂಬಾನಿ ಭಾರತದ ಶ್ರೀಮಂತ ಉದ್ಯಮಿ. ಮುಖೇಶ್ ಅಂಬಾನಿ ಇತ್ತೀಚೆಗೆ ಹೊಸ ರೋಲ್ಸ್ ರಾಯ್ಸ್ ಕುಲಿನನ್ ಕಾರು ಖರೀದಿಸಿದ್ದಾರೆ. ಈ ಹೊಸ ಕಾರು ಮುಖೇಶ್ ಅಂಬಾನಿಯವರ ಕಾರು ಗ್ಯಾರೇಜ್‌ನಲ್ಲಿರುವ ಎರಡನೇ ರೋಲ್ಸ್ ರಾಯ್ಸ್ ಕುಲಿನನ್ ಕಾರು.

ಎರಡನೇ ಬಾರಿ ರೋಲ್ಸ್ ರಾಯ್ಸ್ ಕುಲಿನನ್ ಕಾರು ಖರೀದಿಸಿದ ಮುಖೇಶ್ ಅಂಬಾನಿ

2019ರಲ್ಲಿ ರೋಲ್ಸ್ ರಾಯ್ಸ್ ಕುಲಿನನ್ ಕಾರು ಭಾರತದಲ್ಲಿ ಬಿಡುಗಡೆಯಾದಾಗ ಆ ಕಾರನ್ನು ಮೊದಲಿಗೆ ಅಂಬಾನಿ ಕುಟುಂಬದವರೇ ಖರೀದಿಸಿದ್ದರು. ಮೊದಲ ಬಾರಿ ಖರೀದಿಸಿದ ಕುಲಿನನ್ ಕಾರು ಸೇಬಲ್ ಬಣ್ಣವನ್ನು ಹೊಂದಿದೆ. ಈಗ ಖರೀದಿಸಲಾಗಿರುವ ಕಾರು ಆರ್ಕ್ಟಿಕ್ ವೈಟ್ ಬಣ್ಣವನ್ನು ಹೊಂದಿದೆ.

ಎರಡನೇ ಬಾರಿ ರೋಲ್ಸ್ ರಾಯ್ಸ್ ಕುಲಿನನ್ ಕಾರು ಖರೀದಿಸಿದ ಮುಖೇಶ್ ಅಂಬಾನಿ

ಸಿಎಸ್ 12 ವ್ಲಾಗ್ಸ್ ಎಂಬ ಯೂಟ್ಯೂಬ್ ಚಾನೆಲ್‌ ಇತ್ತೀಚೆಗೆ ಈ ವೀಡಿಯೊವನ್ನು ಶೇರ್ ಮಾಡಿದೆ. ಆದರೆ ಅಂಬಾನಿ ಕುಟುಂಬದವರು ಈ ಹೊಸ ಕಾರಿನೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಎರಡನೇ ಬಾರಿ ರೋಲ್ಸ್ ರಾಯ್ಸ್ ಕುಲಿನನ್ ಕಾರು ಖರೀದಿಸಿದ ಮುಖೇಶ್ ಅಂಬಾನಿ

ಈ ವೀಡಿಯೊದಲ್ಲಿ ಹೊಸ ಕಾರನ್ನು ಮುಂಬೈನಲ್ಲಿರುವ ಅಂಬಾನಿಯವರ ದಿ ಆಂಟಿಲ್ಲಾ ಮನೆಯ ಬಳಿ ನಿಲ್ಲಿಸಿರುವುದನ್ನು ಕಾಣಬಹುದು. ಕಳೆದ ವರ್ಷ ಭಾರತದಲ್ಲಿ ಬಿಡುಗಡೆಯಾದ ರೋಲ್ಸ್ ರಾಯ್ಸ್‌ ಕುಲಿನನ್ ಬ್ಲ್ಯಾಕ್ ಬೀಜ್ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.8.2 ಕೋಟಿಗಳಾಗಿದೆ.

ಎರಡನೇ ಬಾರಿ ರೋಲ್ಸ್ ರಾಯ್ಸ್ ಕುಲಿನನ್ ಕಾರು ಖರೀದಿಸಿದ ಮುಖೇಶ್ ಅಂಬಾನಿ

ಅಂಬಾನಿ ಕುಟುಂಬವು ಎಷ್ಟು ರೋಲ್ಸ್ ರಾಯ್ಸ್ ಕಾರುಗಳನ್ನು ಹೊಂದಿದೆ ಎಂಬ ಬಗ್ಗೆ ಯಾರಿಗೂ ಸ್ಪಷ್ಟ ಮಾಹಿತಿಯಿಲ್ಲ. ಆದರೆ ಇದುವರೆಗೂ ಅಂಬಾನಿ ಕುಟುಂಬವು ನಾಲ್ಕು ರೋಲ್ಸ್ ರಾಯ್ಸ್ ಕಾರುಗಳೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಎರಡನೇ ಬಾರಿ ರೋಲ್ಸ್ ರಾಯ್ಸ್ ಕುಲಿನನ್ ಕಾರು ಖರೀದಿಸಿದ ಮುಖೇಶ್ ಅಂಬಾನಿ

ಕುಲಿನನ್ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದ ರೋಲ್ಸ್ ರಾಯ್ಸ್ ಕಂಪನಿಯ ಕಾರು ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ರೋಲ್ಸ್ ರಾಯ್ಸ್ ಕುಲಿನನ್ ಆನ್-ರೋಡ್'ಗೆ ಮಾತ್ರವಲ್ಲದೇ ಆಫ್-ರೋಡಿಗೂ ಹೊಂದಿಕೊಳ್ಳುತ್ತದೆ.

2.6 ಟನ್ ತೂಕವಿರುವ ರೋಲ್ಸ್ ರಾಯ್ಸ್ ಕುಲಿನನ್ ಕಾರಿನಲ್ಲಿ 6 ಲೀಟರಿನ ವಿ 12 ಎಂಜಿನ್ ಅಳವಡಿಸಲಾಗಿದೆ. ರೋಲ್ಸ್ ರಾಯ್ಸ್ ಕಂಪನಿಯ ಈ ಬಲಶಾಲಿ ಎಂಜಿನ್ 555 ಬಿಹೆಚ್‌ಪಿ ಪವರ್ ಹಾಗೂ 850 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಎರಡನೇ ಬಾರಿ ರೋಲ್ಸ್ ರಾಯ್ಸ್ ಕುಲಿನನ್ ಕಾರು ಖರೀದಿಸಿದ ಮುಖೇಶ್ ಅಂಬಾನಿ

ಈ ಎಂಜಿನ್‌ನೊಂದಿಗೆ ಕಂಪನಿಯು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ನೀಡಿದೆ. ಈ ಗೇರ್‌ಬಾಕ್ಸ್ ಅನ್ನು ಜೆಎಫ್‌ನಿಂದ ಪಡೆಯಲಾಗಿದೆ. ಈ ಗೇರ್‌ಬಾಕ್ಸ್ ಎಲ್ಲಾ ನಾಲ್ಕು ವ್ಹೀಲ್'ಗಳಿಗೆ ಪವರ್ ನೀಡುತ್ತದೆ. ಕಂಪನಿಯು ಎಲೆಕ್ಟ್ರಿಕ್ ಪವರ್‌ಟ್ರೇನ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ.

Most Read Articles
 

Kannada
English summary
India's richest man Mukesh Ambani buys second Rolls Royce Cullinan car. Read in Kannada.
Story first published: Friday, January 15, 2021, 20:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X