ಕುಟುಂಬ ನಿರ್ವಹಣೆಗಾಗಿ ಭವಿಷ್ಯವನ್ನು ತ್ಯಾಗ ಮಾಡಿದ ಕಿರಿಯ ವಯಸ್ಸಿನ ಬಸ್ ಚಾಲಕಿ ಈಕೆ

ಭಾರತದಲ್ಲಿ ಈಗ ಮಹಿಳೆಯರು ಸಹ ಭಾರೀ ಗಾತ್ರದ ವಾಹನಗಳ ಚಾಲನೆಯನ್ನು ಆರಂಭಿಸಿದ್ದಾರೆ. ಮೊದಲು ದ್ವಿಚಕ್ರ ವಾಹನಗಳನ್ನು ಮಾತ್ರ ಚಾಲನೆ ಮಾಡುತ್ತಿದ್ದ ಮಹಿಳೆಯರು ಕಾಲ ಕಳೆದಂತೆ ಕಾರುಗಳನ್ನು ಸಹ ಚಾಲನೆ ಮಾಡಲು ಶುರು ಮಾಡಿದರು.

ಕುಟುಂಬ ನಿರ್ವಹಣೆಗಾಗಿ ಭವಿಷ್ಯವನ್ನು ತ್ಯಾಗ ಮಾಡಿದ ಕಿರಿಯ ವಯಸ್ಸಿನ ಬಸ್ ಚಾಲಕಿ ಈಕೆ

ಈಗ ಕಾರು ಚಾಲನೆ ಮಾಡುವ ಮಹಿಳೆಯರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ಬಸ್, ಟ್ರಕ್ ನಂತಹ ಭಾರೀ ಗಾತ್ರದ ವಾಹನಗಳನ್ನು ಚಾಲನೆ ಮಾಡುವ ಮಹಿಳೆಯರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರವೇ ಎಂದು ಹೇಳಬಹುದು. ಇತ್ತೀಚಿಗೆ ಭಾರತದ ಅತ್ಯಂತ ಕಿರಿಯ ವಯಸ್ಸಿನ ಮಹಿಳಾ ಬಸ್ ಚಾಲಕರೊಬ್ಬರ ಬಗ್ಗೆ ಹೆಚ್ಚು ಸುದ್ದಿಯಾಗುತ್ತಿದೆ.

ಕುಟುಂಬ ನಿರ್ವಹಣೆಗಾಗಿ ಭವಿಷ್ಯವನ್ನು ತ್ಯಾಗ ಮಾಡಿದ ಕಿರಿಯ ವಯಸ್ಸಿನ ಬಸ್ ಚಾಲಕಿ ಈಕೆ

ಕಲ್ಪನಾ ಮಂಡಲ್ ಎಂಬ 22 ವರ್ಷ ವಯಸ್ಸಿನ ಯುವತಿಯೇ ಆ ಕಿರಿಯ ವಯಸ್ಸಿನ ಚಾಲಕಿ. ಕಲ್ಪನಾ ಮಂಡಲ್ ರವರ ತಂದೆ ಬಸ್ ಚಾಲನೆ ಮಾಡುತ್ತಿದ್ದರು. ಇದು ಕಲ್ಪನಾ ಮಂಡಲ್ ರವರಲ್ಲಿ ಬಸ್ ಚಾಲನೆ ಮಾಡಲು ಆಸಕ್ತಿ ಮೂಡುವಂತೆ ಮಾಡಿತು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕುಟುಂಬ ನಿರ್ವಹಣೆಗಾಗಿ ಭವಿಷ್ಯವನ್ನು ತ್ಯಾಗ ಮಾಡಿದ ಕಿರಿಯ ವಯಸ್ಸಿನ ಬಸ್ ಚಾಲಕಿ ಈಕೆ

ಕಲ್ಪನಾ ಮಂಡಲ್ ತಮ್ಮ 8ನೇ ವಯಸ್ಸಿನಲ್ಲಿ ಬಸ್ ಚಾಲನೆ ಮಾಡುವುದನ್ನು ಕಲಿತರು. ಕಲ್ಪನಾ ಮಂಡಲ್ ಅವರ ತಂದೆ 2 ವರ್ಷಗಳ ಹಿಂದೆ ಅಪಘಾತಕ್ಕೀಡಾದ ನಂತರ ಅವರಿಗೆ ಬಸ್ ಚಾಲನೆ ಮಾಡಲು ಸಾಧ್ಯವಾಗಲಿಲ್ಲ.

ಕುಟುಂಬ ನಿರ್ವಹಣೆಗಾಗಿ ಭವಿಷ್ಯವನ್ನು ತ್ಯಾಗ ಮಾಡಿದ ಕಿರಿಯ ವಯಸ್ಸಿನ ಬಸ್ ಚಾಲಕಿ ಈಕೆ

ಇದರಿಂದಾಗಿ ಕುಟುಂಬದ ಜವಾಬ್ದಾರಿ ಕಲ್ಪನಾ ಮಂಡಲ್ ಅವರ ಹೆಗಲೇರಿತು. ಈ ಕಾರಣಕ್ಕೆ ಕಲ್ಪನಾ ಮಂಡಲ್ ಬಸ್ ಚಾಲನೆ ಮಾಡಲು ಶುರು ಮಾಡಿದರು. ಈಗ ಕಲ್ಪನಾ ಮಂಡಲ್ ರವರ ಆದಾಯದಿಂದಲೇ ಅವರ ಕುಟುಂಬದ ನಿರ್ವಹಣೆ ಸಾಗುತ್ತಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕುಟುಂಬ ನಿರ್ವಹಣೆಗಾಗಿ ಭವಿಷ್ಯವನ್ನು ತ್ಯಾಗ ಮಾಡಿದ ಕಿರಿಯ ವಯಸ್ಸಿನ ಬಸ್ ಚಾಲಕಿ ಈಕೆ

ಆಕೆಯ ತಂದೆ ಅಪಘಾತಕ್ಕೀಡಾದಾಗ, ಕಲ್ಪನಾ ಮಂಡಲ್ ಕುಟುಂಬವನ್ನು ಪೋಷಿಸಲು ನಿರ್ಧರಿಸಿದರು. ಆದರೆ ಹೆಚ್ಚಿನ ಬಸ್ ಮಾಲೀಕರು ಕಲ್ಪನಾ ಮಂಡಲ್ ರವರನ್ನು ನಂಬಲು ಸಿದ್ಧರಿರಲಿಲ್ಲ. ಆದರೆ ಒಂದು ಬಸ್ಸಿನ ಮಾಲೀಕರು ಅವರಿಗೆ ಬಸ್ ಚಾಲನೆ ಮಾಡಲು ಅವಕಾಶ ನೀಡಿದರು.

ಕುಟುಂಬ ನಿರ್ವಹಣೆಗಾಗಿ ಭವಿಷ್ಯವನ್ನು ತ್ಯಾಗ ಮಾಡಿದ ಕಿರಿಯ ವಯಸ್ಸಿನ ಬಸ್ ಚಾಲಕಿ ಈಕೆ

ಈ ಬಗ್ಗೆ ಮಾತನಾಡಿರುವ ಕಲ್ಪನಾರವರ ತಂದೆ ಸುಭಾಷ್ ಮಂಡಲ್, ಕಲ್ಪನಾ ಪ್ರತಿದಿನ ಬಸ್ ಚಾಲನೆ ಮಾಡುತ್ತಿರುವುದು ನನಗೆ ಹೆಮ್ಮೆ ಎನಿಸುತ್ತದೆ ಎಂದು ಹೇಳಿದ್ದಾರೆ. ಕಲ್ಪನಾ ತಮ್ಮ ಕುಟುಂಬದ ಒಳಿತಿಗಾಗಿ ತಮ್ಮ ಭವಿಷ್ಯವನ್ನು ತ್ಯಾಗ ಮಾಡಿದ್ದಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕುಟುಂಬ ನಿರ್ವಹಣೆಗಾಗಿ ಭವಿಷ್ಯವನ್ನು ತ್ಯಾಗ ಮಾಡಿದ ಕಿರಿಯ ವಯಸ್ಸಿನ ಬಸ್ ಚಾಲಕಿ ಈಕೆ

ಕೋಲ್ಕತಾ ಭಾರತದ ಹಲವು ನಗರಗಳಂತೆ ಹೆಚ್ಚು ವಾಹನ ದಟ್ಟಣೆಯನ್ನು ಹೊಂದಿರುವ ನಗರಗಳಲ್ಲಿ ಒಂದು. ಕಲ್ಪನಾ ಮಂಡಲ್ ಅಂತಹ ನಗರದ ಕಿರಿದಾದ ರಸ್ತೆಗಳಲ್ಲಿ ಬಸ್ ಚಾಲನೆ ಮಾಡುತ್ತಿದ್ದಾರೆ.

ಕುಟುಂಬ ನಿರ್ವಹಣೆಗಾಗಿ ಭವಿಷ್ಯವನ್ನು ತ್ಯಾಗ ಮಾಡಿದ ಕಿರಿಯ ವಯಸ್ಸಿನ ಬಸ್ ಚಾಲಕಿ ಈಕೆ

ಕೋಲ್ಕತ್ತಾದ ರಸ್ತೆಗಳು ಸದಾ ಕಿಕ್ಕಿರಿದಿರುತ್ತವೆ. ಈ ಎಲ್ಲಾ ಸಮಸ್ಯೆಗಳ ನಡುವೆಯೂ ಇಷ್ಟು ಚಿಕ್ಕ ವಯಸ್ಸಿನಲ್ಲಿ ಕಲ್ಪನಾ ಮಂಡಲ್ ಬಸ್ ಚಾಲನೆ ಮಾಡುತ್ತಿರುವುದು ನಿಜಕ್ಕೂ ಆಶ್ಚರ್ಯಕರವಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಬಸ್ ಚಾಲನೆ ಮಾಡುವಾಗ ಯಾವುದಾದರೂ ತೊಂದರೆಗಳನ್ನು ಎದುರಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು ನಾನು ಹೇಗೆ ಬಸ್ ಚಾಲನೆ ಮಾಡಬಹುದು ಎಂದು ಕೆಲವು ಪೊಲೀಸರು ಕುತೂಹಲದಿಂದ ನೋಡುತ್ತಿರುತ್ತಾರೆ ಎಂದು ಹೇಳಿದ್ದಾರೆ.

ಕುಟುಂಬ ನಿರ್ವಹಣೆಗಾಗಿ ಭವಿಷ್ಯವನ್ನು ತ್ಯಾಗ ಮಾಡಿದ ಕಿರಿಯ ವಯಸ್ಸಿನ ಬಸ್ ಚಾಲಕಿ ಈಕೆ

ಕೆಲವು ಪೊಲೀಸರು ಅವರಿಗೆ ಪ್ರೋತ್ಸಾಹ ನೀಡಿದ್ದಾರೆ. ಪೊಲೀಸರು ಕಲ್ಪನಾ ಅವರ ಜೊತೆಗೆ ಫೋಟೋವನ್ನೂ ತೆಗೆಸಿಕೊಂಡಿದ್ದಾರೆ. ಪುರುಷ ಪ್ರಾಬಲ್ಯ ಹೊಂದಿರುವ ಕ್ಷೇತ್ರದಲ್ಲಿ ಚಿಕ್ಕ ವಯಸ್ಸಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರಣಕ್ಕೆ ಕಲ್ಪನಾ ಮಂಡಲ್ ಜನಪ್ರಿಯರಾಗಿದ್ದಾರೆ. ಕಲ್ಪನಾ ಮಂಡಲ್ ನಿಜಕ್ಕೂ ಇತರ ಮಹಿಳೆಯರಿಗೆ ಆದರ್ಶಪ್ರಾಯರಾಗಿದ್ದಾರೆ. ಈ ಆದರ್ಶಪ್ರಾಯ ಯುವತಿಯ ಬಗ್ಗೆ ಫಸ್ಟ್ ಪೋಸ್ಟ್ ಡಾಟ್ ಕಾಂ ಸುದ್ದಿ ಸಂಸ್ಥೆ ವರದಿ ಮಾಡಿದೆ.

Most Read Articles

Kannada
English summary
India's youngest woman bus driver sacrificed her future for family. Read in Kannada.
Story first published: Saturday, January 9, 2021, 9:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X