ವಾಹನ ಅಧ್ಯಯನ-ಅಭಿವೃದ್ಧಿ ಘಟಕಕ್ಕೆ ಜೈ ಎಂದ ಮೋದಿ-ಕೆಮರೂನ್

By Nagaraja

ಐತಿಹಾಸಿಕ ಬ್ರಿಟನ್ ಪ್ರವಾಸ ಕೈಗೊಂಡಿರುವ ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬ್ರಿಟನ್ ಪ್ರಧಾನ ಮಂತ್ರಿ ಡೇವಿಡ್ ಕೆಮರೂನ್ ಅವರ ಜೊತೆ ಹಲವಾರು ಗಮನಾರ್ಹ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.

Also Read: ಟೆಸ್ಲಾ ವಿದ್ಯುತ್ ಕಾರು ಘಟಕಕ್ಕೆ ಮೋದಿ ಭೇಟಿ; ಅಜೆಂಡಾ ಏನು?

ಇದರಲ್ಲಿ ಉಭಯ ರಾಷ್ಟ್ರಗಳ ನಡುವೆ ಆಟೋಮೊಬೈಲ್ ಕ್ಷೇತ್ರದಲ್ಲೂ ಪಾಲುದಾರಿಕೆಗೆ ಸಹಮತ ಮೂಡಿಬಂದಿದೆ. ಇದರಂತೆ ವಾಹನ ಅಧ್ಯಯನ ಹಾಗೂ ಅಭಿವೃದ್ಧಿ (R&D) ಘಟಕ ಆರಂಭಕ್ಕೆ ಜೈ ಎಂದಿದ್ದಾರೆ.

ವಾಹನ ಅಧ್ಯಯನ-ಅಭಿವೃದ್ಧಿ ಘಟಕಕ್ಕೆ ಜೈ ಎಂದ ಮೋದಿ-ಕೆಮರೂನ್

ವಾಹನ ಅಧ್ಯಯನ ಹಾಗೂ ಅಭಿವೃದ್ಧಿ ಜೊತೆಗೆ ಟೆಸ್ಟಿಂಗ್ ಘಟಕವನ್ನು ತೆರೆದುಕೊಳ್ಳುವುದು ಉಭಯ ರಾಷ್ಟ್ರಗಳ ಯೋಜನೆಯಾಗಿದೆ. ಇದನ್ನು ವ್ಯವಸ್ಥಿತ ನೀತಿಯೊಂದಿಗೆ ಕಾರ್ಯಗತಗೊಳಿಸಲಾಗುವುದು.

ವಾಹನ ಅಧ್ಯಯನ-ಅಭಿವೃದ್ಧಿ ಘಟಕಕ್ಕೆ ಜೈ ಎಂದ ಮೋದಿ-ಕೆಮರೂನ್

ಉಭಯ ರಾಷ್ಟ್ರಗಳ ಪ್ರಧಾನಿಗಳು ಸೇರಿ ಹೊರಡಿಸಿರುವ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದ್ದು, ವಾಹನ ವಿಭಾಗದಲ್ಲಿ ನಾವೀನ್ಯತೆಯ ಬೆಳವಣಿಗೆಯನ್ನು ಉತ್ತೇಜಿಸಲು ಬಯಸುತ್ತೇವೆ ಎಂದಿದ್ದಾರೆ.

ವಾಹನ ಅಧ್ಯಯನ-ಅಭಿವೃದ್ಧಿ ಘಟಕಕ್ಕೆ ಜೈ ಎಂದ ಮೋದಿ-ಕೆಮರೂನ್

ಇದರ ಪ್ರಕಾರ ಭಾರತ ಹಾಗೂ ಬ್ರಿಟನ್ ದೇಶಗಳು ಆಟೋಮೊಟಿವ್ ಅಧ್ಯಯನ ಹಾಗೂ ಅಭಿವೃದ್ಧಿ ಘಟಕ ಹಾಗೂ ಟೆಸ್ಟಿಂಗ್ ವ್ಯವಸ್ಥೆಯ ಒಪ್ಪಂದಕ್ಕೆ ಸಹಿ ಹಾಕಿದೆ.

ವಾಹನ ಅಧ್ಯಯನ-ಅಭಿವೃದ್ಧಿ ಘಟಕಕ್ಕೆ ಜೈ ಎಂದ ಮೋದಿ-ಕೆಮರೂನ್

ನಿಮಗೆಲ್ಲರಿಗೂ ತಿಳಿದಿರುಂತೆಯೇ ಕೆಲವು ವರ್ಷಗಳ ಹಿಂದೆ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದ ಬ್ರಿಟನ್‌ನ ಐಷಾರಾಮಿ ಜಾಗ್ವಾರ್ ಲ್ಯಾಂಡ್ ರೋವರ್ ಸಂಸ್ಥೆಯನ್ನು ಭಾರತದ ಐಕಾನಿಕ್ ಟಾಟಾ ಮೋಟಾರ್ಸ್ ಸಂಸ್ಥೆಯು ಖರೀದಿಸಿತ್ತು. ಈ ಮೂಲಕ ಸಾಲದ ಸುಳಿಗೆ ಸಿಲುಕಿದ್ದ ಜಾಗ್ವಾರ್ ಲ್ಯಾಂಡ್ ರೋವರ್‌ಗೆ ಮರುಜೀವ ತುಂಬಿತ್ತು.

ವಾಹನ ಅಧ್ಯಯನ-ಅಭಿವೃದ್ಧಿ ಘಟಕಕ್ಕೆ ಜೈ ಎಂದ ಮೋದಿ-ಕೆಮರೂನ್

ಈ ಬಗ್ಗೆ ಬ್ರಿಟನ್ ಪಾರ್ಲಿಮೆಂಟ್ ನಲ್ಲಿ ಉಲ್ಲೇಖ ಮಾಡಿರುವ ಭಾರತ ಪ್ರಧಾನಿ ನರೇಂದ್ರ ಮೋದಿ "ಬ್ರಿಟನ್ ಐಕಾನಿಕ್ ಸಂಸ್ಥೆಯನ್ನು ಭಾರತದ ಐಕಾನಿಕ್ ಸಂಸ್ಥೆಯು ಮುನ್ನಡೆಸುತ್ತಿದ್ದು, ಈ ಮೂಲಕ ಇಂಗ್ಲೆಂಡ್ ಖಾಸಗಿ ವಿಭಾಗದಲ್ಲಿ ಅತಿ ದೊಡ್ಡ ಉದ್ಯೋಗದಾತನಾಗಿ ಪರಿಣಮಿಸಿದೆ" ಎಂದಿದ್ದಾರೆ.

ಇವನ್ನೂ ಓದಿ

01. ಯುಕೆ ವೆಲ್‌ಕಮ್ಸ್ ಇಂಡಿಯಾ; ಲಂಡನ್‌ನಲ್ಲಿ 'ಮೋದಿ ಎಕ್ಸ್‌ಪ್ರೆಸ್' ಬಸ್ ಮುಂದಕ್ಕೆ ಓದಿ

02. ಮಸ್ದಾರ್ ಪೇಟೆಯಲ್ಲಿ ಮೋದಿ ಗಿಮಿಕ್ ಚಮಕ್

More from DriveSpark

Article Published On: Saturday, November 14, 2015, 14:45 [IST]
English summary
India, UK To Collaborate In Automotive Research And Development
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+