ಭಾರತೀಯ ವಾಯು ಸೇನೆಗೆ 'ಬ್ರಹ್ಮ ತೇಜಸ್ಸು'
15 ವರ್ಷಗಳ ಸುದೀರ್ಘ ಅವಧಿಯ ಬಳಿಕ ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅರೂಪ್ ರಾಹಾ, ಸ್ವದೇಶಿ ನಿರ್ಮಿತ 'ತೇಜಸ್' ಹಗುರ ಕದನ ವಿಮಾನವನ್ನು ಪ್ರಯೋಗಿಕ ಪರೀಕ್ಷೆ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.
ಭಾರತ-ಪಾಕ್ ಯುದ್ಧಕಾಲ ಪರಿಸ್ಥಿತಿ ಎದುರಾದರೆ ..?
ವಾಯುಪಡೆಯ ನುರಿತ ಹಾಗೂ ಅನುಭವಿ ಯುದ್ದ ಪೈಲಟ್ ಆಗಿರುವ ಏರ್ ಚೀಫ್ ಮಾರ್ಷಲ್ ಅರೂಪ್ ರಾಹಾ, 30 ನಿಮಿಷಗಳಷ್ಟು ಹೊತ್ತು ಗಾಳಿಯಿಂದ ಗಾಳಿಗೆ ಮತ್ತು ಗಾಳಿಯಿಂದ ನೆಲಕ್ಕೆ ದಾಳಿ ನಡೆಸುವ ಪರೀಕ್ಷೆ ನಡೆಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಇಸ್ರೇಲ್ ನಿರ್ಮಿತ ಅತ್ಯಾಧುನಿಕ ರಾಡಾರ್ ವ್ಯವಸ್ಥೆ ಮತ್ತು ಹೆಲ್ಮೆಟ್ ಮೌಂಟೆಡ್ ಡಿಸ್‌ಪ್ಲೇ ಸೈಟ್ (ಎಚ್ಎಂಡಿ) ತೇಜಸ್ ಹಗುರ ಯುದ್ಧ ವಿಮಾನದ ಪ್ರಮುಖ ವೈಶಿಷ್ಟ್ಯವಾಗಿದೆ.

ಬಳಿಕ ತಮ್ಮ ಅನುಭವ ಹಂಚಿಕೊಂಡಿರುವ ವಾಯುದಳದ ಮುಖ್ಯಸ್ಥ ಅರೂಪ್ ರಾಹಾ, ಭಾರತೀಯ ವಾಯುಸೇನೆಯ ಕಾರ್ಯಾಚರಣೆಗೆ ತೇಜಸ್ ಹೊಸ ಸೇರ್ಪಡೆಯಾಗಿರಲಿದೆ ಎಂದಿದ್ದಾರೆ.

ಅನೇಕ ದಶಕಗಳ ಅಭಿವೃದ್ಧಿಗಳ ಬಳಿಕ ಸೀಮಿತ 120 ತೇಜಸ್ ಯುದ್ಧ ವಿಮಾನಗಳು ಭಾರತೀಯ ವಾಯುಸೇನೆಯನ್ನು ಸೇರ್ಪಡೆಗೊಳುತ್ತಿದೆ.

ತೇಜಸ್ ಹಗುರ ಯುದ್ಧ ವಿಮಾನದ ಅಭಿವೃದ್ಧಿಯಲ್ಲಿ ಭಾರತೀಯ ವಾಯು ಸೇನೆಗೆ ಅನೇಕ ತೊಡಕುಗಳು ಎದುರಾಗಿದ್ದವು. ಈಗ ಇದನ್ನು ನನಸಾಗಿಸಲು ಪ್ರಯತ್ನಿಸಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ್ನು ರಾಹಾ ಪ್ರಶಂಸಿದ್ದಾರೆ.

ಬೆಂಗಳೂರಿನಲ್ಲಿ ಸ್ಥಿತಗೊಂಡಿರುವ ಎಲ್‌ಎಎಲ್ ಘಟಕದಲ್ಲಿ ತೇಜನ್ ನಿರ್ಮಾಣ ಪ್ರಕ್ರಿಯೆ ಜರಗುತ್ತಿದ್ದು, 2016 ಜುಲೈ ವೇಳೆಯಾಗುವಾಗ ಮೊದಲ ಹಂತದ ತೇಜಸ್ ವಿಮಾನಗಳು ವಾಯುಸೇನೆಗೆ ಹಸ್ತಾಂತರವಾಗಲಿದೆ.

ತೇಜಸ್ ಒಂದು ಸೂಪರ್ ಸೋನಿಕ್, ಬಹು ಪಾತ್ರಧಾರಿ ಹಗುರ ಭಾರದ ಕದನ ವಿಮಾನವಾಗಿದ್ದು, ಕಳೆದ ಮೂರು ದಶಕದಿಂದಲೂ ನಿರ್ಮಾಣ ಹಂತದಲ್ಲಿರುವುದು ಖೇದಕರ ಸಂಗತಿಯಾಗಿದೆ.

ಏರೋನಾಟಿಕಲ್ಸ್ ಅಭಿವೃದ್ಧಿ ಏಜೆನ್ಸಿ ಸಹ ಜೊತೆಗಾರಿಕೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದ್ದು, ಹಳೆಯದಾದ ಮಿಗ್-21 ಮತ್ತು ಮಿಗ್-23 ಯುದ್ಧ ವಿಮಾನಗಳ ಸ್ಥಾನವನ್ನು ತುಂಬಲಿದೆ.

ಸಿಂಗಲ್ ಸೀಟು, ಸಿಂಗಲ್ ಜೆಟ್ ಎಂಜಿನ್ ಹಾಗೂ ಬಹು ಪಾತ್ರಧಾರಿ ವಿಮಾನವಾಗಿರುವ ತೇಜಸ್ ಹಗುರ ಭಾರದ ವಿಮಾನದ ಹೆಸರನ್ನು 2003ರಲ್ಲಿ ಅಂದಿನ ಪ್ರಧಾನ ಮಂತ್ರಿ ಅಟಾಲ್ ಬಿಹಾರಿ ವಾಜಪೇಯಿ ಸೂಚಿಸಿದ್ದರು.

ಭಾರತದ ವಾಯು ಪ್ರದೇಶದ ಸುರಕ್ಷತೆ ಕಾಯುವ ಯುದ್ಧ ವಿಮಾನಗಳು

ರಫೇಲ್ ಬೇಡ, ತೇಜಸ್ ಸಾಕು; 120 ಯುದ್ಧ ವಿಮಾನಕ್ಕೆ ಆದೇಶ

ಭಾರತೀಯ ವಾಯುಸೇನೆಯ ಸಕ್ರಿಯ ಯುದ್ಧ ವಿಮಾನಗಳು


Click it and Unblock the Notifications








