ಭಾರತೀಯ ವಾಯುಪಡೆ ಬತ್ತಳಿಕೆಯಲ್ಲಿವೆ ಶಕ್ತಿಶಾಲಿ ಫೈಟರ್ ಜೆಟ್‌ಗಳು

'ನಮ್ಮ ಹೆಮ್ಮೆಯ ಭಾರತೀಯ ವಾಯುಪಡೆ (ಐಎಎಫ್‌)ಯು ವಿಶ್ವದ ಅತ್ಯಂತ ಶಕ್ತಿಶಾಲಿ ಪಡೆಗಳಲ್ಲಿ ಒಂದಾಗಿದೆ'. ವಾಯುಪಡೆಯು ದೇಶದ ವಾಯು ಪ್ರದೇಶ ಮತ್ತು ಗಡಿಗಳನ್ನು ಸುರಕ್ಷಿತವಾಗಿರಿಸಲು ವಿವಿಧ ರೀತಿಯ ಸುಧಾರಿತ ಹಾಗೂ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಹೊಂದಿದೆ. ಇದರಲ್ಲಿ ಫ್ರೆಂಚ್, ರಷ್ಯನ್ ಮತ್ತು ಸ್ವದೇಶಿ ಯುದ್ಧ ವಿಮಾನಗಳು ಸೇರಿವೆ.

ದೇಶದ ರಕ್ಷಣೆಗೆ ಸದಾ ಸಿದ್ದವಾಗಿರುವ ಭಾರತೀಯ ವಾಯುಪಡೆಯು ಪ್ರಸ್ತುತ, ಸಾಕಷ್ಟು ಫೈಟರ್ ಜೆಟ್‌ಗಳನ್ನು ಹೊಂದಿದೆ ಎಂದು ಹೇಳಬಹುದು. ಅದರಲ್ಲಿ ಡಸಾಲ್ಟ್ ರಫೇಲ್, ಸುಖೋಯ್ su 30 MKI, MiG-29 UPG, HAL ತೇಜಸ್, ಮಿರಾಜ್ 2000, SEPECAT ಜಾಗ್ವಾರ್ ಮತ್ತು MiG - 21 ಬೈಸನ್‌ಗಳು ಪ್ರಮುಖವಾಗಿವೆ. ಈ ಫೈಟರ್ ಜೆಟ್‌ಗಳಲ್ಲಿ, MiG-21 ಬೈಸನ್ ದೇಶದ ಮೊದಲ ಸೂಪರ್‌ಸಾನಿಕ್ ಫೈಟರ್ ಜೆಟ್ ಆಗಿದೆ. ಇದು ನಮ್ಮ ಹೆಮ್ಮೆಯೇ ಸರಿ.

ಭಾರತೀಯ ವಾಯುಪಡೆ ಬತ್ತಳಿಕೆಯಲ್ಲಿವೆ ಶಕ್ತಿಶಾಲಿ ಫೈಟರ್ ಜೆಟ್‌ಗಳು

MiG-21 ಬೈಸನ್
ಸೋವಿಯತ್ ಮೂಲದ ಫೈಟರ್ ಮತ್ತು ಇಂಟರ್ಸೆಪ್ಟರ್ ವಿಮಾನ MiG-21 ಆಗಿದೆ ಎಂದು ಹೇಳಬಹುದು. ಇದನ್ನು ಮೊದಲ ಬಾರಿಗೆ 1959 ರಲ್ಲಿ ಪರಿಚಯಿಸಲಾಯಿತು. ಇಲ್ಲಿಯವರೆಗೆ 11,496 ವಿಮಾನಗಳನ್ನು ನಿರ್ಮಾಣ ಮಾಡಲಾಗಿದೆ. MiG-21 ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಇತ್ತು. ಅನೇಕ ದೇಶಗಳಿಗೆ ತಯಾರಕರು ರಫ್ತು ಮಾಡುತ್ತಿದ್ದರು. ಭಾರತವು MiG-21 ಫೈಟರ್ ಜೆಟ್‌ಗಳ ಅತಿದೊಡ್ಡ ಸಂಗ್ರಹವನ್ನು ಹೊಂದಿತ್ತು. ದೇಶವು ತನ್ನ ವಾಯುಪಡೆಯಲ್ಲಿ 1,200ಕ್ಕೂ ಹೆಚ್ಚು MiG-21 ಯುದ್ಧ ವಿಮಾನಗಳನ್ನು ಹೊಂದಿತ್ತು.

ಸದ್ಯ, 113 ಮಿಗ್ -21 ವಿಮಾನಗಳು ವಾಯುಪಡೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಏಕೆಂದರೆ ವಿಮಾನದ ಹಿಂದಿನ ಆವೃತ್ತಿಗಳನ್ನು ಹಂತಹಂತವಾಗಿ ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ, ಭಾರತೀಯ ವಾಯುಪಡೆಯು 2025ರ ವೇಳೆಗೆ ಎಲ್ಲ MiG-21ಗಳ ಕಾರ್ಯಾಚರಣೆಯನ್ನು ನಿಲ್ಲಿಸಲು ಎದುರು ನೋಡುತ್ತಿದೆ. MiG-21 ಸುರಕ್ಷತೆ ವಿಚಾರದಲ್ಲಿ ಸಮಸ್ಯೆ ಎದುರಿಸುತ್ತಿದೆ. 170ಕ್ಕೂ ಹೆಚ್ಚು ಭಾರತೀಯ ಪೈಲಟ್‌ಗಳು ಮತ್ತು 40 ನಾಗರಿಕರು MiG-21 ವಿಮಾನ ಸಂಬಂಧ ಅವಘಡಗಳಿಂದ ಸಾವನ್ನಪ್ಪಿದ್ದಾರೆ. ಪರಿಣಾಮವಾಗಿ, ಈ ವಿಮಾನವನ್ನು 'flying coffin' ಎಂದು ಕರೆಯುತ್ತಾರೆ.

SEPECAT ಜಾಗ್ವಾರ್
ಆಂಗ್ಲೋ-ಫ್ರೆಂಚ್ ಅಟ್ಯಾಕ್ ವಿಮಾನ ಈ SEPECAT ಜಾಗ್ವಾರ್ ಆಗಿದೆ. ಭಾರತೀಯ ವಾಯುಪಡೆಯು 1978ರಲ್ಲಿ $1 ಶತಕೋಟಿ ಮೌಲ್ಯದ ಆರ್ಡರ್‌ನೊಂದಿಗೆ SEPECAT ಜಾಗ್ವಾರ್ ವಿಮಾನದ ಏಕೈಕ ಅತಿದೊಡ್ಡ ಗ್ರಾಹಕವಾಗಿತ್ತು. SEPECAT ಜಾಗ್ವಾರ್ ಅನ್ನು ವಾಯುಪಡೆ ವೇಗದ, ಸ್ಥಿರ ಮತ್ತು ಪರಿಣಾಮಕಾರಿ ರೇಂಜ್ ಸ್ಟ್ರೈಕ್ ವಿಮಾನವೆಂದು ಪರಿಗಣಿಸುತ್ತದೆ. ವಾಸ್ತವವಾಗಿ, SEPECAT ಜಾಗ್ವಾರ್ ವಿಮಾನದ 125 ಯುನಿಟ್ ಗಳನ್ನು ಇತ್ತೀಚಿನ DARIN III ವ್ಯವಸ್ಥೆಗೆ ನವೀಕರಿಸಲಾಗುತ್ತಿದೆ. ಇದು ಹೆಚ್ಚು ಸುಧಾರಿತ ಏವಿಯಾನಿಕ್ಸ್‌ನೊಂದಿಗೆ ವಿಮಾನವನ್ನು ಮೊದಲಿಗಿಂತ ಉತ್ತಮಗೊಳಿಸುತ್ತದೆ.

ಮಿಗ್-29
ಸೋವಿಯತ್ ಯೂನಿಯನ್ ವಿನ್ಯಾಸಗೊಳಿಸಿದ ಡ್ಯೂಯಲ್-ಎಂಜಿನ್ ಯುದ್ಧ ವಿಮಾನ MiG-29. ಇದನ್ನು ಮೊದಲ ಬಾರಿಗೆ 1983ರಲ್ಲಿ ಪರಿಚಯಿಸಲಾಯಿತು. ಭಾರತೀಯ ವಾಯುಪಡೆಯು MiG-29 ನ ಮೊದಲ ಅಂತರರಾಷ್ಟ್ರೀಯ ಗ್ರಾಹಕವಾಗಿದೆ. ಪ್ರಸ್ತುತ, ಭಾರತದಲ್ಲಿ78, MiG-29 ವಿಮಾನಗಳು ಕಾರ್ಯನಿರ್ವಹಿಸುತ್ತಿವೆ. ಈ ಯುದ್ಧ ವಿಮಾನಗಳನ್ನು 1999ರ ಕಾರ್ಗಿಲ್ ಯುದ್ಧದಲ್ಲಿ ವ್ಯಾಪಕವಾಗಿ ಬಳಸಲಾಯಿತು. ಮಿರಾಜ್ 2000 ವಿಮಾನಗಳಿಗೆ ಫೈಟರ್ ಎಸ್ಕಾರ್ಟ್ ಅನ್ನು ಒದಗಿಸುವ ಕಾರ್ಯವನ್ನು ಮಾಡಿತ್ತು. ಭಾರತ ಸದ್ಯ ತನ್ನ ಎಲ್ಲಾ MiG-29 ಗಳನ್ನು ನವೀಕರಿಸಿದೆ ಎಂದು ಹೇಳಬಹುದು.

ಮಿರಾಜ್ 2000
ಡಸಾಲ್ಟ್ ಮಿರಾಜ್ 2000 ಫ್ರೆಂಚ್ ತಯಾರಕರ ಸಿಂಗಲ್-ಎಂಜಿನ್, 4ನೇ ತಲೆಮಾರಿನ ಯುದ್ಧ ವಿಮಾನವಾಗಿದೆ. ಈ ವಿಮಾನವನ್ನು ಮೊದಲು 1984ರಲ್ಲಿ ಪರಿಚಯಿಸಲಾಯಿತು. ಪಾಕಿಸ್ತಾನವು US ನಿರ್ಮಿತ F-16 ಫೈಟರ್ ಜೆಟ್‌ಗಳನ್ನು ಖರೀದಿಸುವುದಕ್ಕೆ ಪ್ರತಿಯಾಗಿ ಒಂದು ವರ್ಷದ ನಂತರ ಭಾರತೀಯ ವಾಯುಪಡೆಯನ್ನು ಸೇರಿಕೊಂಡಿತು. ಮಿರಾಜ್ 2000 ಪಾಕಿಸ್ತಾನದ F-16 ವಿಮಾನಕ್ಕಿಂತ ಹೆಚ್ಚು ಸುಧಾರಿತವಾಗಿತ್ತು. ಪ್ರಸ್ತುತ, ವಾಯುಪಡೆಯು ಮಿರಾಜ್ 2000 ಫೈಟರ್ ಜೆಟ್‌ನ 50 ವಿಮಾನಗಳನ್ನು ಹೊಂದಿದೆ. ಐಎಎಫ್‌ನಲ್ಲಿ ಸೇವೆಯಲ್ಲಿರುವ ಎಲ್ಲಾ ಮಿರಾಜ್ 2000 ವಿಮಾನಗಳನ್ನು ನವೀಕರಿಸಲು $ 2.2 ಬಿಲಿಯನ್ ಪ್ಯಾಕೇಜ್ ಅನ್ನು ಸರ್ಕಾರ ಅನುಮೋದಿಸಿದೆ.

HAL ತೇಜಸ್
ದೇಶಿಯವಾಗಿ ಅಭಿವೃದ್ಧಿಪಡಿಸಿದ ಸಿಂಗಲ್ ಎಂಜಿನ್, ಡೆಲ್ಟಾ ವಿಂಗ್, ಲೈಟ್ ಮಲ್ಟಿರೋಲ್ ಫೈಟರ್ ಏರ್‌ಕ್ರಾಫ್ಟ್ ತೇಜಸ್ ಆಗಿದೆ. ಈ ವಿಮಾನವು 1980ರ ದಶಕದಲ್ಲಿ ಪ್ರಾರಂಭವಾದ ಲಘು ಯುದ್ಧ ವಿಮಾನ (LCA) ಕಾರ್ಯಕ್ರಮದ ಭಾಗವಾಗಿದೆ. ಪ್ರಸ್ತುತ, HAL ತೇಜಸ್ ವಿಮಾನದ ಮೂರು ರೂಪಾಂತರಗಳಿದ್ದು, ಅವುಗಳೆಂದರೆ ತೇಜಸ್ ಮಾರ್ಕ್ 1, ತೇಜಸ್ ಟ್ರೇನರ್ & ತೇಜಸ್ ಮಾರ್ಕ್ 1Aಯನ್ನು ಒಳಗೊಂಡಿದೆ. ತೇಜಸ್ ಮಾರ್ಕ್ 1 ವಿಮಾನವು EL/M-2052, AESA ರಾಡಾರ್, ಸ್ವಯಂ-ರಕ್ಷಣೆಯ ಜಾಮರ್, ರಾಡಾರ್ ಅಲರ್ಟ್ ರಿಸೀವರ್, ECM ಪಾಡ್ ಮತ್ತು ಹೆಚ್ಚಿನ ನವೀಕರಣಗಳನ್ನು ಹೊಂದಿದೆ.

ಸುಖೋಯ್ SU-30MKI
ಭಾರತೀಯ ವಾಯುಪಡೆಯ ಬೆನ್ನೆಲುಬು ಎಂದು ಸುಖೋಯ್ SU-30MKI ವಿಮಾನವನ್ನು ಪರಿಗಣಿಸಬಹುದು. ಈ ಫೈಟರ್ ಜೆಟ್ ರಷ್ಯಾದ ವಿನ್ಯಾಸವನ್ನು ಹೊಂದಿದ್ದು, ಪವರ್ ಫುಲ್ ಯುದ್ಧವಿಮಾನವಾಗಿದೆ. ಆದರೆ, ಭಾರತದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಪರವಾನಗಿ ಅಡಿ ನಿರ್ಮಿಸಲಾಗಿದೆ. ಈ ಮಾದರಿಯನ್ನು ಮೊದಲು 2002ರಲ್ಲಿ ಪರಿಚಯಿಸಲಾಯಿತು. ಇಲ್ಲಿಯವರೆಗೆ 272 ಕ್ಕೂ ಹೆಚ್ಚು ವಿಮಾನಗಳನ್ನು ತಯಾರಿಸಲಾಗಿದೆ. ಅದರ ದೊಡ್ಡ ಗಾತ್ರದ ಹೊರತಾಗಿಯೂ, ಸುಖೋಯ್ ದೇಶದ ಪ್ರಮುಖ ಫೈಟರ್ ಜೆಟ್ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಡಸ್ಸಾಲ್ಟ್ ರಫೇಲ್:
ಫ್ರೆಂಚ್ ಮೂಲದ ಡ್ಯುಯೆಲ್-ಎಂಜಿನ್, ಕ್ಯಾನಾರ್ಡ್ ಡೆಲ್ಟಾ ವಿಂಗ್, ಮಲ್ಟಿರೋಲ್ ಫೈಟರ್ ಏರ್‌ಕ್ರಾಫ್ ಮತ್ತು ವಿಶ್ವದ ಅತ್ಯಂತ ಸುಧಾರಿತ 4.5-ಜನರೇಷನ್ ಯುದ್ಧ ವಿಮಾನ ಡಸ್ಸಾಲ್ಟ್ ರಫೇಲ್ ಆಗಿದೆ. ಜುಲೈ 2021ರ ವೇಳೆಗೆ, ಒಟ್ಟು 26 ಯುನಿಟ್ ರಫೇಲ್ ವಿಮಾನಗಳನ್ನು ಭಾರತಕ್ಕೆ ತಲುಪಿಸಲಾಗಿದೆ. ರಫೇಲ್ ವಿಮಾನವು (ಕ್ಷಿಪಣಿ ಯುದ್ಧ) BVR ಯುದ್ಧಕ್ಕೆ ತಂತ್ರಜ್ಞಾನವನ್ನು ಹೊಂದಿರುವ ಅತ್ಯಂತ ಬಲಶಾಲಿ ವಿಮಾನವಾಗಿದೆ. ಅದಲ್ಲದೆ, ಡಸಾಲ್ಟ್ ರಫೇಲ್ ಈಗಾಗಲೇ ಸುಖೋಯ್ SU-30MKI, ಯೂರೋಫೈಟರ್ ಟೈಫೂನ್, F-16 ಮತ್ತು ಹೆಚ್ಚಿನವುಗಳಂತಹ ಅಸಾಧಾರಣ ವಿಮಾನಗಳ ವಿರುದ್ಧ ತನ್ನ ಸಾಮರ್ಥ್ಯವನ್ನು ಹಲವಾರು ಬಾರಿ ಸಾಬೀತುಪಡಿಸಿದೆ.

Most Read Articles

Kannada
English summary
Indian air force powerful fighter jets
Story first published: Sunday, December 18, 2022, 11:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X