ಚೀನಾ ಜೊತೆಗಿನ ಗಡಿ ವಿವಾದ ಸಂದರ್ಭದಲ್ಲಿಯೇ ವಾಯುಪಡೆ ಸೇರುತ್ತಿವೆ ರಫೇಲ್‌ ಯುದ್ದ ವಿಮಾನಗಳು

ರಫೇಲ್‌ ಯುದ್ದ ವಿಮಾನಗಳ ಮೊದಲ ಬ್ಯಾಚ್ ಅನ್ನು ಭಾರತೀಯ ವಾಯುಪಡೆಗೆ ಜುಲೈ ತಿಂಗಳ ಅಂತ್ಯದಲ್ಲಿ ವಿತರಿಸಲಾಗುವುದು. ಅಂಬಾಲಾದಲ್ಲಿರುವ ಏರ್ ಫೋರ್ಸ್ ಸ್ಟೇಷನ್ ನಲ್ಲಿ ಜುಲೈ 29ರಂದು ಈ ವಿಮಾನಗಳನ್ನು ಹಸ್ತಾಂತರಿಸಲಾಗುವುದು.

ಚೀನಾ ಜೊತೆಗಿನ ಗಡಿ ವಿವಾದ ಸಂದರ್ಭದಲ್ಲಿಯೇ ವಾಯುಪಡೆ ಸೇರುತ್ತಿವೆ ರಫೇಲ್‌ ಯುದ್ದ ವಿಮಾನಗಳು

ಆದರೆ ಈ ವಿಮಾನಗಳ ಹಸ್ತಾಂತರವು ಹವಾಮಾನವನ್ನು ಅವಲಂಬಿಸಿರಲಿದೆ. ಹವಾಮಾನ ವೈಪರೀತ್ಯ ಕಂಡುಬಂದಲ್ಲಿ ವಿಮಾನಗಳ ವಿತರಣೆ ಮುಂದೂಡಿಕೆಯಾಗಲಿದೆ. ವಿಮಾನಗಳ ಕೊನೆಯ ಹಂತದ ವಿತರಣಾ ಸಮಾರಂಭವು ಆಗಸ್ಟ್ ಎರಡನೇ ವಾರದಲ್ಲಿ ನಡೆಯಲಿದೆ. ರಫೇಲ್ ಯುದ್ದ ವಿಮಾನಗಳನ್ನು ಖರೀದಿಸಲು ಭಾರತವು 2016ರ ಸೆಪ್ಟೆಂಬರ್‌ನಲ್ಲಿ ಫ್ರಾನ್ಸ್‌ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದದನ್ವಯ ರೂ.58,000 ಕೋಟಿ ಮೌಲ್ಯದ ಒಟ್ಟು 36 ರಫೇಲ್ ವಿಮಾನಗಳನ್ನು ಪಡೆಯಲಿದೆ.

ಚೀನಾ ಜೊತೆಗಿನ ಗಡಿ ವಿವಾದ ಸಂದರ್ಭದಲ್ಲಿಯೇ ವಾಯುಪಡೆ ಸೇರುತ್ತಿವೆ ರಫೇಲ್‌ ಯುದ್ದ ವಿಮಾನಗಳು

ಭಾರತೀಯ ವಾಯುಪಡೆಯ ಸಿಬ್ಬಂದಿಗೆ ಈ ವಿಮಾನದಲ್ಲಿ ಆಧುನಿಕ ಶಸ್ತ್ರಾಸ್ತ್ರಗಳ ತರಬೇತಿ ನೀಡಲಾಗಿದೆ. ಈ ವಿಮಾನಗಳ ವಿತರಣೆಯನ್ನು ಪಡೆದ ನಂತರವಿಮಾನದ ಕಾರ್ಯಾಚರಣೆಯನ್ನು ಆರಂಭಿಸುವುದರತ್ತ ಗಮನ ನೀಡಲಾಗುವುದು.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಚೀನಾ ಜೊತೆಗಿನ ಗಡಿ ವಿವಾದ ಸಂದರ್ಭದಲ್ಲಿಯೇ ವಾಯುಪಡೆ ಸೇರುತ್ತಿವೆ ರಫೇಲ್‌ ಯುದ್ದ ವಿಮಾನಗಳು

ಸದ್ಯ ಚೀನಾ ದೇಶದೊಂದಿಗೆ ಗಡಿ ವಿವಾದ ಏರ್ಪಟ್ಟಿದ್ದು ವಾಸ್ತವ ನಿಯಂತ್ರಣ ರೇಖೆಯಲ್ಲಿನ ಕಾರ್ಯಾಚರಣಾ ಸಾಮರ್ಥ್ಯವನ್ನು ಹೆಚ್ಚಿಸಲು ಈ ವಿಮಾನಗಳನ್ನು ಲಡಾಕ್ ವಲಯದಲ್ಲಿ ನಿಯೋಜಿಸಲಾಗುವುದೆಂದು ಅಧಿಕೃತ ಮೂಲಗಳು ತಿಳಿಸಿವೆ.

ಚೀನಾ ಜೊತೆಗಿನ ಗಡಿ ವಿವಾದ ಸಂದರ್ಭದಲ್ಲಿಯೇ ವಾಯುಪಡೆ ಸೇರುತ್ತಿವೆ ರಫೇಲ್‌ ಯುದ್ದ ವಿಮಾನಗಳು

ಈ ವಿಮಾನಗಳ ಸೇರ್ಪಡೆಯೊಂದಿಗೆ ಭಾರತೀಯ ವಾಯುಸೇನೆಗೆ ಮತ್ತಷ್ಟು ಬಲ ಬಂದಂತಾಗಿದೆ. ರಫೇಲ್ ವಿಮಾನಗಳು ಭಾರತೀಯ ವಾಯು ಸೇನೆಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಿವೆ ಎಂದು ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ. ಈ ವಿಮಾನಗಳು ಅನೇಕ ಆಧುನಿಕ ಶಸ್ತ್ರಾಸ್ತ್ರಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿವೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಚೀನಾ ಜೊತೆಗಿನ ಗಡಿ ವಿವಾದ ಸಂದರ್ಭದಲ್ಲಿಯೇ ವಾಯುಪಡೆ ಸೇರುತ್ತಿವೆ ರಫೇಲ್‌ ಯುದ್ದ ವಿಮಾನಗಳು

ರಫೇಲ್ ಬಿವಿಆರ್ ಏರ್ ಟು ಏರ್ ಕ್ಷಿಪಣಿ ಸಿಸ್ಟಂ ಹೊಂದಿದ್ದು, ಇಸ್ರೇಲಿ ಹೆಲ್ಮೆಟ್ ಮೌಂಟೆಡ್ ಡಿಸ್ ಪ್ಲೇ, ರೇಡಾರ್ ವಾರ್ನಿಂಗ್ ರಿಸೀವರ್, ಲೋ ಬ್ಯಾಂಡ್ ಜಾಮರ್, 10 ಗಂಟೆಗಳ ಫ್ಲೈಟ್ ಡಾಟಾ ರೆಕಾರ್ಡಿಂಗ್ ಗಳನ್ನು ಹೊಂದಿದೆ.

ಚೀನಾ ಜೊತೆಗಿನ ಗಡಿ ವಿವಾದ ಸಂದರ್ಭದಲ್ಲಿಯೇ ವಾಯುಪಡೆ ಸೇರುತ್ತಿವೆ ರಫೇಲ್‌ ಯುದ್ದ ವಿಮಾನಗಳು

ಈ ಭವ್ಯವಾದ ಜೆಟ್‌ಗಳ ಸ್ವಾಗತಕ್ಕೆ ಭಾರತೀಯ ವಾಯುಸೇನೆಯು ಮೂಲಸೌಕರ್ಯ, ಪೈಲಟ್ ತರಬೇತಿ ಇತ್ಯಾದಿ ಸೇರಿದಂತೆ ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಿದೆ. ಎರಡನೇ ತಲೆಮಾರಿನ ರಫೇಲ್ ಪಶ್ಚಿಮ ಬಂಗಾಳದ ಹಸಿಮಾರ ವಾಯುನೆಲೆಯಲ್ಲಿ ನೆಲಸಲಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಚೀನಾ ಜೊತೆಗಿನ ಗಡಿ ವಿವಾದ ಸಂದರ್ಭದಲ್ಲಿಯೇ ವಾಯುಪಡೆ ಸೇರುತ್ತಿವೆ ರಫೇಲ್‌ ಯುದ್ದ ವಿಮಾನಗಳು

ಭಾರತೀಯ ವಾಯುಸೇನೆಯು ತನ್ನ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ರೂ.400 ಕೋಟಿ ಖರ್ಚು ಮಾಡಿದೆ. ಒಟ್ಟು 36 ರಫೇಲ್ ವಿಮಾನಗಳ ಪೈಕಿ 30 ಫೈಟರ್ ವಿಮಾನಗಳಾದರೆ, 6 ವಿಮಾನಗಳನ್ನು ತರಬೇತಿಗಾಗಿ ಬಳಸಲಾಗುವುದು. ಈ ತರಬೇತು ವಿಮಾನಗಳು ಎರಡು ಸೀಟುಗಳನ್ನು ಹೊಂದಿದ್ದು, ಫೈಟರ್ ವಿಮಾನಗಳ ಫೀಚರ್ ಗಳನ್ನು ಹೊಂದಿರುತ್ತವೆ.

ಚೀನಾ ಜೊತೆಗಿನ ಗಡಿ ವಿವಾದ ಸಂದರ್ಭದಲ್ಲಿಯೇ ವಾಯುಪಡೆ ಸೇರುತ್ತಿವೆ ರಫೇಲ್‌ ಯುದ್ದ ವಿಮಾನಗಳು

ಇತ್ತೀಚೆಗಷ್ಟೇ ಬೋಯಿಂಗ್ ನ ಹೊಸ ಎಹೆಚ್ -64 ಇ ಅಪಾಚೆ ಹಾಗೂ ಸಿಎಚ್ -47 ಎಫ್ (ಐ) ಚಿನೂಕ್ ಮಿಲಿಟರಿ ಹೆಲಿಕಾಪ್ಟರ್ ಗಳು ಭಾರತೀಯ ವಾಯುಸೇನೆಗೆ ಸೇರ್ಪಡೆಯಾಗಿವೆ. ಬೋಯಿಂಗ್ ತನ್ನ ಕೊನೆಯ ಹಂತದ ವಿತರಣೆಯನ್ನು ಹಿಂಡನ್‌ನ ಏರ್ ಫೋರ್ಸ್ ಸ್ಟೇಷನ್ ನಲ್ಲಿ ಮಾಡಿದೆ.

Most Read Articles

Kannada
English summary
Indian Air force to get Rafale fighter jets soon. Read in Kannada.
Story first published: Friday, July 24, 2020, 10:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X