ಶೀಘ್ರದಲ್ಲೇ ಸೇನಾ ಪಡೆ ಸೇರಲಿವೆ ಶಸ್ತ್ರಸಜ್ಜಿತ ವಾಹನಗಳು

ಭಾರತೀಯ ಸೇನೆಯು ಹೊಸ ಶಸ್ತ್ರಸಜ್ಜಿತ ವಾಹನಗಳನ್ನು ತನ್ನ ಪಡೆಗೆ ಸೇರ್ಪಡೆಗೊಳಿಸಿಕೊಳ್ಳುತ್ತಿದೆ. ಈ ವಾಹನಗಳನ್ನು ಚೀನಾದ ಗಡಿಯಲ್ಲಿರುವ ಪೂರ್ವ ಲಡಾಖ್‌ನಲ್ಲಿ ನಿಯೋಜಿಸಲಾಗುವುದು. ಭಾರತೀಯ ಸೇನೆಯು ಮೂರು ಪ್ರಮುಖ ಕಂಪನಿಗಳಿಂದ ಈ ವಾಹನಗಳನ್ನು ಖರೀದಿಸುವ ಸಾಧ್ಯತೆಗಳಿವೆ.

ಶೀಘ್ರದಲ್ಲೇ ಸೇನಾ ಪಡೆ ಸೇರಲಿವೆ ಶಸ್ತ್ರಸಜ್ಜಿತ ವಾಹನಗಳು

ಇವುಗಳಲ್ಲಿ ಟಾಟಾ ಆರ್ಮರ್, ಅಮೇರಿಕನ್ ಸ್ಟ್ರೈಕರ್ ಇನ್ ಫ್ಯಾಂಟರಿ ಹಾಗೂ ಹಮ್ವಿ ಆರ್ಮರ್ಡ್ ವಾಹನಗಳು ಸೇರಿವೆ. ಪೂರ್ವ ಲಡಾಖ್ ಪ್ರದೇಶದಲ್ಲಿ ಸೇನೆಯು ವೇಗವಾಗಿ ಚಲಿಸಲು ಶಸ್ತ್ರಸಜ್ಜಿತ ವಾಹನಗಳು ಬೇಕಾಗುತ್ತವೆ. ಪೂರ್ವ ಲಡಾಖ್‌ನಲ್ಲಿ ಚೀನಾ ತನ್ನ ಸೈನ್ಯವನ್ನು ಶಸ್ತ್ರಸಜ್ಜಿತ ವಾಹನಗಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿದೆ.

ಶೀಘ್ರದಲ್ಲೇ ಸೇನಾ ಪಡೆ ಸೇರಲಿವೆ ಶಸ್ತ್ರಸಜ್ಜಿತ ವಾಹನಗಳು

ಈ ಕಾರಣಕ್ಕೆ ಭಾರತೀಯ ಸೇನೆಯು ಈ ಮೂರು ಕಂಪನಿಗಳ ಶಸ್ತ್ರಸಜ್ಜಿತ ವಾಹನಗಳನ್ನು ಖರೀದಿಸಲು ಆಸಕ್ತಿ ತೋರಿದೆ. ಉನ್ನತ ಅಧಿಕಾರಿಗಳ ಅನುಮತಿ ದೊರೆತ ನಂತರ ಹೈ ಪರ್ಫಾಮೆನ್ಸ್ ಶಸ್ತ್ರಸಜ್ಜಿತ ವಾಹನಗಳನ್ನು ಸೈನ್ಯಕ್ಕೆ ಸೇರ್ಪಡೆಗೊಳಿಸಿ ಕೊಳ್ಳಲಾಗುವುದು.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಶೀಘ್ರದಲ್ಲೇ ಸೇನಾ ಪಡೆ ಸೇರಲಿವೆ ಶಸ್ತ್ರಸಜ್ಜಿತ ವಾಹನಗಳು

ಸೇನೆಯ ಅಗತ್ಯಕ್ಕೆ ತಕ್ಕಂತೆ ಕಂಪನಿಗಳು ಉತ್ತಮ ಗುಣಮಟ್ಟದ ಶಸ್ತ್ರಸಜ್ಜಿತ ವಾಹನಗಳನ್ನು ಒದಗಿಸಬಹುದೆಂದು ಹೇಳಲಾಗಿದೆ. ವಿದೇಶಿ ಕಂಪನಿಗಳಿಂದ ವಾಹನಗಳನ್ನು ಖರೀದಿಸುವುದರ ಬದಲು ಸೇನೆಯು ದೇಶೀಯ ಕಂಪನಿಗಳಿಗೆ ಆದ್ಯತೆ ನೀಡುವ ಸಾಧ್ಯತೆಗಳಿವೆ.

ಶೀಘ್ರದಲ್ಲೇ ಸೇನಾ ಪಡೆ ಸೇರಲಿವೆ ಶಸ್ತ್ರಸಜ್ಜಿತ ವಾಹನಗಳು

ಅಮೆರಿಕಾದ ರಕ್ಷಣಾ ವಾಹನ ತಯಾರಕ ಕಂಪನಿಗಳು ಈ ಸೆಗ್ ಮೆಂಟಿನಲ್ಲಿ ಹೆಚ್ಚು ಅನುಭವವನ್ನು ಹೊಂದಿವೆ. ಆ ಕಂಪನಿಗಳ ಉತ್ಪನ್ನಗಳನ್ನು ಪರೀಕ್ಷಿಸಲಾಗುತ್ತಿದೆ. ಭಾರತದ ಟಾಟಾ ಹಾಗೂ ಮಹೀಂದ್ರಾ ಕಂಪನಿಗಳೂ ಸಹ ಕೆಲವು ವರ್ಷಗಳಿಂದ ಈ ವಾಹನಗಳ ಉತ್ಪಾದನೆಯಲ್ಲಿ ತೊಡಗಿವೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಶೀಘ್ರದಲ್ಲೇ ಸೇನಾ ಪಡೆ ಸೇರಲಿವೆ ಶಸ್ತ್ರಸಜ್ಜಿತ ವಾಹನಗಳು

ಟಾಟಾ ಕಂಪನಿಯ ಆರ್ಮರ್ಡ್ ವೆಹಿಕಲ್ ಆದ ಡಬ್ಲ್ಯುಹೆಚ್‌ಎಪಿಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಲಡಾಖ್‌ನ ಎತ್ತರದ ಪ್ರದೇಶಗಳಲ್ಲಿ ಸೇನೆಯು ಈ ವಾಹನವನ್ನು ಹಲವು ಬಾರಿ ಪರೀಕ್ಷಿಸಿದೆ.

ಶೀಘ್ರದಲ್ಲೇ ಸೇನಾ ಪಡೆ ಸೇರಲಿವೆ ಶಸ್ತ್ರಸಜ್ಜಿತ ವಾಹನಗಳು

ಸೇನೆಯು ಈ ವಾಹನಗಳ ಡ್ರಾಪ್ ಟೆಸ್ಟ್ ಅನ್ನು ಎತ್ತರದಿಂದಲೂ ನಡೆಸಿದೆ. ಇತ್ತೀಚಿಗೆ ಸ್ಟ್ರೈಕರ್ ಹಾಗೂ ಹಮ್ವಿ ವಾಹನಗಳನ್ನು ಸಾರಿಗೆ ವಿಮಾನದಿಂದ ಕೆಳಕ್ಕಿಳಿಸುವ ಮೂಲಕ ಪರೀಕ್ಷಿಸಲಾಯಿತು. ಈ ಪರೀಕ್ಷೆಯಲ್ಲಿ ಎರಡೂ ವಾಹನಗಳು ಯಶಸ್ವಿಯಾಗಿವೆ.

Most Read Articles

Kannada
English summary
Indian Army adding new armoured vehicles to the fleet. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X