ಮಹೀಂದ್ರಾ XUV700 ಕಾರನ್ನು ರಕ್ಷಿಸಿದ ಭಾರತೀಯ ಸೇನೆಯ ಯೋಧರು: ಭಾರೀ ಮೆಚ್ಚುಗೆ
ಪ್ರವಾಹ ಸೇರಿದಂತೆ ನೈಸರ್ಗಿಕ ವಿಕೋಪಗಳು ಎದುರಾದಾಗ ಭಾರತೀಯ ಸೇನೆ (Indian Army) ಸಾರ್ವಜನಿಕರ ನೆರವಿಗೆ ಮೊದಲು ಬರುತ್ತದೆ. ಅದೇ ರೀತಿಯಲ್ಲಿ ದೇಶದ ಗಡಿಗೆ ಹೊಂದಿಕೊಂಡಿರುವ ರಸ್ತೆಗಳಲ್ಲಿ ನಾನಾ ಕಾರಣಗಳಿಗೆ ತೊಂದರೆಗೊಳಗಾಗುವ ದ್ವಿಚಕ್ರ ವಾಹನ ಸವಾರರು ಮತ್ತು ಕಾರು ಚಾಲಕರಿಗೂ ಸಹಾಯ ಮಾಡುವ ಹಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ.
ಸದ್ಯ, ಅಂತಹದ್ದೇ ವಿಡಿಯೋವೊಂದು ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಕಾಣಿಸಿಕೊಂಡಿದೆ. ಲಡಾಖ್‌ನ ಪರ್ವತ ರಸ್ತೆಯ ಪಕ್ಕದ ಸಣ್ಣ ಕಾಲುವೆ (Drain)ಯಲ್ಲಿ ಸಿಲುಕಿಕೊಂಡ ಮಹೀಂದ್ರಾ ಎಕ್ಸ್‌ಯುವಿ700 (Mahindra XUV700) ಎಸ್‌ಯುವಿಯನ್ನು ಯೋಧರು ತಮ್ಮ ಟೋ ಟ್ರಕ್ (Tow truck) ಉಪಯೋಗಿಸಿ ಮೇಲಕ್ಕೆ ಎತ್ತಿದ್ದು, ಆ ಮೂಲಕ ಕಾರಿನ ಮಾಲೀಕನಿಗೆ ನೆರವಿನ ಹಸ್ತ ಚಾಚಿದ್ದಾರೆ.

ಈ ಬಗ್ಗೆ 'ಎಕ್ಸ್' ಖಾತೆಯಲ್ಲಿ ರತ್ತನ್ ಧಿಲ್ಲೋನ್ (Rattan Dhillon) ಎಂಬುವವರು ಪೋಸ್ಟ್ ಮಾಡಿದ್ದು, 'ಭಾರತೀಯ ಸೇನಾ ದಿನದಂದು ನಮ್ಮ ವೀರ ಯೋಧರ ಕೆಲಸಗಳಿಗೆ ನಾನು ಕೃತಜ್ಞತೆಯನ್ನು ಹೇಳಲು ಬಯಸುತ್ತೇನೆ. ಎರಡು ತಿಂಗಳ ಹಿಂದೆ ಖಾರ್ದುಂಗ್ಲಾ ಪಾಸ್ ಸಮೀಪ ಹೋಗುತ್ತಿದ್ದಾಗ ಕಾರೊಂದು ರಸ್ತೆಯ ಪಕ್ಕದಲ್ಲಿ ಪಲ್ಟಿಯಾಗಿತ್ತು. ಸೇನಾ ಸಿಬ್ಬಂದಿ ಟೋ ಟ್ರಕ್ ಬಳಸಿ, ಅದನ್ನು ಮೇಲಕ್ಕೆತ್ತಿದ್ದರು. ಜೊತೆಗೆ ಕಪ್ ಕಾಫಿಯನ್ನು ನೀಡಿದ್ದರು' ಎಂದಿದ್ದಾರೆ.
ಮುಂದುವರೆದು, 'ಈ ವೀರರು ನಮ್ಮ ದೇಶದವನ್ನು ರಕ್ಷಿಸುವುದು ಮಾತ್ರವಲ್ಲದೆ, ಅಗತ್ಯವಿದ್ದಾಗ ಪ್ರತಿಯೊಬ್ಬರಿಗೆ ಸಹಾಯ ಮಾಡುತ್ತಾರೆ. ಅವರಿಗೆ ಹೃತ್ಪೂರ್ವಕ ವಂದನೆಗಳು' ಎಂದು ಹೇಳಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣ ಬಳಕೆದಾರರು ಕೂಡ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೆಟ್ಟಿಗನೊಬ್ಬರು, 'ಅದ್ಬುತ! ಅಲ್ಲಿನ ತುರ್ತು ಪರಿಸ್ಥಿತಿಯಲ್ಲಿ ಅವರೇ ಮೊದಲ ಮತ್ತು ಕೊನೆಯ ಭರವಸೆ' ಎಂದು ಕಾಮೆಂಟ್ ಮಾಡಿದ್ದಾರೆ.

ಮತ್ತೊಬ್ಬರು, 'ಭಾರತೀಯ ಸೇನೆಯು ಜನರಿಗೆ ಸಹಾಯ ಮಾಡಲು ಯಾವಾಗಲೂ ಲಭ್ಯವಿರುತ್ತದೆ. ಇಂತಹ ಅನೇಕ ಅಪಘಾತಗಳನ್ನು ಸ್ಥಳೀಯ ಪೊಲೀಸರು ನಿರ್ವಹಿಸಬೇಕು' ಎಂದು ಹೇಳಿದ್ದಾರೆ. ಇಲ್ಲಿ ಪ್ರತಿಯೊಬ್ಬರು ಗಮನಿಸಬೇಕಾದ ಅಂಶವೆಂದರೆ, ಪರ್ವತದ ರಸ್ತೆಗಳು ತುಂಬಾ ಕಿರಿದಾಗಿರುತ್ತವೆ. ಈ ರೀತಿಯ ರಸ್ತೆಯಲ್ಲಿ ಚಾಲನೆ ಮಾಡುವಾಗ ತುಂಬಾ ಎಚ್ಚರವಹಿಸಬೇಕು. ಇಲ್ಲದಿದ್ದರೆ, ದೊಡ್ಡ ಅಪಾಯವನ್ನು ಎದುರುಗೊಳ್ಳಬೇಕಾಗುತ್ತದೆ.
ಮಹೀಂದ್ರಾ ಎಕ್ಸ್‌ಯುವಿ700, 4×4 ವಾಹನವಲ್ಲ. ಇದು ಫ್ರಂಟ್ ವೀಲ್ ಡ್ರೈವ್ ಆಯ್ಕೆಯನ್ನು ಮಾತ್ರ ಹೊಂದಿದೆ. ಆ ಕಾರಣಕ್ಕೆ ಇಂತಹ ಸನ್ನಿವೇಶದಲ್ಲಿ ಚಾಲಕರಿಗೆ ಕೊಂಚ ನೆರವಾಗುವುದಿಲ್ಲ. ಆದ್ದರಿಂದ ನಿಮ್ಮ ಜಾಗ್ರತೆಯಲ್ಲಿ ಕಾರನ್ನು ಚಲಾಯಿಸಬೇಕು. ಇದು ಬಿಟ್ಟರೆ, ಎಕ್ಸ್‌ಯುವಿ700 ಸುರಕ್ಷತೆಯ ದೃಷ್ಟಿಯಿಂದ ಅತ್ಯಾಧುನಿಕವಾಗಿದೆ. ಗ್ಲೋಬಲ್ ಎನ್‌ಸಿಎಪಿಯಿಂದ 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆ.
ಈ ಕಾರು, 7 ಏರ್‌ಬ್ಯಾಗ್, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ISOFIX ಆಂಕರ್ಸ್, ಲೇನ್-ಕೀಪಿಂಗ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) 360 - ಡಿಗ್ರಿ ಕ್ಯಾಮೆರಾ, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಅನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications