ಪಾಕ್ ಭೀತಿಗೆ ರಷ್ಯಾ ಅಭಯಹಸ್ತ; ರಾತ್ರಿ ಕಾಲದಲ್ಲೂ ತೀಕ್ಷ್ಣ ಪ್ರಹಾರ ನೀಡುವ ಯುದ್ಧ ಟ್ಯಾಂಕರ್ ಭಾರತಕ್ಕೆ
ಟಿ-90 ಯುದ್ಧ ಟ್ಯಾಂಕರ್ ಗಳ ಆಗಮನದೊಂದಿಗೆ ಭಾರತೀಯ ಭೂಸೇನೆಯು ಮತ್ತಷ್ಟು ಬಲಿಷ್ಠಗೊಳ್ಳಲಿದೆ.
ಗಡಿಯಲ್ಲಿ ನಿರಂತರ ಉದ್ವಿಗ್ನ ಪರಿಸ್ಥಿತಿ ಮುಂದುವರಿಯುತ್ತಿದ್ದು ಮತ್ತು ನೆರೆಯ ಪಾಕಿಸ್ತಾನದಿಂದ ಪದೇ ಪದೇ ಭೀತಿ ಎದುರಾಗುತ್ತಿರುವ ಹಿನ್ನಲೆಯಲ್ಲಿ ತನ್ನ ದೀರ್ಘ ಕಾಲದ ಮಿತ್ರ ರಾಷ್ಟ್ರ ರಷ್ಯಾ ಜೊತೆಗೆ ಮಗದೊಂದು ಒಪ್ಪಂದಕ್ಕೆ ಕೈಜೋಡಿಸಿಕೊಂಡಿರುವ ಭಾರತ ಅತ್ಯಾಧುನಿಕ ಟಿ-90 ಯುದ್ಧ ಟ್ಯಾಂಕರ್ ಗಳನ್ನು ಖರೀದಿಸಲು ಮುಂದಾಗಿದೆ. ರಕ್ಷಣಾ ವಿಭಾಗಕ್ಕೆ ಅತಿ ಹೆಚ್ಚಿನ ಆದ್ಯತೆ ಕೊಡುತ್ತಿರುವ ಕೇಂದ್ರ ಸರಕಾರವು ಪಾಕಿಸ್ತಾನ ಹೆಜ್ಜೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ.

ಭಾರತಕ್ಕೆ ರಷ್ಯಾ ಅಭಯಹಸ್ತ ನೀಡಲಿದ್ದು, ಬರೋಬ್ಬರಿ 13,448 ಕೋಟಿ ರುಪಾಯಿಗಳ ಒಪ್ಪಂದಕ್ಕೆ ಸಹಿ ಹಾಕಲಿದೆ.

ಪಾಕಿಸ್ತಾನ ಜೊತೆ ಗಡಿ ಹಂಚಿಕೊಂಡಿರುವ ದೇಶದ ಪಶ್ಚಿಮ ಭಾಗದಲ್ಲಿ ಪ್ರಮುಖವಾಗಿಯೂ ಈ ಎಲ್ಲ 464 ಯುದ್ಧ ಟ್ಯಾಂಕರ್ ಗಳನ್ನು ಭಾರತ ನಿಯೋಜಿಸಲಿದೆ.

ಚೆನ್ನೈನ್ಲಲಿರುವ ಆವಡಿ ಹೆವಿ ವೆಹಿಕಲ್ ಫಾಕ್ಟರಿಯಲ್ಲಿ ಸ್ಥಳೀಯವಾಗಿ ಯುದ್ಧ ಟ್ಯಾಂಕರ್ ಗಳನ್ನು ಜೋಡಣೆ ಮಾಡಲಾಗುವುದು. ತನ್ಮೂಲಕ 'ಮೇಕ್ ಇನ್ ಇಂಡಿಯಾ' ಯೋಜನೆಗೂ ಉತ್ತೇಜನ ತುಂಬಲಿದೆ.

ರಾತ್ರಿ ವೇಳೆಯಲ್ಲೂ ಶತ್ರು ಸ್ಥಾನಗಳನ್ನು ಗುರುತಿಸಿ ಅತ್ಯಂತ ನಿಖರವಾಗಿ ದಾಳಿ ನಡೆಸುವ ಸಾಮರ್ಥ್ಯವನ್ನು ಇದು ಹೊಂದಿದೆ.

ನೂತನ ಯುದ್ಧ ಟ್ಯಾಂಕರ್ ಗಳು ಭಾರತದ ಭೂಸೇನೆಗೆ ಮತ್ತಷ್ಟು ಬಲ ತುಂಬಲಿದ್ದು, ಉತ್ತರದಲ್ಲಿ ಕಾಶ್ಮೀರದಿಂದ ಆರಂಭಿಸಿ ಪಶ್ಚಿಮದಲ್ಲಿ ಗುಜರಾತ್ ವರೆಗೆ ಗಡಿ ಕಾಯಲಿದೆ.

4000ದಷ್ಟು ಯುದ್ಧ ಟ್ಯಾಂಕರ್ ಗಳನ್ನು ಹೊಂದಿರುವ ಭಾರತೀಯ ಸೇನೆಗೆ ರಾತ್ರಿ ವೇಳೆ ಕುರುಡಾಗಿ ಯುದ್ಧ ನಡೆಸಬೇಕಾದ ಪರಿಸ್ಥಿತಿ ಎದುರಾಗಿತ್ತು. ಆದರೆ ಈ ಹೊಸ ಥೆರ್ಮಲ್ ಶಕ್ತಿಯ ಟ್ಯಾಂಕರ್ ಗಳು ಈ ಎಲ್ಲ ಸಮಸ್ಯೆಗಳನ್ನು ನೀಗಿಸಲಿದೆ.

ಇದಲ್ಲದೆ ಮಿಸೈಲ್ ಫೈರಿಂಗ್ ತಂತ್ರಜ್ಞಾನವನ್ನು ಟಿ-90 ಯುದ್ಧ ಟ್ಯಾಂಕರ್ ಗಳು ಗಿಟ್ಟಿಸಿಕೊಳ್ಳಲಿದೆ. ಇದು ಸಮರ ಜಾಗದಲ್ಲಿ ಎದುರಾಗುವ ಸವಾಲುಗಳಿಗೆ ತಕ್ಕ ಉತ್ತರವನ್ನೇ ನೀಡಲಿದೆ.

ನಿಮ್ಮ ಮಾಹಿತಿಗಾಗಿ ಭಾರತೀಯ ಸೇನೆಯು ಈಗಾಗಲೇ 850ರಷ್ಟು ಟಿ-90 ಯುದ್ಧ ಟ್ಯಾಂಕರ್ ಗಳ ಸೇವೆಯನ್ನು ಬಳಕೆ ಮಾಡುತ್ತಿದೆ. ಇದೀಗ ಸೇರಿಕೊಳ್ಳಲಿರುವ ನೂತನ ಟ್ಯಾಂಕರ್ ಗಳು ಹಳೆಯ ಟಿ-72 ಮತ್ತು ಟಿ-55 ಯುದ್ಧ ಟ್ಯಾಂಕರ್ ಗಳ ಸ್ಥಾನವನ್ನು ತುಂಬಲಿದೆ.

ಹಂತ ಹಂತವಾಗಿ ಟಿ-90 ಯುದ್ಧ ಟ್ಯಾಂಕರ್ ಗಳನ್ನು ಭಾರತೀಯ ಸೇನೆಯನ್ನು ತಲುಪಲಿದೆ. 2020ರ ವೇಳೆಯಾಗುವಾಗ ನೈಟ್ ವಿಷನ್ ಸಾಮರ್ಥ್ಯದ 1657ರಷ್ಟು ಟಿ-9 ಯುದ್ಧ ಟ್ಯಾಂಕರ್ ಗಳನ್ನು ಖರೀದಿಸುವ ಯೋಜನೆ ಹೊಂದಿದೆ.

ಪಾಕಿಸ್ತಾನದ ಗಡಿ ಭಾಗಕ್ಕೆ ಸೇರಿಕೊಂಡಿರುವ ಪಶ್ಚಿಮ ಗಡಿ ಭಾಗದಲ್ಲಿ 10 ಹೊಸ ರೆಜಿಮೆಂಟ್ ಗಳಲ್ಲಿ ಟಿ-90 ಯುದ್ಧ ಟ್ಯಾಂಕರ್ ಗಳನ್ನು ನಿಯೋಜಿಸಲಾಗುವುದು.

ಭಾರತೀಯ ರಕ್ಷಣಾ ಪಡೆಯ ಉನ್ನತ ಮೂಲಗಳು ಇದನ್ನು ಸ್ಪಷ್ಟಪಡಿಸಿದ್ದು, ಪಾಕಿಸ್ತಾನದ ಹೆಸರನ್ನು ಉಲ್ಲೇಖಿಸದೆಯೇ ಪಶ್ಚಿಮ ಭಾಗದಿಂದ ಎದ್ದು ಬರುತ್ತಿರುವ ಬೆದರಿಕೆಗಳನ್ನು ನಿಭಾಯಿಸುವುದಕ್ಕಾಗಿ ಅತ್ಯಾಧುನಿಕ ಟಿ-90 ಯುದ್ಧ ಟ್ಯಾಂಕರ್ ಗಳನ್ನು ನಿಯೋಜಿಸಲಾಗುವುದು ಎಂದಿದೆ.

ಈ ಮಹತ್ತರ ಯೋಜನೆಗೆ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸದ್ಯದಲ್ಲೇ ಗ್ರೀನ್ ಸಿಗ್ನಲ್ ನೀಡಲಿದೆ.

ರಾಜಸ್ತಾನ ಮತ್ತು ಪಂಜಾಬ್ ಗಡಿ ಭಾಗದ 18 ರೆಜಿಮೆಂಟ್ ಗಳಲ್ಲಿ ಭಾರತ ಈಗಗಾಲೇ ಟಿ-90 ಯುದ್ಧ ಟ್ಯಾಂಕರ್ ಗಳನ್ನು ನಿಯೋಜಿಸಿದೆ.

ಶತ್ರು ಪಾಳೇಯದಿಂದ ನುಗ್ಗಿ ಬರುವ ಮಿಸೈಲ್ ಗಳನ್ನು ಗುರುತಿಸುವ ಹಾಗೂ ಮಿಸೈಲ್ ದಾಳಿಯಿಂದ ಪಾರಾಗುವಷ್ಟು ರಕ್ಷಣಾ ಕವಚವನ್ನು ಪಡೆದಿದೆ.

ನಾಲ್ಕರಿಂದ ಐದು ಕೀ.ಮೀ. ಉದ್ದಕ್ಕೂ ಮಿಸೈಲ್ ದಾಳಿಯನ್ನಿಡುವ ಸಾಮರ್ಥ್ಯವನ್ನು ಹೊಂದಿರಲಿದ್ದು, ಶತ್ರುವಿನ ಹೆಲಿಕಾಪ್ಟರನ್ನು ನೆಲಸಮ ಮಾಡಲಿದೆ.

ಐದು ಮೀಟರ್ ಆಳದ ನೀರಿನಲ್ಲೂ ಅಡೆ ತಡೆಗಳೆನ್ನೆಲ್ಲ ಎದುರಿಸಿ ಮುನ್ನುಗ್ಗುವ ಸಾಮರ್ಥ್ಯ ಇದಕ್ಕಿದೆ.

ಒಟ್ಟಿನಲ್ಲಿ ರಷ್ಯಾ ಜೊತೆಗಿನ ಬಾಂಧವ್ಯವನ್ನು ಮತ್ತಷ್ಟು ವೃದ್ಧಿಸಿಕೊಂಡಿರುವ ಭಾರತ ಕಳೆದ 60 ವರ್ಷಗಳಿಂದಲೂ ರಷ್ಯಾದ ಮಿಲಿಟರಿ ಬಲದ ಸಹಾಯವನ್ನು ಗಿಟ್ಟಿಸಿಕೊಳ್ಳುತ್ತಲೇ ಬಂದಿದೆ.


Click it and Unblock the Notifications








