Just In
- 17 hrs ago
ಎಲೆಕ್ಟ್ರಿಕ್ ಕಾರು ಮಾರಾಟಕ್ಕೆ ಭರ್ಜರಿ ಸಿದ್ದತೆ- 100 ಹೊಸ ಮಾರಾಟ ಮಳಿಗೆಗಳನ್ನು ತೆರೆಯಲಿದೆ ಟಾಟಾ
- 1 day ago
ನೆಚ್ಚಿನ ವಾಹನದ 50ನೇ ಹುಟ್ಟುಹಬ್ಬವನ್ನು ಆಚರಿಸಿದ ಅಪ್ಪ-ಮಗ
- 1 day ago
ಗ್ರಾಹಕರ ಕೈಸೇರಲು ಸಿದ್ದವಾದ ಬಿಎಸ್-6 ಎಂಜಿನ್ ಪ್ರೇರಿತ ಯಮಹಾ ಆರ್15 ವಿ3.0
- 1 day ago
ಆಟೋ ಮಾರುಕಟ್ಟೆ ಕುಸಿತದ ನಡುವೆಯೂ ಭರ್ಜರಿ ಮಾರಾಟವಾದ ಮಹೀಂದ್ರಾ ಸ್ಕಾರ್ಪಿಯೋ
Don't Miss!
- Sports
ಏಕದಿನ ಸರಣಿ; ಮೊದಲ ಪಂದ್ಯದಲ್ಲಿ ಭಾರತಕ್ಕೆ ಸೋಲುಣಿಸಿದ ವಿಂಡೀಸ್
- News
ಪೌರತ್ವ ಕಾಯ್ದೆ ಬಗ್ಗೆ ಮಾತಾಡಲ್ಲ, ಸಿದ್ದಾಂತವೇ ಬೇರೆ, ಸರ್ಕಾರವೇ ಬೇರೆ
- Finance
ಶಬರಿಮಲೆ ಅಯ್ಯಪ್ಪ ದೇವಳದಲ್ಲಿ 28 ದಿನದಲ್ಲಿ 104 ಕೋಟಿ ರು. ಸಂಗ್ರಹ
- Movies
ವಂಚನೆ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ 'ಲವ್ ಗುರು' ನಿರ್ದೇಶಕ
- Technology
ಆನ್ಲೈನ್ ಜಾಹೀರಾತುಗಳಿಂದ ಬೇಸರವಾಗಿದ್ದೀರಾ..? ಇಲ್ಲಿದೆ ಪರಿಹಾರ..!
- Lifestyle
ವಾರ ಭವಿಷ್ಯ- ಡಿಸೆಂಬರ್ 15ರಿಂದ ಡಿಸೆಂಬರ್ 21ರ ತನಕ
- Education
KSP: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಇಟಿ- ಪಿಎಸ್ಟಿ ಪ್ರವೇಶ ಪತ್ರ ಬಿಡುಗಡೆ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ಭೂತಾನ್ ಪೊಲೀಸರ ಕೈಗೆ ಭಾರತೀಯ ಬೈಕರ್ ಸಿಕ್ಕಿ ಬಿದ್ದಿದ್ದೇಕೆ?
ಭೂತಾನ್ ಭಾರತದ ನೆರೆಹೊರೆಯ ದೇಶಗಳಲ್ಲಿ ಒಂದಾಗಿದೆ. ವರ್ಷದಿಂದ ವರ್ಷಕ್ಕೆ ಭೂತಾನ್‍ಗೆ ಭೇಟಿ ನೀಡುವ ಭಾರತೀಯರ ಸಂಖ್ಯೆಯು ಹೆಚ್ಚಾಗುತ್ತಿದೆ. ಭೂತಾನ್‍ನ ಆರ್ಥಿಕ ವ್ಯವಸ್ಥೆಯು ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿದೆ.

ಭೂತಾನ್‍ಗೆ ಭೇಟಿ ನೀಡುವ ಭಾರತೀಯರು ತಮ್ಮ ವಾಹನಗಳಲ್ಲಿಯೇ ಆ ದೇಶಕ್ಕೆ ಭೇಟಿ ನೀಡಲು ಬಯಸುತ್ತಾರೆ. ಇದೇ ರೀತಿಯಾಗಿ ತನ್ನ ಬೈಕಿನಲ್ಲಿ ಭೂತಾನ್‍ಗೆ ಭೇಟಿ ನೀಡಿದ ಭಾರತೀಯನನ್ನು ಭೂತಾನ್ ಪೊಲೀಸರು ಬಂಧಿಸಿದ್ದಾರೆ. ಭೂತಾನ್‍ನಲ್ಲಿ ಅಶಿಸ್ತಿನಿಂದ ವರ್ತಿಸಿದ ಕಾರಣಕ್ಕೆ ಆತನನ್ನು ಬಂಧಿಸಲಾಗಿದೆ.

ಭೂತಾನ್‍ನಲ್ಲಿದ್ದ ಚೊರ್ಟನ್ ಅನ್ನು ಏರಿದ್ದ ಕಾರಣಕ್ಕೆ ಆತನನ್ನು ಬಂಧಿಸಲಾಗಿದೆ. ಭೂತಾನ್‍ನಲ್ಲಿ ಚೊರ್ಟನ್‍ಗಳೆಂದರೆ, ಸ್ಮಾರಕಗಳು. ಈ ಘಟನೆಯು ಅಲ್ಲಿನ ತೊಚುಲಾ ಪಾಸ್‍ನಲ್ಲಿ ನಡೆದಿದೆ. ಅದು ನಿಷೇಧಿತ ಪ್ರದೇಶವಾಗಿದೆ. ಅಲ್ಲಿಗೆ ತೆರಳುವ ಮುನ್ನ ಭೂತಾನ್ ಸರ್ಕಾರದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ಬೌದ್ಧ ದೇವಾಲಯಗಳನ್ನು ಸೊರ್ಡನ್‍ಗಳೆಂದು ಕರೆಯಲಾಗುತ್ತದೆ. ಭೂತಾನ್ ಹಾಗೂ ಟಿಬೆಟ್‍ನಂತಹ ದೇಶಗಳಲ್ಲಿ ಹೆಚ್ಚಿನ ಪ್ರಮಾಣದ ಸೊರ್ಡನ್‍ಗಳಿವೆ. ನಮ್ಮ ದೇಶದ ಲಡಾಖ್ ಹಾಗೂ ಹಿಮಾಚಲ ಪ್ರದೇಶಗಳಲ್ಲೂ ಸಹ ಹೆಚ್ಚಿನ ಸಂಖ್ಯೆಯ ಸೊರ್ಡನ್‍ಗಳಿವೆ. ಈ ಸೊರ್ಡನ್‍ಗಳನ್ನು ಸ್ತುಪಗಳೆಂದು ಸಹ ಕರೆಯಲಾಗುತ್ತದೆ.

ಬಂಧಿತನಾಗಿರುವ ಭಾರತೀಯನನ್ನು ಅಭಿಜಿತ್ ರತನ್ ಹಜಾರೆ ಎಂದು ಗುರುತಿಸಲಾಗಿದೆ. ಈತ ಅಲ್ಲಿದ್ದ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ಚೊರ್ಮೆಟನ್ನು ಏರಿದ್ದ ಕಾರಣಕ್ಕೆ ಬಂಧಿಸಲಾಗಿದೆ. ಈತನು ಮಹಾರಾಷ್ಟ್ರಕ್ಕೆ ಸೇರಿದವನು. ಈತನನ್ನು ಸೇರಿದಂತೆ ಒಟ್ಟು 15 ಜನರ ತಂಡವು ಭೂತಾನ್‍ಗೆ ತಮ್ಮ ಬೈಕುಗಳಲ್ಲಿ ಪ್ರವಾಸಕ್ಕೆಂದು ತೆರಳಿದ್ದಾರೆ.

ಈ ತಂಡಕ್ಕೆ ಭೂತಾನ್ ಮೂಲದ ವ್ಯಕ್ತಿಯೊಬ್ಬ ಗೈಡ್ ಆಗಿದ್ದಾನೆ. ಸೊರ್ಡಾನ್ ಮೇಲೆ ನಿಂತಿರುವ ಫೋಟೊವನ್ನು ಅಭಿಜಿತ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಈ ಫೋಟೊ ವೈರಲ್ ಆದ ನಂತರ ಜನರು ಈತನ ಕೃತ್ಯವನ್ನು ಖಂಡಿಸಿ, ಅಭಿಜಿತ್‍ನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದಾದ ನಂತರ ಭೂತಾನ್ ಪೊಲೀಸರು ಈತನ ಬಂಧನಕ್ಕೆ ಶೋಧ ನಡೆಸಿದ್ದಾರೆ. ಕೊನೆಗೂ ಈತನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಜೊತೆಗೆ ಈತನ ಬಳಿಯಿದ್ದ ಪಾಸ್‍ಪೋರ್ಟ್ ಹಾಗೂ ಇತರ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಇದರ ಜೊತೆಗೆ ತನಿಖೆಯು ಪೂರ್ಣಗೊಳ್ಳುವವರೆಗೂ ಅಭಿಜಿತ್‍ನನ್ನು ಭೂತಾನ್‍ನಲ್ಲಿಯೇ ಇರಿಸಿಕೊಳ್ಳುವ ಬಗ್ಗೆ ವರದಿಯಾಗಿದೆ. ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿಯಂತೆ ಈ ತಂಡದ ಜೊತೆಗಿದ್ದ ಗೈಡ್‍ಗೆ ಅಭಿಜಿತ್‍ನ ಕೃತ್ಯದ ಬಗ್ಗೆ ತಿಳಿದಿಲ್ಲ. ಅಭಿಜಿತ್ ಸ್ತುಪವನ್ನು ಏರುವ ಸಂದರ್ಭದಲ್ಲಿ ಆ ಗೈಡ್ ಬೈಕುಗಳನ್ನು ಪಾರ್ಕಿಂಗ್ ಮಾಡುವುದರಲ್ಲಿ ಬ್ಯುಸಿಯಾಗಿದ್ದ.
MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಆದರೆ ಭೂತಾನ್ ಮೂಲದ ಮತ್ತೊಬ್ಬ ವ್ಯಕ್ತಿ ಅಭಿಜಿತ್ ಸ್ತುಪವನ್ನು ಏರಲು ಸಹಾಯ ಮಾಡಿದ್ದಾನೆ. ಆ ವ್ಯಕ್ತಿ ಕಾರ್ಪೆಂಟರ್ ಕೆಲಸ ಮಾಡುವವನಾಗಿದ್ದು, ಹಾಳಾಗಿರುವ ಸ್ತುಪಗಳನ್ನು ದುರಸ್ತಿ ಮಾಡುವ ಕೆಲಸ ಮಾಡುತ್ತಿದ್ದನೆಂದು ತಿಳಿದು ಬಂದಿದೆ. ಭೂತಾನ್ ಪೊಲೀಸರು ನಾಪತ್ತೆಯಾಗಿರುವ ಆ ಕಾರ್ಪೆಂಟರ್‍ಗಾಗಿ ಶೋಧ ನಡೆಸಿದ್ದಾರೆ.
MOST READ: ಜೆಸಿಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?
ಸದ್ಯಕ್ಕೆ ಸ್ತುಪವನ್ನು ಏರಿ ಅಲ್ಲಿನ ಸಂಸ್ಕೃತಿಗೆ ಧಕ್ಕೆ ತಂದ ಬೈಕ್ ಸವಾರನಿಗೆ ಯಾವ ರೀತಿಯ ಶಿಕ್ಷೆ ನೀಡಲಾಗುವುದು ಎಂದು ತಿಳಿದು ಬಂದಿಲ್ಲ. ಯಾರೇ ಆಗಿರಲಿ, ಪ್ರವಾಸಕ್ಕೆಂದು ಹೋದಾಗ ಅಲ್ಲಿರುವ ಸಂಪ್ರದಾಯಕ್ಕೆ ಹಾಗೂ ನಂಬಿಕೆಗಳಿಗೆ ಧಕ್ಕೆ ತರುವುದು ಸರಿಯಲ್ಲ.

ಆದರೆ ತಾನು ಈ ಕೃತ್ಯವನ್ನು ಮಾಡಿಲ್ಲವೆಂದು ಅಭಿಜಿತ್ ಹೇಳುತ್ತಿದ್ದಾನೆ. ಭೂತಾನ್ ಈಗಾಗಲೇ ಅಲ್ಲಿಗೆ ಪ್ರವಾಸಕ್ಕೆಂದು ತೆರಳುವ ಬೈಕ್ ಸವಾರರಿಗೆ ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. ಈ ಘಟನೆಯ ನಂತರ ಮತ್ತಷ್ಟು ಕಠಿಣ ಕ್ರಮಗಳನ್ನು ಜಾರಿಗೊಳಿಸುವ ಸಾಧ್ಯತೆಗಳಿವೆ.