ಭಾರತ ತಂಡಕ್ಕೆ ಟಿ20 ವಿಶ್ವಕಪ್ ಗೆದ್ದುಕೊಡಬಲ್ಲ ಬೆಂಕಿ ಬೌಲರ್ ಜಸ್‌ಪ್ರೀತ್ ಬುಮ್ರಾ ಕಾರುಗಳು
ಟಿ20 ವಿಶ್ವಕಪ್ನಲ್ಲಿ (T20 World Cup 2024) ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಭಾರತವು ಆರು ರನ್‌ಗಳಿಂದ ಸೋಲಿಸಿತು. ಕಡಿಮೆ ಸ್ಕೋರಿಂಗ್ ಪಂದ್ಯ ಆಗಿದ್ದ ಕಾರಣ ಭಾರತವು ಸೋಲುತ್ತೆ ಎಂದು ನಿರಾಸೆಗೊಂಡಿದ್ದರು. ಪಾಕಿಸ್ತಾನವ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದ ಜ್ವಾನ್ರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಜಸ್‌ಪ್ರೀತ್ ಬುಮ್ರಾ (Jasprit Bumrah) ಮತ್ತೆ ಟೀಂ ಇಂಡಿಯಾ ಪರ ವಾಲುವಂತೆ ಮಾಡಿದರು. ಜಸ್‌ಪ್ರೀತ್ ಬುಮ್ರಾ ಮ್ಯಾಚ್ ವಿನ್ನಿಂಗ್ ಬೌಲಿಂಗ್ ಪ್ರದರ್ಶನಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು.
ಜಸ್‌ಪ್ರೀತ್ ಬುಮ್ರಾ ಅವರ ಪ್ರದರ್ಶನವು ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಭಾರತ ನಿರ್ಮಿಸಿದ ಅತ್ಯುತ್ತಮ ಬೌಲರ್ ಎಂದು ಸಾಬೀತುಪಡಿಸಿದೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಅಡುವ ಇವರ ವಾರ್ಷಿಕ ಆದಾಯ 7 ಕೋಟಿ ರೂ. ಆಗಿದೆ. ಟೀಂ ಇಂಡಿಯಾದ ಬ್ರಹ್ಮಸ್ತ್ರಾ ಜಸ್‌ಪ್ರೀತ್ ಬುಮ್ರಾ ಕಾರುಗಳ ಕ್ರೇಜ್ ಅನ್ನು ಹೊಂದಿದ್ದಾರೆ. ಯಾರ್ಕರ್ ಕಿಂಗ್ ಬೌಲರ್ ಜಸ್‌ಪ್ರೀತ್ ಬುಮ್ರಾ ಗ್ಯಾರೇಜ್‌ನಲ್ಲಿರುವ ಕಾರುಗಳ ಬಗ್ಗೆ ಇಲ್ಲಿ ನೋಡೋಣ.

ರೇಂಜ್ ರೋವರ್ ವೆಲಾರ್: ಬುಮ್ರಾ ಅವರು ಲ್ಯಾಂಡ್ ರೋವರ್ ರೇಂಜ್ ರೋವರ್ ವೆಲಾರ್ ಎಸ್‌ಯುವಿಯನ್ನು ಹೊಂದಿದೆ. ಈ ಎಸ್‍ಯುವಿಯು ಪೆಟ್ರೋಲ್ ಮತ್ತು ಡೀಸೆಲ್‌ನಲ್ಲಿ ಲಭ್ಯವಿದೆ. ಬುಮ್ರಾ ಅವರ ಬಳಿ ಇರುವ ಎಸ್‍ಯುವಿಯು 2.0-ಲೀಟರ್ ಡೀಸೆಲ್ ಮೈಲ್ಡ್-ಹೈಬ್ರಿಡ್ ರೂಪಾಂತರ ಆಗಿದ್ದು, ಇದು 201 bhp ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಐಷಾರಾಮಿ ಎಸ್‍ಯುವಿ ಕೇವಲ 8.3 ಸೆಕೆಂಡುಗಳಲ್ಲಿ ಶೂನ್ಯದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಎಸ್‍ಯುವಿಯು 210 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ರೇಂಜ್ ರೋವರ್ ವೆಲಾರ್‌ನ ಪೆಟ್ರೋಲ್ ಆವೃತ್ತಿಯು 2.0-ಲೀಟರ್ 4-ಸಿಲಿಂಡರ್ ಎಂಜಿನ್‌ನಿಂದ ಚಾಲಿತವಾಗಿದ್ದು, ಇದು 246 bhp ಪವರ್ ಅನ್ನು ಉತ್ಪಾದಿಸುತ್ತದೆ. ಈ ಲ್ಯಾಂಡ್ ರೋವರ್ ರೇಂಜ್ ರೋವರ್ ವೆಲಾರ್ ಎಸ್‌ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.87.90 ಲಕ್ಷವಾಗಿದೆ.

ಮರ್ಸಿಡಿಸ್ ಮೇಬ್ಯಾಕ್ S560: ಬೂಮ್ರಾದ ಕಾರು ಸಂಗ್ರಹದಲ್ಲಿ ಮರ್ಸಿಡಿಸ್ ಬ್ರಾಂಡ್‌ನ ವಾಹನವನ್ನು ಸಹ ಹೊಂದಿದೆ, ಇದು ಐಷಾರಾಮಿ . S-ಕ್ಲಾಸ್ ಅನ್ನು ಆಧರಿಸಿ, ಮೇಬ್ಯಾಕ್ S560 ಆಗಿದೆ. ಈ ಕಾರಿನಲ್ಲಿ 4-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ V8 ಎಂಜಿನ್‌ನೊಂದಿಗೆ 48V ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವನ್ನು ಪಡೆಯುತ್ತದೆ. ಈ ಎಂಜಿನ್ ಅನ್ನು 496 bhp ಪವರ್ ಮತ್ತು 700 Nm ಟಾರ್ಕ್ ಉತ್ಪಾದಿಸಲು ಟ್ಯೂನ್ ಮಾಡಲಾಗಿದೆ.
ನಿಸ್ಸಾನ್ GT-R: ಜಪಾನಿನ ಬ್ರ್ಯಾಂಡ್ ಈ ಡ್ರೈವಿಂಗ್ ದೈತ್ಯನನ್ನು ಗಾಡ್ಜಿಲ್ಲಾ . ಈ ನಿಸ್ಸಾನ್ GT-R 3.8-ಲೀಟರ್ V6 ಟ್ವಿನ್-ಟರ್ಬೊ ಎಂಜಿನ್‌ನಿಂದ 565 bhp ಪವರ್ ಮತ್ತು 637 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರು ಆಲ್-ವೀಲ್ ಡ್ರೈವ್ ಸಿಸ್ಟಮ್ ಮತ್ತು 6-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಹೊಂದಿದೆ. ಈ ನಿಸ್ಸಾನ್ GT-R ಬೆಲೆಯು 2.45 ಕೋಟಿ ಆಗಿತ್ತು.
ಟೊಯೊಟಾ ಇನ್ನೋವಾ ಕ್ರಿಸ್ಟಾ: ಜಸ್ಪ್ರೀತ್ ಬುಮ್ರಾ ಅವರು ಟೊಯೊಟಾ ಇನ್ನೋವಾ ಕ್ರಿಸ್ಟಾ ಎಂಪಿವಿಯನ್ನು ಹೊಂದಿದ್ದಾರೆ. ಬುಮ್ರಾ ಅವರ ಕ್ಷೇತ್ರಗಳಲ್ಲಿ ಅತ್ಯುತ್ತಮ ಬೌಲಿಂಗ್‌ನ ರಾಜನಾಗಿದ್ದರೆ, ಇನ್ನೋವಾ ಕ್ರಿಸ್ಟಾ ಎಂಪಿವಿ ವಿಭಾಗದ ಕಿಂಗ್ ಆಗಿದೆ. 2005ರಲ್ಲಿ ಹೆಚ್ಚು ಜನಪ್ರಿಯವಾದ ಕ್ವಾಲಿಸ್ ಅನ್ನು ಬದಲಾಯಿಸಿ ಪ್ರೀಮಿಯಂ ಎಂಪಿವಿಯಾಗಿ ಟೊಯೊಟಾ ಇನೋವಾ ಕಾರನ್ನು ಪರಿಚಯಿಸಿದರು. ಅಂದಿನಿಂದ ಇಂದಿನವರೆಗೂ ಈ ಕಾರಿಗೆ ಭಾರೀ ಬೇಡಿಕೆಯನ್ನು ಹೊಂದಿದೆ.
ಇದೇ ಕಾರಣದಿಂದ ಟೊಯೊಟಾ ಕಂಪನಿಯು ಡೀಸೆಲ್ ಎಂಜಿನ್ ನೊಂದಿಗೆ ಇನ್ನೋವಾ ಕ್ರಿಸ್ಟಾ ಕಾರನ್ನು ಮರಳಿ ತಂದಿದೆ. ಈ ಇನೋವಾ ಕ್ರಿಸ್ಟಾ ಕಾರಿನಲ್ಲಿ ಲುಕ್ ಹೆಚ್ಚಾಗಿ ಬದಲಾಗದೆ ಉಳಿಸಲಾಗಿದೆ. ಈ ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನಲ್ಲಿ 2.4 ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಅನ್ನು ಆರ್‌ಡಿಇ ಹೊರಸೂಸುವಿಕೆ ಮಾನದಂಡಗಳನ್ನು ಪೂರೈಸುತ್ತದೆ ಎಂದು ಕಾರು ತಯಾರಕರು ಖಚಿತಪಡಿಸಿದ್ದಾರೆ.


Click it and Unblock the Notifications








