ಕಣ್ಮರೆಯಾದರೂ ಸದಾ ಕಾಡುವ ಭಾರತದ ಕಾರುಗಳಿವು

ಆಕರ್ಷಕ ನೋಟ ಹಾಗೂ ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿರುವ ಹಲವು ಕಾರುಗಳು ಇಂದು ಮಾರುಕಟ್ಟೆಯಲ್ಲಿವೆ. ಆದರೆ ಹಲವು ದಶಕಗಳ ಹಿಂದೆ ಭಾರತಲ್ಲಿದ್ದ ಕಾರುಗಳು ಮತ್ತೆ ಮತ್ತೆ ನೆನಪಾಗುತ್ತಲೇ ಇರುತ್ತವೆ.

ಕಣ್ಮರೆಯಾದರೂ ಸದಾ ಕಾಡುವ ಭಾರತದ ಕಾರುಗಳಿವು

ಇಲ್ಲಿ ಹೇಳಲು ಹೊರಟಿರುವ ಕಾರುಗಳು ಖಂಡಿತವಾಗಿಯೂ ಜನರ ಮನಸ್ಸಿಗೆ ಹತ್ತಿರವಾಗಿದ್ದ ಕಾರುಗಳು. 1990ರ ದಶಕದಲ್ಲಿ ಜನಿಸಿದವರು ಈ ಕಾರುಗಳೊಂದಿಗೆ ಒಡನಾಟವನ್ನು ಹೊಂದಿದ್ದರು ಎಂದರೂ ತಪ್ಪಾಗಲಾರದು. ಅವರುಗಳು ಸಹಜವಾಗಿ ಈ ಕಾರುಗಳ ಜೊತೆಗಿನ ನೆನಪುಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. 1990ರ ದಶಕದಲ್ಲಿ ಮೋಡಿ ಮಾಡಿದ್ದ, ಸದ್ಯಕ್ಕೆ ಕಣ್ಮರೆಯಾಗಿದ್ದರೂ ಸದಾ ಕಾಡುವ ಕಾರುಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಕಣ್ಮರೆಯಾದರೂ ಸದಾ ಕಾಡುವ ಭಾರತದ ಕಾರುಗಳಿವು

ಮಾರುತಿ 800

ಅನೇಕ ಭಾರತೀಯ ಕುಟುಂಬಗಳ ಮೊದಲ ಕಾರು ಮಾರುತಿ 800. ಮಾರುತಿ 800 ಸಾಮಾನ್ಯ ಜನರಿಗೆ ಮಾತ್ರವಲ್ಲದೇ ಕ್ರೀಡಾಪಟುಗಳು ಹಾಗೂ ಸಿನಿಮಾ ತಾರೆಯರು ಸೇರಿದಂತೆ ಹಲವು ಗಣ್ಯ ಮೊದಲ ಕಾರು ಸಹ ಹೌದು. ಮಾರುತಿ 800 ಕಾರು ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿತ್ತು.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಕಣ್ಮರೆಯಾದರೂ ಸದಾ ಕಾಡುವ ಭಾರತದ ಕಾರುಗಳಿವು

1983ರಲ್ಲಿ ಆರಂಭವಾದ ಮಾರುತಿ 800 ಕಾರಿನ ಉತ್ಪಾದನೆಯನ್ನು 31 ವರ್ಷಗಳ ನಂತರ 2014ರಲ್ಲಿ ಸ್ಥಗಿತಗೊಳಿಸಲಾಯಿತು. ಮಾರುತಿ 800 ಕಾರು ಹಿಂದೂಸ್ತಾನ್ ಅಂಬಾಸಿಡರ್ ಕಾರಿನ ನಂತರ ಭಾರತದಲ್ಲಿ ಹೆಚ್ಚು ಕಾಲ ಸಂಚರಿಸಿದ ಕಾರು ಎಂಬ ಹೆಗ್ಗಳಿಕೆಯನ್ನು ಹೊಂದಿದೆ.

ಕಣ್ಮರೆಯಾದರೂ ಸದಾ ಕಾಡುವ ಭಾರತದ ಕಾರುಗಳಿವು

ಮಾರುತಿ 1000

ಮಾರುತಿ ಸುಜುಕಿ ಕಂಪನಿಯು ಮಾರುತಿ 800 ಕಾರಿನ ನಂತರ ತನ್ನ ಮಾರುತಿ 1000 ಕಾರ್ ಅನ್ನು ಬಿಡುಗಡೆಗೊಳಿಸಿತು. ಮಾರುತಿ 1000 ಕಾರಿಗೆ ನಂತರದ ದಿನಗಳಲ್ಲಿ ಎಸ್ಟೀಮ್ ಎಂಬ ಹೆಸರನ್ನಿಡಲಾಯಿತು. 4 ಡೋರುಗಳ ಈ ಸೆಡಾನ್ ಕಾರು ಮಧ್ಯಮ ವರ್ಗದ ಪ್ರತಿಷ್ಟೆಯ ಸಂಕೇತವಾಗಿತ್ತು.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಕಣ್ಮರೆಯಾದರೂ ಸದಾ ಕಾಡುವ ಭಾರತದ ಕಾರುಗಳಿವು

ಮಾರುತಿ 1000, ಮಾರುತಿ ಸುಜುಕಿ ಕಂಪನಿಯು ಬಿಡುಗಡೆ ಮಾಡಿದ ಮೊದಲ ಸೆಡಾನ್ ಕಾರು. ಈ ಕಾರಿನಲ್ಲಿದ್ದ ಎಂಜಿನ್ 46 ಬಿಹೆಚ್ ಪಿ ಪವರ್ ಉತ್ಪಾದಿಸುತ್ತಿತ್ತು. ನಂತರದ ದಿನಗಳಲ್ಲಿ ಈ ಕಾರಿನಲ್ಲಿ 1.3 ಲೀಟರಿನ ಎಂಜಿನ್‌ ಅಳವಡಿಸಲಾಯಿತು. ಭಾರತೀಯರು ಎಂದಿಗೂ ಮರೆಯದ ಕಾರುಗಳಲ್ಲಿ ಇದು ಸಹ ಒಂದು.

ಕಣ್ಮರೆಯಾದರೂ ಸದಾ ಕಾಡುವ ಭಾರತದ ಕಾರುಗಳಿವು

ಮಾರುತಿ ಸುಜುಕಿ ಜೆನ್

ಜೆನ್ ಮಾರುತಿ ಸುಜುಕಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಮೂರನೇ ಕಾರ್ ಆಗಿದೆ. ಈ ಕಾರನ್ನು ಕೊನೆಯ ಬಾರಿಗೆ 1993ರಲ್ಲಿ ಬಿಡುಗಡೆಗೊಳಿಸಲಾಯಿತು. ಜೆನ್ ಕಾರು ಅತಿ ಕಡಿಮೆ ಅವಧಿಯಲ್ಲಿಯೇ ಹೆಚ್ಚು ಜನಪ್ರಿಯವಾಗಿತ್ತು. ಈ ಕಾರ್ ಅನ್ನು 1994ರಲ್ಲಿ ಯುರೋಪಿಯನ್ ಮಾರುಕಟ್ಟೆಗಳಿಗೆ ರಫ್ತು ಮಾಡಲಾಯಿತು. ಮಾರುತಿ ಸುಜುಕಿ ಜೆನ್ ವಿಶ್ವ ಮಾರುಕಟ್ಟೆಯಲ್ಲಿ ಮಾರಾಟವಾದ ಮೊದಲ ಭಾರತೀಯ ಕಾರು ಎಂದು ಪರಿಗಣಿತವಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಕಣ್ಮರೆಯಾದರೂ ಸದಾ ಕಾಡುವ ಭಾರತದ ಕಾರುಗಳಿವು

ಪ್ರೀಮಿಯರ್ ಪದ್ಮಿನಿ

ಪ್ರೀಮಿಯರ್ ಪದ್ಮಿನಿ ಕಾರನ್ನು 1964ರಲ್ಲಿ ಫಿಯೆಟ್ 1100 ಡಿಲೈಟ್ ಎಂಬ ಹೆಸರಿನಲ್ಲಿ ಬಿಡುಗಡೆಗೊಳಿಸಲಾಯಿತು. ನಂತರದ ದಿನಗಳಲ್ಲಿ ಈ ಕಾರಿನ ಹೆಸರನ್ನು ಪ್ರೀಮಿಯರ್ ಪದ್ಮಿನಿ ಎಂದು ಬದಲಿಸಲಾಯಿತು. ಪ್ರೀಮಿಯರ್ ಪದ್ಮಿನಿ ಭಾರತದಲ್ಲಿ ಐಷಾರಾಮಿ ಕಾರಾಗಿ ಜನಪ್ರಿಯವಾಗಿತ್ತು. ಇಂದಿಗೂ ಸಹ ಕೆಲವರು ಈ ಕಾರನ್ನು ಜೋಪಾನವಾಗಿ ಉಳಿಸಿಕೊಂಡಿದ್ದಾರೆ.

ಕಣ್ಮರೆಯಾದರೂ ಸದಾ ಕಾಡುವ ಭಾರತದ ಕಾರುಗಳಿವು

ಹಿಂದೂಸ್ತಾನ್ ಅಂಬಾಸಿಡರ್

ಹಿಂದೂಸ್ತಾನ್ ಅಂಬಾಸಿಡರ್ ಕಾರು ಭಾರತದ ರಸ್ತೆಗಳ ರಾಜ. ಈ ಕಾರು ಮತ್ತೆ ಬಿಡುಗಡೆಯಾಗಲಿದೆಯೇ ಎಂದು ಹಂಬಲಿಸುವ ಸಾಕಷ್ಟು ಜನರಿದ್ದಾರೆ. ಭಾರತದಲ್ಲಿ ತಯಾರಾದ ಮೊಟ್ಟ ಮೊದಲ ಕಾರು ಅಂಬಾಸಿಡರ್. ಮೊದಲ ಹಿಂದೂಸ್ತಾನ್ ಅಂಬಾಸಿಡರ್ ಕಾರು 1957ರಲ್ಲಿ ಮಾರಾಟವಾಯಿತು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಕಣ್ಮರೆಯಾದರೂ ಸದಾ ಕಾಡುವ ಭಾರತದ ಕಾರುಗಳಿವು

ಸುಮಾರು 57 ವರ್ಷಗಳ ನಂತರ ಈ ಕಾರಿನ ಉತ್ಪಾದನೆಯನ್ನು 2014ರಲ್ಲಿ ಸ್ಥಗಿತಗೊಳಿಸಲಾಯಿತು. ಹಿಂದೂಸ್ತಾನ್ ಅಂಬಾಸಿಡರ್ ಭಾರತದಲ್ಲಿ ಅತಿ ಹೆಚ್ಚು ಕಾಲ ಓಡಾಟ ನಡೆಸಿದ ಕಾರು ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಆ ದಿನಗಳಲ್ಲಿ ಅಂಬಾಸಿಡರ್ ಕಾರು ಜನರ ಪ್ರತಿಷ್ಟೆಯ ಕಾರ್ ಆಗಿತ್ತು.

ಕಣ್ಮರೆಯಾದರೂ ಸದಾ ಕಾಡುವ ಭಾರತದ ಕಾರುಗಳಿವು

ರಾಜಕಾರಣಿಗಳು ಸೇರಿದಂತೆ ಅನೇಕ ಗಣ್ಯ ವ್ಯಕ್ತಿಗಳು ಹಿಂದೂಸ್ತಾನ್ ಅಂಬಾಸಿಡರ್ ಕಾರಿನಲ್ಲಿ ಪ್ರಯಾಣಿಸಿದ್ದಾರೆ. ಹಿಂದೂಸ್ತಾನ್ ಅಂಬಾಸಿಡರ್ ಕಾರಿನಲ್ಲಿ ಸಂಚರಿಸದಜನರೇ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಈ ಕಾರು ಜನಪ್ರಿಯವಾಗಿತ್ತು.

ಮೂಲ: ಕಾರ್ ಟಾಕ್

Most Read Articles

Kannada
English summary
Indian cars with unforgettable memory. Read in Kannada.
Story first published: Wednesday, August 5, 2020, 14:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X