ಐಷಾರಾಮಿ ರೇಂಜ್ ರೋವರ್ ವೆಲಾರ್ ಎಸ್‍ಯುವಿ ಖರೀದಿಸಿದ ಸ್ಪೋಟಕ ಬ್ಯಾಟ್ಸ್‌ಮನ್

ಕಾರುಗಳ ಬಗ್ಗೆ ಕ್ರೇಜ್ ಅನ್ನೋದು ಯಾರಿಗೆ ಇರಲ್ಲ ಹೇಳಿ, ಅದರಲ್ಲಿಯು ಸಿನಿಮಾ ಸೆಲಬ್ರಿಟಿಗಳಿಗೆ ಮತ್ತು ಕ್ರಿಕೆಟಿಗರಿಗೆ ಈ ಕ್ರೇಜ್ ಸ್ವಲ್ಪ ಹೆಚ್ಚು ಇರುತ್ತದೆ. ತಾವು ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇದರಿಂದ ಮಾರುಕಟ್ಟೆಗೆ ಲಗ್ಗೆ ಇಡುವ ಹೊಸ ಐಷಾರಾಮಿ ಕಾರುಗಳನ್ನು ಖರೀದಿಸುತ್ತಾರೆ. ಇತ್ತೀಚೆಗೆ ಕ್ರಿಕೆಟಿಗ ವೆಂಕಟೇಶ್ ಅಯ್ಯರ್ (Venkitesh Iyer) ಅವರು ಐಷಾರಮಿ ಕಾರನ್ನು ಖರೀದಿಸಿ ಸುದ್ದಿಯಾಗಿದ್ದಾರೆ. ವೆಂಕಟೇಶ್ ಅಯ್ಯರ್ ಭಾರತದ ಯುವ ಕ್ರಿಕೆಟಿಗರಲ್ಲಿ ಚಿರಪರಿಚಿತ ಹೆಸರು. 2021ರಲ್ಲಿ ಬ್ಯಾಟ್ಸ್‌ಮನ್ ಆಗಿ ಕೋಲ್ಕತ್ತಾ ನೈಟ್ ರೈಡರ್ಸ್‌ಗಾಗಿ ಐಪಿಎಲ್ ನಲ್ಲಿ ಪಾದಾರ್ಪಣೆ ಮಾಡಿದರು.

ಐಪಿಎಲ್‌ನಲ್ಲಿ ಸ್ಪೋಟಕ ಬ್ಯಾಟ್ಸ್‌ಮನ್ ಆಗಿ ಹೆಸರುವಾಸಿಯಾಗಿದ್ದಾರೆ. ಕಳೆದ ಐಪಿಎಲ್ ಸೀಸನ್ ನಲ್ಲಿ ಕೆಕೆಆರ್ ಚಾಂಪಿಯನ್ ಆಗುವುದಕ್ಕೆ ಪ್ರಮುಖ ಪಾತ್ರ ವಹಿಸಿದ್ದ ವೆಂಕಟೇಶ್ ಅಯ್ಯರ್ ಅವರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ಯಶ್ವಸಿಯಾಗಿಲ್ಲ. ಪ್ರಸ್ತುತ ಬಿಸಿಸಿಐ ವಾರ್ಷಿಕ ಒಪ್ಪಂದದಲ್ಲಿ ಸೇರ್ಪಡೆಯಾಗದಿದ್ದರೂ, ಐಪಿಎಲ್‌ನಲ್ಲಿ ಆಟಗಾರನ ಸಂಭಾವನೆ 8 ಕೋಟಿ ಆಗಿದೆ.

Venkitesh Iyer

ವೆಂಕಟೇಶ್ ಅಯ್ಯರ್ ಗ್ಯಾರೇಜ್‌ಗೆ ರೇಂಜ್ ರೋವರ್ ವೆಲಾರ್ ಹೊಸ ಅತಿಥಿ. ಹೊಸ ಐಷಾರಾಮಿ ಎಸ್‌ಯುವಿ ಬಗ್ಗೆ ನಟ ತನ್ನ ಅಭಿಮಾನಿಗಳಿಗೆ ಇನ್‌ಸ್ಟಾಗ್ರಾಮ್ ಮೂಲಕ ಮಾಹಿತಿ ನೀಡಿದ್ದಾರೆ. ದಿ ಬೀಸ್ಟ್ ಅಂಡ್ ಬೀಸ್ಟ್ ಎಂಬ ಶೀರ್ಷಿಕೆಯೊಂದಿಗೆ ವಾಹನದ ಮುಂಭಾಗದ ಚಿತ್ರಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸೃ ಮಾಡಿದ್ದಾರೆ. ಇದಕ್ಕೆ ಕ್ರಿಕೆಟಿಗರು ಮತ್ತು ಅಭಿಮಾನಿಗಳು ಕಾಮೆಂಟ್ ಮೂಲಕ ಶುಭ ಹಾರೈಸಿದ್ದಾರೆ.

ಕ್ರಿಕೆಟಿಗ ವೆಂಕಟೇಶ್ ಅಯ್ಯರ್ ಖರೀದಿಸಿದ ರೇಂಜ್ ರೋವರ್ ವೆಲಾರ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಈ ಎಸ್‍ಯುವಿಯ 2.0-ಲೀಟರ್ ಇನ್‌ಲೈನ್ ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳೊಂದಿಗೆ ನೀಡಲಾಗುತ್ತದೆ. ಇದರ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಆವೃತ್ತಿಗಳು 8-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗಳೊಂದಿಗೆ ಜೋಡಿಸಲಾಗಿದೆ.

Venkitesh Iyer

ರೇಂಜ್ ರೋವರ್ ವೆಲಾರ್ ಫೇಸ್‌ಲಿಫ್ಟೆಡ್ ಪೆಟ್ರೋಲ್ ಆವೃತ್ತಿಯು 5,500 rpm ನಲ್ಲಿ 246.6 bhp ಮತ್ತು 1,300 rpm ಮತ್ತು 4,500rpm ನಡುವೆ 365Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ರೇಂಜ್ ರೋವರ್ ವೆಲಾರ್ ಪಿ250 7.5 ಸೆಕೆಂಡ್‌ಗಳಲ್ಲಿ ಗಂಟೆಗೆ 01-00 ಕಿಮೀ ವೇಗವನ್ನು ತಲುಪುತ್ತದೆ. ಇನ್ನು ಈ ಮಾದರಿಯು 217 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಇನ್ನು 'D200' ಎಂದು ಕರೆಯಲ್ಪಡುವ ಡೀಸೆಲ್ ರೂಪಾಂತರವು 48V ಮೈಲ್ಡ್ ಹೈಬ್ರಿಡ್ ಸಿಸ್ಟಂ ಅನ್ನು ಹೊಂದಿದೆ. ಈ ಡೀಸೆಲ್ ಎಂಜಿನ್ 3,750 rpm ನಲ್ಲಿ 201 bhp ಮತ್ತು 1,750 rpm ಮತ್ತು 2,500rpm ನಡುವೆ 430 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಡೀಸೆಲ್ ವೆಲಾರ್ 8.3 ಸೆಕೆಂಡ್‌ಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಎಸ್‍ಯುವಿಯು 210 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ.

ರೇಂಜ್ ರೋವರ್ ವೆಲಾರ್ ಫೇಸ್‌ಲಿಫ್ಟೆಡ್ ಹೊಸ ಪಿಕ್ಸೆಲ್ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಹೊಂದಿದೆ, ಇದು ಪರಿಷ್ಕೃತ ಡಿಆರ್‌ಎಲ್ ಸಿಗ್ನೇಚರ್ ಅನ್ನು ಹೊಂದಿದೆ. ಬಂಪರ್‌ಗಳ ಜೊತೆಗೆ ಟೈಲ್‌ಲೈಟ್‌ಗಳನ್ನು ನವೀಕರಸಲಾಗಿದೆ. ಈ ಎಸ್‍ಯುವಿಯ ಬದಲಾವಣೆಗಳು ಹೆಚ್ಚು ಗೋಚರಿಸುತ್ತವೆ. ಹಿಂದಿನ ಡ್ಯುಯಲ್-ಸ್ಕ್ರೀನ್ ಸೆಟಪ್ ಅನ್ನು 11.4-ಇಂಚಿನ ಪಿವಿ ಪ್ರೊ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್‌ನಿಂದ ಬದಲಾಯಿಸಲಾಗಿದೆ.

ಇನ್ನು ಈ ಹೊಸ ರೇಂಜ್ ರೋವರ್ ವೆಲಾರ್ ಫೇಸ್‌ಲಿಫ್ಟೆಡ್ ಎಸ್‍ಯುವಿಯಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಅನ್ನು ಬೆಂಬಲಿಸುತ್ತದೆ ಮತ್ತು ಎಚ್‌ವಿಎಸಿ ಸೆಟಪ್ ಅನ್ನು ಸಹ ನಿಯಂತ್ರಿಸುತ್ತದೆ. ಈ ಹೊಸ ರೇಂಜ್ ರೋವರ್ ವೆಲಾರ್ ಫೇಸ್‌ಲಿಫ್ಟೆಡ್ ಎಸ್‍ಯುವಿಯಲ್ಲಿ ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಹೊಂದಿರುವ ಹೊಸ ಮುಚ್ಚಿದ ಸ್ಟೋವೇಜ್ ಪ್ರದೇಶವನ್ನು ಸಹ ನೋಡಲಾಗಿದೆ.

More from DriveSpark

Article Published On: Wednesday, July 10, 2024, 16:59 [IST]
English summary
Indian cricketer venkatesh iyer buys land rover velar luxury suv details
Read more on celebrity car india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+