ಕರೋನಾ ವೈರಸ್: 100 ಕಾರುಗಳಿಂದ ಸಲ್ಯೂಟ್ ಹೊಡೆಸಿಕೊಂಡ ಹೆಮ್ಮೆಯ ಕನ್ನಡತಿ
ಕರೋನಾ ವೈರಸ್ ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ. ಚೀನಾದ ವುಹಾನ್ ನಗರದಲ್ಲಿ ಮೊದಲಿಗೆ ಕಾಣಿಸಿಕೊಂಡ ಈ ವೈರಸ್ ವಿಶ್ವದ ಎಲ್ಲಾ ರಾಷ್ಟ್ರಗಳನ್ನು ತತ್ತರಿಸುವಂತೆ ಮಾಡಿದೆ. ಅದರಲ್ಲೂ ವಿಶ್ವದ ಬಲಶಾಲಿ ರಾಷ್ಟ್ರಗಳೇ ಈ ವೈರಸ್‌ನಿಂದಾಗಿ ಹೆಚ್ಚು ಹಾನಿಗೊಳಗಾಗಿವೆ.

ವಿಶ್ವದ ದೊಡ್ಡಣ್ಣ ಎಂದೇ ಬೀಗುವ ಅಮೆರಿಕಾ ದೇಶವಂತೂ ಈ ವೈರಸ್‌ನಿಂದ ಹೆಚ್ಚು ನಷ್ಟವನ್ನು ಅನುಭವಿಸಿದೆ. ಈವರೆಗೆ ಅಮೆರಿಕದಲ್ಲಿ ಲಕ್ಷಾಂತರ ಜನರು ಈ ಅಪಾಯಕಾರಿ ವೈರಸ್ ಸೋಂಕಿಗೆ ಒಳಗಾಗಿದ್ದು, ಪ್ರತಿದಿನ ಸಾವಿರಾರು ಜನರು ಸಾವನ್ನಪ್ಪುತ್ತಿದ್ದಾರೆ.

ಅಮೆರಿಕಾದ ಆಸ್ಪತ್ರೆಗಳಲ್ಲಿ ಲಕ್ಷಾಂತರ ಜನರು ಚಿಕಿತ್ಸೆ ಪಡೆಯುತ್ತಿದ್ದು, ಸಾವಿರಾರು ವೈದ್ಯರು ಈ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಭಾರತದಲ್ಲಿಯೂ ಸಾವಿರಾರು ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರು ಕರೋನಾ ವೈರಸ್ ಸೋಂಕಿತರಿಗೆ ಹಗಲು ರಾತ್ರಿ ಚಿಕಿತ್ಸೆ ನೀಡುತ್ತಿದ್ದಾರೆ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಅಮೆರಿಕಾದಲ್ಲಿರುವ ಭಾರತೀಯ ಮೂಲದ ವೈದ್ಯರೊಬ್ಬರಿಗೆ, ಅದರಲ್ಲೂ ಹೆಮ್ಮೆಯ ಕನ್ನಡತಿಯೊಬ್ಬರಿಗೆ, ಅವರ ಮನೆಯ ಮುಂದೆ ದೊಡ್ಡ ಗೌರವವನ್ನು ನೀಡಲಾಗಿದೆ. ಮೈಸೂರಿನವರಾದ ಡಾ.ಉಮಾ ಮಧುಸೂಧನ್‌ರವರು ಭಾರತದಲ್ಲಿ ವೈದ್ಯಕೀಯ ಅಧ್ಯಯನ ಮಾಡಿ, ಈಗ ಅಮೆರಿಕಾದಲ್ಲಿ ನೆಲೆಸಿದ್ದಾರೆ.

ಡಾ. ಉಮಾ ಅವರಿಗೆ ಸಂಬಂಧಿಸಿದ ವೀಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ ಅವರು ಅಮೆರಿಕಾದಲ್ಲಿ ವಾಸಿಸುವ ಮನೆಯ ಮುಂದೆ 100ಕ್ಕೂ ಹೆಚ್ಚು ವಾಹನಗಳು ಹಾದುಹೋಗುತ್ತಿರುವುದನ್ನು ಕಾಣಬಹುದು. ಕರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಿದ ಕಾರಣಕ್ಕೆ ಪ್ರತಿಯೊಂದು ಕಾರಿನಲ್ಲಿರುವವರು ಅವರಿಗೆ ನಮಸ್ಕರಿಸಿ ಮುಂದೆ ಹೋಗುತ್ತಿದ್ದಾರೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಡಾ. ಉಮಾ ತಮ್ಮ ಮನೆಯ ಮುಂದೆ ನಿಂತಿದ್ದಾರೆ. ಅವರ ಮುಂದೆ ಹಲವು ಖಾಸಗಿ ಕಾರುಗಳು, ಪೊಲೀಸ್ ವಾಹನಗಳು ಹಾಗೂ ಅಗ್ನಿಶಾಮಕ ಟ್ರಕ್‌ಗಳು ಹಾದುಹೋಗುತ್ತಿವೆ. ಹೀಗೆ ಹಾದು ಹೋಗುವಾಗ ಹಾರ್ನ್ ಮಾಡುತ್ತಾ ಡಾ. ಉಮಾರವರಿಗೆ ಗೌರವ ಸಲ್ಲಿಸಿ ಹೋಗುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.
ಡಾ. ಉಮಾರವರು ಆ ಎಲ್ಲರಿಗೂ ಪ್ರತಿಯಾಗಿ ಧನ್ಯವಾದಗಳನ್ನು ಹೇಳುವುದನ್ನು ಸಹ ನೋಡಬಹುದು. ಅಮೆರಿಕಾದ ಸೌತ್ ವಿಂಡ್ಸರ್ ಆಸ್ಪತ್ರೆಯಲ್ಲಿ ಕರೋನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವುದರಿಂದ ಡಾ. ಉಮಾ ಅವರಿಗೆ ಈ ಗೌರವ ನೀಡಲಾಗಿದೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಡಾ. ಉಮಾರವರು ಇದುವರೆಗೂ 200ಕ್ಕೂ ಹೆಚ್ಚು ಕರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದಾರೆ. ಅವರು ಎಷ್ಟು ವರ್ಷಗಳಿಂದ ಅಮೆರಿಕಾದಲ್ಲಿ ವಾಸಿಸುತ್ತಿದ್ದಾರೆ ಎಂಬುದು ತಿಳಿದು ಬಂದಿಲ್ಲ.


Click it and Unblock the Notifications