ಇಂದು ದುಬಾರಿ ಬಂಗಲೆ, ಕಾರುಗಳ ಒಡೆಯನಾದರೂ ಬೆಳೆದ ಮನೆಗೆ ಮರಳಿದ ಉದ್ಯಮಿ!

ಇಂದು ಶ್ರೀಮಂತರಾಗಿ ಕಾಣಿಸಿಕೊಳ್ಳುವ ಬಹುತೇಕರು ಒಂದು ಕಾಲದಲ್ಲಿ ಬಡವರಾಗಿ ಜೀವನ ಸಾಗಿಸಿದ್ದವರೆ. ಇವರಲ್ಲಿ ಹಲವರು ತಮ್ಮ ಯಶಸ್ಸಿನ ಬಳಿಕ ಬೆಳೆದುಬಂದ ದಾರಿಯನ್ನು ಮರೆತುಬಿಡುತ್ತಾರೆ. ಇನ್ನೂ ಕೆಲವರು ಮುಳ್ಳಿನ ಹಾದಿಯನ್ನು ದಾಟಿ ಎಲ್ಲಿಂದ ಬಂದಿದ್ದೇವೆ ಎಂಬುದನ್ನು ಎಂದಿಗೂ ಮರೆಯುವುದಿಲ್ಲ. ಪ್ರಸ್ತುತ ದುಬೈನಲ್ಲಿ ವಾಸಿಸುತ್ತಿರುವ ಜನಪ್ರಿಯ ಉದ್ಯಮಿ ಮತ್ತು ಯೂಟ್ಯೂಬರ್ ಒಬ್ಬರು ಇದನ್ನು ನೆನಪಿಸಿದ್ದಾರೆ. ಈ ಉದ್ಯಮಿಯ ಬಾಲ್ಯದ ಮನೆಯ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಸದ್ಯ ಇವರು ಟ್ರೆಂಡಿಂಗ್‌ನಲ್ಲಿದ್ದಾರೆ.

ಒರಿಸ್ಸಾದ ಸಣ್ಣ ನಗರದಲ್ಲಿ ಬೆಳೆದ ಈ ಉದ್ಯಮಿ ಈಗ ಮರ್ಸಿಡಿಸ್ ಬೆಂಝ್ ಜಿ 63 ಎಎಂಜಿ ಮತ್ತು ಪೋರ್ಷೆ ಟೇಕಾನ್ ಎಲೆಕ್ಟ್ರಿಕ್ ಸೆಡಾನ್ ಅನ್ನು ಓಡಿಸುತ್ತಿದ್ದಾರೆ. ಅಲ್ಲದೇ ದುಬೈನಲ್ಲಿ ದೊಡ್ಡ ಬಂಗಲೆಯನ್ನು ಹೊಂದಿದ್ದಾರೆ. ಇದೆಲ್ಲದಕ್ಕೂ ಮೂಲ ಪ್ರಯಾಣ ಆರಂಭವಾದ ಒರಿಸ್ಸಾದಲ್ಲಿನ ತಮ್ಮ ಬಾಲ್ಯದ ಮನೆಯ ಚಿತ್ರಗಳನ್ನು ಹಂಚಿಕೊಂಡಿರುವ ಅವರು, 17 ವರ್ಷಗಳ ಕಠಿಣ ಪರಿಶ್ರಮದ ಪ್ರಯಾಣದ ಬಗ್ಗೆ ಹೇಳಿಕೊಂಡಿದ್ದಾರೆ.

indian-entrepreneur-shares-picture-of-first-house

ಅವರ ಪೋಸ್ಟ್ ಪ್ರಕಾರ, ಜೆನಾ ಒರಿಸ್ಸಾದ ರೂರ್ಕೆಲಾ ಎಂಬ ಸಣ್ಣ ಪಟ್ಟಣದಲ್ಲಿ ಜನಿಸಿ ತಮ್ಮ ಇಡೀ ಬಾಲ್ಯವನ್ನು ಅಲ್ಲಿಯೇ ಕಳೆದರು. 1988 ರಿಂದ 2006 ರವರೆಗೆ 12 ನೇ ತರಗತಿಯವರೆಗೆ ಅದೇ ಸ್ಥಳದಲ್ಲಿ ವಿದ್ಯಾಭ್ಯಾಸ ಮಾಡಿದರು. ನಂತರ ಜೆಟ್ಸ್ಪಾಟ್ ನೆಟ್ವರ್ಕ್ಸ್ ಎಂಬ ಕಂಪನಿಯನ್ನು ಸ್ಥಾಪಿಸಿದರು. 2021 ರಲ್ಲಿ ದುಬೈಗೆ ತೆರಳಿ ಪ್ರಸ್ತುತ, ಯೂಟ್ಯೂಬ್ ಚಾನೆಲ್ ಹೊಂದಿದ್ದು, 4.8 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದಾರೆ.

ಅವರು ಹಂಚಿಕೊಂಡಿರುವ ಪೋಸ್ಟ್‌ 2021 ರಲ್ಲಿ ತಮ್ಮ ಬಾಲ್ಯದ ಮನೆಗೆ ಭೇಟಿ ನೀಡಿದ್ದ ವೇಳೆ ತೆಗೆಸಿಕೊಂಡಿದ್ದ ಫೋಟೋವಾಗಿದೆ. ಹಳೆಯ ಸಿಮೆಂಟ್ ಗೋಡೆಗಳು ಮತ್ತು ಟಾರ್ಪಾಲ್‌ಗಳೊಂದಿಗೆ ಮುಚ್ಚಿರುವ ಛಾವಣಿಯನ್ನು ಹೊಂದಿರುವ ಸಣ್ಣ ಮನೆಯನ್ನು ಈ ಫೋಟೋದಲ್ಲಿ ನೋಡಬಹುದು. ಈ ಚಿತ್ರದ ಜೊತೆಗೆ ಅವರ ಕಾರುಗಳಾದ ಮರ್ಸಿಡಿಸ್ ಬೆಂಝ್ ಜಿ 63 ಎಎಂಜಿ ಮತ್ತು ಪೋರ್ಷೆ ಟೇಕಾನ್ ಸೇರಿದಂತೆ ದುಬೈನಲ್ಲಿರುವ ತಮ್ಮ ಬಂಗಲೆಯ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ.

indian-entrepreneur-shares-picture-of-first-house

ಈ ಫೋಟೋಗಳು ಅವರ ಕಠಿಣ ಪರಿಶ್ರಮವನ್ನು ಎತ್ತಿತೋರುತ್ತದೆ. ಜೆನಾ ಭಾರತದಲ್ಲಿ ವಾಸಿಸುತ್ತಿದ್ದಾಗ, ಮರ್ಸಿಡಿಸ್ ಬೆಂಝ್ ಜಿ 350 ಡಿ ಐಷಾರಾಮಿ ಎಸ್‌ಯುವಿಯನ್ನು ಹೊಂದಿದ್ದರು ಎನ್ನಲಾಗಿದೆ. ಭಾರತದಿಂದ ದುಬೈಗೆ ತೆರಳಿದಾಗ, ಅಲ್ಲಿ ಪೋರ್ಷೆ ಟೇಕಾನ್ ಎಲೆಕ್ಟ್ರಿಕ್ ಸೆಡಾನ್ ಅನ್ನು ಖರೀದಿಸಿದರು. ಜರ್ಮನ್ ವಾಹನ ತಯಾರಕರಿಂದ ಈ ಸೂಪರ್ - ಪವರ್ ಫುಲ್ ಸೆಡಾನ್ ನಾಲ್ಕು ವಿಭಿನ್ನ ರೂಪಾಂತರಗಳಲ್ಲಿ ಬರುತ್ತದೆ.

ಈ ಕಾರಿನ ಎಂಜಿನ್ 761 ಬಿಹೆಚ್ ಪವರ್ ಹಾಗೂ 1050 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಅಲ್ಲದೇ ಎಲ್ಲಾ ಪವರ್ ನಾಲ್ಕು ಚಕ್ರಗಳಿಗೆ ಕಳುಹಿಸುವ ಮೂಲಕ ಕೇವಲ 2.8 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಭಾರತದಲ್ಲಿ, ಪೋರ್ಷೆ ಟೇಕಾನ್ 1.89 ಕೋಟಿ ರೂ.ಗಳಿಂದ ಪ್ರಾರಂಭವಾಗಿ 2.53 ಕೋಟಿ ರೂ.ಗಳವರೆಗೆ ಬೆಲೆಯಿದೆ.

ಉದ್ಯಮಿ ದುಬೈನಲ್ಲಿ 2025 ಮರ್ಸಿಡಿಸ್ ಬೆಂಝ್ ಜಿ 63 ಎಎಂಜಿಯನ್ನು ಸಹ ಹೊಂದಿದ್ದಾರೆ. ಈ ನಿರ್ದಿಷ್ಟ ಎಸ್‌ಯುವಿಗೆ "6307" ಎಂಬ ವಿಐಪಿ ನೋಂದಣಿ ಸಂಖ್ಯೆಯನ್ನು ಸಹ ಆರಿಸಿಕೊಂಡಿದ್ದಾರೆ. ದುಬೈನಲ್ಲಿ ಕಡಿಮೆ ಅಂಕಿಗಳನ್ನು ಹೊಂದಿರುವ ನಂಬರ್ ಪ್ಲೇಟ್‌ಗಳು ಸಾಕಷ್ಟು ಮೌಲ್ಯವನ್ನು ಹೊಂದಿವೆ. ಒರಿಸ್ಸಾದ ಸಣ್ಣ ನಗರದಲ್ಲಿ ಬೆಳೆದ ಈ ಉದ್ಯಮಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, January 30, 2025, 20:23 [IST]
English summary
Indian entrepreneur shares picture of first house
Read more on offbeat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+