ಇತಿಹಾಸ ಬರೆದ ವೆಟಲ್ ಇಂಡಿಯನ್ ಜಿಪಿ 'ಹ್ಯಾಟ್ರಿಕ್ ಸಾಧನೆ'

ಇತಿಹಾಸ ಮತ್ತೆ ಪುನರಾವರ್ತಿಸಿರುವ ರೆಡ್ ಬುಲ್ ತಂಡದ ಜರ್ಮನಿಯ ಸ್ಟೆಬಾಸ್ಟಿಯನ್ ವೆಟಲ್, ಸತತ ಮೂರನೇ ಬಾರಿಗೂ ಇಂಡಿಯನ್ ಗ್ರ್ಯಾನ್ ಪ್ರಿ ಫಾರ್ಮುಲಾ ಒನ್ ರೇಸ್ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ. ಈ ಮೂಲಕ ವೆಟಲ್ ತನ್ನ ನೆಚ್ಚಿನ ದೇಶ ಭಾರತದಲ್ಲಿ 'ಹ್ಯಾಟ್ರಿಕ್' ಸಾಧನೆ ಮಾಡಿದ್ದಾರೆ. ಈ ಮೂಲಕ ನಾಲ್ಕು ಬಾರಿ ವಿಶ್ವ ಚಾಂಪಿಯನ್‌ಶಿಪ್ ಗೆದ್ದ ಹಿರಿಮೆಗೆ ಪಾತ್ರವಾಗಿದ್ದಾರೆ.

ರಾಷ್ಟ್ರ ರಾಜಧಾನಿ ನವದೆಹಲಿಯ ಸಮೀಪಿದ ಗ್ರೇಟರ್ ನೋಯ್ಡಾದ ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ನಡೆದ ಅಂತಿಮ ರೇಸ್ ನೋಡಲು ಜನರು ಕಿಕ್ಕಿರಿದು ತುಂಬಿದ್ದರು. ಅಂತೆಯೇ ತನ್ನೆಲ್ಲ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿರುವ ವೆಟಲ್ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಅಷ್ಟಕ್ಕೂ ರೆಡ್ ಬುಲ್ ತಂಡ ವೆಟಲ್ ಸಾಧನೆ ಏನಾಗಿತ್ತು? ಎರಡು ಮೂರು ಸ್ಥಾನಗಳನ್ನು ಯಾರು ಆಲಂಕರಿಸಿದ್ದರು ಇನ್ನಿತರ ಕುತೂಹಲಕಾರಿ ಮಾಹಿತಿಗಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ...

ಇತಿಹಾಸ ಬರೆದ ವೆಟಲ್ ಇಂಡಿಯನ್ ಜಿಪಿ 'ಹ್ಯಾಟ್ರಿಕ್' ಸಾಧನೆ

ನಾಲ್ಕನೇ ಬಾರಿ ವಿಶ್ವ ರೇಸಿಂಗ್ ಚಾಂಪಿಯನ್ ಪಟ್ಟ ಆಲಂಕರಿಸಲು ವೆಟಲ್‌ಗೆ ಐದನೇ ಕ್ರಮಾಂಕ ಪಡೆದ್ದಲ್ಲಿ ಸಾಕಾಗಿತ್ತು. ಆದರೆ ತನಗೆ ಪೈಪೋಟಿ ಯಾರು ಇಲ್ಲ ಎಂಬುದನ್ನು ನಿರೂಪಿಸಿರುವ ವೆಟಲ್ ಪ್ರಸಕ್ತ ಸೀಸನ್‌ನಲ್ಲಿ ಇನ್ನೂ ಮೂರು ಆವೃತ್ತಿಗಳು ಉಳಿದಿರುವಂತೆಯೇ 2013 ಚಾಂಪಿಯನ್ ಪಟ್ಟ ಆಲಂಕರಿಸಿದ್ದಾರೆ. ಅಂದ ಹಾಗೆ ಒಂದು ಸೀಸನ್‌ನಲ್ಲಿ 19 ರೇಸ್‌ಗಳಿರುತ್ತವೆ. ವೆಟಲ್ ಬಳಿಯೀಗ ಒಟ್ಟು 322 ಅಂಕಗಳಿವೆ.

2013 ಇಂಡಿಯನ್ ಗ್ರಾಂಡ್ ಪ್ರಿ ಪ್ರಶಸ್ತಿ ಪಟ್ಟಿ

2013 ಇಂಡಿಯನ್ ಗ್ರಾಂಡ್ ಪ್ರಿ ಪ್ರಶಸ್ತಿ ಪಟ್ಟಿ

1. ಸೆಬಾಸ್ಟಿಯನ್ ವೆಟಲ್ (ಜರ್ಮನಿ), ತಂಡ: ರೆಡ್‌ಬುಲ್-ರೆನೊ, ಸಮಯ: 1.31:12.187 ಸೆಕೆಂಡು

2. ನಿಕೊ ರೋಸ್‌ಬರ್ಗ್ (ಜರ್ಮನಿ), ತಂಡ: ಮರ್ಸಿಡಿಸ್, ಸಮಯ: +00:29.823 ಸೆಕೆಂಡು

3. ರೊಮೇನ್ ಗ್ರಾಸ್‌ಜೀನ್ (ಫ್ರಾನ್ಸ್), ತಂಡ: ಲೋಟಸ್-ರೆನೊ, ಸಮಯ: +0.39:892 ಸೆಕೆಂಡು

ಇತಿಹಾಸ ಬರೆದ ವೆಟಲ್ ಇಂಡಿಯನ್ ಜಿಪಿ 'ಹ್ಯಾಟ್ರಿಕ್' ಸಾಧನೆ

ವೆಟನ್ ತನ್ನ ನಿಕಟ ಪ್ರತಿಸ್ಪರ್ಧಿಗಿಂತ 30 ಸೆಕೆಂಡು ಮುಂಚಿತವಾಗಿ ಗುರಿ ತಲುಪಿದ್ದರು. ಇದರಿಂದಲೇ ವೆಟಲ್ ಎಷ್ಟೊಂದು ಶರವೇಗದಲ್ಲಿ ಚಲಿಸುತ್ತಿದ್ದರು ಎಂಬುದು ಸಾಬೀತಾಗುತ್ತದೆ. ಹಾಗೆಯೇ ಒಟ್ಟು 60 ಸುತ್ತುಗಳಲ್ಲಾಗಿ 307 ಕೀ.ಮೀ. ದೂರವನ್ನು ಕೇವಲ 1.31 ಗಂಟೆಗಳಲ್ಲಿ ಕ್ರಮಿಕರಿಸಿದ್ದರು. ಅಂದರೆ ಬೆಂಗಳೂರು ಹೊರವಯಲದಿಂದ ಚೆನ್ನೈ ಹೊರ ವಲಯವನ್ನು ಕೇವಲ 1.30 ವರೆ ಗಂಟೆಗಳಲ್ಲಿ ತಲುಪಿದ್ದರು ಅಂದರೆ ಊಹಿಸಬಹುದೇ?

ಸತತ ನಾಲ್ಕನೇ ಬಾರಿ ವಿಶ್ವ ಕಿರೀಟ

ಸತತ ನಾಲ್ಕನೇ ಬಾರಿ ವಿಶ್ವ ಕಿರೀಟ

  • ಮೈಕಲ್ ಶುಮಾಕರ್ (ಜರ್ಮನಿ): 7
  • ಮ್ಯಾನುವೆಲ್ ಫಾಂಜಿಯೊ (ಅರ್ಜೆಂಟೀನಾ): 5
  • ಸೆಬಾಸ್ಟಿಯನ್ ವೆಟಲ್ (ಜರ್ಮನಿ): 4
  • ತನ್ನ 26ರ ಹರೆಯದಲ್ಲೇ ವೆಟಲ್ ಇಂತಹದೊಂದು ಸಾಧನೆ ಮಾಡಿದ್ದಾರೆ.

    ಇತಿಹಾಸ ಬರೆದ ವೆಟಲ್ ಇಂಡಿಯನ್ ಜಿಪಿ 'ಹ್ಯಾಟ್ರಿಕ್' ಸಾಧನೆ

    2011, 2012 ಹಾಗೂ 2013ರ ಇಂಡಿಯನ್ ಗ್ರ್ಯಾನ್ ಪ್ರಿ ರೇಸ್‌ನಲ್ಲಿ ವಿಜಯ ಪತಾಕೆ ಹಾರಿಸಿದ ಬಳಿಕ ಪ್ರತಿಕ್ರಿಯಿಸಿದ ಸ್ಟೆಬಾಸ್ಟಿಯನ್ ವೆಟಲ್, ಮಾತನಾಡಲು ಪದಗಳೇ ಸಿಗುತ್ತಿಲ್ಲ. ಭಾರತದಲ್ಲಿ ವಿಶ್ವ ಚಾಂಪಿಯನ್‌ಶಿಪ್ ಗೆಲ್ಲುವುದೆಂದರೆ ನಿಜಕ್ಕೂ ವಿಶೇಷ. ಇಲ್ಲಿನ ಟ್ರ್ಯಾಕ್‌ನಿಂದ ಹಲವಾರು ವಿಷಯಗಳನ್ನು ಕಲಿಯಲಿಕ್ಕಿದೆ ಎಂದಿದ್ದಾರೆ.

    ಫೋರ್ಸ್ ಇಂಡಿಯಾ ಪ್ರಭಾವಿ ಪ್ರದರ್ಶನ

    ಫೋರ್ಸ್ ಇಂಡಿಯಾ ಪ್ರಭಾವಿ ಪ್ರದರ್ಶನ

    ಈ ನಡುವೆ ತವರೂರಿನಲ್ಲಿ ಫೋರ್ಸ್ ಇಂಡಿಯಾ ತೃಪ್ತಿದಾಯಕ ಪ್ರದರ್ಶನ ನೀಡಿದೆ. ಫೋರ್ಸ್ ತಂಡದ ಪೌಲ್ ಡಿ ರೆಸ್ಟ್ ಹಾಗೂ ಸುಟಿಲ್ ಅನುಕ್ರಮವಾಗಿ 8 ಹಾಗೂ 9ನೇ ಸ್ಥಾನ ಗಳಿಸಿದರು.

    ಇಂಡಿಯನ್ ಗ್ರ್ಯಾನ್ ಪ್ರಿ ಅಂತ್ಯಕ್ಕೆ ಅಂಕಪಟ್ಟಿ

    ಇಂಡಿಯನ್ ಗ್ರ್ಯಾನ್ ಪ್ರಿ ಅಂತ್ಯಕ್ಕೆ ಅಂಕಪಟ್ಟಿ

    • ರೆಡ್‌ಬುಲ್ - 470
    • ಮರ್ಸಿಡಿಸ್- 313
    • ಫೆರಾರಿ - 313
    • ಲೋಟಸ್ - 285
    • ಮೆಕ್‌ಲಾರೆನ್ - 93
    • ಫೋರ್ಸ್ ಇಂಡಿಯಾ - 68
    • 2013 ಸೀಸನ್: ವ್ಯಕ್ತಿಗತ ಅಂಕ ಪಟ್ಟಿ

      2013 ಸೀಸನ್: ವ್ಯಕ್ತಿಗತ ಅಂಕ ಪಟ್ಟಿ

      • ಸ್ಟೆಬಾಸ್ಟಿಯನ್ ವೆಟಲ್ (ಜರ್ಮನಿ), ತಂಡ: ರೆಡ್ ಬುಲ್, ಅಂಕ: 322
      • ಫರ್ನಾಂಡೊ ಅಲಾನ್ಸೊ (ಸ್ಪೇನ್), ತಂಡ: ಫೆರಾರಿ, ಅಂಕ: 207
      • ಕಿಮಿ ರೈಕೊನೆನ್ (ಫಿನ್ಲೆಂಡ್), ತಂಡ: ಲೋಟಸ್- ರೆನೊ, ಅಂಕ: 183
      • ಲೂವಿಸ್ ಹ್ಯಾಮಿಲ್ಟನ್ (ಬ್ರಿಟನ್), ತಂಡ: ಮರ್ಸಿಡಿಸ್, ಅಂಕ: 169
      • ವೆಟಲ್ ವಿಜಯೋತ್ಸವದ ರೋಚಕ ಕ್ಷಣಗಳಿಗಾಗಿ ವೀಡಿಯೋ ಕ್ಲಿಕ್ಕಿಸಿರಿ

More from DriveSpark

Article Published On: Monday, October 28, 2013, 10:43 [IST]
English summary
India became really special for Sebastian Vettel. After Brazil (2010 and 2012) and Japan (2011), India became the third country to witness his coronation as the World Driver's Champion — his fourth successive crown making the 26-year-old German the youngest quadruple champ in the sport.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+