ಆಟಿಕೆ ವಸ್ತುವಲ್ಲ; ಇದುವೇ ಬೈಕ್‌ಗಿಂತಲೂ ಅಗ್ಗವಾದ ವಿಶ್ವದ ಅತಿ ಚಿಕ್ಕ ಜೀಪ್
ಪಂಜಾಬ್ ಮೂಲದ ಹಿರಿಯ ಮೆಕ್ಯಾನಿಕ್ ಓರ್ವರು ವಿಶ್ವದ ಅತಿ ಚಿಕ್ಕ ಜೀಪ್ ನಿರ್ಮಿಸುವ ಮೂಲಕ ಸಾಧನೆ ಮೆರೆದಿದ್ದಾರೆ.
ಇಲ್ಲಿನ ಚಿತ್ರವನ್ನು ನೋಡಿ ಇದ್ಯಾವುದೇ ಆಟಿಕೆ ವಸ್ತುವೆಂದು ತಪ್ಪಾಗಿ ಅರ್ಥೈಸಿಕೊಳ್ಳಬೇಡಿರಿ. ಯಾಕೆಂದರೆ ಭಾರತೀಯನೊಬ್ಬ ಬೈಕ್ ಗಿಂತಲೂ ಅಗ್ಗವಾಗಿರುವ ವಿಶ್ವದ ಅತ್ಯಂತ ಚಿಕ್ಕ ಜೀಪ್ ನಿರ್ಮಿಸುವ ಮೂಲಕ ಸಾಧನೆ ಮೆರೆದಿದ್ದಾರೆ.

ಭಾರತದಲ್ಲಿ ವಾಹನಗಳ ಪ್ರಮಾಣ ದಿನಂದಿನೇ ಹೆಚ್ಚುತ್ತಿದ್ದು, ಟ್ರಾಫಿಕ್ ಸಮಸ್ಯೆ ಬಹಳಷ್ಟು ಕಾಡುತ್ತಿದೆ. ಅದರಲ್ಲಂತೂ ನಗರ ಪ್ರದೇಶದ ಸ್ಥಿತಿಯಂತೂ ಹೇಳತೀರದು.

ಹಾಗಿರಬೇಕೆಂದರೆ ಪಂಜಾಬ್ ಮೂಲದ ಹಿರಿಯ ಮೆಕ್ಯಾನಿಕ್ ಓರ್ವರು ವಿಶ್ವದ ಅತಿ ಚೊಕ್ಕದಾದ ಜೀಪ್ ನಿರ್ಮಿಸುವ ಮೂಲಕ ಸಾಧನೆ ಮಾಡಿದ್ದಾರೆ.

60ರ ಹರೆಯದ ಬವರ್ ಸಿಂಗ್ ಎಂಬವರೇ ವಿಶ್ವದ ಅತಿ ಚಿಕ್ಕ ಜೀಪ್ ನಿರ್ಮಾಣದ ಹಿಂದಿನ ಸೂತ್ರಧಾರಿಯಾಗಿದ್ದಾರೆ.

ಜೀಪ್ ನಿರ್ಮಿಸಲು ಪ್ರೇರಣೆಯಾಗಿರುವುದರ ಬಗ್ಗೆ ವಿವರಿಸಿರುವ ಅವರು, 1975ನೇ ಇಸವಿಯಲ್ಲಿ ದೈಹಿಕ ಅಸಮರ್ಥ ವ್ಯಕ್ತಿಯೋರ್ವರು ತಮ್ಮ ಸ್ಕೂಟರ್ ಗಾಗಿ ಹೆಚ್ಚುವರಿ ಚಕ್ರಗಳನ್ನು ಜೋಡಿಸಿ ಕೋಡುವಂತೆ ವಿನಂತಿಸಿಕೊಂಡಿದ್ದರು.

ಕ್ರಮೇಣ ತಮ್ಮ ಯೋಚನೆಯನ್ನು ಬದಲಾಯಿಸಿದ ಅವರು ಯಾಕೆ ಚೊಕ್ಕದಾದ ಜೀಪ್ ನಿರ್ಮಿಸಬಾರದು ಎಂದು ಅಂದುಕೊಂಡಿದ್ದರು. ತದಾ ಬಳಿಕ ಜೀಪ್ ನಿರ್ಮಾಣಕ್ಕೆ ಮುಂದಾಗಿದ್ದರು.

1975ನೇ ಇಸವಿಯಿಂದಲೇ ಮೆಕ್ಯಾನಿಕ್ ವೃತ್ತಿ ಜೀವನದಲ್ಲಿರುವ ಈ ಹಿರಿಯ ವ್ಯಕ್ತಿ, ಈಗಾಗಲೇ ಸಣ್ಣದಾದ ಏಳು ಜೀಪ್ ಗಳನ್ನು ನಿರ್ಮಿಸಿ ಮಾರಾಟ ಮಾಡಿದ್ದಾರೆ.

ಎಲ್ಲ ರೀತಿಯ ಕಾನೂನು ರಸ್ತೆ ಮಾನ್ಯತೆಯನ್ನು ಪಡೆದಿರುವ ಈ ಜೀಪ್, ಪಂಜಾಬ್ ರಾಜ್ಯ ಸಾರಿಗೆ ಇಲಾಖೆಯ ನಂಬರ್ ಪ್ಲೇಟ್ ಸಹ ಪಡೆದಿದೆ.

ಅಷ್ಟೇ ಯಾಕೆ ಗಂಟೆಗೆ 60 ಕೀ.ಮೀ. ವೇಗದಲ್ಲಿ ಸಂಚರಿಸುವಷ್ಟು ಸಮರ್ಥವೆನಿಸಿಕೊಂಡಿದೆ.

ಇಲ್ಲಿ ಕಂಡುಬಂದಿರುವ ಮಗದೊಂದು ಗಮನಾರ್ಹ ಅಂಶವೆಂದರೆ ಇದು ಸಾಮಾನ್ಯ ಬೈಕ್ ಗಿಂತಲೂ ಅಗ್ಗವೆನಿಸಿದೆ.

ಐಕಾನಿಕ್ ವಿಲ್ಲಿ ಜೀಪ್ ಗಳಿಗೆ ಹೋಲುವ ಈ ಜೀಪ್ ಸ್ಥಳೀಯ ನಿವಾಸಿಗರಲ್ಲಿ ಅತೀವ ಕುತೂಹಲವನ್ನುಂಟು ಮಾಡಿದೆ.

ಸ್ಕೂಟರ್ ಎಂಜಿನ್, ಚಕ್ರಗಳನ್ನು ಇದಕ್ಕೆ ಜೋಡಣೆ ಮಾಡಲಾಗಿದೆ. ಅಲ್ಲದೆ ನಾಲ್ಕು ಮಂದಿಗೆ ಆರಾಮದಾಯಕವಾಗಿ ಪ್ರಯಾಣಿಸಬಹುದಾಗಿದೆ.

ಅಷ್ಟಕ್ಕೂ ಇದರ ಬೆಲೆ ಎಷ್ಟು ಗೊತ್ತೇ? 56,000 ರು. ಮಾತ್ರ. ಅಂದರೆ ದೇಶದ ಬೈಕ್, ಸ್ಕೂಟರ್ ಗಿಂತಲೂ ಅಗ್ಗವೆನಿಸಿದೆ.


Click it and Unblock the Notifications