ಸನಾತನ ಸಂಸ್ಕೃತಿಯ ಸೊಗಡು ನೋಡಿ: ಕೋಟಿ ಬೆಲೆಯ ಸೂಪರ್‌ ಕಾರಿಗೆ ಮೊದಲು ಮಾಡಿಸಿದ್ದು "ವಾಹನ ಪೂಜೆ'

ಮೆಕ್‌ಲರ್ನ್‌ ಎಂಬ ದುಬಾರಿ ಐಷಾರಾಮಿ ಕಾರು ಬ್ರಾಂಡ್‌ ಭಾರತೀಯ ಮಾರುಕಟ್ಟೆಯಲ್ಲಿ ಕೊಂಚ ಹೆಸರುವಾಸಿಯಾಗಿರುವ ಬ್ರಾಂಡ್‌. ತೀರಾ ಸುಲಭವಾಗಿ ಭಾರತೀಯ ಹೆದ್ದಾರಿಗಳಲ್ಲಿ ಇದು ಕಾಣ ಸಿಗದೇ ಇದ್ದರೂ ಭಾರತಿಯ ಕಾರು ಪ್ರೇಮಿಗಳಿಗೆ ಈ ಹೆಸರನ್ನು ಕೇಳಿದರೆ ಗೊತ್ತಿಲ್ಲ ಎಂದು ಹೇಳುವವರು ತೀರಾ ಕಮ್ಮಿಯೇ.

ಇನ್ನು ನಮ್ಮಲ್ಲಿ ಕೆಲವರು ಎಷ್ಟೇ ದೊಡ್ಡ ಕಾರು ಖರೀದಿಸಿದರೂ ಅದಕ್ಕೆ ಮೊದಲು ವಾಹನ ಪೂಜೆ ಮಾಡಿಸದೇ ಇದ್ದಲ್ಲಿ ಏನೋ ಅಪೂರ್ಣವಾದಂತೆ ಕಾಣಿಸುತ್ತದೆ. ಹಾಗೆಯೇ ಇಲ್ಲೊಬ್ಬ ವ್ಯಕ್ತಿ ದುಬಾರಿ ಐಷಾರಾಮಿ ಮೆಕ್‌ಲರ್ನ್‌(McLaren 720S) ಕಾರೊಂದು ಖರೀದಿಸಿ ಅದಕ್ಕೆ ಪೂಜಾರಿಯೊಬ್ಬರನ್ನು ಕರೆಸಿ ವಾಹನ ಪೂಜೆ ಪುನಸ್ಕಾರಗಳನ್ನು ನಡೆಸಿದ ಘಟನೆಯ ವಿಡಿಯೋ ವೈರಲ್ ಆಗುತ್ತಿದೆ.

Brand-New McLaren 720S Supercar

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ವಿದೇಶಿ ಸೂಪರ್‌ ಕಾರುಗಳ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ಇದನ್ನು ಡೆಲಿವರಿ ತೆಗೆದುಕೊಳ್ಳುವಾಗ ಮತ್ತು ಅದರ ನಂತರ ಮನಸೂರೆಗೊಳ್ಳುವ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅದರ ವಿಡಿಯೋವನ್ನು ಹರಿಬಿಸುವುದನ್ನು ನಾವು ಕಂಡಿದ್ದೇವೆ. ಹೀಗಿರುವಾಗ ಈ ಘಟನೆ ಅವುಗಳಲ್ಲಿ ವಿಶೇಷವಾಗಿ ಕಾಣುತ್ತಿದೆ.

ಇನ್ನು ಈ ವಿಶಿಷ್ಟವಾದ ಘಟನೆ ಮುಂಬೈನಲ್ಲಿ ನಡೆದಿದ್ದು, ಈ ಐಷಾರಾಮಿ ಮೆಕ್‌ಲರ್ನ್‌ ನ ಮಾಲೀಕ ತನ್ನ ಕುಟುಂಬದೊಂದಿಗೆ ಪೂಜಾರಿ ಬಳಿ ತೆರಳಿ ತಮ್ಮ ಹೊಸ ಕಾರಿಗೆ ಪೂಜೆ ಮಾಡಿಸಿ ಅದರ ಫೋಟೋವನ್ನು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಹರಿಬಿಟ್ಟಿದ್ದು ಈ ಮೂಲಕ ವಿಡಿಯೋ ವೈರಲ್‌ ಆಗಿದೆ.

Brand-New McLaren 720S Supercar

ಇನ್ನು ಐಷಾರಾಮಿ ಕಾರಿಗಳಿಗೆ ವಾಹನ ಪೂಜೆಗಳನ್ನು ಮಾಡುವುದು ಇದೇ ಮೊದಲೇನಲ್ಲ. ಇದಕ್ಕೂ ಹಿಂದೆ ಬಾಲಿವುಡ್‌ ಸೆಲೆಬ್ರಿಟಿಗಳು ತಮ್ಮ ಐಷಾರಾಮಿ ಕಾರುಗಳಿಗೆ ವಾಹನ ಪೂಜೆಗಳನ್ನು ಮಾಡಿರುವ ವಿಡಿಯೋಗಳು ಇದಕ್ಕೂ ಮುಂಚೆ ಹರಿದಾಡಿದ್ದವು. ಇದರಲ್ಲಿ ಕರಣ್‌ ಜೋಹರ್‌, ಕಾರ್ತಿಕ್‌ ಆರ್ಯನ್‌ ಮತ್ತು ಇತರರು ಈ ರೀತಿ ತಮ್ಮ ವಾಹನಗಳಿಗೆ ವಾಹನ ಪೂಜೆಯನ್ನು ಮಾಡಿರುವುದನ್ನು ಕಂಡಿದ್ದೇವೆ.

ಇನ್ನು ಇಲ್ಲಿ ತಿಳಿಸಿರುವ ಕಾರು ಮೆಕ್‌ಲರ್ನ್‌ 720 ಎಸ್‌ ಎಂಬ ಕಾರಾಗಿದ್ದು ಇದರ ಕೇವಲ 400 ಯೂನಿಟ್‌ ಗಳನ್ನು ಮಾತ್ರ ತಯಾರಿಸಲಾಗಿದೆ. ಈ ಕಾರಿನ ಎಂಜಿನ್‌ ಬಗ್ಗೆ ನೋಡುವುದಾದರೆ ಇದರಲ್ಲಿ 4.0-litre V8 ಟ್ವಿನ್‌ - ಟರ್ಬೋ ಎಂಜಿನ್‌ ನೊಂದಿಗೆ ಬರುತ್ತದೆ.

ಈ ಎಂಜಿನ್ ಸಹಯಾದಿಂದ ಕಾರು ಬರೋಬ್ಬರಿ 710 ಬಿಹೆಚ್‌ಪಿ ಪವರ್‌ ಮತ್ತು 770 ಎನ್‌ಎಮ್‌ ಟಾರ್ಕನ್ನು ಉತ್ಪಾದಿಸುತ್ತದೆ. ಈ ಕಾರನ್ನು ವಿಶೇಷವಾಗಿ ಟ್ರ್ಯಾಕ್‌ನಲ್ಲಿ ಓಡಿಸಲು ವಿನ್ಯಾಸಗೊಳಿಸಿದ್ದು, ಇದರಲ್ಲಿ ಆಕ್ಟಿವ್‌ ಏರೋಡೈನಾಮಿಕ್‌ ಫೀಚರ್‌ ಇದೆ. ಇದು ಈ ಕಾರು ವೇಗವಾಗಿ ಚಲಿಸುವಾಗ ಇದರ ಡೌನ್‌ಫೋರ್ಸ್‌ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, June 30, 2023, 17:26 [IST]
English summary
Indian millionaire performed a vahana pooja for his brand new mclaren 720s supercar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+