Kavach system: ಕವಚ್ ಪ್ರಯೋಗ ಯಶಸ್ವಿ, ಇನ್ನೂ ರೈಲುಗಳು ಸಂಪೂರ್ಣ ಸುರಕ್ಷಿತ!

ವಿಶ್ವದಲ್ಲಿಯೇ ಅತಿ ಉದ್ದದ ರೈಲು ಮಾರ್ಗವನ್ನು ಸರ್ಕಾರಿ ಸ್ವಾಮ್ಯದ ಭಾರತೀಯ ರೈಲ್ವೆ (Indian Railways) ಹೊಂದಿದೆ. ದೇಶಾದ್ಯಂತ ವಿವಿಧ ರೈಲುಗಳಲ್ಲಿ ಪ್ರತಿದಿನ ಸುಮಾರು 1.40 ಕೋಟಿ ಜನರು ಪ್ರಯಾಣಿಸುತ್ತಾರೆ. 1 ಕೋಟಿ ಟನ್ ಗಳಿಗೂ ಹೆಚ್ಚಿನ ಸರಕನ್ನು ಸಾಗಾಟ ಮಾಡಲಾಗುತ್ತಿದೆ.

ಇಂತಹ ಬೃಹತ್ ಸಂಪರ್ಕ ಜಾಲವನ್ನು ಹೊಂದಿರುವ ರೈಲ್ವೆ ಸುರಕ್ಷತೆಯ ದೃಷ್ಟಿಯಿಂದ ಮತ್ತಷ್ಟು ಆಧುನೀಕರಣಗೊಳ್ಳುತ್ತಿದೆ. ಇತ್ತೀಚೆಗೆ ರೈಲು ಡಿಕ್ಕಿ ತಡೆಗಟ್ಟುವ ವ್ಯವಸ್ಥೆ (Anti-Train Collision System), ಕವಚ್ (Kavach) ಅನ್ನು 160 ಕಿಮೀ ವೇಗದಲ್ಲಿ ಸಂಚರಿಸಬಹುದಾದ ಸೆಮಿ-ಹೈ ಸ್ಪೀಡ್ ರೈಲಿನ ಎಂಜಿನ್‌ನಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಉತ್ತಮ ಫಲಿತಾಂಶ ಬಂದಿದೆ ಎಂದು ಉತ್ತರ ಮಧ್ಯ ರೈಲ್ವೆ (North Central Railway)ಯ ಆಗ್ರಾ ವಿಭಾಗ ತಿಳಿಸಿದೆ.

Kavach System Test Success

ಕವಚ್ ವ್ಯವಸ್ಥೆ (Kavach System)ಯನ್ನು ರಿಸರ್ಚ್ ಡಿಸೈನ್ಸ್ ಅಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ (RDSO) ಅಭಿವೃದ್ಧಿಪಡಿಸಿದೆ. ಈ ವ್ಯವಸ್ಥೆಯೂ ರೈಲಿನ ಚಾಲಕನು ಸಮಯಕ್ಕೆ ಸರಿಯಾಗಿ ಕೆಲಸವನ್ನು ಮಾಡದಿದ್ದಾಗ, ತುರ್ತು ಸಂದರ್ಭದಲ್ಲಿ ಸ್ವಯಂಚಾಲಿತವಾಗಿ (Automatically) ತನ್ನಿಂದ ತಾನೇ ರೈಲನ್ನು ನಿಲ್ಲುವಂತೆ (ಬ್ರೇಕ್ ಹಾಕುತ್ತದೆ) ಮಾಡುತ್ತದೆ. ಸುರಕ್ಷೆತೆಯ ಸಲುವಾಗಿ ಭಾರತೀಯ ರೈಲ್ವೆ ತನ್ನ ಜಾಲದಾದ್ಯಂತ ಕವಚ್ ವ್ಯವಸ್ಥೆ ಪರಿಚಯಿಸುವ ಕೆಲಸದಲ್ಲಿ ನಿರತವಾಗಿದೆ.

ಉತ್ತರ ಮಧ್ಯ ರೈಲ್ವೆಯ ಡೆಪ್ಯುಟಿ ಚೀಫ್ ಸಿಗ್ನಲ್ & ಟೆಲಿಕಮ್ಯುನಿಕೇಷನ್ ಎಂಜಿನಿಯರ್ ಕುಶ್ ಗುಪ್ತಾ ಅವರ ನೇತೃತ್ವದಲ್ಲಿ ಸೆಮಿ-ಹೈ ಸ್ಪೀಡ್ ಎಂಜಿನ್, ಡಬ್ಲ್ಯೂಎಪಿ-5 (WAP-5)ಗೆ ಕವಚ್ ವ್ಯವಸ್ಥೆ ಅಳವಡಿಸಲಾಯಿತು. ಜನವರಿ 19 ರಂದು ಪಲ್ವಾಲ್ - ಮಥುರಾ ವಿಭಾಗದ ಮಾರ್ಗದಲ್ಲಿ ಈ ರೈಲನ್ನು ಗಂಟೆಗೆ 160 ಕಿ.ಮೀ ವೇಗದಲ್ಲಿ ಓಡಿಸಲಾಯಿತು ಎಂದು ಆಗ್ರಾ ರೈಲು ವಿಭಾಗದ ಪಿಆರ್‌ಒ ಪ್ರಶಸ್ತಿ ಶ್ರೀವಾಸ್ತವ ತಿಳಿಸಿದ್ದಾರೆ.

Kavach System Test Success

'ಕವಚ್ ವ್ಯವಸ್ಥೆಯನ್ನು ಪರೀಕ್ಷಿಸಲು ಎಂಜಿನ್ ಚಾಲಕನಿಗೆ ಕೆಂಪು ಸಂಕೇತ (Red Signal) ಕಂಡರೂ ಬ್ರೇಕ್ ಹಾಕದಂತೆ ಸೂಚಿಸಲಾಯಿತು. ಅದರಂತೆ ಸಿಗ್ನಲ್‌ಗೆ 30 ಮೀಟರ್ ಮೊದಲು ಎಂಜಿನ್ ನಿಂತುಕೊಂಡಿತು. ಪ್ರಾಯೋಗಿಕ ಸಂಚಾರದ ವೇಳೆ, ಇದನ್ನು ನೋಡಿದ ಎಂಜಿನಿಯರ್‌ಗಳು ಮತ್ತು ಅಧಿಕಾರಿಗಳು ಹರ್ಷ ವ್ಯಕ್ತಪಡಿಸಿದರು' ಎಂದು ಪ್ರಶಸ್ತಿ ಶ್ರೀವಾಸ್ತವ ಅವರು ಮಾಹಿತಿ ನೀಡಿದ್ದಾರೆ.

ಡಬ್ಲ್ಯೂಎಪಿ-5 ಎಂಜಿನ್, ಪ್ಯಾಸೆಂಜರ್ ಕೋಚ್‌ಗಳನ್ನು ಗಂಟೆಗೆ 160 ಕಿ.ಮೀ ವೇಗದಲ್ಲಿ ಎಳೆಯುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಶತಾಬ್ದಿ ಮತ್ತು ಗತಿಮಾನ್ ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ಉಪಯೋಗಿಸಲಾಗುತ್ತಿದೆ. ಶೀಘ್ರದಲ್ಲಿಯೇ ಆಗ್ರಾ ವಿಭಾಗವು ಪ್ಯಾಸೆಂಜರ್ ಕೋಚ್‌ಗಳ ಎಂಜಿನ್ (ಲೊಕೊಮೊಟಿವ್‌) ಜೊತೆಯಲ್ಲಿ ಪರೀಕ್ಷೆ ನಡೆಸಲು ತೀರ್ಮಾನಿಸಿದೆ. ಮಥುರಾ (ರೈಲು ನಿಲ್ದಾಣ ಹೊರತುಪಡಿಸಿ) ಮತ್ತು ಪಲ್ವಾಲ್ ನಡುವಿನ 80 ಕಿಮೀ ಮಾರ್ಗದಲ್ಲಿ ಕವಚ್ ಜಾಲದ ವ್ಯವಸ್ಥೆಯಿದೆ.

Kavach System Test Success

ಈಶಾನ್ಯ ಫ್ರಾಂಟಿಯರ್ ರೈಲ್ವೆ (NFR) ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (AI) ಆಧಾರಿತ ರೈಲು ಚಾಲಕ ಸಹಾಯಕ ವ್ಯವಸ್ಥೆ (Railway Driver Assistance System - RDAS) ಹೆಸರಿನ ಸಾಧನವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ವರದಿಯಾಗಿತ್ತು. ಇದು ರೈಲು ಚಾಲಕರು (ಲೋಕೋ ಪೈಲೆಟ್‌ಗಳು) ನಿದ್ದೆ ಮಂಪರಿನಲ್ಲಿ ಇದ್ದರೆ ಅಥವಾ ಅವರಿಗೆ ತೂಕಡಿಕೆ ಬಂದರೆ, ಕಣ್ಣಿನ ಚಲನೆಯನ್ನು ಗಮನಿಸಿ ಎಚ್ಚರಿಸುವ ಸಾಧನವಾಗಿರಲಿದೆ. ಸದ್ಯ ಅಭಿವೃದ್ಧಿ ಹಂತದಲ್ಲಿದೆ.

2023ರಲ್ಲಿ ಎರಡು ದೊಡ್ಡ ರೈಲು ದುರಂತಗಳು ಸಂಭವಿಸಿದ್ದವು. ಈ ರೀತಿಯ ಘಟನೆಗಳು ಇನ್ಮುಂದೆ ಒಂದು ಕೂಡ ನಡೆಯಬಾರದು ಎಂದು ರೈಲ್ವೆ ಇಲಾಖೆ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡಿದೆ. ಅದಕ್ಕಾಗಿ ತನ್ನ ರೈಲುಗಳನ್ನು ಸಂಪೂರ್ಣವಾಗಿ ಸುರಕ್ಷಿತಗೊಳಿಸಲು ಮುಂದಾಗಿದ್ದು, ಹಲವು ಸಾಧನಗಳನ್ನು ಅಭಿವೃದ್ಧಿಗೊಳಿಸುವ ಕಾರ್ಯದಲ್ಲಿ ತೊಡಗಿದ್ದು, ಕವಚ್ ವ್ಯವಸ್ಥೆ ಅಳವಡಿಕೆ ಪರೀಕ್ಷೆ ಯಶಸ್ವಿಯಾಗಿರುವುದು ಇಲಾಖೆಗೆ ಮತ್ತಷ್ಟು ಬಲ ಬಂದಿದೆ ಎಂದು ಹೇಳಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, January 25, 2024, 12:17 [IST]
English summary
Indian railway kavach system test success trains are completely safe
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+