ಭಾರತಕ್ಕೆ ಬರುತ್ತಾ ಮ್ಯಾಗ್ಲೆವ್ ರೈಲು? ವೇಗ ಗಂಟೆಗೆ 500 ಕೀಮೀ.

Written By:

ಬುಲೆಟ್ ರೈಲು ಬಳಿಕವೀಗ ಮಗದೊಂದು ಹೈಟೆಕ್ ಭಾರತ ರೈಲು ತಂತ್ರಜ್ಞಾನವು ಭಾರತಕ್ಕೆ ಪರಿಚಯವಾಗಲಿದೆ. ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಮ್ಯಾಗ್ಲೆವ್ ರೈಲು ಭಾರತದಲ್ಲಿ ಓಡಾಡಲಿದೆ.

ಭಾರತಕ್ಕೆ ಬರುತ್ತಾ ಮ್ಯಾಗ್ಲೆವ್ ರೈಲು? ವೇಗ ಗಂಟೆಗೆ 500 ಕೀಮೀ.

ದೈನಂದಿನ ಪ್ರಯಾಣದಲ್ಲಿ ಗಮನಾರ್ಹ ಸುಧಾರಣೆ ತರುವ ನಿಟ್ಟಿನಲ್ಲಿ ಮಹತ್ವಾಕಾಂಕ್ಷೆಯ ಮ್ಯಾಗ್ಲೆವ್ ರೈಲು ಯೋಜನೆಯನ್ನು ಭಾರತದಲ್ಲಿ ನನಸುಗೊಳಿಸುವ ಇರಾದೆಯನ್ನಿಟ್ಟುಕೊಳ್ಳಲಾಗಿದೆ.

ಭಾರತಕ್ಕೆ ಬರುತ್ತಾ ಮ್ಯಾಗ್ಲೆವ್ ರೈಲು? ವೇಗ ಗಂಟೆಗೆ 500 ಕೀಮೀ.

ಹಾಗೊಂದು ವೇಳೆ ದೇಶದಲ್ಲಿ ಮ್ಯಾಗ್ಲೆವ್ ಯಶಸ್ಸು ಕಂಡಲ್ಲಿ ಗಂಟೆಗೆ 500 ಕೀ.ಮೀ. ವೇಗದಲ್ಲಿ ಸಂಚರಿಸುವಷ್ಟು ರೈಲು ಭಾರತಕ್ಕೆ ಸಿಗಲಿದೆ. ಇದರೊಂದಿಗೆ ದೇಶದ ಅತಿ ವೇಗದ ರೈಲೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಭಾರತಕ್ಕೆ ಬರುತ್ತಾ ಮ್ಯಾಗ್ಲೆವ್ ರೈಲು? ವೇಗ ಗಂಟೆಗೆ 500 ಕೀಮೀ.

ಈ ಸಂಬಂಧ ಮುಂದಿನ ಆರು ತಿಂಗಳೊಳಗೆ ವಿವರವಾದ ಯೋಜನಾ ವರದಿಯನ್ನು ಸಲ್ಲಿಸುವಂತೆ ರೈಲ್ ಇಂಡಿಯಾ ಟೆಕ್ನಿಕಲ್ ಆಂಡ್ ಎಕಾನಾಮಿಕ್ ಸರ್ವಿಸ್ (ಆರ್ ಐಟಿಇಎಸ್) ವಿಭಾಗಕ್ಕೆ ಭಾರತೀಯ ರೈಲ್ವೆ ಸೂಚನೆ ನೀಡಿದೆ.

ಭಾರತಕ್ಕೆ ಬರುತ್ತಾ ಮ್ಯಾಗ್ಲೆವ್ ರೈಲು? ವೇಗ ಗಂಟೆಗೆ 500 ಕೀಮೀ.

ಮುಂದಿನ ಮೂರು ವರ್ಷದೊಳಗೆ ಯೋಜನೆ ಜಾರಿಗೆ ತರುವ ಇರಾದೆಯನ್ನಿಟ್ಟುಕೊಳ್ಳಲಾಗಿದೆ. ಅಲ್ಲದೆ ಭಾರತದ ಯಾವ ಕೊನೆಯಲ್ಲಿ ಮ್ಯಾಗ್ಲೆವ್ ರೈಲು ಯೋಜನೆ ಆಳವಡಿಸಬೇಕೆಂಬುದರ ಬಗ್ಗೆ ವಿಶ್ಲೇಷಣೆ ನಡೆಯಲಿದೆ.

ಭಾರತಕ್ಕೆ ಬರುತ್ತಾ ಮ್ಯಾಗ್ಲೆವ್ ರೈಲು? ವೇಗ ಗಂಟೆಗೆ 500 ಕೀಮೀ.

ಪಿಪಿಟಿ ಅಥವಾ ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಜಾರಿಗೊಳ್ಳಲಿದೆ. ಈ ಸಂಬಂಧ ಯೋಜನೆ ಕೈಗೆತ್ತಿಕೊಳ್ಳಲು ಸ್ವಿಸ್ ರಾಪಿಡ್ ಎಜಿ ಜೊತೆ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿ) ಮಾತುಕತೆಯನ್ನು ನಡೆಸಿದೆ.

ಭಾರತಕ್ಕೆ ಬರುತ್ತಾ ಮ್ಯಾಗ್ಲೆವ್ ರೈಲು? ವೇಗ ಗಂಟೆಗೆ 500 ಕೀಮೀ.

ಹಾಗಿದ್ದರೂ ಭಾರತಕ್ಕೆ ಜಪಾನ್ ಅಥವಾ ಸ್ವಿಜರ್ಲೆಂಡ್ ಮ್ಯಾಗ್ಲೆವ್ ರೈಲು ಪರಿಚಯವಾಗಲಿದೆಯೇ ಎಂಬುದು ಇನ್ನೂ ಅಂತಿಮಗೊಂಡಿಲ್ಲ.

ಭಾರತಕ್ಕೆ ಬರುತ್ತಾ ಮ್ಯಾಗ್ಲೆವ್ ರೈಲು? ವೇಗ ಗಂಟೆಗೆ 500 ಕೀಮೀ.

ಏನಿದು ಮ್ಯಾಗ್ಲೆವ್ ರೈಲು ? ಮ್ಯಾಗ್ಲೆವ್ ಅಥವಾ ಮ್ಯಾಗ್ನೆಟಿಕ್ ಲೀವಿಟೇಷನ್ , ವಾಹನಗಳನ್ನು, ಅದರಲ್ಲೂ ಹೆಚ್ಚಾಗಿ ಟ್ರೈನ್ ಗಳನ್ನು, ತೂಗುಹಾಕಿಕೊಂಡು, ಗತಿದೋರಿ, ಮುಂತಳ್ಳುವ ಸಾರಿಗೆ ವ್ಯವಸ್ಥೆಯಾಗಿದೆ.

ಭಾರತಕ್ಕೆ ಬರುತ್ತಾ ಮ್ಯಾಗ್ಲೆವ್ ರೈಲು? ವೇಗ ಗಂಟೆಗೆ 500 ಕೀಮೀ.

ಈ ವ್ಯವಸ್ಥೆಯು ವಾಹನಗಳನ್ನು ಎತ್ತಲು ಮತ್ತು ಮುಂದಕ್ಕೆ ಚಲಾಯಿಸಲು ಬೃಹತ್ ಸಂಖ್ಯೆಯ ಆಯಸ್ಕಾಂತಗಳಿಂದ ಉಂಟಾದ ಆಯಸ್ಕಾಂತೀಯ ತೇಲುವಿಕೆ ಯನ್ನು ಬಳಸುತ್ತವೆ.

ಭಾರತಕ್ಕೆ ಬರುತ್ತಾ ಮ್ಯಾಗ್ಲೆವ್ ರೈಲು? ವೇಗ ಗಂಟೆಗೆ 500 ಕೀಮೀ.

ಈ ವ್ಯವಸ್ಥೆಯು ಚಕ್ರಾಧಾರಿತ ಸಮೂಹ ಸಾರಿಗೆ ವ್ಯವಸ್ಥೆಗಳಿಗಿಂತಲೂ ಹೆಚ್ಚಿನ ವೇಗ, ಕಡಿಮೆ ಸದ್ದು ಹಾಗೂ ಸುಗಮತೆಯನ್ನು ನೀಡಲು ಸಮರ್ಥವಾಗಿದೆ.

ಭಾರತಕ್ಕೆ ಬರುತ್ತಾ ಮ್ಯಾಗ್ಲೆವ್ ರೈಲು? ವೇಗ ಗಂಟೆಗೆ 500 ಕೀಮೀ.

ಭೂಮಿಯಿಂದ ಒಂದರಿಂದ ಆರು ಇಂಚುಗಳಷ್ಟು ಮೇಲಕ್ಕೆ ನಿರ್ಮಿಸುವ ಮೂಲಕ ನೆಲಕ್ಕೆ ಯಾವುದೇ ರೀತಿಯ ಸಂಪರ್ಕವನ್ನು ಹೊಂದಿರುವುದಿಲ್ಲ.

ಭಾರತಕ್ಕೆ ಬರುತ್ತಾ ಮ್ಯಾಗ್ಲೆವ್ ರೈಲು? ವೇಗ ಗಂಟೆಗೆ 500 ಕೀಮೀ.

ಜಪಾನ್ ಮ್ಯಾಗ್ಲೆವ್ ರೈಲು ಎರಡು ವರ್ಷಗಳ ಹಿಂದೆಯೇ ಪರೀಕ್ಷಾರ್ಥ ಚಾಲನೆಯನ್ನು ನಡೆಸಿತ್ತು. 100 ಅದೃಷ್ಟವಂತ ಯಾತ್ರಿಕರು ಜಪಾನ್‌ನ ಮೊದಲ ಮ್ಯಾಗ್ಲೆವ್ ರೈಲು ಪಯಣಕ್ಕೆ ಸಾಕ್ಷಿಯಾಗಿದ್ದರು. ಅಲ್ಲದೆ ಗಂಟೆಗೆ 500 ಕೀ.ಮೀ. ವೇಗವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

English summary
Indian Railways To Bring In The Maglev Train Project In 3 Years
Story first published: Monday, December 5, 2016, 12:14 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark